ಚಿಕ್ಕಮಗಳೂರು: ಮಲೆನಾಡಿನಲ್ಲಿ ಭಾರಿ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಚಿಕ್ಕಮಗಳೂರು,ಮೂಡಿಗೆರೆ ಸೇರಿದಂತೆ ವಿವಿಧೆಡೆ ಭಾರಿ ಮಳೆಯಾದ ಕಾರಣ ಬೇಲೂರಿನ ಯಗಚಿ ಜಲಾಶಯ ಭರ್ತಿಯಾಗಿದೆ.ಕೊರೊನಾದ ಬಿಸಿ ತಣ್ಣಗಾಗುವ ಮೊದಲೇ ಈಗ ಮತ್ತೇ ಪ್ರವಾಹದ ಮನ್ಸೂಚನೆ ಎದ್ದು ಕಾಣುತ್ತಿದ್ದು ಜನರು ಭಯದಿಂದ ಜೀವನ ಸಾಗಿಸುವಂತಾಗಿದೆ.ಯಗಚಿ ಜಲಾಶಯಕ್ಕೆ 1700 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ನಾಲ್ಕು ಕ್ರಸ್ಟ್ ಗೇಟ್‌ಗಳಿಂದ 1500 ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ.ಇನ್ನು ದಿನೇ ದಿನೇ ಮಳೆ ಹೆಚ್ಚಾಗುತ್ತಿರುವುದರಿಂದ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
Read MoreCategory: ಚಿಕ್ಕಮಗಳೂರು
ನನಗೆ ಪೊಲೀಸ್ ಭದ್ರತೆ ಬೇಡ..
ಕುಂದಾಪುರ(ಉಡುಪಿ): ನನಗೆ ಪೊಲೀಸ್ ಭದ್ರತೆ ಬೇಡ, ಕಾರ್ಯಕರ್ತರೆ ನನಗೆ ಶ್ರೀರಕ್ಷೆ ಎಂದು ವಿದೇಶದಿಂದ ಬೆದರಿಕೆ ಕರೆ ಬೆನ್ನಲ್ಲೇ ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ. ವಿದೇಶಿ ಕರೆಗಳ ಬಗ್ಗೆ ಕುಂದಾಪುರದಲ್ಲಿ ಮಾತನಾಡಿದ ಸಂಸದೆ, ನಿತ್ಯವೂ ಹಲವು ಬೆದರಿಕೆ ಕರೆ ಬರುತ್ತಿವೆ. ಈ ಬಗ್ಗೆ ತನಿಖೆಯಾಗಲಿ. ಬೆದರಿಕೆ ಕರೆ ಬಗ್ಗೆ ಡಿಜಿಐಜಿ ಪ್ರವೀಣ್ ಸೂದ್ ಬಳಿ ಮಾತನಾಡಿ, ವಿದೇಶದಿಂದ ಕರೆ ಬರುತ್ತಿರುವ ಸಂಖ್ಯೆಯನ್ನು ನೀಡಿದ್ದೇನೆ. ಪಿಎಫ್‌ಐ ಹಾಗೂ ಎಸ್‌ಡಿಪಿಐ ವಿರುದ್ಧ ಮಾತನಾಡಿದಾಗ ಇಂತಹ ಕರೆಗಳು ಬರುತ್ತಿವೆ ಎಂದು ತಿಳಿಸಿದ್ದಾರೆ. ಕಳೆದ ೨ ವರ್ಷದಿಂದ ಇಂತಹ ಕರೆ ಬರುತ್ತಿದ್ದ ಬಗ್ಗೆ ಈ ಹಿಂದೆಯೂ ದೂರು ಕೊಟ್ಟಿದ್ದೆ.ಇತ್ತೀಚೆಗೆ ತಬ್ಲಿಘಿ ಬಗ್ಗೆ ಮಾತನಾಡಿದ್ದಕ್ಕೆ ಹೀಗೆ ಕರೆಗಳು ಬರುತ್ತಿದೆ ಹಾಗೂ ಇಂತಹ ಕರೆ ಮಾಡುವರ ಪತ್ತೆ ಮಾಡುವ ಕಾರ್ಯವಾಗಬೇಕು.ನನಗೆ ಪೊಲೀಸರ ಭದ್ರತೆ ಬೇಡ, ಕಾರ್ಯಕರ್ತರು ನನ್ನ ಜೊತೆಗಿದ್ದಾರೆ.ಅಲ್ಲದೆ, ಕೊರೋನಾ ಸಂದರ್ಭ ಪೊಲೀಸರ ಶ್ರಮ ಹೆಚ್ಚಿರುತ್ತೆ ಅದಕ್ಕೆ…
Read Moreಮರ ಏರುವಾಗ ಕೆಳಗೆ ಬಿದ್ದು ಮರಿ ಕರಡಿ ಸಾವು
ಕಡೂರು(ಚಿಕ್ಕಮಗಳೂರು): ಸೊಂಟದ ಮೂಳೆ ಮುರಿದ ಪರಿಣಾಮ ಕರಡಿ ಮರಿಯೊಂದು ಸಾವು ಕಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕೆ. ಬಿದರೆ ಗ್ರಾಮದಲ್ಲಿ ನಡೆದಿದೆ. ಅಂದ ಹಾಗೇ ಇದೇ ಗ್ರಾಮದಲ್ಲಿ ಸುಮಾರು ೬ ತಿಂಗಳಿನಿAದ ತಾಯಿ ಕರಡಿಯೊಂದಿಗೆ ಅಡ್ಡಾಡಿಕೊಂಡಿದ್ದ ಈ ಮರಿ ಕರಡಿ ಮರ ಏರುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇನ್ನು ತನ್ನ ಜೊತೆ ಮರಿ ಕರಡಿ ಮರವೇರುವಾಗ ಅದನ್ನು ತಾಯಿ ಕರಡಿ ಮುಂದೆ ಎಳೆದುಕೊಂಡು ಹೋಗಲು ಬಹಳ ಪ್ರಯತ್ನ ಪಟ್ಟರೂ ಸಾಧ್ಯವಾಗದೇ ಕರಡಿ ಮರಿ ಮರದಿಂದ ಕೆಳಗೆ ಬಿದ್ದು ಸಾವು ಕಂಡಿದೆ. ಇದೇ ವೇಳೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಧಿಕಾರಿಗಳು ಪಶುವೈದ್ಯರ ಸಮ್ಮುಖದಲ್ಲಿ ತಪಾಸಣೆ ನಡೆಸಿ ಮರಿ ಹೇಗೆ ಸತ್ತಿದೆ ಎಂಬುದರ ಮಾಹಿತಿ ನೀಡಿದ್ದಾರೆ. ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಚಿಕ್ಕಮಗಳೂರು
Read Moreತಮಿಳುನಾಡಿಗೆ ಕಾಲು ನಡಿಗೆಯಲ್ಲಿಯೇ ಹೊರಟ ಕಾರ್ಮಿಕರು
ಚಿಕ್ಕಮಗಳೂರು: ಅವರೆಲ್ಲಾ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕೆಲಸ ಮೂಡುತ್ತಿದ್ದ ತಮಿಳುನಾಡು ಮೂಲದ ಕಾರ್ಮಿಕರು. ಇಲ್ಲಿನ ಕಟ್ಟಡ ನಿರ್ಮಾಣಕ್ಕೆ ಈ ಕಾರ್ಮಿಕರು ತಮಿಳುನಾಡಿನಿಂದ ಆಗಮಿಸಿದ್ದರು.ಆದರೀಗ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ತಮ್ಮೂರಿಗೆ ತೆರಳಲು ಆ ಕಾರ್ಮಿಕರೆಲ್ಲಾ ಮುಂದಾಗಿದ್ದಾರೆ. ಆದರೆ ಅವರಿಗೆ ತೆರಳಲು ಯಾವುದೇ ಬಸ್,ರೈಲ್ ಇತರೆ ವಾಹಗಳು ಇಲ್ಲದಿರುವ ಪರಿಣಾಮ ಕಾಲು ನಡಿಗೆಯಲ್ಲಿಯೇ ತಮಿಳುನಾಡಿಗೆ ಹೊರಟಿದ್ದಾರೆ. ಅಂದ ಹಾಗೇ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಕಾಲು ನಡಿಗೆಯಲ್ಲಿಯೇ ಈ ಕಾರ್ಮಿಕರು ಇದೀಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ತಲುಪಿದ್ದಾರೆ. ಇನ್ನು ಸಾಗರದಿಂದ ತಮಿಳುನಾಡಿನ ವೆಲ್ಲೂರಿಗೆ ತೆರಳಬೇಕಾದರೇ ಸುಮಾರು ೬೦೦ ಕಿ.ಮೀ ದೂರ ಕ್ರಮಿಸಬೇಕು,ಹೀಗಾಗಿ ನಡೆದುಕೊಂಡೇ ಹೊರಟಿರುವ ಇವರು ಊಟವಿಲ್ಲದೇ ಪರದಾಡುವ ಸ್ಥಿತಿ ಎದುರಾಗಿದೆ. ಸದ್ಯ ಸರಿಯಾಗಿ ಊಟವಿಲ್ಲದೇ ಸುಸ್ತಾಗಿ ರಸ್ತೆ ಬದಿ ಮಲಗಿದ್ದ ಈ ಕಾರ್ಮಿಕರಿಗೆ ಊಟ ನೀಡಿ ತರೀಕೆರೆ ಪೋಲಿಸರು ಮಾನವೀಯತೆ ಮೆರೆದಿದ್ದಾರೆ.ಕಾರ್ಮಿಕರಿಗೆ ಎರಡು ದಿನಕ್ಕಾಗುವಷ್ಟು ಬಿಸ್ಕೆಟ್, ಬ್ರೆಡ್ ನೀಡಿದ್ದಾರೆ.…
Read More