Connect with us

ವಿಜಯಪುರ

ಭಾರಿ ಮಳೆಗೆ ಜಲಾವೃತಗೊಂಡ ಭೀಮಾತೀರ..!

Published

on

ವಿಜಯಪುರ: ಮುರ್ನಾಲ್ಕು ದಿನದಿಂದ ಬೆನ್ನು ಬಿಡದೆ ಮಳೆ ಸುರಿಯುತ್ತಿರವ ಹಿನ್ನೆಲೆ ಭಿಮಾ ನದಿ ನೀರಿನ ಮಟ್ಟ ದಿನೇ ದಿನೇ ಹೆಚ್ಚಳವಾಗುತ್ತಲಿದೆ. ನದಿ ಪಾತ್ರದ ಗ್ರಾಮಗಳು ಮುಳುಗಡೆಯ ಭೀತಿ ಎದುರಿಸುತ್ತಿವೆ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಮಳೆ ಆಗುತ್ತಿರುವುದರಿಂದ ಸೋನ್ನ ಬ್ಯಾರೆಜನಿಂದ ಲಕ್ಷಗಟ್ಟಲೇ ಕ್ಯೂಸೆಕ್ ನೀರು ಬಿಡಲಾಗ್ತಿದೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವಣಗಾಂವ ಗ್ರಾಮ ಅರ್ಧಭಾಗ ಜಲಾವೃತಗೊಂಡಿದೆ ಗ್ರಾಮದ ಸುತ್ತಮುತ್ತಲು ನೀರು ಆವರಿಸಿಕೊಂಡಿದೆ ಹನುಮಾನ ದೇವಸ್ಥಾನ, ಅಂಬಿಗರ ಚೌಡಯ್ಯ ದೇವಸ್ಥಾನ, ಗ್ರಾಮದ ಹಲವಾರು ಮನೆಗಳಲ್ಲಿ ನೀರು ತುಂಬಿವೆ ಇಂತಹ ಪ್ರವಾಹದ ಸಂದರ್ಭದಲ್ಲಿ ಆಂಜನೇಯ ದೇವಸ್ಥಾನದ ಪೂಜಾರಿ ಪೂಜೆ ಮಾಡಲು ದೇವಸ್ಥಾನಕ್ಕೆ ಈಜುಕೊಂಡು ಹೋಗಿ ಪೂಜೆ ಮಾಡಿಕೊಂಡು ಬಂದಿದ್ದು ವಿಶೇಷ ಇನ್ನು ನದಿ ಪಾತ್ರದ ಗ್ರಾಮಗಳಾದ ತಾರಾಪುರ ಕುಮಸಗಿ, ಕಡ್ಲೇವಾಡ, ಶೇಂಬೆವಾಡ ಗ್ರಾಮಗಳಿಗೆ ನೀರು ನೂಗಿದ್ದು ಪ್ರವಾಹದ ಬಿತಿ ಎದಿರುಸುತ್ತಿವೆ. ನದಿ ಸುತ್ತಮುತ್ತಲಿನ ಜನರು ತಮ್ಮ ಮನೆಗಳನ್ನು ಬಿಟ್ಟು ಬೇರೆ ಕಡೆ ಸ್ಥಳಾಂತರ ಗೊಳ್ಳುತ್ತಿದ್ದಾರೆ.ವರುಣನ ಅಬ್ಬರದಿಂದ ಜನರ ಜೀವನ ಅಸ್ತವ್ಯಸ್ತಗೊಂಡಿದೆ ನಾಡಿನಾಧ್ಯಂತ ನದಿ ಪಾತ್ರದ ಗ್ರಾಮಗಳೆಲ್ಲವೂ ಜಲಾವೃತ ಗೊಂಡರು ಸಹ ಇನ್ನುಕೂಡಾ ವರುಣನ ಅಬ್ಬರ ಕಡಿಮೆಯಾಗುತ್ತಿಲ್ಲ.

ವರದಿ- ಅಂಬರೀಶ್ ಎಕ್ಸ್ ಪ್ರೆಸ್ ಟಿವಿ ಸಿಂದಗಿ

Continue Reading
Click to comment

Leave a Reply

Your email address will not be published. Required fields are marked *

ವಿಜಯಪುರ

ನಿವೃತ್ತಿ ನಂತರ ಮರಳಿದ ಯೋಧನಿಗೆ ತವರೂರಲ್ಲಿ ಅದ್ಧೂರಿ ಸ್ವಾಗತ..!

Published

on

By

ವಿಜಯಪುರ: ಭಾರತಿ ಸೇನಾ ಪಡೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರೂರಿಗೆ ಬಂದ ಯೋಧನಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದ್ದಾರೆ. ಸೈನಿಕ ಅಮೀರ ಚಂದ ಅಲ್ಲಾವುದ್ದೀನ್ ಜಕಾತದಾರ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಂಜುಟಗಿ ಗ್ರಾಮದವರಾಗಿದ್ದು, ಇವರನ್ನ ಅಂಜುಟಗಿ ಗ್ರಾಮಸ್ಥರು ವಿಶೇಷ ಸ್ವಾಗತ ಮಾಡಿಕೊಂಡರು. ತಾಲೂಕಿನ ಅಂಜುಟಗಿ ಗ್ರಾಮದ ಅಲ್ಲಾವುದ್ದೀನ್ ಪುತ್ರ ಅಮೀರಚಾಂದ ದಿನಾಂಕ 25/11/2003 ರಂದು ಭಾರತೀಯ ಸೇನೆಯಲ್ಲಿ ಭರ್ತಿಯಾಗಿ ಕರ್ನಾಟಕದ ಬೆಳಗಾವಿ ಜಿಲ್ಲೆಯಿಂದ ತಮ್ಮ ಸೇವೆ ಪ್ರಾರಂಭ ಮಾಡಿ ಸಿಕಂದರಾಬಾದ್, ಮಣಿಪುರ, ಜಮ್ಮು ಕಾಶ್ಮೀರ, ಪೊಚ್ ಸೆಕ್ಟರ್, ಕೃಷ್ಣಾ ಘಾಟ್, ಬಾಂದಿಪೂರ, ಪಂಜಾಬ್, ಗುಜರಾತ್ ಹಾಗೂ ಜಮ್ಮು ಕಾಶ್ಮೀರ ದ ದ್ರಾಸ್ ಸೆಕ್ಟರ್ ಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ್ದು ಗ್ರಾಮಸ್ಥರು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸುವ ಮೂಲಕ ಸ್ವಾಗತ ಕೋರಿದರು.ವೇದಿಕೆ ಜಿಲ್ಲಾಧ್ಯಕ್ಷ ಅಣ್ಣಾರಾಯ ಬಬಲಾದ ಮಾತನಾಡಿ, ದೇಶದೊಳಗೆ ನಾವು ನೆಮ್ಮದಿಯಿಂದ ಇರುವುದಕ್ಕೆ ಸೈನಿಕರೇ ಕಾರಣ. ಹಗಲು ರಾತ್ರಿಯೆನ್ನದೆ ಸೈನಿಕರು ಕರ್ತವ್ಯ ನಿರ್ವಹಿಸುತ್ತಾರೆ. ಅದೇ ರೀತಿ ಅಮೀರಚಂದ್ ಅಲ್ಲಾವುದ್ದೀನ್ ಜಕಾತದಾರ ಅವರು ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ್ದಾರೆ. ಆದ್ದರಿಂದ, ಅವರಿಗೆ ಗೌರವ ಸೂಚಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಮೂಲಕ ಅವರ ಸೇವೆಗೆ ನಮ್ಮ ಕೃತಜ್ಞತೆ ಅರ್ಪಿಸುತ್ತಿದ್ದೇವೆ ಎಂದಿದ್ದಾರೆ. ನಿವೃತ್ತ ಸೈನಿಕ ಅಮೀರ್ ಚಂದ ಅಲ್ಲಾವುದ್ದೀನ್ ಜಕಾತದಾರ ಮಾತನಾಡಿ,ಇದೊಂದು ಹೃದಯಸ್ಪರ್ಶಿ ಕ್ಷಣ.ಹಲವು ವರ್ಷ ದೇಶ ಸೇವೆ ಮಾಡಿ ತವರಿಗೆ ಬಂದಾಗ ಇಂತಹದೊಂದು ಸ್ವಾಗತ ಸಿಕ್ಕಿದ್ದು ಅವಿಸ್ಮರಣೀಯ. ಇದು ದೇಶದ ಸಾರ್ವಜನಿಕರಿಗೆ ಸೈನಿಕರ ಮೇಲಿನ ಗೌರವವನ್ನು ತೋರಿಸುತ್ತದೆ ಎಂದರು. ಈ ವೇಳೆ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.

ವರದಿ-ಶಂಕರ್ ಜಮಾದಾರ ಎಕ್ಸ್ಪ್ರೆಸ್ ಟಿವಿ ಇಂಡಿ..

Continue Reading

ವಿಜಯಪುರ

ಸರಕಾರಿ ವಾಹನ ಮನೆ ಕೆಲಸಕ್ಕೆ ಬಳಕೆ- ಗ್ರಾಮಸ್ಥರಿಂದ ಅಧಿಕಾರಿಗಳ ವಿರುದ್ಧ ಆಕ್ರೋಶ..!

Published

on

By

ವಿಜಯಪುರ: ಸಾರ್ವಜನಿಕ ಕೆಲಸಗಳನ್ನು ಸಲೀಸಾಗಿ ನಿರ್ವಹಿಸಲೆಂದು 24/7 ನೀಡಿರುವ ಸರಕಾರಿ ವಾಹನವನ್ನು ಕಛೇರಿ ಕೆಲಸ ಕಾರ್ಯಗಳಿಗೆ ಬಳಸದೇ ತಮ್ಮ ಖಾಸಗಿ ಹಾಗೂ ಕುಟುಂಬದ ಕೆಲಸಕ್ಕೆ ಕಾರ್ಯಗಳಿಗೆ ಬಳಕೆ ಮಾಡುತ್ತಿರುವುದು ಇಂಡಿ ತಾಲ್ಲೂಕಿನ ವಿದ್ಯತ್ ಸರಬರಾಜು ಕಛೇರಿಯಲ್ಲಿ ಕಂಡು ಬಂದಿದ್ದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಉಪ ವಿಭಾಗ ಇಂಡಿಯ ಕಛೇರಿಗೆ ನೀಡಿರುವ 24/7 ಗೂಡ್ಸ ವಾಹನವನ್ನು ಅಧಿಕಾರಿಗಳು ತಮ್ಮ ವಯ್ಯಕ್ತಿಕ ಹಾಗೂ ಕುಟುಂಬದ ಕೆಲಸ ಕ್ಕೆ ಬಳಕೆ ಮಾಡುತ್ತಿದ್ದಾರೆ. ಇನ್ನಾದರೂ ಸರ್ಕಾರಿಯ ವಾಹನಗಳನ್ನು ಸರಕಾರಿ ಕೆಲಸಕ್ಕೆ ಮಾತ್ರ ಬಳಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ಕಿಡಿಕಾರಿದರು. ಸರಕಾರದ ವಾಹನವನ್ನು ಅಧಿಕಾರಿಗಳು ತಮ್ಮ ಖಾಸಗಿ ಐಷರಾಮಿ ಬದುಕಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಮೇಲಿಂದ ಮೇಲೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದರೂ, ಇಂತಹ ಅಧಿಕಾರಿಗಳ ವಿರುದ್ದ ಸರಕಾರ ಸೂಕ್ತ ಕ್ರಮಕ್ಕೆ ಮುಂದಾಗುವುದೆ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ.

ವರದಿ- ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ

Continue Reading

ವಿಜಯಪುರ

ಚುನಾವಣೆ ಅಧಿಕಾರಿ ಇಲ್ಲದೇ ಗೊಂದಲದ ಗೂಡಾದ ನಾಮಪತ್ರ ಸಲ್ಲಿಕೆ.!

Published

on

By

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕು ಕಾರ್ಯಕಾರಿ ಸಮಿತಿ ಚುನಾವಣೆ ನಾಮ ಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು ನಾಮ ಪತ್ರ ಸ್ವೀಕಾರ ಮಾಡಬೇಕಿದ್ದ ಚುನಾವಣೆ ಅಧಿಕಾರಿ ನಾಪತ್ತೆಯಾಗಿದ್ದಾರೆ. ಎಂದು ತಾಲ್ಲೂಕು ಸರಕಾರಿ ನೌಕರ ಸಂಘದ ಅಧ್ಯಕ್ಷ ಎಸ್ ಆರ್ ಪಾಟೀಲ್ ದೂರಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕ ಸಂಘದ (ರಿ) ಬೆಂಗಳೂರು ಇವರ ಸೂಚನೆಯಂತೆ ೨೦೨೦ – ೨೫ ನೇ ಸಾಲಿನ ೫ ವರ್ಷದಗಳ ಅವಧಿಗಾಗಿ ಶಿಕ್ಷಕರ ಸಂಘದ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಇಂಡಿ ತಾಲ್ಲೂಕಿನ ಅಂಜುಮನ್ ಪ್ರೌಢಶಾಲೆಯನ್ನು ಚುನಾವಣಾ ಕಛೇರಿಯಾಗಿ ರೂಪಿಸಲಾಗಿತ್ತು. ಚುನಾವಣೆ ಅಧಿಕಾರಿಯಾಗಿ ಶ್ರೀ ಜಮಾದಾರ ಎಂಬುವರನ್ನು ನೇಮಕ ಮಾಡಲಾಗಿತ್ತು. ಆದರೆ ದಿನಾಂಕ ೨೮ -೧೧-೨೦೨೦ ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ನಾಮ ಪತ್ರ ಸಲ್ಲಿಕೆ ಆಗಮಿಸಿದ್ರೆ ಚುನಾವಣೆ ಕಛೇರಿಗೆ ಬೀಗವಿದೆ. ಸ್ಥಳದಲಿ ಚುನಾವಣೆ ಅಧಿಕಾರಿಯೂ ಇಲ್ಲ, ಚುನಾವಣೆ ಮುಂದೂಡಿದ ಬಗ್ಗೆ ಮಾಹಿತಿಯೂ ಇಲ್ಲ. ಪೊನ್ ಕರೆ ಮಾಡಿದ್ರೆ ಸ್ವೀಚ್ ಆಪ್ ಮಾಡಿದ್ದಾರೆ. ಇದು ಎಂತಹ ವ್ಯವಸ್ಥೆ ಚುನಾವಣೆ ಅಧಿಕಾರಿಗಳು ಚುನಾವಣೆ ನಿಯಾಮವಳಿಗಳನ್ನು ಮರೆತ್ರಾ ಎಂದು ಆರೋಪಿಸಿದ್ದಾರೆ.

ವರದಿ: ಶಂಕರ್ ಜಮಾದಾರ ಎಕ್ಸ್ಪ್ರೆಸ್ ಟಿವಿ ಇಂಡಿ

Continue Reading

Trending

Copyright © 2023 EXPRESS TV KANNADA