ತುಮಕೂರಿನ ಮಧುಗಿರಿಯಲ್ಲಿ ಚಿರತೆ ದಾಳಿ-ಭಯದಲ್ಲೇ ದಿನದೂಡುತ್ತಿರುವ ಸಿಬ್ಬಂದಿ..!

ತುಮಕೂರಿನ ಮಧುಗಿರಿಯ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳ ಸಮೀಪ ಹಾಡುಹಗಲೇ ಚಿರತೆ ದಾಳಿ ನಡೆಸಿದ್ದು, ಕಳೆದ 3 ದಿನಗಳಿಂದ ಇಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದೆ. ಇನ್ನೂ ಚಿರತೆ ಹಂದಿ, ನಾಯಿ, ಮೇಕೆಗಳನ್ನು ಹೊತ್ತೊಯ್ದಿದೆ. ಇನ್ನು ಚಿರತೆ ಭಯದಿಂದ ಬೈಯೋಮೇಟ್ರಿಕ್ ಸಹಿ ಮಾಡಲು ಇಲ್ಲಿನ ಸಿಬ್ಬಂದಿ ಭಯ ಪಡುತ್ತಿದ್ದು, ಇಲ್ಲಿನ ಸಿಬ್ಬಂದಿಗಳು ಪ್ರತಿ ದಿನ ಭಯದ ವಾತಾವರಣದಲ್ಲಿಯೇ ವಿದ್ಯಾರ್ಥಿ ನಿಲಯಕ್ಕೆ ಹಾಜರಾಗುತ್ತಿದ್ದಾರೆ. ಇನ್ನೂ ಈ ಸಂಬಂಧ ಅರಣ್ಯ ಇಲಾಖೆಗೆ ಮನವಿ ಪತ್ರ ಸಲ್ಲಿಸಿದರು ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರದಿ- ದೇವರಾಜ್ ಕೆ.ಎನ್. ಎಕ್ಸ್ ಪ್ರೆಸ್ ಟಿವಿ ಕೊರಟಗೆರೆ

Read More

ಹೊಸ ವರ್ಷಕ್ಕೆ ಬಂಪರ್ ಕೊಡುಗೆಯ ಭರವಸೆ ನೀಡಿದ ಶಾಸಕ ಡಾ.ಜಿ ಪರಮೇಶ್ವರ್..!

ಕೊರಟಗೆರೆ: ಹೊಸ ವರ್ಷಕ್ಕೆ ಶಾಸಕ ಡಾ.ಜಿ ಪರಮೇಶ್ವರ್ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಜನತೆಗೆ ಬಂಪರ್ ಕೊಡುಗೆಯ ಭರವಸೆ ನೀಡಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮಾತನಾಡಿ, ಹೊಸವರ್ಷದ ಆರಂಭದಲ್ಲಿ ಕೊರೋನಾ ರೋಗ ಕಡಿಮೆಯಾಗುತ್ತಿದೆ. ಸಾರ್ವಜನಿಕರು ಮತ್ತಷ್ಟು ಜಾಗ್ರತೆ ಮತ್ತು ನಿಯಮ ಪಾಲಿಸಿದರೆ ಕೊರೊನಾ ರೋಗವನ್ನು ಸಮಾಜದಿಂದ ಮುಕ್ತಗೊಳಿಸಬಹುದು ಎಂದರು.ಇನ್ನೂ ಮುಂಬರುವ ದಿನಗಳಲ್ಲಿ ತುಮಕೂರು ಸಿದ್ದಾರ್ಥ ಮಹಾ ವೈದ್ಯಕೀಯ ಆಸ್ಪತ್ರೆಯಿಂದ ಕೊರಟಗೆರೆ ವಿಧಾನ ಸಭಾಕ್ಷೇತ್ರ ವ್ಯಾಪ್ತಿಯ ಕೊರಟಗೆರೆ ಪಟ್ಟಣ ಸೇರಿದಂತೆ 6 ಹೋಬಳಿ ಕೇಂದ್ರಗಳಿಗೆ ಉಚಿತ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಈ ಬಸ್ಸಿನಲ್ಲಿ ಕ್ಷೇತ್ರದ ವಿವಿಧ ಆರೋಗ್ಯ ಸಮಸ್ಯೆಯ ಜನರು ಅಸ್ಪತ್ರೆಯಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆಗಳನ್ನು ಆಯುಷ್ಮಾನ್ ಭಾರತ್ ಯೋಜನೆಯಡಿ ಪಡೆಯಬಹುದು. ಉಳಿದ ದೊಡ್ಡ ಮಟ್ಟದ ಶಸ್ತ್ರ ಚಿಕಿತ್ಸೆಗಳನ್ನು ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಶುಶ್ರೂಷೆಗಳನ್ನು ರಿಯಾಯಿತಿ ವೆಚ್ಚದಲ್ಲಿ ಮಾಡಲಾಗುವುದು.…

Read More

ತುಮಕೂರಿನಲ್ಲಿ ಬ್ರಿಟನ್ ನಿಂದ ವಾಪಾಸ್ಸಾದ ಐವರು ಪತ್ತೆ-ವರದಿ ನೆಗೆಟಿವ್,ನಿಟ್ಟುಸಿರು ಬಿಟ್ಟ ತುಮಕೂರು ಮಂದಿ..!

ತುಮಕೂರು: ಕೋವಿಡ್ ರೂಪಾಂತರಗೊಂಡ ಸೋಂಕು ಭಾರತದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಜನರಲ್ಲಿ ಆತಂಕ ಮೂಡಿತ್ತು.ಎಲ್ಲಾ ರಾಜ್ಯಗಳಲ್ಲಿ ಹೈ-ಅಲರ್ಟ್ ಕೂಡ ಘೋಷಣೆ ಮಾಡಿದ್ರು. ಅದರಂತೆ ಬೆಂಗಳೂರು ಸೇರಿದಂತೆ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಈಗಾಗಲೇ ಬ್ರಿಟನ್ನಿಂದ ಬಂದ ಪ್ರಯಾಣಿಕರನ್ನು ಪತ್ತೆಹಚ್ಚಲಾಗುತ್ತಿದೆ. ಅದರಂತೆ ತುಮಕೂರು ಜಿಲ್ಲೆಯಲ್ಲಿ ಈವರೆಗೆ ಐವರು ಬ್ರಿಟನ್ನಿಂದ ಬಂದಿದ್ದು, ನಿನ್ನೆ ಅವರಿಗೆ ಆರ್ಟಿ-ಪಿಸಿಆರ್ ಪರೀಕ್ಷೆ ಒಳಪಡಿಸಲಾಯಿತು.ಇಂದು ಅವರ ವರದಿ ಬಂದಿದ್ದು, ಐವರಿಗೂ ಕೊರೊನಾ ನೆಗೆಟಿವ್ ಬಂದಿದೆ ಎಂದು ಡಿಹೆಚ್ಒ ನಾಗೇಂದ್ರಪ್ಪ ತಿಳಿಸಿದ್ದಾರೆ.ಸದ್ಯ ಐವರು ಬ್ರಿಟನ್ ಪ್ರಯಾಣಿಕರನ್ನು ಹೋಂ ಕ್ವಾರೆಂಟೈನ್ ಮಾಡಲಾಗಿದ್ದು, ಅವರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ ಎನ್ನಲಾಗಿದೆ. ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ಬಸ್ ಸ್ಟಾಪ್ ನಲ್ಲಿ ಕರಡಿ ಪ್ರತ್ಯಕ್ಷ : ವಿಡಿಯೋ ವೈರಲ್

ತುಮಕೂರು : ತುಮಕೂರು ನಗರ ಸಮೀಪದ ದೇವರಾಯನದುರ್ಗ ಹಾಗೂ ನಾಮಚಿಲುಮೆಗೆ ತೆರಳುವ ಮಾರ್ಗದಲ್ಲಿರುವ ಬಸ್ ನಿಲ್ದಾಣದಲ್ಲಿ ಕರಡಿ ಪ್ರತ್ಯಕ್ಷವಾಗಿದೆ. ಅದೇ ಮಾರ್ಗದಲ್ಲಿ ಹೋಗುತ್ತಿದ್ದ ವ್ಯಕ್ತಿಯೋರ್ವ ಬಸ್ ನಿಲ್ದಾಣದಲ್ಲಿ ಯಾರೋ ಅಪರಿಚಿತ ವ್ಯಕ್ತಿ ಇದ್ದಂತೆ ಆತನ ಕಣ್ಣಿಗೆ ಕಾಣಿಸಿದೆ,ತದನಂತರ ಆತ ತನ್ನ ಮೊಬೈಲ್ ಲೈಟ್ ಹಾಕಿ ನೋಡಿದಾಗ ಬಸ್ ಸ್ಟ್ಯಾಂಡ್ ನಿಂದ ಕರಡಿ ಹೊರಕ್ಕೆ ಬರುವುದನ್ನು ಕಂಡು ಬೆರಗಾಗಿದ್ದಾನೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನಾಮಚಿಲುಮೆ ಸುತ್ತಮುತ್ತಲಿನ ಜನ ರಾತ್ರಿ ಓಡಾಡಲು ಆತಂಕ ವ್ಯಕ್ತಪಡಿಸಿದ್ದಾರೆ. ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ಶಿರಾ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಗೆ ಕೊರೊನಾ ಸೋಂಕು ಧೃಡ !

ತುಮಕೂರು : ಶಿರಾ ಕ್ಷೇತ್ರದ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಗೆ ಕೊರೊನಾ ಸೋಂಕು ಇರುವುದು ಧೃಡವಾಗಿದೆ.ಈ ಬಗ್ಗೆ ದಿವಂಗತ ಸತ್ಯಾನಾರಾಯಣ್ ಪುತ್ರ ಸತ್ಯಪ್ರಕಾಶ್ ತಿಳಿಸಿದ್ದಾರೆ. ಕಳೆದ ಮೂರ್ನಾದಕು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಭ್ಯರ್ಥಿ ಅಮ್ಮಾಜಮ್ಮ,ನಿನ್ನೆ ಕೊರೊನಾ ಸೋಂಕಿನ ಟೆಸ್ಟ್ ಮಾಡಿಸಿಕೊಂಡಿದ್ದರು. ಇದೀಗ ಅವರ ವರದಿ ಬಂದಿದ್ದು, ಕೊರೊನಾ ಸೋಂಕು ಇರುವುದು ಧೃಡವಾಗಿದೆ.ಹೀಗಾಗಿ ಅಭ್ಯರ್ಥಿ ಅಮ್ಮಾಜಮ್ಮ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಿರಾ ಉಪಚುನಾವಣೆ ಹಿನ್ನೆಲೆ, ದಿವಂಗತ ಸತ್ಯನಾರಾಯಣ್ ಪತ್ನಿ ಅಮ್ಮಾಜಮ್ಮ ಅವರನ್ನ ಜೆಡಿಎಸ್ ಅಭ್ಯರ್ಥಿ ಎಂದು ದೇವೇಗೌಡರು ಘೋಷಣೆ ಮಾಡಿದ್ದರು. ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ಕಾಂಗ್ರೆಸ್ ಪಕ್ಷಕ್ಕೆ ಅಂತಿಮ ಮೊಳೆ ಹೊಡೆಯುವುದೇ ಸಿದ್ದರಾಮಯ್ಯ : ಹೆಚ್ಡಿಕೆ

ತುಮಕೂರು :ಯಾವ ಪಕ್ಷ ಬೆಳಸುತ್ತೋ ಅದೆ ಪಕ್ಷಕ್ಕೆ ಬೆಂಕಿ ಹಾಕುವ ಕೆಲಸ ಸಿದ್ದರಾಮಯ್ಯ ಮಾಡ್ತಾಯಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಂತಿಮ ಮೊಳೆ ಹೊಡೆಯುವುದೇ ಸಿದ್ದರಾಮಯ್ಯ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಶಿರಾ ಬೈ ಎಲೆಕ್ಷನ್ ಸಭೆ ಬಳಿಕ ಮಾತನಾಡಿದ ಹೆಚ್ಡಿಕೆ, ಮುಂದೊಂದು ದಿನ ಕಾಂಗ್ರೆಸ್ ಪಕ್ಷಕ್ಕೆ ಏನಾಗಲಿದೆ ಎಂದು ನೋಡಿ ಎಂದಿದ್ದಾರೆ. ಜೆಡಿಎಸ್ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರನ್ನ ರಾಜಕೀಯ ಬೆಳಕಿಗೆ ತಂದಿದ್ದೇ ಜೆಡಿಎಸ್ ಪಕ್ಷ. ಕಾಂಗ್ರೆಸ್ ಪಕ್ಷ ಸೇರಿಕೊಂಡಿರುವುದು ಜೆಡಿಎಸ್ ಪಕ್ಷದ ಕಾರ್ಯಕರ್ತರ ದುಡಿಮೆ ಫಲವಾಗಿದೆ.ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದಲ್ಲಿ ಇವರನ್ನು ಯಾರು ಗುರುತಿಸುತ್ತಿರಲಿಲ್ಲ ಎಂದಿದ್ದಾರೆ. ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ಅವಳು ಡಿ.ಕೆ ರವಿ ಹೆಂಡತಿ ಅನ್ನೋ ಯೋಗ್ಯತೆ ಅವತ್ತೇ ಕಳೆದುಕೊಂಡ್ಲು : ಗೌರಮ್ಮ

ತುಮಕೂರು : ಆರ್.ಆರ್ ನಗರ ಉಪಚುನಾವಣೆಯಲ್ಲಿ ದಿವಂಗತ ಡಿ.ಕೆ ರವಿ ಕುಸುಮಾ ಸ್ಪರ್ಧೆ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇದೀಗ ಡಿ.ಕೆ ರವಿ ಕುಟುಂಬದಿಂದಲೇ ಭಾರಿ ವಿರೋಧ ವ್ಯಕ್ತವಾಗಿದೆ. ನನ್ನ ಮಗನ ಜೊತೆ ಅವಳು ಹೋಗಿಬಿಟ್ಲು ಅಂತ ತಿಳಿದುಕೊಂಡಿದ್ದೇನೆ. ನನ್ನ ಮಗನ ದುಡ್ಡಲ್ಲಿ ಒಂದು ರುಪಾಯಿ ನಮ್ಮ ಕಷ್ಟಕ್ಕೆ ಕೊಡಲಿಲ್ಲ, ನನ್ನ ಮಗನ ಹೆಸರು ಹೇಳಿಕೊಂಡು ಯಾಕೆ ಅವಳು ಚುನಾವಣೆಗೆ ನಿಂತುಕೊಳ್ಳಬೇಕು ಎಂದು ತಾಯಿ ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೊಡ್ಡಕೊಪ್ಪಲಿನಲ್ಲಿ ಮಾತನಾಡಿದ ಅವರು ಮಣ್ಣಲ್ಲಿ ಬಿಸಾಕು ಹೋದೋಳು ಇವತ್ತಿನವರೆಗೂ ಬಂದಿಲ್ಲ, ಡಿ.ಕೆ ರವಿ ಅನ್ನೋ ಯೋಗ್ಯತೆ 6 ವರ್ಷದ ಕೆಳಗೆ ಕಳೆದುಕೊಂಡಿದ್ದಾಳೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ರು, ನನ್ನ ಮಗನ ಹೆಸರು ಹಾಗು ಫೋಟೊ ಹಾಕಬಾರದು ಎಂದು ತಾಕೀತು ಮಾಡಿದ್ದಾರೆ. ಫೋಟೊ ಬಳಸಿದ್ರೆ, ನಾನೇ ಹುಡುಗರನ್ನ ಕರೆದುಕೊಂಡು ಹೋಗಿ ಬೆಂಕಿ ಹಚ್ಚಿಸುತ್ತೇನೆ. ನಾನು ಕಷ್ಟಪಟ್ಟು ಓದ್ಸಿದ್ರೆ,…

Read More

ನಟಿ ಕಂಗನಾ ವಿರುದ್ಧ ತುಮಕೂರು JMFC ಕೋರ್ಟ್ ನಲ್ಲಿ ದೂರು..!

ತುಮಕೂರು : ಕೇಂದ್ರ ಸರ್ಕಾರ ಹಾಗು ಎಪಿಎಂಸಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧ ಕಂಗನಾ ರಾಣಾವತ್ ಅವಹೇಳನಾಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದೂರು ದಾಖಲಿಸಲಾಗಿದೆ. ರೈತರನ್ನ ಭಯೋತ್ಪಾದಕರಿಗೆ ಹೋಲಿಸಿದ್ದಾರೆಂದು ನಟಿ ಕಂಗನಾ ವಿರುದ್ಧ ತುಮಕೂರು ಜೆಎಂಎಫ್ಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ. ಕಂಗನಾ ಹೇಳಿಕೆಯಿಂದ ಆಕ್ರೋಶಗೊಂಡ ಹೈಕೋರ್ಟ್ ವಕೀಲ ರಮೇಶ್ ನಾಯಕ್, ಐಪಿಸಿ ಸೆಕ್ಷನ್ 44,108,153,153A ಹಾಗು 504 ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದರು, ದಾಖಲಿಸಿಕೊಳ್ಳದ ಹಿನ್ನೆಲೆ ನೇರವಾಗಿ ತುಮಕೂರು ಜೆಎಂಎಫ್ಸಿ ನ್ಯಾಯಾಲಯದಲ್ಲಿ ದೂರು ನೀಡಿದ್ದಾರೆ. ಇದೀಗ ನ್ಯಾಯಾಲಯ ಅನುಮತಿ ನೀಡಿದ್ದಲ್ಲಿ ಕಂಗನಾ ರಣಾವತ್ ವಿರುದ್ಧ ಎಫ್ಐಆರ್ ದಾಖಲಾಗುವ ಸಾಧ್ಯತೆ ಇದೆ. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ಕ್ಷುಲ್ಲಕ ಕಾರಣಕ್ಕೆ ಮಾಜಿ ಉಪಮೇಯರ್ ಮೇಲೆ ಮಚ್ಚಿನಿಂದ ಹಲ್ಲೆ- ಎಲ್ಲಿ?

ತುಮಕೂರು : ಕ್ಷುಲ್ಲಕ ಕಾರಣಕ್ಕೆ ಮಾಜಿ ಉಪಮೇಯರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಇಲ್ಲಿನ ಮೆಳೆಕೋಟೆ ಬಳಿ ತಡರಾತ್ರಿಯಾದರೂ ಅನಗತ್ಯವಾಗಿ ಓಡಾಡುತ್ತಿದ್ದ ಗುಂಪೊಂದನ್ನ ತಡೆದ ಮಾಜಿ ಉಪಮೇಯರ್ ವೆಂಕಟೇಶ್ ಪ್ರಶ್ನೆ ಮಾಡಿದ್ದಾರೆ. ಮನೆಗೆ ಹೋದಂತೆ ನಾಟಕವಾಡಿದ ಗುಂಪು, ಮನೆಯಿಂದ ಮಚ್ಚು ತಂದು ವೆಂಕಟೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ಉಪಮೇಯರ್ ತಲೆಗೆ ಗಾಯವಾಗಿದ್ದು,ವೆಂಕಟೇಶ್ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಳಕ್ಕೆ ತಿಲಕ್ ಪಾರ್ಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ತುಮಕೂರಿನಲ್ಲಿ ಬೋನಿಗೆ ಬಿದ್ದ ಚಿರತೆ- ನಿಟ್ಟುಸಿರು ಬಿಟ್ಟ ಗ್ರಾಮಸ್ಥರು..!

ತುಮಕೂರು: ತುಮಕೂರು ಜಿಲ್ಲೆಯ ಚಿಕ್ಕ ನಾಯಕನಹಳ್ಳಿ ತಾಲ್ಲೂಕಿನ ಯಳನಾಡುವಿನಲ್ಲಿ ಚಿರತೆ ಯಳನಾಡುವಿನ ಕಾಚನಕಟ್ಟೆ,ಗಂಗಮ್ಮನ ಕೆರೆ ಸುತ್ತಮುತ್ತ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತ ಗ್ರಾಮಸ್ಥರಲ್ಲಿ ಭೀತಿ ಉಂಟು ಮಾಡಿದ್ದ ಚಿರತೆಯೂ ಕಡೆಗೂ ಅರಣ್ಯ ಇಲಾಖೆಯವರು ನಡೆಸಿದ ಕಾರ್ಯಾಚರಣೆಯಲ್ಲಿ ಇಂದು ನಸುಕಿನಲ್ಲಿ ಬೋನಿನಲ್ಲಿ ಸೆರೆಸಿಕ್ಕಿದೆ. ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡು ರೈತರು ಹೊಲದಲ್ಲಿ ಕೆಲಸವನ್ನು ಮಾಡಲು ಆತಂಕ ಪಡುತ್ತಿದ್ದರು. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದು ಈ ಹಿನ್ನೆಲೆಯಲ್ಲಿ ಗ್ರಾಮದ ಸಮೀಪ ಅರಣ್ಯ ಇಲಾಖೆಯವರು ಬೋನನ್ನು ಇಟ್ಟಿದ್ದರು. ಆಹಾರವನ್ನು ಅರಸಿ ಬಂದ ಚಿರತೆ ಬೋನಿನಲ್ಲಿ ಸೆರೆ ಸಿಕ್ಕಿದ್ದು ಸುದ್ಧಿ ತಿಳಿದ ಕೂಡಲೇ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ಸ್ಥಳಾಂತರಿಸಿದ್ದಾರೆ. ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶೀರಾ

Read More