ಅಕ್ಕನ ಸುಖ ಸಂಸಾರಕ್ಕಾಗಿ ಜಗಳವಾಡಿ ಬಾವನಿಂದಲೇ ಹತ್ಯೆಯಾದ ಬಾಮೈದ..!

ಚಿಕ್ಕಬಳ್ಳಾಪುರ: ಅಕ್ಕನ ಸಂಸಾರ ಸುಖವಾಗಿರಲಿ ಎಂದು ಬಾವನ ಅನೈತಿಕ ಸಂಬಂಧ ಪ್ರಶ್ನಿಸಿದ ಹಿನ್ನೆಲೆ ಬಾವನೇ ಬಾಮೈದನನ್ನು ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಇಮ್ರಾನ್ ಖಾನ್ (25) ಕೊಲೆಯಾದ ಯುವಕ, ಬಾವ ಸಾಧಿಕ್ ಪಾಷಾ@ಚಾಂದ್, ಟಿಪ್ಪು, ಸಮಿವುಲ್ಲಾ, ಸಯ್ಯದ್ ಕೊಲೆ ಮಾಡಿರುವ ಆರೋಪಿಗಳು. ಕಳೆದ 5 ವರ್ಷಗಳ ಹಿಂದೆ ರುಕ್ಸಾನಾ ಎಂಬಾಕೆಯನ್ನು ಚಾಂದ್ ಪಾಷಾ ಮದವೆಯಾಗಿದ್ದ ನಂತರ ಮುಮ್ತಾಜ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ವಿಷಯ ತಿಳಿದ ಇಮ್ರನ್ ಖಾನ್ ಸಾಕಷ್ಟು ಬಾರಿ ಚಾಂದ್ ಪಾಷಾ ಜೊತೆಗೆ ಜಗಳ ಮಾಡಿದ್ದ. ಇತ್ತೀಚೆಗೆ ಇದೇ ವಿಚಾರವಾಗಿ ಬಾವನ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದ. ಇದರಿಂದ ಕೋಪಿತಗೊಂಡ ಚಾಂದ್ ಪಾಷಾ ಸೇಡಿಗೆ ಸೇಡು ತೀರಿಸಿಕೊಳ್ಳಲು ಬಾಮೈದನ ಕೊಲೆಗೆ ತನ್ನ ಸ್ನೇಹಿತರೊಂದಿಗೆ ಪ್ಲಾನ್ ರೂಪಿಸಿದ್ದ. ಅದರಂತೆ ಜನವರಿ 3ನೇ ತಾರೀಖು ಆಂಧ್ರಪ್ರದೇಶದ ಹಿಂದೂಪುರ ಮೂಲದ ಲಾರಿ ಚಾಲಕರಿಂದ ಬರ್ಭರವಾಗಿ ದೇಹದೆಲ್ಲೇಡೆ ಡ್ರಾಗರ್…

Read More

ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಮುಂದಾದ ಶ್ರೀ ಧರ್ಮಸ್ಥಳ ಯೋಜನೆ.!

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದ ಕೆರೆ ಅಂಗಳದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಘದ ಅಡಿಯಲ್ಲಿ ತಾಲ್ಲೂಕಿನ ಬೋದುಗೂರು ಕೆರೆಯಲ್ಲಿ ಹೂಳೆತ್ತುವ ಕಾರ್ಯಕ್ರಮದ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು. ತದನಂತರ ಅದ್ಯಕ್ಷತೆ ವಹಿಸಿದ ಕೆರೆ ಬಳಕೆದಾರರ ಸಂಘದ ಅದ್ಯಕ್ಷ ವೆಂಕಟಸ್ವಾಮಿ ರೆಡ್ಡಿ ಮಾತನಾಡಿ ಈಗಾಗಲೆ ಗ್ರಾಮ ಪ್ರದೇಶಗಳಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಪೂಜ್ಯರ ಸಮಕ್ಷಮದಲ್ಲಿ ಕೆರೆ ಹೊಳೆತ್ತುವ ಕಾರ್ಯ ನಡೆಯುತ್ತಿದಿದ್ದು, ಇಂದು ನಮ್ಮ ಬೋದಗೂರು ಗ್ರಾಮದ ಕೆರೆ ಹೂಳೆತ್ತಲು 18.50 ಲಕ್ಷ ಬಿಡುಗಡೆ ಮಾಡಿ ಪುಣ್ಯವಂತರಾಗಿದ್ದಾರೆ ಎಂದರು. ಮಳೆ ನೀರು ಸರಾಗವಾಗಿ ಹರಿಯದೆ ಕೆರೆಗೆ ನೀರು ಬರುತ್ತಿಲ್ಲ ಮೊದಲು ನೀರು ಬರಲು ಕಾಲುವೆಗಳು ತೆರವುಗೊಳಿಸಿ ಸ್ವಚ್ಚಗೊಳಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದರು. ಇನ್ನೂ ಈ ಸಂದರ್ಭದಲ್ಲಿ ವೃದ್ಧರಿಗೆ ಮಾಶಾಸನ ಬಿಡುಗಡೆಗೊಳಿಸಿದರು. ವರದಿ- ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Read More

ಭಿಕ್ಷುಕನಿಗೆ ಊಟ ನೀಡಿ ಮಾನವೀಯತೆ ಮೆರೆದ ಎಎಸ್ಐ..!

ಚಿಕ್ಕಬಳ್ಳಾಪುರ: ಪೊಲೀಸರ ಕುರಿತು ಸಾಕಷ್ಟು ನಕಾರಾತ್ಮಕ ಆಲೋಚನೆಗಳೇ ಕಣ್ಣ ಮುಂದೆ ಬರುತ್ತದೆ, ಆದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೋಲಿಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಸೋಮಶೇಖರ್ ಮಾನವೀಯತೆ ಮೆರದು ಜನರ ಮೆಚ್ಚಿಗೆಗಳಿಸಿದ್ದಾರೆ. ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಊಟವಿಲ್ಲದೆ ಅಸ್ವಸ್ಥಗೊಂಡಿದ್ದ ಭಿಕ್ಷುಕನನ್ನು ಗಮನಿಸಿ ಊಟದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣರಾಗಿದ್ದಾರೆ. ಈ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿ ಎಎಸ್ಐ ಸೋಮಶೇಖರ್ ಕಾರ್ಯವೈಕರಿ ಕಂಡು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.. ವರದಿ- ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Read More

ಹಕ್ಕಿ ಜ್ವರದ ಯಾವುದೇ ಪ್ರಕರಣ ರಾಜ್ಯದಲ್ಲಿ ಕಂಡು ಬಂದಿಲ್ಲ- ಡಾ.ಕೆ.ಸುಧಾಕರ್….!

ಚಿಕ್ಕಬಳ್ಳಾಪುರ: ಹಕ್ಕಿ ಜ್ವರದ ಯಾವುದೇ ಪ್ರಕರಣ ರಾಜ್ಯದಲ್ಲಿ ಕಂಡು ಬಂದಿಲ್ಲ ಎಂದು ಆರೋಗ್ಯ ಮತ್ತು ವೈಧ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಕೊರೊನಾ ಲಸಿಕೆಯ ಎರಡನೇ ತಾಲಿಮು ವೀಕ್ಷಿಸಿದ ನಂತ್ರ ಚಿಕ್ಕಬಳ್ಳಾಪುರದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಹಕ್ಕಿಗಳು ಮೃತ ಪಟ್ಟ ವಿಚಾರವಾಗಿ ಮಾತನಾಡುತ್ತಾ ಹಕ್ಕಿ ಜ್ವರದ ಯಾವುದೇ ಪ್ರಕರಣ ಕಂಡು ಬಂದಿಲ್ಲ ಮತ್ತು ಗಡಿ ಜಿಲ್ಲೆಗಳಲ್ಲಿ ಕೇರಳ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಕಟ್ಟೆಚ್ಚರ ವಹಿಸಲಾಗ್ತಿದೆ.ಆರೋಗ್ಯ, ಅರಣ್ಯ ಇಲಾಖೆಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಲಾಗಿದೆ. ಸತ್ತ ಪಕ್ಷಿಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಕೋಳಿ ಫಾರ್ಮ್ ಗಳನ್ನು ಸ್ಯಾನಿಟೈಸರ್ ಮಾಡಿಸಲಾಗ್ತಿದೆ,ಸಾರ್ವಜನಿಕರು ಕೋಳಿ ಮಾಂಸ ತಿನ್ನುವವರು 70-80 ಡಿಗ್ರಿಯಲ್ಲಿ ಬೆಯ್ಯಿಸಿ ತಿನ್ನುವುದು ಅವಶ್ಯಕವಾಗಿದೆ. ಹೀಗೆ ಬೇಯಿಸಿ ತಿನ್ನುವುದರಿಂದ ಹಕ್ಕಿ ಜ್ವರದ ವೈರಸ್ ನಾಶವಾಗುತ್ತದೆ. ಹಕ್ಕಿ ಜ್ವರಕ್ಕಾಗಿ ಇದಕ್ಕಾಗಿ ಮಾರ್ಗಸೂಚಿ ತಯಾರಾಗಿದೆ, ಇನ್ನೆರಡು ದಿನಗಳಲ್ಲಿ ಬಿಡುಗಡೆ…

Read More

ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತ ವ್ಯಕ್ತಿ ಆತ್ಮಹತ್ಯೆ- ಸೆಲ್ಪಿ ವಿಡೀಯೊ ವೈರಲ್ ..!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ಸುಲ್ತಾನ ಪೇಟೆಯ ನಿವಾಸಿ ರಾಘವೇಂದ್ರ ಕೆ.ವಿ.ಎಂಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ಮಾಡಿಕೊಳ್ಳುವ ಮುನ್ನ ಮಾಡಿರುವ ಸೆಲ್ಪಿ ವೀಡಿಯೋ ಇದೀಗ ಎಲ್ಲೇಡೆ ವೈರಲ್ ಆಗಿದೆ. ಆ ವೀಡಿಯೋದಲ್ಲಿ ತನ್ನ ಹೆಸರು ಕೆ.ವಿ ರಾಘವೇಂದ್ರ ನಾನು ನಂದಿ ಗ್ರಾಮದ ಮಾರಮ್ಮ ಮತ್ತು ಸುಲ್ತಾನಪೇಟೆಯ ಸಫಲಮ್ಮ ದೇವಿಯ ದೇವಾಲಯದ ಪೂಜಾರಿಯಾಗಿದ್ದು, 2015-16 ರಲ್ಲಿ ಅಕ್ಷತಾ ಕೋ ಆಪರೇಟಿವ್ ಲಿಮಿಟೆಡ್ ಎಂಬ ಖಾಸಗಿ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದೆ. ಸಾರ್ವಜನಿಕರಿಂದ ಫೈನಾನ್ಸ್ ಕಂಪನಿಗೆ ಹಣ ಕಟ್ಟಿಸಿದ್ದೆ, ಆದ್ರೇ ಫೈನಾನ್ಸ್ ಕಂಪನಿ ಮುಚ್ಚಿದಾಗ ಹಣ ಕಟ್ಟಿದವರಿಗೆ ಹಣ ವಾಪಸ್ಸು ನೀಡಲು ಹಲವರ ಬಳಿ 8ಲಕ್ಷ ಸಾಲ ಮಾಡಿದ್ದೆ. ಸಾಲ ನೀಡಿದ್ದ ಸಾಲಗಾರರು ಬಡ್ಡಿಗೆ ಬಡ್ಡಿ ಸೇರಿಸಿ ಮೀಟರ್ ಬಡ್ಡಿ ಲೆಕ್ಕದಲ್ಲಿ 1 ರಿಂದ 2 ಕೋಟಿ ನೀಡಬೇಕೆಂದು ಕಿರುಕುಳ ನೀಡಿದ್ದರಿಂದ ತಾನು ಆತ್ಮಹತ್ಯೆ ಮಾಡಿ ಕೊಳ್ಳುವುದಾಗಿ ತಿಳಿಸಿದ್ದು ಆತ್ಮಹತ್ಯೆಗೆ…

Read More

ಕಾಡಿನಲ್ಲಿ ಐದು ಸಾವಿರಕ್ಕೂ ಅಧಿಕ ಕೋಳಿ ಮರಿಗಳು ಪತ್ತೆ..!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ಹೊರ ವಲಯದಲ್ಲಿ ಇರುವ ಕಣಿತಹಳ್ಳಿ ಬಳಿಯಿರುವ ಮೀಸಲು ಅರಣ್ಯದಲ್ಲಿ ಸರಿ ಸುಮಾರು ಐದು ಸಾವಿರ ನವಜಾತ ಫಾರಂ ಕೋಳಿ ಮರಿಗಳನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಕಾಡಿನಲ್ಲಿ ತಂದು ಬಿಟ್ಟಿದ್ದಾರೆ.ಇಂದು ಮುಂಜಾನೆ ಕಣಿತಹಳ್ಳಿ ಸುತ್ತ ಮುತ್ತಲಿನ ಗ್ರಾಮಸ್ಥರು ಕೋಳಿ ಮರಿಗಳನ್ನು ಕಂಡು ದಿಭ್ರಮೆಗೆ ಒಳಗಾಗಿದ್ದಾರೆ. ಹಕ್ಕಿ ಜ್ವರದ ಭೀತಿಯ ಹಿನ್ನಲೆ ಆಂಧ್ರಪ್ರದೇಶದ ಅಥವಾ ತಮಿಳುನಾಡು ಭಾಗದಿಂದ ಯಾರೋ ಈ ಕೋಳಿ ಮರಿಗಳನ್ನು ರಾತ್ರೋರಾತ್ರಿ ತಂದು ಕಾಡಿನಲ್ಲಿ ಬಿಟ್ಟಿರುವ ಶಂಕೆ ಇರುವುದರಿಂದ ಇಲ್ಲಿಯ ಕಣಿತಹಳ್ಳಿಯ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ವರದಿ-ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Read More

ಶಾಸಕರಿಗೆ ದಮ್ಕಿ ಹಾಕಿದ ಮಧುಸೂದನ್ ರೆಡ್ಡಿ- ರೆಡ್ಡಿಯನ್ನು ಬಂದಿಸುವಂತೆ ಶಾಸಕರ ಅಭಿಮಾನಿಗಳಿಂದ ಒತ್ತಾಯ..!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ತಾಲ್ಲೂಕು ಬಾಗೇಪಲ್ಲಿ ತಾಲೂಕಿನ ಚೇಳೂರಿನಲ್ಲಿ ಇತ್ತೀಚೆಗಷ್ಟೆ ಗ್ರಾಮ ಪಂಚಾಯ್ತಿ ಚುನಾವಣೆ ಮುಗಿಸಿ ರಿಲ್ಯಾಕ್ಸ್ ಮೂಡ್ ನಲ್ಲಿರುವ ಬಾಗೇಪಲ್ಲಿ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ವಿರುದ್ದ ಬಾಗೇಪಲ್ಲಿ ತಾಲ್ಲೂಕಿನ ಚೇಳೂರಿನ ನಿವಾಸಿ ಮಧುಸೂದನ್ ರೆಡ್ಡಿ, ಕೆಎನ್ ಅಲಿಯಾಸ್ ಅಪೋಲೋ ಟೈಯರ್ಸ್ ಎಂಬ ವ್ಯಕ್ತಿ ಕಳೆದ ರಾತ್ರಿ ಕುಡಿದ ಅಮಲಿನಲ್ಲಿ ಶಾಸಕರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿದ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾಯಿದೆ.ಇದರಿಂದ ಶಾಸಕ ಸುಬ್ಬಾರೆಡ್ಡಿ ಅಭಿಮಾನಿಗಳ ಪಿತ್ತ ನೆತ್ತಗೇರುವಂತೆ ಮಾಡಿದೆ, ಆಕ್ರೋಶಗೊಂಡ ಸುಬ್ಬಾರೆಡ್ಡಿ ಅಭಿಮಾನಿಗಳು ಚೇಳೂರು ಹೋಬಳಿಯಲ್ಲಿ ಪ್ರತಿಭಟನೆ ಮಾಡಿ ಸಮಾಜಸೇವಕ ಗುಂಜೂರು ಶ್ರೀನಿವಾಸರೆಡ್ಡಿ ಕಾರ್ಯಕರ್ತನಾದ ಮಧುಸೂದನ್ ರೆಡ್ಡಿಗೆ ತಕ್ಕ ಪಾಠ ಕಲಿಸುವಂತೆ ಆಗ್ರಹ ಮಾಡಿದ್ದಾರೆ. ಚೇಳೂರು ಹೋಬಳಿಯ ಹಾಲಿ ತಾಲೂಕು ಪಂಚಾಯ್ತಿ ಸದಸ್ಯ ರಾಮಕೃಷ್ಣಾರೆಡ್ಡಿ ತಮ್ಮನಾದ ಮಧುಸೂದನ್ ರೆಡ್ಡಿಯನ್ನು ತಕ್ಷಣ ಪೊಲೀಸರು ಬಂದಿಸಿ ಬಾಗೇಪಲ್ಲಿ ಠಾಣೆಗೆ ಕರೆದೊಯ್ದು ವಿಚಾರಣೆ…

Read More

ಹಕ್ಕಿ ಜ್ವರ ವದಂತಿ, ಆಂತಕ ಬೇಡ-ಡಿ.ಸಿ ಆರ್ ಲತಾ..!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರು ಹಕ್ಕಿ ಜ್ವರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈವರೆಗೆ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಬಗ್ಗೆ ವರದಿಯಾಗಿಲ್ಲ. ಈಗಾಗಲೇ ಮುಂಜಾಗ್ರತೆ ವಹಿಸಿಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ಲತಾ ಸ್ಪಷ್ಟಪಡಿಸಿದ್ದಾರೆ. ಚಿಕ್ಕಬಳ್ಳಾಪುರ ನಗರ ಹೊರವಲಯದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಗುರುವಾರ ಎರಡು ವಲಸೆ ಪಕ್ಷಿಗಳು ಮೃತಪಟ್ಟಿದ್ದು, ಮೃತಪಟ್ಟ ಹಕ್ಕಿಗಳನ್ನು ಬೆಂಗಳೂರಿನಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕಾ ಸಂಶೋಧನಾ ಸಂಸ್ಥೆಯ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದೆ. 25 ದಿನಗಳ ಹಿಂದೆ ಇದೇ ಅಮಾನಿ ಗೋಪಾಲ ಕೃಷ್ಣ ಕೆರೆಯಲ್ಲಿ ಮೃತಪಟ್ಟಿದ್ದ ಎರಡು ಹಕ್ಕಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷಾ ವರದಿ ಪ್ರಕಾರ ಈ ಎರಡು ಹಕ್ಕಿಗಳು ಯಾವುದೇ ಸೋಂಕಿನಿಂದ ಮೃತಪಟ್ಟಿರುವುದಿಲ್ಲ ಎಂದು ದೃಢಪಟ್ಟಿದೆ. ಹಾಗಾಗಿ, ಜಿಲ್ಲೆಯ ನಾಗರಿಕರು ಹಕ್ಕಿ ಜ್ವರದ ಬಗ್ಗೆ ಹೆದರಬೇಕಾಗಿಲ್ಲ. ಈಗಾಗಲೇ ಜಿಲ್ಲೆಯ ಎಲ್ಲಾ ಕಡೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮುನ್ನೆಚ್ಚರಿಕೆಯನ್ನು…

Read More

ತೋಟದ ಮನೆಗೆ ನುಗ್ಗಿದ ಚಿರತೆ ಮೂರು ಮೇಕೆ, ಒಂದು ಕುರಿ ಬಲಿ…!

ಚಿಕ್ಕಬಳ್ಳಾಪುರ: ತೋಟದ ಮನೆಗೆ ನುಗ್ಗಿದ ಚಿರತೆ, ಮೇಕೆ ಮತ್ತು ಕುರಿಗಳನ್ನು ಬಲಿ ಪಡೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸೊಣ್ಣೆನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ಸೊಣ್ಣೆನಹಳ್ಳಿ ಉಮೇಶ್ ರ ತೋಟದ ಮನೆಗೆ ನುಗ್ಗಿರುವ ಚಿರತೆ. 3 ಮೇಕೆ ಹಾಗೂ 1 ಕುರಿಯನ್ನು ಕಚ್ಚಿ ಕೊಂದು ಹಾಕಿದೆ. ಅಲ್ಲದೆ ಮತ್ತೊಂದು ಕುರಿಯ ಮೇಲೆ ದಾಳಿ ಮಾಡಿದ್ದು ಅದು ಸಹ ತೀವ್ರವಾಗಿ ಗಾಯಗೊಂಡಿದೆ. ಸುಮಾರು 30 ಸಾವಿರಕ್ಕು ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಎಂದಿನಂತೆ ಸಂಜೆ ರೈತ ಉಮೇಶ್ ಹಸುವಿನ ಹಾಲು ಕರೆದು ಮನೆಗೆ ಕೊಂಡೊಯ್ದಿದ್ದ ವೇಳೆ, ತೋಟದ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಹೊಂಚು ಹಾಕಿದ್ದ ಚಿರತೆ ತೋಟದ ಮನೆಗೆ ನುಗ್ಗಿ ಮೇಕೆ ಹಾಗೂ ಕುರಿಯ ಮೇಲೆ ದಾಳಿ ನಡೆಸಿ ರಕ್ತ ಹೀರಿ ಸಾಯಿಸಿದೆ.ಮಾಕಳಿ ಬೆಟ್ಟದ ತಪ್ಪಲಿನ ಸುತ್ತ ಮುತ್ತಲ ಗ್ರಾಮಗಳಲ್ಲಿ ಆಗಿಂದಾಗ್ಗೆ…

Read More

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಹಕ್ಕಿಜ್ವರದ ಭೀತಿ…!

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರ ಹೊರವಲಯದ ಗೋಪಾಲಕೃಷ್ಣ ಅಮಾನಿ ಕೆರೆಯಲ್ಲಿ ಎರಡು ಹಕ್ಕಿಗಳು ಸಾವಿಗೀಡಾಗಿ ಇನ್ನೇರೆಡು ಹಕ್ಕಿಗಳು ಅಸ್ವಸ್ಥವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮತ್ತು ಪಶುವೈದ್ಯ ಇಲಾಖೆಗಳಿಂದ ಮೃತ ಪಕ್ಷಿಗಳನ್ನು ಗುರುತಿಸಿ ಅವುಗಳ ಮರಣೋತ್ತರ ಪರೀಕ್ಷೆಗೆ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಅಸ್ವಸ್ಥಗೊಂಡ ರಷ್ಯಾ ಮೂಲದ ಬ್ಲಾಕ್ ಪೆದರ್ ಟಿಲ್ಟ್ ಮತ್ತು ಬಾರತದ ಸ್ಥಳೀಯ ಪಕ್ಷಿಗಳಿಗೆ ಚಿಕಿತ್ಸೆಗಾಗಿ ಪಶು ವೈದ್ಯಕೀಯ ಇಲಾಖೆ ಮುದ್ದಾಗಿದೆ. ಬೆಂಗಳೂರಿನ ಹೆಬ್ಬಾಳ, ನಾಗವಾರ ಕೆರೆಯ ಕೊಳಚೆ ನೀರು ಸಂಸ್ಕರಿಸಿ ಗೋಪಾಲಕೃಷ್ಣ ಅಮಾನಿ ಕೆರೆಗೆ ಹರಿಸಿದ್ದು ಕೆರಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಪ್ರಬೇಧದ ಪಕ್ಷಿಗಳು ಆಗಮಿಸಿದ್ದು, ಇದರಲ್ಲಿ ವಿದೇಶಿ ಹಕ್ಕಿಗಳು ಇವೆಯಂತೆ. ಇನ್ನೂ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಹಕ್ಕಿ ಜ್ವರವೋ ಅಥವಾ ಹೆಬ್ಬಾಳ-ನಾಗವಾರ ವ್ಯಾಲಿ ನೀರಿನಿಂದ ಸಾವಾಗಿದೆಯೋ ಎಂದು ತೀರ್ಮಾನ ಆಗಲಿದೆ.ಕೇರಳ ರಾಜ್ಯದಲ್ಲಿ ಹಕ್ಕಿಜ್ವರ ಪತ್ತೆಯಾಗಿರುವ ಹಿನ್ನೆಲೆ ಚಿಕ್ಕಬಳ್ಳಾಪುರಕ್ಕೂ ಈ ಹಕ್ಕಿ ಜ್ವರ…

Read More