ದೇಹದ ದಣಿವು ನೀಗಿಸುವ ನೈಸರ್ಗಿಕ ಪಾನೀಯ…!

ಎಳನೀರು ಯಾರಿಗೆ ಗೊತ್ತಿಲ್ಲ ಹೇಳಿ ಹಲವರಿಗೆ ಎಳನೀರು ಪ್ರಿಯವಾದ ಪಾನಿಯವಾಗಿದೆ. ನಾಲಿಗೆ ರುಚಿಗೆ ಎಳನೀರು ನೈಸರ್ಗಿಕವಾಗಿ ತಾಜಾವಾಗಿ ಸಿಗುವ ಪಾನೀಯವಾಗಿದೆ. ಇಂದಿನ ದಿನಗಳಲ್ಲಿ ಸಿಗುವ ರೆಡಿಮೇಡ್ ಪಾನಿಯಗಳಿಗಿಂತ ಎಳನೀರು ಉತ್ತಮವಾದ ಅಂಶವನ್ನು ಹೊಂದಿರುವುದಾಗಿದೆ. ಪುರಾತನ ಕಾಲದಿಂದಲೂ ಬೇಡಿಕೆ ಹೆಚ್ಚಾಗಿಸಿ ಕೊಂಡಿರುವ ಈ ಪಾನೀಯ ಯಾವುದೇ ತಂಪು ಪಾನೀಯಗಳಿಗಿಂತಲೂ ತಾನೇನೂ ಕಮ್ಮಿ ಇಲ್ಲಾ ಎಂಬ ರೀತಿಯಲ್ಲಿ ತನ್ನ ವರ್ಚಸ್ಸ್ ಅನ್ನು ಕಾಪಾಡಿಕೊಂಡು ಬಂದಿದೆ. ಸಕ್ಕರೆ ಖನಿಜ ಮತ್ತು ಲವಣಾಂಶ ಅಧಿಕವಾಗಿದ್ದು ದೇಹದ ನಿಶಕ್ತಿಯನ್ನು ಹೋಗಲಾಡಿಸಲು ಇದು ಬಹಳ ಉಪಯುಕ್ತವಾಗಿದೆ.. ದೇಹದಲ್ಲಿ ನೀರಿನಂಶ ಕಡಿಮೆ ಇದ್ದರೆ ಹಾಗೂ, ತೀವ್ರ ನಿಶಕ್ತಿ ಸಮಸ್ಯೆಯಿಂದ ಬಳಲುವವರಿಗೆ ಈ ಪಾನೀಯ ಅಗತ್ಯವಾಗಿದೆ.ವಯಸ್ಸಾಗುವಿಕೆ, ಚರ್ಮಸುಕ್ಕುಗಟ್ಟುವಿಕೆ ಮೊದಲಾದ ಸಮಸ್ಯೆಗಳನ್ನು ದೂರ ಮಾಡುವ ಅಂಶನ್ನು ಈ ಎಳನೀರು ಒಳಗೊಂಡಿದೆ. ಯೂರಿಕ್ ಆಮ್ಲಮೂತ್ರ ಪಿಂಡದಲ್ಲಿ ಕಲ್ಲು ಉಂಟಾಗುವವರು ಹೆಚ್ಚಾಗಿ ಎಳನೀರು ಸೇವನೆ ಮಾಡುವುದು ಉತ್ತಮ. ಇದರಲ್ಲಿ ಪೊಟ್ಯಾಶಿಯಂ ಹೇರಳವಾಗಿದ್ದು, ಮೂತ್ರ…

Read More

ತೂಕ ಸಮತೋಲನಕ್ಕೆ ಬೇಕು ಏಲಕ್ಕಿ..!

ನಾವೆಲ್ಲರೂ ತೂಕ ಇಳಿಸಿಕೊಳ್ಳಬೇಕೆಂದು ಹಲವು ಹೊಸ- ಹೊಸ ತಯಾರಿ ಮಾಡುತ್ತಲೇ ಇರುತ್ತೇವೆ. ಆದ್ರೆ ಮನೆಯಲ್ಲೇ ಸಿಗುವ ಈ ಸಣ್ಣ ವಸ್ತುವಿನಿಂದ ನಮ್ಮ ದೇಹದ ತೂಕವನ್ನು ಬಲು ಬೇಗ ಕಡಿಮೆ ಮಾಡಬಹುದಂತೆ. ಹೌದು ಮನೆಯಲ್ಲೇ ಸಿಗುವ ಏಲಕ್ಕಿಯಿಂದ ನಾವು ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳಬಹುದಂತೆ. ಹಾಗಾದ್ರೆ ಈ ಏಲಕ್ಕಿಯಿಂದ ಯಾವೆಲ್ಲಾ ವಿಧಾನದಿಂದ ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳಬಹುದು ಅನ್ನೊದನ್ನು ತೋರುಸ್ತೀವಿ. ಏಲಕ್ಕಿಯನ್ನು ಖೀರು, ಹಲ್ವಾ, ಪಲಾವ್ ನಂತಹ ಅನೇಕ ಖಾದ್ಯಗಳಿಗೆ ಬಳಸುವುದರಿಂದ ಪರಿಮಳವನ್ನು ನೀಡುತ್ತದೆ. ಹಸಿರು ಏಲಕ್ಕಿ ಸೇವಿಸಿದಲ್ಲಿ ಹೊಟ್ಟೆಯ ಸುತ್ತ ಬೊಜ್ಜು ಬೆಳೆಯಲಾರದು. ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ಮ ಮಟ್ಟವನ್ನು ಸಹ ನಿಯಂತ್ರಿಸುತ್ತದೆ.ಆಯುರ್ವೇದದ ಪ್ರಕಾರ, ಹಸಿರು ಏಲಕ್ಕಿ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ತೆಗೆದು ಹಾಕಲು ಸಹ ಸಹಾಯ ಮಾಡುತ್ತದೆ. ವಿಷಕಾರಿ ಅಂಶಗಳು ದೇಹದ ರಕ್ತದ ಹರಿವನ್ನುಅಡ್ಡಿ ಪಡಿಸುತ್ತದೆ ಮತ್ತು ನಮ್ಮ ಶಕ್ತಿಯ ಮಟ್ಟವನ್ನು…

Read More

ರುಚಿಯಾದ ಅಡುಗೆಗೆ ಈರುಳ್ಳಿ ಬದಲಿಗೆ ಏನೇನು ಬಳಸಬಹುದು ಗೊತ್ತ..?

ಒಂದು ಕಡೆ ಗಗನ ಏರುತ್ತಿರುವ ಈರುಳ್ಳಿ ಬೆಲೆಯಿಂದಾಗಿ ಅದನ್ನು ಕತ್ತರಿಸುವುದಕ್ಕೆ ಮೊದಲೇ ಕಣ್ಣಿನಲ್ಲಿ ನೀರು ಬರುವ ಪರಿಸ್ಥಿತಿ ಉಂಟಾಗಿದೆ. ಇನ್ನು ಈರುಳ್ಳಿ ಹಾಕದೆ ಸಾರು ಅಥವಾ ಪಲ್ಯ ಮಾಡಿದರೆ ರುಚಿಸುವುದೇ ಇಲ್ಲ, ಇನ್ನು ಸಾರು, ಗ್ರೇವಿ ಈರುಳ್ಳಿ ಇಲ್ಲದೆ ಮಾಡುವುದೇ ಹೇಗೆ ಎಂಬುವುದೇ ಹೆಚ್ಚಿನವರ ಚಿಂತೆಯಾಗಿದೆ. ಇನ್ನು ಈರುಳ್ಳಿ , ಬೆಳ್ಳುಳ್ಳಿ ಹಾಕದೆ ಅಡುಗೆ ಮಾಡೋಣ ಅಂದರೆ ಈರುಳ್ಳಿ ರುಚಿ ನೋಡಿದವರಿಗೆ ಅಷ್ಟು ಇಷ್ಟವಾಗುವುದಿಲ್ಲ. ಅಡುಗೆಗೆ ಈರುಳ್ಳಿ ಹಾಕಿದರೆ ಅದರ ಸ್ವಾದವೇ ಬೇರೆ. ಟೊಮೆಟೊ ಗೊಜ್ಜು, ಪಲ್ಯ ಇವುಗಳು ರುಚಿಯಾಗಲು ಈರುಳ್ಳಿ ಬೇಕೇಬೇಕು. 1) ಗ್ರೇವಿ, ಸಾರುಗೆ ಮಾಡಲು ಈರುಳ್ಳಿ ಬದಲಿಗೆ ಗೋಡಂಬಿ ಕೂಡ ಅಧಿಕ ಬೆಲೆಯ ನಟ್ಸ್ ಆಗಿದ್ದರೂ ಹೀಗಿನ ಈರುಳ್ಳಿ ಬೆಲೆಗೆ ಹೋಲಿಸಿದರೆ ಗೋಡಂಬಿ ಬಳಸುವುದೇ ಸೂಕ್ತವಾಗಬಹುದು. ಒಂದು ಸಾರು ಮಾಡಲು ಕಡಿಮೆಯೆಂದರೂ ಸಾಧಾರಣ ಗಾತ್ರದ ಒಂದು ಈರುಳ್ಳಿ ಬೇಕು. ಅದೇ ಗ್ರೇವಿಯಾದರೆ ಈರುಳ್ಳಿ…

Read More

ಬೇವು ತಿನ್ನೊದ್ರಿಂದ ದೇಹಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ..!

ಬೇವು ತನ್ನ ವಿಶೇಷವಾದ ಔಷಧೀಯ ಗುಣಗಳಿಂದ ಪ್ರಾಚೀನ ಆಯುರ್ವೇದ ಪದ್ದತಿಯಿಂದ ಇಂದಿನವರೆಗೂ ಅನೇಕ ರೋಗ ರುಜಿನಗಳಿಗೆ , ಚರ್ಮದ ಸಮಸ್ಯೆಗಳಿಗೆ ಒಳ್ಳೆಯ ಔಷಧಿಯಾಗಿ ಬಳಸಲ್ಪಡುತ್ತದೆ. ಆದರೆ ಯಾವುದೇ ಪದಾರ್ಥಗಳನ್ನು ಅಷ್ಟೇ ದೇಹಕ್ಕೆ ಅತೀಯಾದರೆ ಅದರಿಂದ ನಾನಾ ರೀತಿಯ ಅಡ್ಡ ಪರಿಣಾಮಗಳು ಉಂಟಾಗುತ್ತದೆ. ಬೇವು ಕೂಡ ಹಾಗೇ ಇದರ ಅತಿಯಾದ ಸೇವನೆ ದೇಹಕ್ಕೆ ಕುಂದು ಕೊರತೆ ತರುವುದರಲ್ಲಿ ಎರಡನೇ ಮಾತಿಲ್ಲ.ಬೇವಿನ ಅತೀಯಾದ ಸೇವನೆಯಿಂದ ಯಾವೆಲ್ಲಾ ರೀತಿಯ ಅಡ್ಡ ಪರಿಣಾಮಗಳು ಉಂಟಾಗುತ್ತದೆ. 1)ಅಲರ್ಜಿಗೆ ಕಾರಣವಾಗಬಹುದು- ಬೇವಿನ ಎಲೆಗಳನ್ನು ಪ್ರತಿ ದಿನ ಮೂರು ವಾರಗಳ ತನಕ ಬೆಡದೇ ಸೇವಿಸಿದರೆ ಬಾಯಿಯ ಊರಿಯೂತದ ಸಮಸ್ಯೆ ಕಂಡು ಬರುತ್ತದೆ. ಬೇವಿನ ಎಲೆಗಳನ್ನು ಅಲರ್ಜಿ, ಗುಳ್ಳೆಗಳು, ಮೊಡವೆಗಳು ಇತ್ಯಾದಿ ಸಮಸ್ಯೆಗಳಿಗೆ ಉಪಾಯೋಗಿಸುತ್ತಾರೆ. ಆದ್ರೆ ಇದರ ಹೆಚ್ಚಾದ ಬಳಕೆ ಸಮಸ್ಯೆಯನ್ನು ಹೋಗಾಲಾಡಿಸುವ ಬದಲು ಇನ್ನಷ್ಟು ಜಾಸ್ತಿ ಮಾಡುತ್ತದೆ.. 2)ಫಲವತ್ತತೆ ಕುಂಠಿತಗೊಳ್ಳ ಬಹುದು- ಫಲವತ್ತತೆಯ ವಿಷಯದಲ್ಲಿ ಸಂಶೋದಕರು ಬೇವಿನ…

Read More

ವೀಳ್ಯದೆಲೆಯ ಬಳಕೆ ಹತ್ತಾರು ರೋಗಕ್ಕೆ ರಾಮಾಭಾಣ..!

ಊಟದ ನಂತರ ವೀಳ್ಯದ ಎಲೆ ಸೇವಿಸುವುದು ವಾಡಿಕೆ. ತಿಂದ ಆಹಾರ ಸುಲಭವಾಗಿ ಜೀರ್ಣಗೊಳ್ಳಲೆಂದು ಮನೆಯಲ್ಲಿ ಹಿರಿಯರು ವೀಳ್ಯದ ಎಲೆಯನ್ನು ಊಟದ ನಂತರ ದಿನ ನಿತ್ಯ ಸೇವಿಸುತ್ತಾರೆ.ಆದರೆ ವೀಳ್ಯದ ಎಲೆ ಜೀರ್ಣಕ್ರಿಯೆಗೆ ಮಾತ್ರವಲ್ಲದೆ, ಅನೇಕ ಕಾಯಿಲೆಗಳನ್ನು ಉಪಶಮನಗೊಳಿಸುವ ಶಕ್ತಿಯನ್ನೂ ಹೊಂದಿದೆ. ಜೊತೆಗೆ ನಿಮ್ಮ ಸೌಂದರ್ಯ ಹೆಚ್ಚಲು ಸಹಾಯ ಮಾಡುತ್ತದೆ. ಅದು ಹೇಗೆ ಗೊತ್ತಾ? 1)ವೀಳ್ಯದೆಲೆಯನ್ನು ಸೇವಿಸುವುದರಿಂದ ಕೂದಲು ಉದುರುವಿಕೆಯನ್ನು ತಡೆಯುತ್ತದೆ- ಕೂದಲು ಉದುರುವಿಕೆಯಂತಹ ಸಮಸ್ಯೆಗಳಿಗೆ ವೀಳ್ಯದ ಎಲೆ ಬಳಸಲು ಆಯುರ್ವೇದ ಕೂಡ ಶಿಫಾರಸ್ಸು ಮಾಡುತ್ತದೆ. ಎಳ್ಳು ಅಥವಾ ತೆಂಗಿನ ಎಣ್ಣೆಯಿಂದ ವೀಳ್ಯದ ಎಲೆಯನ್ನು ರುಬ್ಬಿ, ಆ ಪೇಸ್ಟ್ ಅನ್ನು ನೆತ್ತಿಗೆ, ಕೂದಲಿನ ಬುಡಕ್ಕೆ ಹಚ್ಚಿ. ಕನಿಷ್ಠ ಒಂದು ಗಂಟೆಯಾದರೂ ಬಿಡಿ. ನಂತರ ಶಾಂಪೂವಿನಿಂದ ತೊಳೆಯಿರಿ 2)ಹಲ್ಲು ಕೊಳೆಯದಂತೆ, ಹಾಗೂ ಸವೆಯದಂತೆ ಮತ್ತು ಒಸಡುಗಳನ್ನು ಬಲಪಡಿಸಲು ವಿಳ್ಯದಲೆಯನ್ನು ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತದೆ. ಆದ್ದರಿಂದ ವೀಳ್ಯದೆಲೆಯನ್ನು ನೀರಿನಲ್ಲಿ ಕುದಿಸಿ, ತಣ್ಣಗಾದ ನಂತರ…

Read More

ದಾಸವಾಳ ಹೂವಿನಿಂದ ದೇಹಕ್ಕೆ ಹತ್ತು ಹಲವು ಲಾಭ…!

ದಾಸವಾಳ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಹೂವಿನ ಜಾತಿಯಲ್ಲಿ ಇದು ಒಂದಾಗಿದೆ. ಆದರೆ ಎಲ್ಲಾ ಹೂವಿನಂತಲ್ಲಾ ದಾಸವಾಳ ತನ್ನ ಸೌಂದರ್ಯದಿಂದಲೇ ಎಲ್ಲರನ್ನು ತನ್ನತ್ತ ಸೆಳೆಯುವಂತೆ ಮಾಡುವ ಈ ಹೂವಿನಿಂದ ಸಿಗುವ ಲಾಭವನ್ನು ನೀವು ಎಂದು ಊಹೆ ಮಾಡಲು ಸಾಧ್ಯವಿಲ್ಲ. ಹೌದು.. ಸುಂದರ ದಾಸವಾಳ ಹೂ ಪೂಜೆ ಮತ್ತು ಹೆಂಗಳೆಯರ ಮೂಡಿಗೆ ಮಾತ್ರ ಸೀಮಿತವಾಗಿರದೆ ಕೂದಲಿನ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಅಂಶವನ್ನು ಹೊಂದಿದೆ. ದಾಸವಾಳ ಹೂವು, ನೋಡುಗರ ಕಣ್ಮನಗಳನ್ನು ತನ್ನ ಸೌಂದರ್ಯದಿಂದಲೇ ತನ್ನತ್ತ ಸೆಳೆಯುವ ಒಂದು ಸುಂದರವಾದ ಹೂವು. ಇತರ ಹೂವುಗಳಿಗಿಂತ ಸ್ವಲ್ಪ ಅಗಲವಾಗಿ ಮೂಡಿ ಬಂದು ಒಂದೆಳೆಯಲ್ಲಿ ಅರಳುವ ಈ ಹೂವು ಝೇಂಕಾರದಿಂದ ಓಡಾಡುವ ದುಂಬಿಗಳನ್ನು ಕೂಡ ತನ್ನತ್ತ ಆಕರ್ಷಣೆ ಮಾಡುತ್ತದೆ. ಮನುಷ್ಯನ ತಲೆ ಕೂದಲಿಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಸುಲಭ ರೀತಿಯಲ್ಲಿ ಪರಿಹಾರ ಮಾಡುವ ಅದ್ಭುತ ಗುಣ ಲಕ್ಷಣ ದಾಸವಾಳ ಹೂವಿಗೆ ಇದೆ. ಪ್ರಾಚೀನ…

Read More

ಸಂಕ್ರಾಂತಿ ಹಬ್ಬಕ್ಕೆ ಹೆಂಗಳಿಯರ ಬೆರಳುಗಳ ಮೇಲೆ ಸಂಕ್ರಮಣ ಚಿತ್ತಾರ..!

ಇನ್ನೇನು 2020 ವರ್ಷ ಮುಗಿದು 2021 ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಜನ್ರು ಕಾತುರರಾಗಿದ್ದಾರೆ.ವರ್ಷ ಪ್ರಾರಂಭದ ಮೊದಲನೇ ಹಬ್ಬ ಮಕರ ಸಂಕ್ರಾತಿ. ಹಬ್ಬ ಅಂದ್ಮೇಲೆ ಮನೆಯಲ್ಲಿ ಸಂಭ್ರಮ ಸಡಗರ ಮಾಮೂಲಿ ಅದರಲ್ಲೂ ವರ್ಷದ ಮೊದಲನೇ ಹಬ್ಬ ಅಂದ್ರೆ ಕೇಳ್ಬೇಕ ಮನೆಯ ಹೆಣ್ಣು ಮಕ್ಕಳಿಗೆ ಉಡುಗೆ ತೊಡುಗೆಯದ್ದೆ ಚಿಂತೆಯಾಗಿರುತ್ತೆ. ಇದರ ಜೊತೆಗೆ ಉಗುರುಗಳಿಗೆ ಯಾವ ರೀತಿಯ ಬಣ್ಣವನ್ನು ಹಾಕುವುದು ಡಿಸೈನ್ ಮಾಡೊದು ಅಂತಾ ಚಿಂತೆ ಮಾಡ್ತಾ ಇರುತ್ತಾರೆ. ಇತ್ತೀಚೆಗೆ ಎಲ್ಲಿ ನೋಡುದ್ರು ನೈಲ್ ಆರ್ಟ್ ನದ್ದೆ ಟ್ರೇಂಡ್. ಈ ಬಾರಿಯ ಮಕರ ಸಂಕ್ರಾತಿ ಹಬ್ಬಕ್ಕೆ ಡಿಫರೆಂಟ್ ಆಗಿರೊ ನೈಲ್ ಆರ್ಟ್ ಗಳು ಎಲ್ಲಾ ಹೆಂಗಳಿಯರ ಕೈ ಉಗುರುಗಳ ಮೇಲೆ ಚಿತ್ತಾರವಾಗಿ ರಾರಾಜಿಸುತ್ತಿದೆ.ನೂತನ ವರ್ಷದ ಮೊದಲ ಈ ಹಬ್ಬಕ್ಕೆ ನೈಲ್ ಆರ್ಟ್ ರಂಗೋಲಿ ಸಂಕ್ರಾಂತಿ ಸ್ಪೇಷಲ್ ಅನ್ನಿಸಿಕೊಂಡಿದೆ. ಇನ್ನು ನಾವು ಇಷ್ಟು ಡಿಫರೆಂಟ್ ಆಗಿರುವ ನೈಲ್ ಆರ್ಟ್ ಗಳನ್ನು ಡಿಸೈನ್…

Read More

ಹಬ್ಬ-ಹರಿದಿನಗಳಿಗೆ ರುಚಿಯಾದ ರಾಗಿ ಚಕ್ಕುಲಿ..!

ಮನೆಗಳಲ್ಲಿ ಹಬ್ಬ ಹರಿದಿನ ಬಂತೆಂದ್ರೆ ಸಾಕು ರುಚಿರುಚಿಯಾದ ತಿಂಡಿ ತಿನಿಸು ತಿನ್ನಲು ಎಲ್ರೂ ರೆಡಿಯಾಗಿರ್ತಾರೆ. ಕಾರಣಂತರಗಳಿಂದ ಮನೆಯಲ್ಲಿ ಕೆಲತಿಂಡಿ ತಿನಸುಗಳನ್ನು ಮಾಡಲು ಕಷ್ಟ ಎಂದು ಕೆಲವರು ಅಂಗಡಿಯಿಂದ ಕೆಲವೊಂದಿಷ್ಟು ತಿಂಡಿಗಳನ್ನು ತಂದು ಹಬ್ಬ ಹರಿದಿನಗಳಲ್ಲಿ ಉಪಯೋಗಿಸುತ್ತಾರೆ. ಅಂಗಡಿಯಲ್ಲಿ ತಯಾರಿಸಿದ ಚಕ್ಕುಲಿಯಲ್ಲಿ ಎಣ್ಣೆ ಅಂಶ ಹೆಚ್ಚಿರುತ್ತದೆ ಆಗಾಗಿ ಅದು ಕೆಲವರಿಗೆ ಇಷ್ಟ ಆಗದೇ ಇರಲು ಬಹುದು ಆಗಾಗಿ ಮನೆಯಲ್ಲಿಯೇ ರುಚಿಯಾದ ಚಕ್ಕುಲಿ ಹೇಗೆ ತಯಾರಿಸಬಹುದು ಎಂಬುವುದನ್ನು ತೊರಿಸುತ್ತೇವೆ… ಬೇಕಾಗುವ ಸಾಮಾಗ್ರಿಗಳು; ರಾಗಿಹಿಟ್ಟು-ಒಂದು ಕಪ್ ಕಡ್ಲೇಹಿಟ್ಟು ಹುರಿಗಡಲೆ-ಸ್ವಲ್ಪ ಜೀರಿಗೆ-1ಚಮಚ ಮೆಣಸಿನಪುಡಿ ಇಂಗು ಎಣ್ಣೆ ಉಪ್ಪು ಮಾಡುವ ವಿಧಾನ: ಮೊದಲಿಗೆ ಮಿಕ್ಸಿ ಜಾರ್ ನಲ್ಲಿ ಹುರಿಗಡಲೆ ಹಾಕು ಪುಡಿಮಾಡಿಕೊಳ್ಳಬೇಕು ನಂತರ ಒಂದು ಪಾತ್ರೆಯಲ್ಲಿ ರಾಗಿಹಿಟ್ಟು, ಕಡಲೆಹಿಟ್ಟು, ಸ್ವಲ್ಪ ಬೆಣ್ಣೆ, ಇಂಗು, ಮೆಣಸಿನಪುಡಿ ಮತ್ತು ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸಾಕಷ್ಟು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಳಸಿಕೊಳ್ಳಬೇಕು. ನಂತರ…

Read More

ಹೆಚ್ಚು ಸ್ಯಾನಿಟೈಸರ್ ಬಳಸಿದ್ರೆ ಅಪಾಯ..!!

ವಿಶ್ವದಲ್ಲಿ ಕರೋನಾ ಕಾಣಿಸಿಕೊಂಡ ದಿನದಿಂದ ಇದರಿಂದ ತಪ್ಪಿಸಿಕೊಳ್ಳಲು ಇರುವ ಬ್ರಹ್ಮಾಸ್ತ್ರದ ರೀತಿ ಹ್ಯಾಂಡ್ ಸ್ಯಾನಿಟೈಸರ್ ಬಳಸಲಾಗುತ್ತಿದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಸ್ಯಾನಿಟೈಸರ್ ಬಳಸುವ ಮೊದಲು ಎಚ್ಚರವಿರಲಿ. ಹೌದು, ಕೊರೊನಾ ವಿರುದ್ಧದ ಹೋರಾಟದಲ್ಲಿ ಸ್ಯಾನಿಟೈಸರ್ ಸಹಾಯ ಮಾಡುತ್ತದೆ. ಬ್ಯಾಕ್ಟಿರಿಯಾ, ವೈರಸ್ ಕೊಲ್ಲುವುದರಲ್ಲಿ ಮಹತ್ವದ ಪಾತ್ರ ವಹಿಸುವತ್ತದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಸ್ಯಾನಿಟೈಸರ್ ಹೆಚ್ಚು ಬಳಕೆಯಿಂದ ಉತ್ತಮ ಬ್ಯಾಕ್ಟೀರಿಯಾಗಳು ಸಾಯುತ್ತವೆ ಎಂದು ತಜ್ಞರು ಹೇಳಿದ್ದಾರೆ. ಪ್ರಮುಖವಾಗಿ ಹೆಚ್ಚು ಸ್ಯಾನಿಟೈಸರ್ ಬಳಸುವುದರಿಂದ, ಕೈಯಲ್ಲಿರುವ ಮಾನವನಿಗೆ ಸಹಾಯ ಮಾಡುವ ಬ್ಯಾಕ್ಟೀರಿಯಾಗಳು ಸಾಯಲಿವೆ. ಇದರಿಂದ ಕೈ ಉರಿ, ಒಣಗುವುದು, ಕೈ ಒಡೆಯುವ ಹಾಗೂ ಕೈ ಸೀಳಿನಿಂದ ರಕ್ತ ಬರುವ ಸಾಧ್ಯತೆಯಿದೆ. ಆದ್ದರಿಂದ ಅಗತ್ಯವಿರುವಷ್ಟು ಸ್ಯಾನಿಟೈಸರ್ ಬಳಸುವುದು ಸೂಕ್ತ ಎಂದು ಚರ್ಮರೋಗ ತಜ್ಞರು ಸಲಹೆ ನೀಡಿದ್ದಾರೆ. ಅಶ್ವಿನಿ, ಎಕ್ಸ್ ಪ್ರೆಸ್ ಟಿವಿ, ಬೆಂಗಳೂರು.

Read More

ಅಣಬೆಯಿಂದ ಇಷ್ಟೊಂದು ಉಪಯೋಗನಾ..!!

ಅಣಬೆ ಇದು ಮಳೆಗಾಲದಲ್ಲಿ ಹೆಚ್ಚಾಗಿ ಸಿಗುತ್ತದೆ. ಇದರಿಂದ ಮಾಡುವ ಖಾದ್ಯಗಳೆಲ್ಲವೂ ರುಚಿಯಾಗಿರುತ್ತದೆ. ಹಾಗೇ ಇದು ಹಲವಾರು ರೋಗಗಳನ್ನು ಕೂಡ ಕಡಿಮೆ ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಮಧುಮೇಹ ನಿಯಂತ್ರಣಕ್ಕೆ ಸಹಾಯಕಾರಿ. ಇದರಲ್ಲಿರುವ ಫ್ರೀ ಬಯೋಟಿಕ್ ಅಂಶವು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಲಿವರ್ ಗೆ ಸಂಬಂಧಿಸಿದ ಅನೇಕ ರೋಗಗಳಿಂದ ಮುಕ್ತಿ ಕೊಡುತ್ತದೆ. ಇದು ದೇಹವನ್ನು ಸದೃಢಗೊಳಿಸುತ್ತದೆ. ಹೃದಯಕ್ಕೆ ಸಂಬಂದಿಸಿದ ಕಾಯಿಲೆಗಳಿಗೆ ಗುಡ್ ಬೈ ಹೇಳಲು ನೀವು ಅಣಬೆಯನ್ನು ನಿಯಮಿತವಾಗಿ ಬಳಸಬಹುದು. ಇದು ದೇಹದ ಚಯಾಪಚಯಕ್ರಿಯೆಯನ್ನು ಸರಾಗಗೊಳಿಸುತ್ತದೆ. ಚಿಕ್ಕ ಕರುಳಿನ ಕಾರ್ಯವನ್ನು ಸುಧಾರಿಸುತ್ತದೆ. ದೇಹದ ತೂಕವನ್ನೂ ಕಡಿಮೆ ಮಾಡಿಕೊಳ್ಳಲು ಸಹಕಾರಿ. ಹಾಗೇ ಅಣಬೆಯಲ್ಲಿರುವ ಹಲವಾರು ಪೌಷ್ಟಿಕಾಂಶಗಳು ಮತ್ತು ಪ್ರೊಟೀನ್ ಅಂಶಗಳು ಬಿಪಿ ಮತ್ತು ಶುಗರ್ ಲೆವೆಲ್ ಅನ್ನು ನಿಯಂತ್ರಿಸುತ್ತದೆ. ಅಶ್ವಿನಿ, ಎಕ್ಸ್ ಪ್ರೆಸ್ ಟಿವಿ, ಬೆಂಗಳೂರು

Read More