Connect with us

ಹಾಸನ

ತಾಯಿಯಿಂದ ದೂರ ಉಳಿದ ಮರಿಯಾನೆ ನರಳಾಟ..!

Published

on

ಹಾಸನ: ತಾಯಿಯಿಂದ ದೂರ ಉಳಿದ ನರಳಾಡುತ್ತಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದ ಕಾಫಿ ತೋಟದ ನಡುವೆ ಅಮ್ಮನ ಸೇರಲು ಮರಿಯಾನೆ ಹಂಬಲಿಸುತ್ತಿದ್ದು, ಏಕಾಂಗಿಯಾಗಿ ನರಳಾಡುತ್ತಿದೆ. ಎಡಗಾಲಿಗೆ ನೋವಾಗಿರುವ ಕಾರಣ ನಡೆಯಲಾರದೇ ಕೂತಲ್ಲೇ ಕೂತಿರುವ ಮರಿಯಾನೆ ನರಳಾಡುತ್ತಿದ್ದು, ಜನ ಮರುಗುತ್ತಿದ್ದಾರೆ.ಶತಾಯಗತಾಯ ಮರಿಯಾನೆಯನ್ನ ಅಮ್ಮನ ಬಳಿ ಸೇರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನ ನಡೆಸುತ್ತಿದ್ದಾರೆ. ಅಕಸ್ಮಾತ ತಾಯಿ ಆನೆ ಕರೆದೊಯ್ಯದಿದ್ದರೆ,ಆನೆ ಕ್ಯಾಂಪ್‌ಗೆ ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ತಯಾರಿ ನಡೆಸುತ್ತಿದೆ.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Continue Reading
Click to comment

Leave a Reply

Your email address will not be published. Required fields are marked *

ಅರಸೀಕೆರೆ

`ಎಲ್ಲರೂ ಗಿಡ ನೆಟ್ಟು ಪೋಷಣೆ ಮಾಡಿ’

Published

on

By

ಹಾಸನ (ಅರಸೀಕೆರೆ):ಅರಸೀಕೆರೆ ತಾಲೂಕಿನಾದ್ಯಂತ ಒಂದು ವರ್ಷಗಳಿಂದ ಪರಿಸರ ಪ್ರೇಮಿ ವಿಜಯ್ ಕುಮಾರ್ ಗಿಡ ನೆಟ್ಟು ಪೋಷಣೆ ಮಾಡುತ್ತಾ ಬಂದಿದ್ದಾರೆ.

ಸದ್ಯ ಇಂದು ಪರಿಸರ ದಿನಾಚರಣೆ ಅಂಗವಾಗಿ ಮತ್ತೊಂದು ಸಸಿ ನೆಟ್ಟು ಸುಮಾರು ಇಲ್ಲಿಯವರೆಗೂ ೨ ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇನ್ನು ಈ ಗಿಡ ನೆಡುವ ಕಾರ್ಯಕ್ರಮದಲ್ಲಿ ಹಾಜರಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ವಿ.ಟಿ.ಬಸವರಾಜ್ ಮಾತನಾಡಿ, ಗಿಡಮರಗಳಿಂದ ನಮ್ಮ ಪರಿಸರ ತಂಪಾಗಿರುತ್ತದೆ.ಮರಗಳು ಬಿಡುವ ಆಮ್ಲಜನಕದಿಂದ ಜನಸಾಮಾನ್ಯರಿಗೆ ಒಳ್ಳೆಯ ಗಾಳಿ ಸಿಗುತ್ತದೆ.ಈಗಾಗಲೇ ಆಕ್ಸಿಜನ್ ಗೋಸ್ಕರ ಜನರು ಪರದಾಡುವ ಪರಿಸ್ಥಿತಿ ಬಂದಿದೆ.ಗಿಡಮರಗಳು ಬೆಳೆದರೆ ನಮಗೆ ನಮ್ಮ  ಪರಿಸರಕ್ಕೆ ಒಳ್ಳೆಯದು ಎಂದರಲ್ಲದೆ, ಇಂದು ಪರಿಸರ ದಿನಾಚರಣೆ ಅಂಗವಾಗಿ ಮನೆಗೊಂದು ಮರ, ಊರಿಗೊಂದು ವನ ಎಂಬAತೆ ಎಲ್ಲರೂ ಗಿಡ ನೆಟ್ಟು ಪೋಷಣೆ ಮಾಡಿ ಎಂದು ಕರೆ ನೀಡಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಅವಿನಾಶ್ ನಾಯ್ಡು, ಲಾಳನಕೆರೆ ಯೋಗೀಶ್, ಶಶಿ ಯಾದವ್, ಉಮಾ ಕುಮಾರ್, ಸುಧಾ, ಸಿಂಧು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಜೀವನ್ ಕುಮಾರ್ ಎಕ್ಸ್ ಪ್ರೆಸ್ ಟಿವಿ (ಅರಸೀಕೆರೆ) ಹಾಸನ

Continue Reading

ಹಾಸನ

ಉದ್ಯಮಿ ಸಚಿನ್ ನಾರಾಯಣ್ ಮನೆ ಮೇಲೆ ಸಿಬಿಐ ದಾಳಿ..?

Published

on

By

ಹಾಸನ : ಡಿ.ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆಸಿದ ಬೆನ್ನಲ್ಲೇ,ಆಪ್ತ ಉದ್ಯಮಿ ಸಚಿನ್ ನಾರಾಯಣ್ ಮನೆ ಮೇಲೂ ಕೂಡ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.ಹಾಸನದ ಬಿ.ಎಂ ರಸ್ತೆಯಲ್ಲಿರುವ ಸಚಿನ್ ನಾರಾಯಣ್ ಮನೆ ಮೇಲೆ ಸಿಬಿಐ ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು,ಶೋಧ ಕಾರ್ಯ ನಡೆಸುತ್ತಿದ್ದಾರೆ. ಖಾಸಗಿ ಕಾರಿನಲ್ಲಿ ಬಂದಿರುವ ಸಿಬಿಐ ಅಧಿಕಾರಿಗಳು ಬೆಳಗ್ಗೆಯಿಂದಲೇ ಎಲ್ಲಾ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಡಿಕೆ ಶಿವಕುಮಾರ್ ಮನೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಸಹ ಸಚಿನ್ ನಾರಾಯಣ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.ಇದೀಗ ಮೂರನೇ ಬಾರಿ ಮತ್ತೆ ಸಚಿನ್ ನಾರಾಯಣ್ ಮನೆ ಮೇಲೆ ದಾಳಿ ನಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Continue Reading

ಹಾಸನ

ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಟ್ಕರ್ ರವರ ಮಹಾನಾಯಕ ಧಾರಾವಾಹಿ ಬ್ಯಾನರ್ ಗೆ ಪುಷ್ಪಾರ್ಚನೆ..!

Published

on

By

ಹಾಸನ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಜೀವನಾಧರಿತ ಮಹಾನಾಯಕ ಧಾರವಾಹಿಗೆ ಎಲ್ಲೇಡೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಲಿದೆ. ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದಲ್ಲಿ ಊರಿನ ಮುಖಂಡರೆಲ್ಲಾರೂ ಒಗ್ಗೂಡಿ ಮಹಾನಾಯಕ ಧಾರಾವಾಹಿಯ ಬ್ಯಾನರ್ ಗೆ ಪುಷ್ಪಾರ್ಚನೆ ಮಾಡಿ ದೀಪ ಹಚ್ಚಿ ಗೌರವವನ್ನು ಸಲ್ಲಿಸಿದ್ದರು. ಇನ್ನು ಅಧ್ಯಕ್ಷರಾದ ಯೋಗೇಶ್ ಮಾತನಾಡಿ ಜೀ ಕನ್ನಡಲ್ಲಿ ಮೂಡಿಬರುತ್ತಿರುವ ಮಹಾನಾಯಕ ಧಾರಾವಾಹಿ ಅಂಬೇಡ್ಕರ್ ರವರ ಜೀವನಾಧಾರಿತದ್ದಾಗಿದೆ. ಎಲ್ಲಾರೂ ಕೂಡ ರಾಘವೇಂದ್ರ ಹುಣಸೂರ್ ರವರಿಗೆ ಪ್ರೋತ್ಸಾಹಿಸಬೇಕೆ ಹೊರತು ಜೀವ ಬೇದರಿಕೆ ಹಾಕುವುದಲ್ಲಾ. ಮೇಳು-ಕೀಳು ಎಂಬಾ ಭೇದ ಭಾವ ಮಾಡದೇ ಎಲ್ಲಾರೂ ಒಂದೇ ಎಂಬಾ ಮನೋಭಾವನೆಯನ್ನು ಜನರು ಬೆಳಸಿಕೊಳ್ಳಬೇಕು. ರಾಘವೇಂದ್ರ ಹುಣಸೂರ್ ರವರಿಗೆ ಈ ಧಾರಾವಾಹಿಯನ್ನು ನಿಲ್ಲಿಸುವಂತೆ ಸಾಕಷ್ಟು ಬೇದರಿಕೆಗಳು ಬಂದಿದೆ. ಆದರೂ ಯಾವುದಕ್ಕೂ ಅಂಜದೇ ಧಾರಾವಾಹಿಯನ್ನು ನಿಲ್ಲಿಸದೇ ಮುಂದುವರೆಸುತ್ತಿದ್ದು ಅವರ ಈ ಧೈರ್ಯಕ್ಕೆ ನಮ್ಮ ದಲಿತ ವರ್ಗದವರಿಂದ ಪ್ರೋತ್ಸಾಹ ಯಾವಾಗಲೂ ಇರುತ್ತದೆ ಎಂದರೂ. ಇನ್ನೂ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಯೋಗೇಶ್, ಶಿವಣ್ಣ, ಮಾಜಿ.ತಹಶೀಲ್ದಾರರಾದ ಶಾಂತ್ ರಾಜ್ ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Continue Reading

Trending

Copyright © 2023 EXPRESS TV KANNADA

kuşadası escort kayseri escort kocaeli escort canlı maç izle selcuksports güvenilir bahis siteleri deneme bonusu deneme bonusu veren siteler bahis siteleri https://resimlihaber.org/ canlı bahis siteleri güvenilir bahis siteleri http://seu.frvm.utn.edu.ar/guvenilir-bahis-siteleri.html deneme bonusu veren sitelercasino sitelerimıknatısmaç izle