ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದ ತಹಸೀಲ್ದಾರ್ ಹಾಗೂ ಕಂದಾಯ ಅಧಿಕಾರಿ..!

ಚಿತ್ರದುರ್ಗ: ಲಂಚ ಸ್ವೀಕರಿಸುವ ವೇಳೆ ಕಂದಾಯ ಅಧಿಕಾರಿ, ಹಾಗೂ ತಹಸೀಲ್ದಾರ್ ಮಲ್ಲಿಕಾರ್ಜುನ್ ,ಆರ್ ಐ ಉಮೇಶ್ ಎಸಿಬಿ ಅಧಿಕಾರಿಗಳ ಬಲೆಗೆ ಸಿಲುಕಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ನಡೆದಿದೆ. ಇನ್ನೂ ಕಛೇರಿಯಲ್ಲಿ ಗುತ್ತಿಗೆದಾರ ಪ್ರೀತಮ್ ಬಳಿ 2 ಲಕ್ಷ ರೂ ಲಂಚ ಸ್ವೀಕರಿಸುವ ವೇಳೆ ಎಸಿಬಿ ಎಸ್ಪಿ ಜಯಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಇಬ್ಬರು ಅಧಿಕಾರಿಗಳನ್ನು ಎಸಿಬಿ ವಶ ಪಡೆಸಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.. ವರದಿ-ಗಂಗಾಧರ್ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮೂರ್

Read More

ಮೊಳಕಾಲ್ಮುರನ್ನು ಯಾವುದೇ ಕಾರಣಕ್ಕೂ ಬಳ್ಳಾರಿ ಜಿಲ್ಲೆಗೆ ಸೇರಿಸುವಂತಿಲ್ಲ- ದಲಿಪರ ಸಂಘಟನೆ..!

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕನ್ನು ಯಾವುದೇ ಕಾರಣಕ್ಕೂ ಬಳ್ಳಾರಿ ಜಿಲ್ಲೆಗೆ ಸೇರಿಸುವಂತಿಲ್ಲ. ಬೇಕಾದರೆ 371 ಜೆ ಸೌಲಭ್ಯ ನೀಡಲಿ ಮೊಳಕಾಲ್ಮುರು ತಾಲೂಕು ಚಿತ್ರದುರ್ಗ ಜಿಲ್ಲೆ ಜೊತೆ ಅವಿನಾಭಾವ ಸಂಬಂಧ ಹೊಂದಿದೆ ಇತಿಹಾಸ ಹಿನ್ನೆಲೆ ಹೊಂದಿರುವ ತಾಲೂಕನ್ನು ಯಾವುದೇ ಕಾರಣಕ್ಕೂ ಬೇರ್ಪಡಿಸುವಂತಿಲ್ಲ. ತಾಲೂಕಿನಲ್ಲಿ ಆಯ್ಕೆಯಾಗಿರುವ ಶಾಸಕರು ಅಭಿವೃದ್ಧಿ ಪಡಿಸಲು ಇಚ್ಚಾಶಕ್ತಿ ಮೆರೆಯಬೇಕಿದೆ ಅದು ಬಿಟ್ಟು ಜನರನ್ನು ಯಾಮಾರಿಸುವ ಕೆಲಸ ಆಗಬಾರದು ತಾಲುಕು ಒಡೆಯಲು ಸಂಚು ರೂಪಿಸಿದ್ರೆ ತಾಲೂಕಿನಲ್ಲಿ ಉಗ್ರವಾದ ಹೊರಟ ನಡೆಸಲಾಗುವುದು ಎಂದು ದಲಿಪರ ಸಂಘಟನೆಗಳು ಹಾಗು ವಾಲ್ಮೀಕಿ ಸಮುದಾಯದ ನಾಯಕರು ಎಚ್ಚರಿಸಿದ್ದಾರೆ… ವರದಿ- ಪಿ ಎಂ ಗಂಗಾಧರ್ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರು

Read More

ದೆವ್ವ ಬಿಡಿಸುವ ನೆಪದಲ್ಲಿ ಮಗುವನ್ನೇ ಹೊಡೆದು ಕೊಂದೇ ಬಿಟ್ಟ..!

ಚಿತ್ರದುರ್ಗ : ದೆವ್ವ ಬಿಡಿಸುವ ನೆಪದಲ್ಲಿ ಮಗುವನ್ನ ಹೊಡೆದು ಕೊಂದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಎರಡು ವರ್ಷದ ಪೂರ್ಣಿಕಾ ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಪದೇ ಪದೇ ಬೆಚ್ಚಿ ಬೀಳುತ್ತಿದ್ದ ಮಗುವನ್ನ ಮಾಟಗಾರ ರಾಕೇಶ್ ಬಳಿ ಕರೆದುಕೊಂಡು ಹೋಗಿದ್ದರು. ತಾನು ಯಲ್ಲಮ್ಮನ ಆರಾಧಕ ಎಂದು ಹೇಳಿಕೊಂಡಿದ್ದ ರಾಕೇಶ್, ಮಗುವಿಗೆ ದೆವ್ವ ಹಿಡಿದಿದೆ ಎಂದು ಪೋಷಕರಿಗೆ ತಿಳಿಸಿದ್ದಾನೆ.ದೆವ್ವ ಬಿಡಿಸುವ ನೆಪದಲ್ಲಿ ಮಗುವಿನ ಮೇಲೆ ಬೆತ್ತದಿಂದ ಹೊಡೆದಿದ್ದು, ತೀವ್ರವಾಗಿ ಅಸ್ವಸ್ಥಳಾಗಿ ಮಗು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದೆ. ಸದ್ಯ ಮಾಟಗಾರ ರಾಕೇಶ್ ವಿರುದ್ಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ಲಾರಿ, ಕಾರಿನ ನಡುವೆ ಡಿಕ್ಕಿ: ಲಾರಿ ಚಾಲಕನ ಮೇಲೆ ತಹಸೀಲ್ದಾರ್ ಹಲ್ಲೆ..!

ಚಿತ್ರದುರ್ಗ:ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ ಆಗಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆದಿರುವ ಆರೋಪ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಬಳಿ ನಡೆದಿದೆ. ಮೊಳಕಾಲ್ಮೂರು ತಹಶೀಲ್ದಾರ್ ವಿರುದ್ಧ ಹಲ್ಲೆಗೈದ ಆರೋಪ ಕೇಳಿ ಬಂದಿದೆ. ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದಕ್ಕೆ ಮದ್ಯದ ಅಮಲಿನಲ್ಲಿದ್ದ ತಹಶೀಲ್ದಾರ್ ಮಲ್ಲಿಕಾರ್ಜುನ ರಂಪಾಟ ಮಾಡಿ ಹಲ್ಲೆ ಮಾಡಿದ್ದಾರಂತೆ. ಲಾರಿ ಚಾಲಕ ಶ್ರೀಕಾಂತ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ಸ್ಥಳದಲ್ಲಿದ್ದವರು ತಹಶೀಲ್ದಾರ್ ಮಲ್ಲಿಕಾರ್ಜುನನಿಗೆ ತರಾಟೆಗೆ ತೆಗೆದುಕೊಂಡ್ರು. ನಂತರ ತಹಶೀಲ್ದಾರ್ ಟೆನ್ಷನ್ನಲ್ಲಿ ಹಲ್ಲೆ ನಡೆಸಿದ್ದೇನೆಂದು ಒಪ್ಪಿಕೊಂಡಿದ್ದಾರೆ. ಚಿತ್ರದುರ್ಗ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ವರದಿ-ನಂದೀಶ್ ನಾಯಕ್ ಎಕ್ಸ್ ಪ್ರೆಸ್ ಟಿವಿ ಚಿತ್ರದುರ್ಗ

Read More

50 ವರ್ಷದಿಂದ ಮೂಲ ಸೌಕರ್ಯವೇ ಕಾಣದ ಜನ… ಎಲ್ಲಿ ಗೊತ್ತಾ?

ಚಿತ್ರದುರ್ಗ :ಭಾರತಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳ ಕಾಲ ಕಳೆದಿದೆ. ಸ್ವಾತಂತ್ರ್ಯ ನಂತರ ಹಲವು ಅಭಿವೃದ್ಧಿ ಕೂಡ ಕಂಡಿದೆ. ಆದರೆ ಇಲ್ಲೊಂದು ಪ್ರದೇಶದಲ್ಲಿ 50 ವರ್ಷಗಳಿಂದ ಮೂಲಭೂತ ಸೌಕರ್ಯಗಳೇ ಇಲ್ಲದೇ ಜನ ವಾಸಿಸುತ್ತಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ತವರು ಕ್ಷೇತ್ರವಾದ ಮೊಳಕಾಲ್ಮೂರು ತಾಲೂಕಿನ ಬಿಜಿ ಹಳ್ಳಿ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳೇ ಇಲ್ಲದೆ ವಾಸಿಸುತ್ತಿದ್ದಾರೆ. ಜಮೀನು ನಿರ್ವಹಣೆಗಾಗಿ ಇಲ್ಲಿನ ಕುಟುಂಬಗಳು ಪ್ರಕೃತಿ ಕೆರೆಯಾಚಿನ ಜಿಲ್ಲಾಗೊಂದಿ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇನ್ನು ಈ ಕುಟುಂಬಗಳು ಸುಮಾರು 50 ವರ್ಷದಿಂದ ಅರಣ್ಯದಲ್ಲೇ ವಾಸಿಸುತ್ತಿದ್ದರು, ಜನ ಪ್ರತಿನಿಧಿಗಳು ಮಾತ್ರ ಇತ್ತಕಡೆ ಗಮನ ಹರಿಸಿಲ್ಲ. ರಸ್ತೆ ಇಲ್ಲದೇ ತೆಪ್ಪದಲ್ಲೇ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ವಿದ್ಯುತ್ ಇಲ್ಲ, ಮತ್ತೊಂದು ಕಡೆ ಶಾಲಾ ಮಕ್ಕಳು ಕೂಡಾ ನಿತ್ಯವೂ ತೆಪ್ಪದಲ್ಲಿ ಓಡಾಡುವ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.ಕುಡಿಯುವ ನೀರಿಲ್ಲದೆ, ಕೆರೆಯ ನೀರನ್ನೇ ಕುಡಿದು ಜೀವನ ನಡೆಸುತ್ತಿದ್ದಾರೆ ಇಲ್ಲಿನ ಅರಣ್ಯವಾಸಿಗಳು.…

Read More

ಜಾತ್ರೆ ನಿಷೇಧಿಸಿದ್ದರು ಕ್ಯಾರೆ ಅನ್ನದ ಜನ.. ಸಾಮೂಹಿಕವಾಗಿ ದೇವರ ದರ್ಶನಕ್ಕೆ ಭಕ್ತರ ಎಂಟ್ರಿ..!

ಚಿತ್ರದುರ್ಗ : ಜಿಲ್ಲಾಧಿಕಾರಿ ಜಾತ್ರೆ ನಿಷೇಧ ಆದೇಶ ಮಾಡಿದ್ದರೂ, ಕೂಡಾ ಭಕ್ತರು ಜಾತ್ರೆಯ ರೀತಿಯಲ್ಲಿ ಆಗಮಿಸಿ, ಪೂಜೆ ಸಲ್ಲಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ನಡೆದಿದೆ.ಕೊರೋನಾ ಹರಡುವಿಕೆಯ ನಿಟ್ಟಿನಲ್ಲಿ, ಗೌರಸಮುದ್ರ ಮಾರಮ್ಮದೇವಿಯ ಜಾತ್ರೆಯನ್ನು ಚಿತ್ರದುರ್ಗ ಜಿಲ್ಲಾಡಳಿತ ನಿಷೇಧಿಸಿತ್ತು. ಆದ್ರೆ ಸಾವಿರಾರು ಭಕ್ತರು ಮಾತ್ರ ನಿಷೇಧದ ನಡುವೆಯೂ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಅಲ್ಲದೇ ಪೊಲೀಸ್ ಭದ್ರತೆಯ ನಡುವೆ ಯಾವುದೇ ಸಾಮಾಜಿಕ ಅಂತರ, ಮಾಸ್ಕ್ ಧರಿಸದೇ ಸರತಿ ಸಾಲಿನಲ್ಲಿ ಬಂದು ದರ್ಶನ ಪಡೆದರು. ಇನ್ನೂ ಜಾತ್ರೆ ನಡೆಯುವ ತುಮಲು ಪ್ರದೇಶದಲ್ಲಿ ಕೂಡಾ ಬೇವಿನ ಸೊಪ್ಪಿನ ಉಡುಗೆ ತೊಡಿಸಿ ಹರಕೆ ತೀರಿಸಿದರು. ಅಲ್ಲದೇ ಜಿಲ್ಲಾಡಳಿತ ನಿಷೇಧಕ್ಕೆ ಕಿಮ್ಮತ್ತು ನೀಡದೆ, ಜಗಳೂರು ಶಾಸಕ ಎಸ್.ವಿ ರಾಮಚಂದ್ರಪ್ಪ ಕೂಡಾ ಆಗಮಿಸಿ ಸಾಮಾಜಿಕ ಅಂತರ ಮರೆತು ದೇವರ ದರ್ಶನ ಪಡೆದರು.ಜಿಲ್ಲಾಡಳಿತ ಆದೇಶಕ್ಕೆ ಹೆದರದ ಭಕ್ತರು, ದೇವಸ್ಥಾನಕ್ಕೆ ಆಗಮಿಸಿ ಜಾತ್ರೆಯ ರೀತಿಯಲ್ಲಿ ಮಾರಮ್ಮನ…

Read More

30 ವರ್ಷಗಳಿಂದ ಆ ಗ್ರಾಮದಲ್ಲಿ ಗಣೇಶ ಹಬ್ಬ ಆಚರಣೆಯೇ ಇಲ್ಲ: ಗ್ರಾಮ ಯಾವುದು ಗೊತ್ತಾ?

ಚಿತ್ರುದರ್ಗ : ದೊಡ್ಡ ದೊಡ್ಡ ನಗರಗಳಿಂದ ಚಿಕ್ಕ ಹಳ್ಳಿಗಳ ವರೆಗೂ ಗಣೇಶ ಸಂಭ್ರಮ ಮುಗಿಲು ಮುಟ್ಟುತ್ತದೆ. ಆದರೆ ಕರ್ನಾನಾಟಕದ ಇಲ್ಲೊಂದು ಗ್ರಾಮದಲ್ಲಿ 30 ವರ್ಷಗಳಿಂದ ಗಣೇಶ ಹಬ್ಬವನ್ನೇ ಮಾಡಿಲ್ಲ ಎಂದರೆ ನೀವು ನಂಬಲೇ ಬೇಕಾದ ವಿಷಯ.ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಮಾತ್ರ ಗಣೇಶ ಆಚರಣೆ 30 ವರ್ಷಗಳಿಂದ ಸುಳಿವೇ ಇಲ್ಲ. ಆಂಧ್ರ ಪ್ರದೇಶದ ಗಡಿಯಂಚಿನಲ್ಲಿರುವ ಈ ಗ್ರಾಮದಲ್ಲಿ ಮಾರಮ್ಮ ದೇವಿಯ ಮಹಿಮೆ ಚಿರಪರಿಚಿತ. ಪ್ರತಿ ಭಾದ್ರಪದ ಮಾಸದ ಮೊದಲ ದಿನ ದೇವಿಯ ಅದ್ದೂರಿ ಉತ್ಸವ ನಡೆಯಲಿದೆ. ಆದ್ರೆ ವಿಗ್ನ ನಿವಾರಕನಿಗೆ ಮಾತ್ರ ಅವಕಾಶವಿಲ್ಲ. ಕಾರಣ ದೇವಿಯ ಉತ್ಸವದ ವೇಳೆ ಬೇರೆ ಯಾವುದೇ ಆಚರಣೆ ಮಾಡುವಂತಿಲ್ಲ ಅನ್ನುವುದು ನಂಬಿಕೆ.ಇನ್ನು ಯಾರಾದರೂ ಬೇರೆ ಆಚರಣೆ ಮಾಡಲು ಮುಂದಾದರೆ ಕೆಡಕು ಉಂಟಾಗುತ್ತೆ ಅನ್ನುವ ಪ್ರತೀತಿ ಇದೆ. ಅಲ್ಲದೆ 30 ವರ್ಷಗಳ ಹಿಂದೆ ಗ್ರಾಮದಲ್ಲಿ ಗಣೇಶ ಉತ್ಸವ ಆಚರಣೆ ಮಾಡಿದ್ದರು.…

Read More

ಸುಪಾರಿ ಕಿಲ್ಲರ್ಸ್ ಎಂದು ಯುವಕರನ್ನ ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ನಡೆಸಿದ ಗ್ರಾಮಸ್ಥರು!

ಚಿತ್ರದುರ್ಗ : ಸುಪಾರಿ ಕಿಲರ್ಸ್ ಎಂದು ಯುವಕರನ್ನ ಕಂಬಕ್ಕೆ ಕಟ್ಟಿ ಗ್ರಾಮಸ್ಥರಿಂದ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಚಿತ್ರದುರ್ಗ ತಾಲೂಕಿನಲ್ಲಿ ನಡೆದಿದೆ.ಆಗಸ್ಟ್ ೦೭ ರಂದು ಚೊಳಗುಡ್ಡ ನಿವಾಸಿ ಜಯಸೂರ್ಯ, ಹೊಳಲ್ಕೆರೆ ತಾಲೂಕಿನ ಮಾರುತಿ, ಶರತ್ ಹಲ್ಲೆಗೊಳಗಾದ ಯುವಕರು. ಆಗಸ್ಟ್ ೭ ರಂದು ಗಾರೆ ಕೆಲಸ ಮಾಡುತ್ತಿದ್ದ ಯುವಕರನ್ನ ಸುಪಾರಿ ಕಿಲರ್ಸ್ ಎಂದು ನಂಬಿ ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಬೇರೆ ಪ್ರಕರಣಕ್ಕೂ ತಳುಕು ಹಾಕಿ ಯುವಕರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಭರಮಾಸಾಗರ ಪೊಲೀಸ್ ಠಾಣೆಯಲ್ಲಿ ಸುಪಾರಿ ಹಂತಕರೆಂದು ದೂರು ನೀಡಿದ್ದಾರೆ.ಇದೀಗ ಅಮಾಯಕ ಹುಡುಗರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. ಪೂರ್ವಪರ ವಿಚಾರಿಸದೇ ಅಮಾಯಕ ಯುವಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ಹಿರಿಯೂರು ಶಾಸಕಿ ಪೂರ್ಣಿಮಾಗೆ ಕೊರೊನಾ ಸೋಂಕು ಧೃಡ.

ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದೆ. ಇದೀಗ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾಗೆ ಕೊರೊನಾ ಸೋಂಕು ಇರುವುದು ಧೃಡವಾಗಿದೆ.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಪೋಸ್ಟ್ ಮಾಡಿರುವ ಪೂರ್ಣಿಮಾ, ಜ್ವರ ಕಾಣಿಸಿಕೊಂಡ ಹಿನ್ನೆಲೆ ಕೊರೊನಾ ಟೆಸ್ಟ್ ಮಾಡಿಸಿದಾಗ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೋಂ ಐಸೊಲೇಷನ್ ಆಗಲಿದ್ದೇನೆ. ಬೇಗ ಗುಣಮುಖವಾಗಿ ಸಂಕಷ್ಟುದ ಸಮಯಲ್ಲಿ ಜನಸೇವೆ ಮಾಡಲು ಶಕ್ತಿ ನೀಡುವಂತೆ ಭಗವಂತನಿಗೆ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.ನನ್ನ ಸಂಪರ್ಕದಲ್ಲಿದ್ದವರು ಎಲ್ಲರೂ ಮೆನ್ನೆಚ್ಚರಿಕೆ ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ‌ ಬೆಂಗಳೂರು

Read More

ಅಂಬ್ಯುಲೆನ್ಸ್ ಚಾಲಕನ ನಿರ್ಲಕ್ಯತನಕ್ಕೆ ಶಿಕ್ಷಕ ಸಾವು…!

ಚಿತ್ರದುರ್ಗ : ಸರಿಯಾದ ಸಮಯದಲ್ಲಿ ಆಂಬ್ಯುಲೆನ್ಸ್ ಸಿಗದ ಕಾರಣ ಕೊರೊನಾಗೆ ಮುಖ್ಯ ಶಿಕ್ಣಕ ಬಲಿಯಾದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಮೊಳಕಾಲ್ಮೂರು ಪಟ್ಟಣದ 60 ವರ್ಷದ ಶಿಕ್ಷಕ ತೀರ್ವ ಉಸಿರಾಟ ಸಮಸ್ಯೆಯಿಂದ ಬಳಲಿ ಸಾವನ್ನಪ್ಪಿದ್ದಾರೆ. ಮುಖ್ಯ ಶಿಕ್ಷಕರಿಗೆ ನಿನ್ನೆ ಬೆಳಗ್ಗೆ ಕೊರೊನಾ ಸೋಂಕು ಇರುವುದು ಧೃಡವಾಗಿತ್ತು, ಆದರೆ ಮಧ್ಯಾಹ್ನ 2 ಗಂಟೆಯಾದರು ಆಂಬ್ಯುಲೆನ್ಸ್ ಬಂದಿರಲಿಲ್ಲ.ಸ್ಥಳಕ್ಕೆ ಆಂಬ್ಯುಲೆನ್ಸ್ ಬಂದ ಬಳಿಕವೂ ಗಂಟೆಗೂ ಹೆಚ್ಚು ಕಾಲ ವಿಳಂಬ ಮಾಡಿದ್ದರಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆಂದು ವೈದ್ಯರು ಹಾಗೂ ಚಾಲಕನ ವಿರುದ್ದ ಮೃತ ವ್ಯಕ್ತಿಯ ಸಂಬಂಧಿಕರು ಆರೋಪಿಸಿದ್ದಾರೆ. ಮೃತ ಶಿಕ್ಷಕ ತೀವ್ರ ಜ್ವರ, ಕೆಮ್ಮು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಕೊನೆಗೆ ಆಂಬ್ಯುಲೆನ್ಸ್ನಲ್ಲೇ ನರಳಿ ನರಳಿ ಜೀವ ಬಿಟ್ಟಿದ್ದರಿಂದ ಸಾರ್ವಜನಿಕರು ಆರೋಗ್ಯ ಇಲಾಖೆಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More