Connect with us

ಬಳ್ಳಾರಿ

ರಾಜ್ಯ ಸರ್ಕಾರದ ವಿರುದ್ದ “ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಮಿತಿ”ಯಿಂದ ಆಕ್ಷೇಪ..!

Published

on

ಬಳ್ಳಾರಿ: ಕರ್ನಾಟಕ ರಾಜ್ಯ ಸರ್ಕಾರ ಮರಾಠ ಸಮುದಾಯಕ್ಕೆ 50 ಕೋಟಿ ರೂಪಾಯಿಗಳು ಮೀಸಲಿಟ್ಟಿರುವುದು ಖಂಡನೀಯ ಹಾಗೂ ಜನಾ ಸಮಾನ್ಯರಿಗೆ ವಿರುದ್ದದ್ದಾಗಿದೆ, ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದಾಗಿ ಎಷ್ಟೋ ಜನ ಮನೆ ಮಠಗಳಿಲ್ಲದೇ ಬೀದಿಗೆ ಬಿದ್ದರೂ ಸರ್ಕಾರ ಆ ಕಡೆ ತಿರುಗಿಯೂ ನೋಡಲಿಲ್ಲ, ರೈತರು ಬೆಳೆದ ಬೇಳೆ ಕೈಗೆ ಸಿಗದೇ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ರೈತರು ಬೆಳೆ ಪರಿಹಾರಕ್ಕಾಗಿ ಮತ್ತು ನೆರೆ ಹಾವಳಿಯಿಂದ ಮನೆ ಕಳೆದುಕೊಂಡವರು ಪುನರ್ವಸತಿಗಾಗಿ ಬೇಡಿಕೆ ಇಟ್ಟರೂ ಸರಕಾರ ಕರೋನ ನೆಪ ಹೇಳಿಕೊಂಡು ಬಜೆಟ್ ಇಲ್ಲ ಎಂದು ಸಬೂಬು ನೀಡಿತ್ತು. ಈಗ ಇದ್ದಕ್ಕಿದ್ದಂತೆ ಮರಾಠ ಸಮುದಾಯಕ್ಕೆ 50 ಕೋಟಿ ರುಪಾಯಿ ಎಲ್ಲಿಂದ ಬಂತು ಎಂದು ಸಂಸ್ಥಾಪಕ ಅಧ್ಯಕ್ಷರಾದ ಪಿ.ಎಂ ಈಶ್ವರಪ್ಪ ಹಾಗೂ ಯುವ ಘಟಕದ ಅಧ್ಯಕ್ಷರಾದ ವೆಂಕಟೇಶ ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೇ ಆ ಹಣವನ್ನು ಉತ್ತರ ಕರ್ನಾಟಕದ ನೆರೆ ಹಾವಳಿಗೆ ತುತ್ತಾದ ರೈತರಿಗೆ ಹಾಗೂ ನಿರ್ಗತಿಕರಿಗೆ ಕೊಡಲು ಈ ಕೂಡಲೇ ಆದೇಶ ಹೊರಟಿಸಬೇಕೆಂದು ಸಮಿತಿ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಹೇಳಿದರು. ಮನವಿ ಪತ್ರ ಸ್ವೀಕರಿಸಿದ ತಹಶಿಲ್ದಾರ ರಾದ ಗುರುರಾಜ ಅವರು ಈ ಕೂಡಲೇ ಸರಕಾರದ ಗಮನಕ್ಕೆ ತರುತ್ತೇವೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಸಂಸ್ಥಾಪಕ ರಾದ ಪಿ.ಎಂ ಈಶ್ವರಪ್ಪ, ಅಧ್ಯಕ್ಷರಾದ ಈಶ್ವರ್, ಉಪಾಧ್ಯಕ್ಷ ರಾದ ಭಾಸ್ಕರ್, ಖಜಾಂಚಿ ತಿಮ್ಮಪ್ಪ, ನರೇಶ್ ಬಾಬು, ನಾಗೇಂದ್ರ, ಯುವ ಘಟಕದ ಅಧ್ಯಕ್ಷ ವೆಂಕಟೇಶ್, ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ- . ಯು.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ಬಳ್ಳಾರಿ

Continue Reading
Click to comment

Leave a Reply

Your email address will not be published. Required fields are marked *

ಬಳ್ಳಾರಿ

ರೈತರ ಜಮೀನಿಗೆ ಏತ ನೀರಾವರಿ ಯೋಜನೆ..!

Published

on

By

ಬಳ್ಳಾರಿ: ಭತ್ತದ ಕಣಜ ಕಲಾವಿದರ ಬಿಡು ಎಂದು ಹೆಸರು ವಾಸಿಯಾಗಿರುವ ಬಳ್ಳಾರಿ ಜಿಲ್ಲೆಯ ಸಿರಾಗುಪ್ಪ ತಾಲ್ಲೂಕಿನ ತೆಕ್ಕಲ ಕೋಟೆಯಲ್ಲಿ ಲೋಕಾರ್ಪಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಗಿರಿಜನ ಉಪಯೋಜನೆಯ ಅಡಿಯಲ್ಲಿ ತೆಕ್ಕಲಕೋಟೆ ಗ್ರಾಮದ ಪರಿಶಿಷ್ಟ ಪಂಗಡದ ರೈತರುಗಳಿಗೆ ಹಾಗೂ ಇತರರ ಜಮೀನುಗಳಿಗೆ ಅಂದಾಜು 100.00 ಲಕ್ಷಗಳಲ್ಲಿ ಏತ ನೀರಾವರಿ ಯೋಜನೆ ಕಲ್ಪಿಸುವ ಕಾಮಗಾರಿಯನ್ನು ಕಲ್ಪಿಸಲಾಯಿತು.

ವರದಿ- ಡಿ.ಅಲಂ ಭಾಷಾ ಎಕ್ಸ್ ಪ್ರೆಸ್ ಟಿವಿ ಸಿರಾಗುಪ್ಪ

Continue Reading

ಬಳ್ಳಾರಿ

“ಬಳ್ಳಾರಿ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ವಿರುದ್ಧ AIDSO ವತಿಯಿಂದ ಪ್ರತಿಭಟನೆ”..!

Published

on

By

ಬಳ್ಳಾರಿ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ 5ನೇ ಸೆಮಿಸ್ಟರ್ ನಲ್ಲಿ ತೇರ್ಗಡೆಯಾಗದ ವಿಷಯಗಳನ್ನು 6 ನೇ ಸೆಮಿಸ್ಟರ್ ನಲ್ಲಿ ಬರೆಯಲು ಅವಕಾಶ ನೀಡಲಾಗಿದ್ದು, ಮರು ಮೌಲ್ಯಮಾಪನ/ಫೋಟೊ ಕಾಪಿ ತೆಗೆಸಲು ಅವಕಾಶ ನೀಡದಿರುವುದನ್ನು ಪ್ರಶ್ನಿಸಿ, ಆ ಅವಕಾಶವನ್ನು ವಿವಿಯು ಕಲ್ಪಿಸಬೇಕೆಂದು ಪ್ರತಿಭಟನೆ ನಡೆಸಲಾಯಿತು. ವಿಶ್ವ ವಿದ್ಯಾಲಯದ ಆಡಳಿತ ಕುಲಸಚಿವರಾದ ಶ್ರೀಮತಿ ಡಾ.ಸಿ.ತುಳಸಿಮಾಲರವರು ಮನವಿ ಪತ್ರ ಸ್ವೀಕರಿಸಿದರು. ವಿದ್ಯಾರ್ಥಿಗಳ ಬೇಡಿಕೆಯು ಸರಿಯಾದದ್ದು ಮಾನ್ಯ ಕುಲಪತಿಗಳು ಹಾಗು ಪರಿಕ್ಷಾಂಗ ಕುಲಸಚಿವರೊಂದಿಗೆ ಚರ್ಚಿಸಿ ತಿಳಿಸವಾಗುವುದೆಂದು ಹೇಳಿದರು. ಈ ಪ್ರತಿಭಟನೆಯಲ್ಲಿ AIDSO ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಸುರೇಶ್.ಜಿ, ಉಪಧ್ಯಕ್ಷರಾದ ಗುರಳ್ಳಿ.ರಾಜ, ಜಿಲ್ಲಾ. ಕಾರ್ಯದರ್ಶಿ ರವಿಕಿರಣ್.ಜೆ.ಪಿ ಹಾಗು ಜಿಲ್ಲಾ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ- ವೆಂಕಟೇಶ್. ಯು ಎಕ್ಸ್ ಪ್ರೆಸ್ ಟಿವಿ ಬಳ್ಳಾರಿ

Continue Reading

ಬಳ್ಳಾರಿ

ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಪತ್ರ ಸಲ್ಲಿಕೆ..!

Published

on

By

ಬಳ್ಳಾರಿ- ಬಳ್ಳಾರಿ ತಾಲೂಕು ಕಛೇರಿ ಆವರಣದಲ್ಲಿ ಕಂದಾಯ ಇಲಾಖೆ, ಉದ್ಯೋಗ ವಿನಿಮಯ ಕೇಂದ್ರ, ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿ, ಗ್ರಾಮಾಂತರ ಪೊಲೀಸ್ ಠಾಣೆ, ಬ್ರೂಸ್ ಪೇಟೆ ಪೋಲಿಸ್ ಠಾಣೆ, ಜಂಟಿ ಕೃಷಿ ನಿರ್ದೇಶಕರ ಕಛೇರಿ, ತೋಟಗಾರಿಕೆ ಇಲಾಖೆಗಳಿವೆ. ಕುಡಿಯುವ ನೀರು, ಶೌಚಾಲಯ, ಆಸನ ವ್ಯವಸ್ಥೆ, ಮತ್ತು ವಾಹನ ನಿಲುಗಡೆ ಸ್ಥಳ ಇರುವುದಿಲ್ಲ. ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಜಿಲ್ಲಾಧಿಕಾರಿ ಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ತಹಶಿಲ್ದಾರರಾದ ನಾಗರಾಜ.ಯು ಅವರು ಮಾತನಾಡಿ ಆದಷ್ಟು ಬೇಗನೇ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತವೆ ಎಂದು ಮನವಿ ಪತ್ರವನ್ನು ಸ್ವೀಕರಿಸಿದರು. ಮಾಹಾನಗರ ಪಾಲಿಕೆಯ ಕಛೇರಿ ನಿರ್ವಾಹಕರಾದ ಗೋವಿಂದ ಬಾಬು ಅವರಿಗೂ ಮನವಿ ಪತ್ರ ಸಲ್ಲಿಸಲಾಯಿತು. ಆದಷ್ಟು ಬೇಗನೇ ಈ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಲಾಗುವುದೆಂದು ಸಂಸ್ಥಾಪಕ ಅಧ್ಯಕ್ಷರಾದ ಪಿ.ಎಂ ಈಶ್ವರಪ್ಪ ಹೇಳಿದರು.ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಯಾದಶ್ರೀ ರಾಮುಲು.ಯು, ಯುವ ಘಟಕದ ಅಧ್ಯಕ್ಷರಾದ ವೆಂಕಟೇಶ್, ಕಾರ್ಯಾಧ್ಯಕ್ಷರಾದ ಸುರೇಶ್,ಈಶ್ವರ್ ಭಾಸ್ಕರ್, ಪರಶುರಾಮ್, ತಿಮ್ಮಪ್ಪ, ಬಾಬು, ಜಾನು ಹಾಗೂ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

ವರದಿ-ವೆಂಕಟೇಶ್. ಯು ಎಕ್ಸ್ ಪ್ರೆಸ್ ಟಿ.ವಿ ಬಳ್ಳಾರಿ.

Continue Reading

Trending

Copyright © 2023 EXPRESS TV KANNADA

kuşadası escort kayseri escort kocaeli escort canlı maç izle selcuksports güvenilir bahis siteleri deneme bonusu deneme bonusu veren siteler bahis siteleri https://resimlihaber.org/ canlı bahis siteleri güvenilir bahis siteleri http://seu.frvm.utn.edu.ar/guvenilir-bahis-siteleri.html deneme bonusu veren sitelercasino sitelerimıknatısmaç izle