ಕಲಬುರಗಿ : ಕೊರೊನಾ ಕಡಿಮೆಯಾದ ಹಿನ್ನಲೆಯಲ್ಲಿ ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆ ವೈದ್ಯರು ಕೊರೊನಾ ರೋಗಿಗಳೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ.. ಅಂದ ಹಾಗೇ ವರನಟ ಡಾ.ರಾಜಕುಮಾರ್ ಅವರ ಸೂಪರ್ ಹಿಟ್ ಚಿತ್ರಗೀತೆ `ನಗುತ್ತಾ..ನಗುತ್ತಾ..ಬಾಳು ನೀನು ಎಂಬ ಹಾಡಿಗೆ’ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳು ಸಖತ್ ಸ್ಟೇಫ್ ಹಾಕಿದ್ದಾರೆ.. ಸದ್ಯ ಆಸ್ಪತ್ರೆ ವೈದ್ಯರ ಹಾಡುಗಾರಿಗೆ ಹಾಗೂ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರು ಸಹ ಫುಲ್ ಖುಷ್ ಆಗಿದ್ದಾರೆ. ಇನ್ನು ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆಯಲ್ಲಿ ೩೦ನೇ ಸ್ಥಾನಕ್ಕೆ ಕಲಬುರಗಿ ಜಿಲ್ಲೆ ಇಳಿದಿದೆ.ಜೊತೆಗೆ ಬೀದರ್ ಬಿಟ್ಟರೆ ಕಲಬುರಗಿಯಲ್ಲೇ ಅತೀ ಕಡಿಮೆ ಅಂದರೆ ಕೇವಲ ೩.೮%ಗೆ ಪಾಸಿಟಿವ್ ಸಂಖ್ಯೆ ಇಳಿದಿದೆ.. ಉಮೇಶ್ ಅಚಲೇರಿ ಎಕ್ಸ್ ಪ್ರೆಸ್ ಟಿವಿ ಕಲಬುರಗಿ
Read MoreCategory: ಕಲಬುರಗಿ
ಚುನಾವಣೆಯಲ್ಲಿ ಗೆಲುವು ಪಡೆದ ಅಭ್ಯರ್ಥಿಗಳ ವಿಜಯೋತ್ಸವದ ಸಂಭ್ರಮ..!
ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ 30 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಗೆಲುವು ಪಡೆದ ಅಭ್ಯರ್ಥಿಗಳ ವಿಜಯೋತ್ಸವದ ಸಂಭ್ರಮ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಗ್ರಾಮದಲ್ಲಿ ನಡೆಯಿತು. ಆಳಂದ ಪಟ್ಟಣದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ನಿನ್ನೇ ಬೆಳಗ್ಗೆಯಿಂದಲೇ ಮತ ಎಣಿಕೆ ಆರಂಭಿಸಿಲಾಗಿತು. ಮತ ಎಣಿಕೆ ಮಂದಗತಿಯಲ್ಲಿ ನಡೆದಿದ್ದರಿಂದ ತಡ ರಾತ್ರಿವರೆಗೂ ಎಣಿಕೆ ನಡೆಯಿತು. ಇದರಿಂದ ಫಲಿತಾಂಶಕ್ಕಾಗಿ ಹೊರಗಡೆ ಸಾವಿರಾರು ಜನರು ಚಳಿಯನ್ನು ಲೆಕ್ಕಿಸದೇ ಕಾಯುತ್ತಿರುವ ದೃಶ್ಯ ಕಂಡು ಬಂದಿತು. ಇನ್ನೂ ಗೆದ್ದ ಅಭರ್ಥಿಗಳು ಗ್ರಾಮಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ವರದಿ-ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಆಳಂದ
Read Moreಕಲಬುರಗಿಯಲ್ಲಿ ಸಾರಿಗೆ ಸಿಬ್ಬಂದಿ ಮುಷ್ಕರ- ಡಿಪೋ ಸೇರಿದಂತೆ ಬಸ್ಸ್ ಗಳು ಬಂದ್ ..!
ಕಲಬುರಗಿ:ನಿನ್ನೆಯಿಂದ ಎಲ್ಲೇಡೆ ಸಾರಿಗೆ ನೌಕರರ ಮುಷ್ಕರ ಜೋರಾಗೆ ಇದ್ದು, ಸರ್ಕಾರದಿಂದ ಮಾತ್ರ ಇದುವರೆಗೂ ಇವರ ಹೋರಾಟಕ್ಕೆ ಯಾವುದೇ ಉತ್ತರ ಬಂದಿಲ್ಲ. ಬೆಂಗಳೂರಿನಲ್ಲಷ್ಟೇ ಅಲ್ಲದೇ ಎಲ್ಲಾ ಉರಿನಲ್ಲೂ ನೌಕರರ ಕೂಗು ಜೊರಾಗೆಯಿದೆ.ಇಂದು ಕಲಬುರುಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಸಾರಿಗೆ ನೌಕರರು ಸರಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಆಳಂದದ ಸಾರಿಗೆ ನೌಕಕರು ರಸ್ತೆಗೆ ಇಳಿಯದೆ ಎಲ್ಲಾ ಬಸ್ಸ್ಗಳನ್ನು ಡಿಪೋದಲ್ಲಿ ಹಾಕಿ ಪ್ರತಿಭಟನೆ ನಡೆಸಿದರು.ಸರಕಾರವು ನಮ್ಮನ್ನು ಸರಕಾರಿ ನೌಕರೆಂದು ಪರಿಗಣಿಸಬೇಕು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. ವರದಿ-ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಕಲಬುರಗಿ
Read Moreಜಯಕರ್ನಾಟಕ ಸಂಘಟನೆ ವತಿಯಿಂದ ಕೊರೊನಾ ವಾರಿಯರ್ಸ್ ಗೆ ಸನ್ಮಾನ..
ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಗುರುಭವನದಲ್ಲಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ಕೊರೊನಾ ವಾರಿಯರ್ಸ್‌ಗಳ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ಕನ್ನಡಪರ ಹೋರಾಟಗಾರ ಅರುಣ ಕುಮಾರ್ ಪಾಟೀಲ್ ರಾಜ್ಯಸರ್ಕಾರದ ಕನ್ನಡ ವಿರೋಧಿ ನೀತಿಯಿಂದಾಗಿ ಕನ್ನಡ ಭಾಷೆ, ಸಂಸ್ಕೃತಿಗೆ ಧಕ್ಕೆ ಉಂಟಾಗಿದೆ ಎಂದರು. ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಕೊರಳ್ಳಿ ಮಾತನಾಡಿ, ಪೋಷಕರು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಕನ್ನಡ ಅಭಿಮಾನ ಬೆಳೆದಾಗ ಮಾತ್ರ ನಾಡು ನುಡಿ ಬೆಳೆಯಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಮಾದನ ಹಿಪ್ಪರಗಾದ ಅಭಿನವ ಶಿವಲಿಂಗ ಸ್ವಾಮೀಜಿ, ಸಂಘಟನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ರಾಮಚಂದ್ರಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ರಾಕೇಶ ಕಲ್ಲೂರು ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಕ್ಷೇತ್ರಗಳ ಸಾಧಕರು ಹಾಗೂ…
Read Moreಮನೆ ಮನೆಗೆ ಕುಡಿಯುವ ನೀರಿನ ಯೋಜನೆಗೆ ಚಾಲನೆ- ಹರ್ಷಾನಂದ ಗುತ್ತೇದಾರ..!
ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಆಲೂರ (ಬಿ) ಗ್ರಾಮದಲ್ಲಿ ಜಲ ಜೀವನ ಮೀಶನ್ ಯೋಜನೆಯ ಅಡಿಯಲ್ಲಿ 31 ಲಕ್ಷ ವೆಚ್ಚದ ಮನೆ ಮನೆ ಕುಡಿಯುವ ನೀರಿನ ನಳದ ಪೈಲೈನ ಕಾಮಗಾರಿ ಹಾಗೂ ೧೭ ಲಕ್ಷದ ಸಿ.ಸಿ ರಸ್ತೆಗೆ ಜಿಲ್ಲಾ ಪಂಚಾಯತ ಸದಸ್ಯ ಹರ್ಷಾನಂದ ಗುತ್ತೇದಾರ ಚಾಲನೆ ನೀಡಿದರು. ನಂತರ ಮಾತನಾಡಿ ಪ್ರತಿಯೊಂದು ಹಳ್ಳಿಗಳು ಅಭಿವೃದ್ದಿ ಹೊಂದಿಬೇಕೆಂದು ಪ್ರದಾನಿ ಮೋದಿಜಿ ಕನಸು ಕಂಡಿದ್ದಾರೆ ಅದರಂತೆ ಪ್ರತಿ ಹಳ್ಳಿಯ ಮನೆ ಮನೆಗೂ ನೀರು ಒದಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ ಹೇಳಿದರು. ತಾಲೂಕಿನಲ್ಲಿ ಈ ವರ್ಷ ಉತ್ತಮ ಮಳೆಯಾಗಿದೆ ಬೆಸಿಗೆಯಲ್ಲಿ ನೀರಿನ ಸಮಸ್ಯೆ ಬರದಂತೆ ಕ್ರಮ ವಸಹಿಲಾಗುತ್ತಿದೆ. ಅದರಂತೆ ಅಮರ್ಜಾ ಆಣೆಕಟ್ಟು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ ದಾರಿಯಲ್ಲಿ ಹಾದು ಹೋಗುವ ಗ್ರಾಮಗಳ ಪ್ರತಿ ಮನೆ ಮನೆಗೂ ನಳದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.ಮುಖಂಡ ವಿರಣ್ಣಾ ಮಂಗಾಣೆ…
Read Moreಮಾದನ ಹಿಪ್ಪರಗಾದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ..!
ಕಲಬುರುಗಿ: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಗ್ರಾಮದಲ್ಲಿ ಶ್ರೀಖಂಡೇಶ್ವರ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ ಆಧುನಿಕ ಸಂಸ್ಕçತಿಯ ಪ್ರಭಾದಿಂದ ನಮ್ಮ ದೇಶಿಯ ಸಂಸ್ಕೃತಿ ಮರೆಯಾಗುತ್ತಿದೆ, ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ. ಕಲಾವಿದರು ಕಲೆಯನ್ನೆ ನಂಬಿ ಬದುಕು ನಡೆಸುವವರು ಅವರಿಗೆ ಬೇರೆ ಉದ್ದೋಗ ಗೊತ್ತಿಲ್ಲ ಅವರು ತೀರಾ ಆರ್ಥಿಕ ಸಂಕಷ್ಟದಲ್ಲಿ ಇದ್ದು ಅವರನ್ನು ಪ್ರೋತ್ಸಾಹಿಸಬೇಕಿದೆ ಎಂದರು. ಸಾನಿದ್ಯ ವಹಿಸಿ ಮಾತನಾಡಿದ ಶ್ರೀಶಾಂತವೀರ ಶಿವಾಚಾರ್ಯರು ಕನ್ನಡ ಸಾಹಿತ್ಯ ಸಂಸ್ಕೃತಿಗೆ ಹಿರಿದಾದ ಇತಿಹಾಸವಿದೆ ಆಲೂರು ವೆಂಕಟರಾರು ಕನ್ನಡ ಕಟ್ಟಲು ಶ್ರಮಿಸಿದ್ದಾರೆ. ನಮ್ಮ ಸಂಸ್ಕçತಿ ನಮ್ಮ ಹೆಮ್ಮೆ ಇಲ್ಲಿ ಎಲ್ಲ ಭಾಷೆ ಜನಾಂಗದವರು ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ ಇದು ಕನ್ನಡಗರ ದೊಡ್ಡ ಗುಣವಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡದ ಸಂಸ್ಕೃತಿ ಇಲಾಖೆಯ…
Read Moreಅಂಗನವಾಡಿ ಕಾರ್ಯಕರ್ತರಿಗೆ ಕಾರ್ಯಶಾಲಾ ಪೂರ್ವಶಿಕ್ಷಣ ಕುರಿತು 3ದಿನದ ತರಬೇತಿ..!
ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಖಜೂರಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆ ಹಾಗೂ ಕಲ್ಯಾಣ ಕನಾ೯ಟಕ ಪ್ರದೇಶಾಭಿವೃದ್ಧಿ ಪರಸ್ಪರ ಮಂಡಳಿ ಮೈಕ್ರೋ ಯೋಜನೆ ಅಡಿಯಲ್ಲಿ ಮತ್ತು ಸಿಡಿಎಫ್ ಮತ್ತು ಇಂಡಿಯಾ ಲಿಟರ್ಸಿ ಪ್ರಾಜೆಕ್ಟ್ ಬೆಂಗಳೂರು ಇವರ ಸಹಕಾರದೊಂದಿಗೆ ಅಂಗನವಾಡಿ ಕಾರ್ಯ ಕರ್ತರಿಗೆ ಮೂರನೆ ಹಂತದ ಮೂರು ದಿನಗಳಕಾಲ ಕಾರ್ಯಶಾಲಾ ಪೂರ್ವಶಿಕ್ಷಣ ಕುರಿತು 3ದಿನದ ತರಬೇತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಶಿವಮೂರ್ತಿ ಕುಂಬಾರ ಶಾಲಾ ಪೂರ್ವ ಶಿಕ್ಷಣ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿದೆ. ಅಂಗನವಾಡಿ ಶಿಕ್ಷಕಿಯರು ತಳ ಹಂತದಲ್ಲಿ ಮಕ್ಕಳಿಗೆ ಕಥೆ ಹಾಡು ಆಟದ ಮೂಲಕ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದರು.ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶ್ರೀ ಶಿವಪ್ಪ ವಾರಿಕ್ ಮತ್ತು CFF ಶ್ರೀ ಗುರು ಜಮಾದಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಭೀಮರಾವ್ ಹೊಸಮನಿ…
Read Moreಅಮರ್ಜಾ ಆಣೆಕಟ್ಟಿಗೆ ಪೈಪಲೈನ ಕಾಮಗಾರಿ ವೀಕ್ಷಿಸಿದ ಶಾಸಲ ಬಿ.ಆರ್ ಪಾಟೀಲ್..!
ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಅಮರ್ಜಾ ಆಣೆಕಟ್ಟಿಗೆ ಅಫಜಲಪುರ ಸೊನ್ ಬ್ಯಾರೆಜನಿಂದ ನೀರು ತುಂಬಿಸುವ ಹಡಲಗಿ ಹತ್ತಿರ ನಡೆಯುತ್ತಿರುವ ಪೈಪಲೈನ ಕಾಮಗಾರಿಯನ್ನು ಮಾಜಿ ಶಾಸಕ ಬಿ.ಆರ್ ಪಾಟೀಲ ಪರೀಶಿಲನೆ ಮಾಡಿದರು. ನಂತರ ಮಾತನಾಡಿದ ಅವರು ತಾಲೂಕಿನಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಇದ್ದು ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಇದು ಮಂಜೂರಾತಿ ಪಡೆಯಲಾಗಿದೆ ಒಟ್ಟು ೪೨ ಕಿ.ಮೀ ಪೈಪಲೈನ ಕಾಮಗಾರಿ ಇದಾಗಿದೆ. ಒಟ್ಟು ೩೯೮ ಕೋಟಿ ವೆಚ್ಚದಲ್ಲಿ ಸೊನ್ಯ ಬ್ಯಾರೆಜ್ ನಿಂದ ನೀರನ್ನು ತಂದು ಅಮಾರ್ಜ ಆಣೆಕಟ್ಟಿಗೆ ತುಂಬಿಸಲಾಗುತ್ತಿದೆ. ಇದರಿಂದ ತಾಲೂಕಿನ ಜನರಿಗೆ ಅನಕೂಲವಾಗಲಿದೆ. ಮತ್ತು ದಾರಿಯಲ್ಲಿ ಬರುವ ಮ್ಯಾಡ್ಯಾಳದ ಎರಡು ಯಳಸಂಗಿ ಒಂದು ಕರೆಗಳನ್ನು ತುಂಬಿಸಲಾಗುತ್ತಿದೆ. ಆದರೆ ಇನ್ನು ಅನೇಕ ಕರೆಗಳು ಇದ್ದು ಅವುಗಳನ್ನು ತುಂಬಿಸಬೇಕಾದೆ. ಮಾದನಹಿಪ್ಪರಾ ಕೆರೂರ ಝಳಕಿ ಬಿ ಝಳಕಿ ಕೆ ಹಡಲಗಿ ನಿಂಬಾಳ ಸರಂಸಬಾ ನಾಗಲೆಗಾಂವ ಕೆರೆಗಳನ್ನು ತುಂಬಿಸಿದರೆ ಈ ಭಾಗದಲ್ಲಿ ಶಾಶ್ವತ…
Read Moreಪರಿಸರ ಕಾಳಜಿ ಮೂಡಿಸುತ್ತಿರುವ ಮಾದನ ಹಿಪ್ಪರಗಾ ಯುವಕರು..!
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದ ಯುವಕರು ಪರಿಸರ ಕಾಳಜಿ ಮೂಡಿಸುತ್ತಾ ಗ್ರಾಮಕ್ಕೆ ಮಾದರಿಯಾಗಿದ್ದಾರೆ. ಆದ್ಯಾತ್ಮಿಕ ತಾಣವಾದ ಈ ಗ್ರಾಮವು ಭಕ್ತಿಯ ತವರೂರರಾಗಿದೆ ಶಿವಲಿಂಗೇಶ್ವರ ವಿರಕ್ತ ಮಠ ಹಾಗೂ ಶಾಂತೇಶ್ವರ ಹಿರೇಮಠ ಎಂಬ ಎರಡು ಮಠಗಳು ಇದ್ದು ಇಲ್ಲಿ ಯುವ ಸ್ವಾಮಿಜಿ ಮಠಾಧಿಶರಾಗಿದ್ದಾರೆ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ಹಾಗೂ ಶಾಂತವೀರ ಶಿವಾಚಾರ್ಯರು ಈ ಯುವಕರಿಗೆ ಸ್ಪೂರ್ತಿಯಾಗಿ ಸಾಮಾಜಿಕ ಕಾರ್ಯದಲ್ಲಿ ಯುವಕರು ಮುಂದಾಗುವಂತೆ ತಿಳಿಸಿದ್ದರು. ಇದರಿಂದ ಪ್ರೆರಣೆ ಪಡೆದ ಸುಮಾರು ನೂರಕ್ಕೂ ಹೆಚ್ಚು ಯುವಕರು ರಾಷ್ಟ್ರೀಯ ಸ್ವಂ ಸೇವ ಸಂಘವನ್ನು ಕಟ್ಟಿಕೊಂಡು ಪ್ರತಿ ಭಾನುವಾರ ಗ್ರಾಮದ ರಸ್ತೆಗಳನ್ನು ಸ್ವಚ್ಚ ಮಾಡಿ ಗಿಡ ನೆಟ್ಟು ಜನರಲ್ಲಿ ಪರಿಸರ ಉಳಿಸಿ ಬೆಳಸಿ ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗ ಇಟ್ಟುಕೊಳ್ಳಬೇಕು ಎಂದು ಸಾರ್ವಜನಿಕರಲ್ಲ ಅರಿವು ಮೂಡಿಸುತ್ತಿದ್ದಾರೆ. ಕೊರೊನಾದಿಂದಾಗಿ ಶಾಲಾ ಕಾಲೇಜುಗಳು ಕೂಡಾ ಆರಂಬವಾಗಿಲ್ಲ ಇದರಿಂದ ಯುವಕರು ದುಶ್ಚಟಗಳತ್ತ ಹೊಗುತ್ತಿದ್ದಾರೆ…
Read Moreನಿಂಬರ್ಗಾದಲ್ಲಿ ಅಮರ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಭಾರತದ ಮೊಟ್ಟ ಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದ ‘ಆದಿಕವಿ’ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅಂಭಿಗರ ಚೌಡಯ್ಯ ಯುವ ಸಂಘದ ನೇತೃತ್ವದಲ್ಲಿ ಸರಳವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ನಿಂಬರ್ಗಾ ಯುವ ಮುಖಂಡ ಬಸವರಾಜ ಯಳಸಂಗಿ ಮಹರ್ಷಿ ವಾಲ್ಮೀಕಿಯು ರಾಮಾಯಣದಲ್ಲಿ ಭರತಖಂಡದಲ್ಲಿನ ಅರಣ್ಯಗಳು, ಪರ್ವತಗಳು, ನದಿ, ಸರೋವರ, ಸಮುದ್ರ, ಜಲಪಾತ ಹಾಗೂ ಪ್ರಕೃತಿಯ ಸೌಂದರ್ಯವನ್ನು ವರ್ಣಿಸಿದ್ದಾರೆ. ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯಗಳನ್ನು,ಆದರ್ಶ ವ್ಯಕ್ತಿಯ ಗುಣ ಲಕ್ಷಣಗಳನ್ನು ತಿಳಿಸಿದ್ದಾರೆ. ಮಮತೆ, ಸಮಾನತೆ, ಭ್ರಾತುತ್ವ, ತ್ಯಾಗ, ದೇಶಪ್ರೇಮ, ಅಳಿಲುಸೇವೆ, ಪಿತೃವಾಕ್ಯ ಪರಿಪಾಲನೆ, ಮಾನವೀಯ, ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ.ಅಂದಿನ ಹಾಗೂ ಇಂದಿನ ಸಮಸ್ತ ಕವಿಗಳಿಗೂ ಅವರು ಪ್ರೇರಣೆಯಾಗಿದ್ದಾರೆ. ರಾಮಾಯಣ ಮಹಾಕಾವ್ಯ ಸುಮಾರು28,000 ಶ್ಲೋಕಗಳನ್ನು ಒಳಗೊಂಡಿದೆ. ಇಂದಿನ ಯುವಕರಿಗೆ ಇಂತಹ ಮಹಾನ್ ವ್ಯಕ್ತಿಗಳ ಇತಿಹಾಸ ತಿಳಿಸುವುದು ಅಗತ್ಯವಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಲ್ಲಿನಾಥ ನಾಟಿಕಾರ,ದಿಗಂಬರ…
Read More