Connect with us

ಬಾಗಲಕೋಟೆ

ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಬದ್ಧ- ಮುರುಗೇಶ್ ನಿರಾಣಿ..!

Published

on

ಬಾಗಲಕೋಟೆ: ಮುಂಬರುವ ದಿನಗಳಲ್ಲಿ ಬೀಳಗಿ ಕ್ಷೇತ್ರವಾಪ್ತಿಯ ಒಂದು ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದರ ಜೊತೆಗೆ 2500 ಆಶ್ರಯ ಮನೆಗಳು ಮಂಜೂರು ಮಾಡಿಸಿ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಗ್ರಾಮಗಳ ಅಭಿವೃದ್ಧಿಗೆ ಸದಾಕಾಲ ಗ್ರಾಮ ಪಂಚಾಯಿತಿ ಸದಸ್ಯ ಜೊತೆಗೆ ಇರುತ್ತೇನೆಂದು ಬೀಳಗಿ ಶಾಸಕ ಮುರುಗೇಶ್ ನಿರಾಣಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ಕೆರಕಲಮಟ್ಥಿಯ ಕೇದಾರ್ ನಾಥ್ ಶುಗರ್ ಕಾರ್ಖಾನೆಯಲ್ಲಿ ಬೀಳಗಿ ಮತ ವಾಪ್ತಿಯ ಬಿಜೆಪಿ ಬೆಂಬಲಿತ ನೂತನ ಗ್ರಾಮ ಪಂಚಾಯಿತಿ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಮುರುಗೇಶ್ ನಿರಾಣಿ ಬೀಳಗಿಯ ಭೂಮಿಗಳನ್ನು ಸಂಪೂರ್ಣ ನೀರಾವರಿ ಸೌಲಭ್ಯಕ್ಕೆ ಒಳಪಡಿಸುವ ಯೊಜನೆ ರೂಪಿಸಲಾಗಿದೆ. ಬಡ ಜನರಿಗೆ ಆಶ್ರಯ ಮನೆ ಉಚಿತ ಗ್ಯಾಸ್ ಎಲ್ಲಾ ಗ್ರಾಮಗಳಿಗೆ ಶುದ್ದ ನೀರು, ಸಿಸಿ ರಸ್ತೆ, ಶೌಚಾಲಯ ಸೇರಿದಂತ್ತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಗ್ರಾಮಗಳನ್ನು ಸಂಪೂರ್ಣ ಅಭಿವೃದ್ಧಿ ಪಡಿಸಲು ನಾನು ಬದ್ಧನಾಗಿದ್ದೆನೆ ಎಂದರು.ಇನ್ನೂ ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಮಾತನಾಡಿ ಬಿ.ಎಸ್ ಯಡಿಯೂರಪ್ಪ ನವರ ಅಭಿವೃದ್ಧಿ ಕಾರ್ಯಕ್ಕೆ ಜನರು ಮೆಚ್ಚಿ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಿ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿ ಬೆಂಬಲಿತರನ್ನು ಗೆಲ್ಲಿಸಿ ನಮ್ಮ ಬಿಜೆಪಿ ಪಕ್ಷಕ್ಕೆ ಹಾರೈಸಿದ್ದಾರೆ ಎಂದರು. ಇನ್ನೂ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಶಾಸಕರಾದ ಎಮ್ ಕೆ ಪಟ್ಟಣ ಶೆಟ್ಟಿ, ಪಿ.ಎಚ್ ಪೂಜಾರ ಮುಖಂಡರಾದ ನಾರಾಯಣ ಭಾಂಡ್ಗೆ, ಜಿಲ್ಲಾ ಪಂಚಾಯತ್ ಸದಸ್ಯ ಹೂವಪ್ಪ ರಾಠೋಡ, ಈರಣ್ಣ, ಗಿಡ್ಡಪ್ಪಗೋಳ ಸಂಗಣ್ಣ, ಕಟಗೇರಿ ಮೋಹನ್ ಜಾಧವ ಮತ್ತೀತರು ಉಪಸ್ಥೀತರಿದ್ದರು.

ವರದಿ- ಶ್ರೀಧರ ಚಂದರಗಿ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Continue Reading
Click to comment

Leave a Reply

Your email address will not be published. Required fields are marked *

ಬಾಗಲಕೋಟೆ

ಮಿನಿ ಶಬರಿಮಲೆ ಎಂದೇ ಪ್ರಖ್ಯಾತಿಗಳಿಸಿದ ‘ಆಸಂಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನ’…!

Published

on

By

ಬಾಗಲಕೋಟೆ: ಅಯ್ಯಪ್ಪ ಸ್ವಾಮಿ ಮಾಲೆ ಹಾಕಿರುವವರು ಪ್ರತಿ ವರ್ಷ ವೃತ ಮುಕ್ತಾಯಗೊಳಿಸಲು ಕೇರಳದ ಶಬರಿಮಲೈನಲ್ಲಿ ಇರುವ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಹೋಗಿ ಇರುಮುಡಿ ಇಳಿಸಿ ಬರುತ್ತಿದ್ದರು. ಆದರೆ, ಈ ವರ್ಷ ಕೊರೊನಾ ಹಾವಳಿ ಇವರನ್ನು ಅಲ್ಲಿಗೆ ಹೋಗದಂತೆ ಮಾಡಿದೆ. ಹೀಗಾಗಿ ಈ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಅಯ್ಯಪ್ಪ ಮಾಲಾಧಾರಿಗಳ ದಂಡು ರಾಜ್ಯದ ಮಾಲಾಧಾರಿಗಳು ಈ ಬಾರಿ ಕರ್ನಾಟಕದ 8 ಕಡೆಗಳಲ್ಲಿನ ಅಯ್ಯಪ್ಪ ದೇಗುಲಗಳಲ್ಲಿಯೇ ಇರುಮುಡಿ ಮುಟ್ಟಿಸಲು ನಿರ್ಧರಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ಈ ಮಿನಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣವಾಗಿದೆ. ಈ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಇದೀಗ ರಾಜ್ಯ ಮತ್ತು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಅಯ್ಯಪ್ಪ ಮಾಲಾಧಾರಿಗಳು ಬಂದು ಇರುಮುಡಿ ಇಳಿಸಿ ಹೋಗುತ್ತಿದ್ದಾರೆ. ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿಕೊಂಡು ಇರುಮುಡಿ ಹೊತ್ತುಕೊಂಡು ಬರುತ್ತಿರುವ ಈ ಮಾಲಾಧಾರಿಗಳು, ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವೃತಸೇವೆ ಮಾಡಿ ಇರುಮುಡಿ ಇಳಿಸಿ ಹೋಗುತ್ತಿದ್ದಾರೆ. ಹೀಗಾಗಿ ಮಿನಿ ಶಬರಿಮಲೆ ಎಂದೇ ಕರೆಯಲ್ಪಡುವ ಆಸಂಗಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಈ ವರ್ಷ ನಿತ್ಯ ನೂರಾರು ಭಕ್ತರು ಇರುಮುಡಿ ಇಳಿಸಲು ಬರುತ್ತಿದ್ದಾರೆ. ಶಬರಿಮಲೈ ಶ್ರೀ ಅಯ್ಯಪ್ಪ ದೇವಸ್ಥಾನವು ಡಿಸೆಂಬರ್ 30ರಂದು ತೆರೆದಿದ್ದು, ಜನವರಿ 15 ರ ಮಕರ ಜ್ಯೋತಿ ದರ್ಶನದವರೆಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ವರದಿ-ಶ್ಯಾಮ್ ತಳವಾರ ಎಕ್ಸ್ ಪ್ರೆಸ್ ಟಿವಿ ಜಮಖಂಡಿ..

Continue Reading

ಬಾಗಲಕೋಟೆ

ಚಾಲುಕ್ಯ ನಾಡಲ್ಲಿ ಕೋವಿಡ್ ಲಸಿಕೆ ಡ್ರೈರನ್…!

Published

on

By

ಬಾಗಲಕೋಟೆ: ರಾಜ್ಯದಲ್ಲಿ ಕೋವಿಡ್ ಲಸಿಕೆ ಡ್ರೈ ರನ್ ಪ್ರಾರಂಭ ಮಾಡಿದ್ದು,ಅದರಂತೆ ಬಾದಾಮಿಯಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಡ್ರೈ ರನ್ ಪ್ರಾರಂಭ ಮಾಡಲಾಗಿದೆ. ದೇಶದಲ್ಲಿ ಕಳೆದ ಸುಮಾರು ಹತ್ತು ತಿಂಗಳವರಗೆ ಕೋವಿಡ್ ನಿಂದ ಜನರು ತತ್ತರಿಸಿ ಹೋಗಿದ್ದರು. ಅಂತು ಕೇಂದ್ರ ಸರಕಾರ ಕೋವಿಡ್ ಲಸಿಕೆ ಕಂಡು ಹಿಡದಿದ್ದು.ಇದನ್ನು ಇದೇ ತಿಂಗಳು ನೀಡಲು ಸಕಲ ಸಿದ್ಧತೆ ಕಾರ್ಯ ನಡೆದಿದೆ. ಅದರಂತೆ ರಾಜ್ಯದಲ್ಲಿ ಕೋವಿಡ್ ಲಸಿಕೆ ಡ್ರೈ ರನ್ ನಡೆಸುತ್ತಿದ್ದು, ಪ್ರಸ್ತುತ ಚಾಲುಕ್ಯರ ನಾಡದ ಬಾದಾಮಿ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಸಲುವಾಗಿ 3 ಪ್ರತ್ಯೇಕ ಕೋಣೆ ಮೀಸಲು ಇಡಲಾಗಿದೆ.ಒಂದು ವೇಟಿಂಗ್ ರೂಮ್, ಕೋವಿಡ್ ವ್ಯಾಕ್ಷಿನ್ ರೂಮ್,ಮತ್ತೊಂದು ಅಬಸರ್ವೇಷನ್ ರೂಮ್ ತೆರೆಯಲಾಗಿದೆ.ನಿನ್ನೇ ತಾಲೂಕು ವೈದ್ಯಧಿಕಾರಿಗಳಾದ ಡಾ.ಪಾಟೀಲ್ ಇವರು ಸಹ ಸಿಬ್ಬಂದಿಗಳಿಗೆ ಯಾವ ರೀತಿಯಾಗಿ ಕೋವಿಡ್ ಲಸಿಕೆ ನೀಡಬೇಕು ಹಾಗೂ ಯಾವ ಮುಂಜಾಗ್ರತೆ ಕ್ರಮ ಕೈಕೊಳ್ಳಬೇಕು ಎಂಬ ಹಲವಾರು ವಿಚಾರ ಬಗ್ಗೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.ಇನ್ನೂ ಈ ಸಂದರ್ಭದಲ್ಲಿ ನಂದಿಕೇಶ್ವರ ಗ್ರಾಮದ ಮುಖ್ಯ ವೈದ್ಯರಾದ ಡಾ.ಭಂಡಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ-ಶ್ರೀಧರ ಚಂದರಗಿ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Continue Reading

ಬಾಗಲಕೋಟೆ

ಬಾದಾಮಿಗೆ ವಿದ್ಯುತ್ ಉಪ ವಿಭಾಗ ಕಚೇರಿ ಮಂಜೂರು..!

Published

on

By

ಬಾಗಲಕೋಟೆ: ಬಾದಾಮಿ ನಗರ ಜನತೆಯ ಬಹು ವರ್ಷಗಳ ಬೇಡಿಕೆಯಾದ ವಿದ್ಯುತ್ ಸರಬರಾಜು ಕಂಪನಿಯ ಉಪ ವಿಭಾಗ ಕಚೇರಿ ಬೇಡಿಕೆಯನ್ನು ಕ್ಷೇತ್ರ ಶಾಸಕ ಸಿದ್ದರಾಮಯ್ಯ ಇದೀಗ ಈಡೇರಿಸಿದ್ದಾರೆ. ಬಾದಾಮಿ ನಗರದಲ್ಲಿ ವಿದ್ಯುತ್ ಉಪ ವಿಭಾಗ ಕಚೇರಿ ಮಂಜೂರು ಮಾಡುವಂತೆ ಸರ್ಕಾರದ ಮೇಲೆ ಸಿದ್ದರಾಮಯ್ಯ ಒತ್ತಡ ಹೇರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದರು,ಅಲ್ಲದೆ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರ ಜೊತೆ ಮಾತುಕತೆ ನಡೆಸಿದ್ದರು. ಹೀಗಾಗಿ ಸಿದ್ಧರಾಮಯ್ಯ ರವರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಬಾದಾಮಿ ನಗರದಲ್ಲಿ ವಿದ್ಯುತ್ ಸರಬರಾಜು ಉಪ ವಿಭಾಗ ಕಚೇರಿಗೆ ಸ್ಥಾಪಿಸುವಂತೆ ಅಧಿಕೃತ ಆದೇಶ ಹೊರಡಿಸಿದೆ.

ವರದಿ-ಶ್ರೀಧರ ಚಂದರಗಿ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Continue Reading

Trending

Copyright © 2023 EXPRESS TV KANNADA

canl覺 ma癟 izle selcuksports deneme bonusu deneme bonusu veren siteler bahis siteleri jojobet http://www.iztacalco.cdmx.gob.mx/inicio/guvenilir-bahis-siteleri.html deneme bonusu casino siteleriHacklink SatışıHack forumyaş sınırı olmayan bahis sitelerikareasbetdeneme bonusu veren sitelertürbanlı escortsiyah bayrak ayna amirdeneme bonusu veren sitelerkareasbet girişBursa EscortBakırköy Escort, Ataköy Escortbahis forumkareasbetbetingo güncel girişdizimatFındıkzade Escortbedavabahis.onlineBitcoin Kabul Eden Bahis Sitelerigüvenilir casino siteleridigital marketing agencydeneme bonusu veren sitelergobahis girişasper casino girişhermesbetTelegram Gruplarıistanbul escortesbet girişbullbahis girişbenimbahis girişbenimbahis