ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕೆಜಿಎಫ್ ಭೇಟಿ..!

ಕೋಲಾರ: ಕೋಲಾರ ಜಿಲ್ಲೆಯ ಕೆಜಿಎಪ್ ಚಿನ್ನದಗಣಿ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸುವ ಉದ್ದೇಶದ ಹಿನ್ನಲೆ ಇಂದು ಕೆಜಿಎಪ್ ಗೆ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು, ಮೊದಲು ಕೆಜಿಎಫ್ ನಗರದ ಬೆಮೆಲ್ ಸಂಸ್ತೆಗೆ ಭೇಟಿ ನೀಡಿ ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಂಡು, ನಂತರ ಬೆಮೆಲ್ ಹಿಂಭಾಗದಲ್ಲೆ ಇರುವ ಮೈನ್ಸ್ ಪ್ರದೇಶದಲ್ಲಿನ ಭೂಮಿಯನ್ನ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ್ರು, ಈ ವೇಳೆ ಸಂಸದ ಎಸ್ ಮುನಿಸ್ವಾಮಿ, ಕೆಜಿಎಪ್ ಶಾಸಕಿ ರೂಪಕಲಾ, ಜಿಲ್ಲಾಧಿಕಾರಿ, ಎಸ್ಪಿ ಹಾಗು ಇಲಾಖೆ ಅಧಿಕಾರಿಗಳು ಹಾಜರಿದ್ದರು, ಚಿನ್ನದಗಣಿಗೆ ಸೇರಿದ 3200 ಎಕರೆ ಭೂಮಿಯಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವನೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ್ದು, ಬೆಂಗಳೂರು ಕೈಗಾರಿಕಾ ಸಂದಣಿಯ ಒತ್ತಡವನ್ನು ಕಡಿಮೆ ಮಾಡಲು ಕೆಜಿಎಫ್ ನಲ್ಲಿ ಕೈಗಾರಿಕಾ ವಲಯ ಸ್ತಾಪಿಸಲು ಸರ್ಕಾರ ಚಿಂತನೆ ನಡೆಸಿದೆ, ಆದರೆ ಚಿನ್ನದ ಗಣಿಯಲ್ಲಿ,ನೈಸರ್ಗಿಕ ಖನಿಜ…

Read More

ಬಿಜೆಪಿ ಪಕ್ಷದ ಬಗ್ಗೆ ಅಸಮಧಾನ ಹೊರಹಾಕಿದ ಬಿಎಸ್ ಪಿ ಪಕ್ಷದ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ..!

ಮಳವಳ್ಳಿ: ರಾಜ್ಯದ ಸಂಕಷ್ಟದ ಪರಿಸ್ಥಿತಿಯನ್ನು ಸಾಲ ತಂದಾದರೂ ನಿಭಾಯಿಸುತ್ತೇವೆ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರ ಹೇಳಿಕೆಯನ್ನು ಬಿಎಸ್ ಪಿ ಖಂಡಿಸುತ್ತದೆ ಎಂದು ಬಿಎಸ್ ಪಿ ಪಕ್ಷದ ರಾಜ್ಯಾದ್ಯಕ್ಷರಾದ ಎಂ. ಕೃಷ್ಣಮೂರ್ತಿ ತಿಳಿಸಿದರು. ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದ ಬಹುಜನ ಸಮಾಜ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ರೀತಿ ಹೇಳಿಕೆ ನೀಡುವ ಬದಲಾಗಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ರಾಜ್ಯದ ಪಾಲಿನ ಜಿ.ಎಸ್.ಟಿ ಹಣ ವಸೂಲಿ ಮಾಡಿ ನಂತರ ಸಾಲದ ಬಗ್ಗೆ ಮಾತನಾಡಬೇಕೆಂದು ಆಗ್ರಹಿಸಿದರು. ಕೊರೊನಾ ಸಂಕಷ್ಟದಲ್ಲೂ ಕರ್ನಾಟಕದಿಂದ ಶೇ.72% ಜಿ.ಎಸ್.ಟಿ ಸಂಗ್ರಹವಾಗಿದೆ. ಕಷ್ಟ ಕಾಲದಲ್ಲೂ ಕೇಂದ್ರ ಸರ್ಕಾರ ರಾಜ್ಯಕ್ಕೆ ತಮ್ಮ ಪಾಲಿನ ಹಣ ನೀಡದೇ ಮೀನಾ ಮೇಷ ಎಣಿಸುತ್ತಿರುವುದು ಖಂಡನೀಯ. ಕಳೆದ ವರ್ಷ ಪ್ರವಾಹದಿಂದಾಗಿ ರಾಜ್ಯದಲ್ಲಿ ₹38 ಸಾವಿರ ಕೋಟಿ ನಷ್ಟವಾಗಿದೆ. ಆದರೆ ಕೇಂದ್ರ ನೀಡಿದ್ದು ಕೇವಲ ₹1850 ಕೋಟಿ ಮಾತ್ರ. ಈ ವರ್ಷ ₹3…

Read More

ಬಾಹುಬಲಿ ನಂತ್ರ ಪ್ರಭಾಸ್ ಆದ್ರೂ ಆಧಿಪುರುಷ್…!

ಬಾಹುಬಲಿ ಅಂತಹ ಹಿಟ್ ಚಿತ್ರವನ್ನು ಕೊಟ್ಟ ಮೇಲೆ ಪ್ರಭಾಸ್ ಮತ್ತು ಅನುಷ್ಕಾ ಜೋಡಿ ಎಲ್ಲೇಡೆ ಜನ-ಮನ ಗೆದ್ದು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.ಒಂದರ ಮೇಲೊಂದು ಹಿಟ್ ಚಿತ್ರಗಳನ್ನು ನೀಡುತ್ತಿರುವ ಪ್ರಭಾಸ್ ಬಾಹುಬಲಿ ಯಶಸ್ಸಿನ ಬಳಿಕ ಭಾರತೀಯ ಸಂಸ್ಕೃತಿಯನ್ನು ವಿಶ್ವಮಟ್ಟಕ್ಕೆ ಪರಿಚಯಿಸಲು ಅಧಿಪುರುಷ್ ಆಗಿ ಪ್ರಭಾಸ್ ಮತ್ತೆ ಬರ್ತಾ ಇದ್ದಾರೆ.ಈ ಚಿತ್ರ ಮೂರು ಭಾಗಗಳನ್ನು ಒಳಗೊಂಡಿದ್ದು, ಪರಶುರಾಮ, ಶ್ರೀರಾಮ,ಶ್ರೀಕೃಷ್ಣರ ಜೀವನ ವಿಷಯಗಳ ಮೇಲೆ ಆಧಾರಿತವಾಗಿರುತ್ತದೆಯೆಂದು ಮೂಲಗಳಿಂದ ತಿಳಿದು ಬಂದಿದ್ದು ಪ್ರಭಾಸ್ ಅವರ ಚಿತ್ರವನ್ನು ತೆರೆ ಮೇಲೆ ವೀಕ್ಷೀಸಲು ಪ್ರಭಾಸ್ ಫ್ಯಾನ್ಸ್ ತುದಿಗಾಲಿನಲ್ಲಿ ನಿಂತು ಕಾಯ್ತಾಯಿದ್ದಾರೆ. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Read More

6 ತಿಂಗಳಲ್ಲಿ 80 ಸಾವಿರ ಕಡತ..ನಾಗಮಂಗಲ ತಹಸೀಲ್ದಾರ್ ಕುಂಞ ಅಹಮ್ಮದ್..!

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಕೈಬರಹ ಪಹಣಿಯಿಂದ ಗಣಕೀಕೃತ ಪಹಣಿ ಆದಾಗಿನಿಂದ ಬಾಕಿ ಉಳಿದಿದ್ದ 1,35,314 ಕಡತಗಳ ಪೈಕಿ ಕಳೆದ 6 ತಿಂಗಳಲ್ಲಿ 80 ಸಾವಿರ ಕಡತಗಳನ್ನು ವಿಲೇವಾರಿ ಮಾಡುವ ಮೂಲಕ ತಹಸೀಲ್ದಾರ್ ಕುಂಞ ಅಹಮ್ಮದ್ ರೈತಪರ ಕಾಳಜಿ ತೋರಿದ್ದಾರೆ. ರೈತರ ಪಹಣಿಗಳನ್ನು ಕೈ ಬರಹದಿಂದ ಗಣಕೀಕೃತಕ್ಕೆ ದಾಖಲಿಸುವಾಗ ಪಹಣಿಗಳಲ್ಲಿ ಉಂಟಾಗಿದ್ದ ಸಮಸ್ಯೆಗಳಾದ ಒಗ್ಗೂಡಿಸುವುದು ಹಾಗೂ 11 ಇ ನಕ್ಷೆ ಸೇರಿದಂತೆ ತಿದ್ದುಪಡಿಗಳಂತಹ ದೋಷಗಳಿಂದ ರೈತರು ಬೇಸತ್ತಿದ್ದರು.ಇಂತಹ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವ ಸಲುವಾಗಿ ಪ್ರತಿದಿನ ರಾಜಸ್ವ ನಿರೀಕ್ಷರು, ಗ್ರಾಮ ಲೆಕ್ಕಿಗರು ಹಾಗೂ ತಹಸೀಲ್ದಾರ್ ಕಚೇರಿಗೆ ಅಲೆಯುವುದೇ ರೈತರ ಕಾಯಕವಾಗಿತ್ತು.ಇದೇ ಜ.16 ರಂದು ತಹಸೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ ಕುಂಞ ಅಹಮ್ಮದ್, ಕೊರೊನಾ ಕರ್ತವ್ಯದ ನಡುವೆಯೂ ದಿನ ಪೂರ್ತಿ 03 ಪಾಳಯಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳನ್ನು ನೇಮಿಸುವ ಮೂಲಕ ಸುಮಾರು 20 ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಕೃಷಿಕರ ಸಮಸ್ಯೆಗಳನ್ನು…

Read More

ಅಜ್ಜಿಯಿಂದಲೇ ಎರಡು ವರ್ಷದ ಕಂದಮ್ಮನ ಮೇಲೆ ಮಾರಾಣಾಂತಿಕ ಹಲ್ಲೆ..!

ಬೆಂಗಳೂರು : ಎರಡು ವರ್ಷದ ಮಗು ಅಳು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಅಜ್ಜಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ನಡೆದಿದೆ.ಮಗು ಅಳು ನಿಲ್ಲಸಲಿಲ್ಲ ಹಾಗು ಹೆಚ್ಚು ಊಟ ಮಾಡುತ್ತೆ ಎಂಬ ಕ್ಷುಲ್ಲಕ ಕಾರಣಕ್ಕೆ ಮಗು ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.ಇಮ್ರಾನ್ ಹಾಗು ಅಜೀರಾ ದಂಪತಿಯ ಪುತ್ರನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಗುವಿನ ಮೈ ಮೇಲೆ ಸುಟ್ಟಿರುವ ನಿಶಾನೆಗಳು ಕೂಡ ಇದ್ದು,ಸದ್ಯ ಗಂಭೀರವಾಗಿ ಗಾಯಗೊಂಡ ಮಗುವನ್ನು ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಮಗುವಿನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಅಜ್ಜಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Read More

ಐಪಿಎಲ್ ಟೂರ್ನ್ ನಿಂದ ಹೊರ ನಡೆದ ಸುರೇಶ್ ರೈನಾ..!

ದುಬೈ : ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ. ಚೆನ್ನೈ ಸೂಪರ್ಕಿಂಗ್ಸ್ ಅನುಭವಿ ಆಟಗಾರ ಸುರೇಶ್ ರೈನಾ ಟೂರ್ನಿಯಿಂದ ಹೊರ ಬಂದಿದ್ದಾರೆ. ಈ ಬಾರಿ ದುಬೈನಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಗೆ ಈಗಾಗಲೇ ಎಲ್ಲಾ ತಂಡಗಳು ಹಾಜರಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ದೀಪಕ್ ಚಹರ್ ಹಾಗು ತಂಡದ ಕೆಲ ಸದಸ್ಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು ಎಂದು ಸುದ್ದಿಯಾಗಿತ್ತು. ಇದೀಗ ಸುರೇಶ್ ರೈನಾ ಟೂರ್ನಿಯಿಂದ ಹೊರ ಬಂದಿದ್ದಾರೆಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವೇ ಹೇಳಿಕೊಂಡಿದೆ. ಈ ಬಗ್ಗೆ ಸ್ವತಃ ಸಿಇಒ ವಿಶ್ವನಾಥ್, ಸುರೇಶ್ ರೈನಾ ಅವರು ವೈಯಕ್ತಿಕ ಕಾರಣಗಳಿಂದ ಭಾರತಕ್ಕೆ ವಾಪಸ್ ತೆರಳುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಸಮಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸುರೇಶ್ ರೈನಾ ಮತ್ತು ಅವರ ಕುಟುಂಬಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಟ್ವೀಟ್…

Read More

ಭೂರಹಿತ ಕೃಷಿ ಕಾರ್ಮಿಕರಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ.!

ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಬಿಜಿಪುರ,ಕಗ್ಗಲಿಪುರ, ಸರಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಭೂರಹಿತ ಕೃಷಿ ಕಾರ್ಮಿಕರಿಗೆ ನಮ್ಮ ಭೂಮಿ ನಮ್ಮತೋಟ ಯೋಜನೆಯಡಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಮಳವಳ್ಳಿ ತಾಲ್ಲೂಕಿನ ಬಿ ಜಿ ಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಶಾಸಕ ಡಾ.ಕೆ ಅನ್ನದಾನಿ ಉದ್ಘಾಟಿಸಿ ಮಾತನಾಡಿ,ಈ ಹಿಂದೆ ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಮ್ಮ ಭೂಮಿ ತೋಟ ಯೋಜನೆಯಡಿ 2007-08 ನೇ ಸಾಲಿನ ಮಂಜೂರಾಗಿದ್ದ ಹಕ್ಕು ಪತ್ರವನ್ನು ಇನ್ನೂ ವಿತರಣೆ ಮಾಡದೇ ಇರುವುದು ವಿಷಾದನೀಯ ಸಂಗತಿ. ಶಾಸಕರಾದವರು ಸಾರ್ವಜನಿಕ ಅಭಿವೃದ್ಧಿ ಕೆಲಸವನ್ನು ಮಾಡಬೇಕು ಎಂದರು. ಇನ್ನೂ ಒಬ್ಬ ಪಲಾನುಭವಿಗೆ 5 ಕುಂಟೆ ಕೃಷಿ ಬಳಕೆ ಮಾಡಿಕೊಳ್ಳಲು ಉಚಿತವಾಗಿ ನೀಡುವ ಜೊತೆಗೆ ಕೃಷಿ ಹೊಂಡವನ್ನು ಮಾಡಿಕೊಳ್ಳಲಾಗುತ್ತದೆ ಅದರ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ತಾ.ಪಂ ಇಓ ಸತೀಸ್, ಜೆಡಿಎಸ್ ಮುಖಂಡ ಪ್ರಭುಸ್ವಾಮಿ, ಗುರುಸ್ವಾಮಿ…

Read More

ವಿದ್ಯಾಸಂಸ್ಥೆಗೆ ಅನುಮೋದನೆ ನೀಡಿರುವ ಜಾಗವನ್ನು ರದ್ದು ಮಾಡುವಂತೆ ಆಗ್ರಹ..!

ಮಳವಳ್ಳಿ:ಹಿಟ್ಟನಹಳ್ಳಿ ಗ್ರಾಮದ ಆಶ್ರಯ ಯೋಜನೆ ಯಡಿರುವ ಜಾಗವನ್ನು ಖಾಸಗಿ ವಿದ್ಯಾಸಂಸ್ಥೆಗೆ ಅನುಮೋದನೆ ನೀಡಿರುವುದನ್ನು ರದ್ದು ಮಾಡುವಂತೆ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದವರು ಗದ್ದಲ ಗೊಂದಲ ಸೃಷ್ಟಿಸಿದ ಘಟನೆ ಮಳವಳ್ಳಿ ಪಟ್ಟಣದಲ್ಲಿ ನಡೆಯಿತು.ಆಗಸ್ಟ್ 18ರಂದು ಕೋರಮ್ ಇಲ್ಲದೆ ಸಭೆ ರದ್ದಾದ ಹಿನ್ನಲೆಯಲ್ಲಿ ಇಂದು ತಾ.ಪಂ ಅಧ್ಯಕ್ಷ ಸುಂದರೇಶ್ ಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭವಾಗುತ್ತಿದ್ದಂತೆ ಶಿಲ್ಪಮಹೇಶ್ ರವರು ಪೊಲೀಸರನ್ನು ಏಕೆ ಕರೆಸಿದ್ದೀರಿ, ತಾ.ಪಂ ಇತಿಹಾಸದಲ್ಲಿ ಇದುವರೆಗೂ ಪೊಲೀಸರನ್ನು ಕರೆಸಲಿಲ್ಲ ಈಗಯಾವ ಗಲಾಟೆ ನಡೆಯುತ್ತಿತ್ತು ಎಂದು ಪ್ರಶ್ನಿಸಿದರು.ಇವರಿಗೆ ದ್ವನಿಗೂಡಿಸಿದ ವಿರೋಧ ಪಕ್ಷ ನಾಯಕ ನಟೇಶ ಹಾಗೂ 11 ಮಂದಿ ಸದಸ್ಯರು ಹಾಗೂ ಅಧ್ಯಕ್ಷರ ನಡುವೆ ಮಾತಿನ ಚಕಮುಕಿ ನಡೆಯಿತು.ಸದಸ್ಯ ಪುಟ್ಟಸ್ವಾಮಿ ಹಿಟ್ಟನಹಳ್ಳಿ ಗ್ರಾಮದ 21 ಕುಂಟೆ ಜಾಗವನ್ನು ಖಾಸಗಿ ವಿದ್ಯಾ ಸಂಸ್ಥೆಗೆ ಮಂಜೂರು ಮಾಡಿರುವ ಆದೇಶವನ್ನು ರದ್ದು ಮಾಡಬೇಕು ಅಲ್ಲಿಯವರೆಗೂ ಸಭೆ ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.ಈ ನಡುವೆ ವಿರೋದ ಪಕ್ಷದ…

Read More

ಸ್ಮಶಾನ ಜಾಗ ಒತ್ತುವರಿ..ಮಠದ ಮುಂಬಾಗವೇ ಶವದ ಅಂತ್ಯ ಸಂಸ್ಕಾರ..!

ಮಳವಳ್ಳಿ:ಸ್ಮಶಾನ ಜಾಗದಲ್ಲಿ ಶವ ಸಂಸ್ಕಾರಕ್ಕೆ ಮಠದ ಸಂಬಂಧಿಯ ಅಡ್ಡಿಯ ಹಿನ್ನೆಲೆ ಬಿ.ಜಿ.ಪುರದ ಮಂಟೇಸ್ವಾಮಿ ಮಠದ ಮುಂದಿನ ಜಮೀನಿನಲ್ಲೇ .ಬಿ.ಜಿ.ಪುರ ಗ್ರಾಮದ ಮಾದಿಗ ಜನಾಂಗದವರಿಂದ ಶವ ಸಂಸ್ಕಾರವನ್ನು ಮಾಡಲಾಯಿತು.. ಮಾದಿಗ ಜನಾಂಗದವರ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಲ್ಲದೇ, ಶವ ಸಂಸ್ಕಾರಕ್ಕೆ ಮಠಾದೀಶನ ಸಂಬಂಧಿ ಅಡ್ಡಿ ಪಡಿಸಿದ್ದು, ಶವದ ಅಂತ್ಯಸಂಸ್ಕಾರದ ವಿವಾದದಿಂದ ಗ್ರಾಮದಲ್ಲಿ ಮಠದ ಹಾಗೂ ಜನರ ನಡುವೆ ವಾಗ್ವಾದ ಶುರುವಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೋಲಿಸರು ಮತ್ತು ಅಧಿಕಾರಿಗಳ ಭೇಟಿ ನೀಡಿದ್ದು, ಸಂಧಾನ ಮಾಡುವಳ್ಳಿ ವಿಫಲರಾಗಿದ್ದಾರೆ.ಯಾರ ಮಾತು ಕೇಳದೆ ಜನ ಶವದ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದಾರೆ. ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Read More

ಬೆಳಗಾವಿಯಲ್ಲಿ ರಾಯಣ್ಣನ ಪುತ್ಹಳಿಕೆ ಪ್ರತಿಷ್ಠಾಪನೆ ವಿವಾದಕ್ಕೆ ತೆರೆ..!

ಬೆಳಗಾವಿ:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪನೆ ವಿವಾದಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಎಡಿಜಿಪಿ ಅಮರಕುಮಾರ್ ಪಾಂಡೆ ಅವರು ಕನ್ನಡಿಗ- ಮರಾಠಿಗ ಭಾಷಿಕ ಮುಖಂಡರ ಜೊತೆ ಸಂಧಾನ ಸಭೆ ನಡೆಸಿದ್ದು,ಸಭೆಯು ಸಫಲವಾಗಿದೆ. ಪೀರನವಾಡಿಯ ಲಕ್ಷ್ಮೀ ಮಹಲ್ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರ ನಾಯಕರ ಸಭೆಯಲ್ಲಿ ಸೌಹಾರ್ದಯುತ ಸಲಹೆಗಳು ಪ್ರಸ್ತಾಪವಾಗಿ ವಿವಾದಕ್ಕೆ ಬಹುತೇಕ ತೆರೆಬಿದ್ದಿದೆ. ರಾಯಣ್ಣ ಅಭಿಮಾನಿಗಳು ಪ್ರತಿಷ್ಠಾಪಿಸಿದ ಸ್ಥಳದಲ್ಲೇ ರಾಯಣ್ಣ ಪ್ರತಿಮೆ ಇರಲು ಮರಾಠಿ ಭಾಷಿಕರು ಒಪ್ಪಿಗೆ ಕೊಟ್ಟಿದ್ದಾರೆ. ಮೂರ್ತಿ ಪ್ರತಿಷ್ಠಾಪಿಸಿದ ವೃತ್ತಕ್ಕೆ ‘ಶಿವಾಜಿ ವೃತ್ತ’ ಎಂದು ನಾಮಕರಣ ಮಾಡಲು ಕನ್ನಡಪರ ಮುಖಂಡರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಡಿಸಿ ಎಂ.ಜಿ.ಹಿರೇಮಠ, ಎಡಿಜಿಪಿ ಅಮರಕುಮಾರ್ ಪಾಂಡೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪೀರನವಾಡಿ ವಿವಾದಕ್ಕೆ ಸೌಹಾರ್ದತೆಯ ತೆರೆ ಬಿದ್ದಿದೆ… ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು.

Read More