ಮಸೀದಿ ಆಯ್ತು ಈಗ ಐಸೋಲೇಷನ್ ವಾರ್ಡ್ ನಲ್ಲೇ ನಮಾಜ್..

ಬೀದರ್: ಮಸೀದಿ ನಂತರ ಇದೀಗ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲೇ ಮುಸ್ಲಿಂ ಮುಖಂಡರು ನಮಾಜ್ ಆರಂಭಿಸಿದ್ದಾರೆ.
ಹೌದು, ಇಂತಹದೊAದು ಘಟನೆ ನಡೆದಿರೋದು ಬೀದರ್ ಜಿಲ್ಲೆಯಲ್ಲಿ .
ಅಂದ ಹಾಗೇ ಜಿಲ್ಲಾ ಉಸ್ತುವಾರಿ ಸಚಿವರು ಆಗಿರೋ ಪಶು ಸಂಗೋಪನೆ ಮಂತ್ರಿ ಪ್ರಭು ಚವ್ಹಾಣ್,ಜಿಲ್ಲಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್ಗೆ ಭೇಟಿ ನೀಡಿದರು. ಆದರೆ ಸಚಿವರ ಭೇಟಿ ಸಂದರ್ಭದಲ್ಲೇ ವಾರ್ಡ್ನಲ್ಲಿದ್ದ ಕೆಲ ಮುಸ್ಲಿಂ ಮಂದಿ ತಮ್ಮ ಬೆಡ್‌ಗಳಿಂದ ಕೆಳಗೆ ಕುಳಿತು ನಮಾಜ್ ಮಾಡುತ್ತಿರುವುದು ಗಮನಕ್ಕೆ ಬಂತು.
ತಕ್ಷಣ ಕೆಂಡಮAಡಲರಾದ ಸಚಿವ ಪ್ರಭು ಚವ್ಹಾಣ್, ಒಟ್ಟಾಗಿ ಕುಳಿತುಕೊಳ್ಳಲು ಬೇಡ,ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದವರೆಗೆ ಎಲ್ಲರೂ ಹೇಳುತ್ತಿದ್ದಾರೆ.ಆದರೆ ನೀವು ಇದೆಲ್ಲ ಮುಂದುವರಿಸಿದ್ದಿರಿ. ಹೀಗೆ ಮಾಡೋದು ಸರಿಯಲ್ಲ, ಏನೆ ಮಾಡೋದಿದ್ರು ಮನೆಯಲ್ಲಿ ಇದ್ದಾಗ ಮಾಡಬೇಕು. ಆಸ್ಪತ್ರೆಗೆ ಬಂದು ಹೀಗೆಲ್ಲ ಮಾಡುವುದು ಸರಿಯಲ್ಲ, ಕೈ ಮುಗಿದು ಕೇಳಿಕೊಳ್ಳುತ್ತಿದ್ದೇವೆ, ಸರ್ಕಾರದ ನಿಯಮಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದಾದ ಬಳಿಕ ಸಚಿವರು, ಸ್ಥಳದಲ್ಲಿದ್ದ ತಹಶೀಲ್ದಾರ್, ವೈದ್ಯರು ಮತ್ತು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡು ಆಸ್ಪತ್ರೆಯಲ್ಲಿರುವ ಕೊರೊನಾ ಶಂಕಿತರ ಮೇಲೆ ನಿಗಾ ವಹಿಸಬೇಕು. ಐಸೋಲೇಷನ್ ವಾರ್ಡ್ಗೆ ಕಡ್ಡಾಯವಾಗಿ ಪೊಲೀಸ್ ಸಿಬ್ಬಂದಿ ನೇಮಿಸಬೇಕು ಎಂದು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment