ಬಾಗಲಕೋಟೆ: ಅಯ್ಯಪ್ಪ ಸ್ವಾಮಿ ಮಾಲೆ ಹಾಕಿರುವವರು ಪ್ರತಿ ವರ್ಷ ವೃತ ಮುಕ್ತಾಯಗೊಳಿಸಲು ಕೇರಳದ ಶಬರಿಮಲೈನಲ್ಲಿ ಇರುವ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಹೋಗಿ ಇರುಮುಡಿ ಇಳಿಸಿ ಬರುತ್ತಿದ್ದರು. ಆದರೆ, ಈ ವರ್ಷ ಕೊರೊನಾ ಹಾವಳಿ ಇವರನ್ನು ಅಲ್ಲಿಗೆ ಹೋಗದಂತೆ ಮಾಡಿದೆ. ಹೀಗಾಗಿ ಈ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಅಯ್ಯಪ್ಪ ಮಾಲಾಧಾರಿಗಳ ದಂಡು ರಾಜ್ಯದ ಮಾಲಾಧಾರಿಗಳು ಈ ಬಾರಿ ಕರ್ನಾಟಕದ 8 ಕಡೆಗಳಲ್ಲಿನ ಅಯ್ಯಪ್ಪ ದೇಗುಲಗಳಲ್ಲಿಯೇ ಇರುಮುಡಿ ಮುಟ್ಟಿಸಲು ನಿರ್ಧರಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ಈ ಮಿನಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣವಾಗಿದೆ. ಈ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಇದೀಗ ರಾಜ್ಯ ಮತ್ತು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಅಯ್ಯಪ್ಪ ಮಾಲಾಧಾರಿಗಳು ಬಂದು ಇರುಮುಡಿ ಇಳಿಸಿ ಹೋಗುತ್ತಿದ್ದಾರೆ. ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿಕೊಂಡು ಇರುಮುಡಿ ಹೊತ್ತುಕೊಂಡು ಬರುತ್ತಿರುವ ಈ ಮಾಲಾಧಾರಿಗಳು, ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವೃತಸೇವೆ…
Read MoreCategory: ಬಾಗಲಕೋಟೆ
ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಬದ್ಧ- ಮುರುಗೇಶ್ ನಿರಾಣಿ..!
ಬಾಗಲಕೋಟೆ: ಮುಂಬರುವ ದಿನಗಳಲ್ಲಿ ಬೀಳಗಿ ಕ್ಷೇತ್ರವಾಪ್ತಿಯ ಒಂದು ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದರ ಜೊತೆಗೆ 2500 ಆಶ್ರಯ ಮನೆಗಳು ಮಂಜೂರು ಮಾಡಿಸಿ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಗ್ರಾಮಗಳ ಅಭಿವೃದ್ಧಿಗೆ ಸದಾಕಾಲ ಗ್ರಾಮ ಪಂಚಾಯಿತಿ ಸದಸ್ಯ ಜೊತೆಗೆ ಇರುತ್ತೇನೆಂದು ಬೀಳಗಿ ಶಾಸಕ ಮುರುಗೇಶ್ ನಿರಾಣಿ ಹೇಳಿದರು. ಬಾಗಲಕೋಟೆ ಜಿಲ್ಲೆಯ ಕೆರಕಲಮಟ್ಥಿಯ ಕೇದಾರ್ ನಾಥ್ ಶುಗರ್ ಕಾರ್ಖಾನೆಯಲ್ಲಿ ಬೀಳಗಿ ಮತ ವಾಪ್ತಿಯ ಬಿಜೆಪಿ ಬೆಂಬಲಿತ ನೂತನ ಗ್ರಾಮ ಪಂಚಾಯಿತಿ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಮುರುಗೇಶ್ ನಿರಾಣಿ ಬೀಳಗಿಯ ಭೂಮಿಗಳನ್ನು ಸಂಪೂರ್ಣ ನೀರಾವರಿ ಸೌಲಭ್ಯಕ್ಕೆ ಒಳಪಡಿಸುವ ಯೊಜನೆ ರೂಪಿಸಲಾಗಿದೆ. ಬಡ ಜನರಿಗೆ ಆಶ್ರಯ ಮನೆ ಉಚಿತ ಗ್ಯಾಸ್ ಎಲ್ಲಾ ಗ್ರಾಮಗಳಿಗೆ ಶುದ್ದ ನೀರು, ಸಿಸಿ ರಸ್ತೆ, ಶೌಚಾಲಯ ಸೇರಿದಂತ್ತೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಗ್ರಾಮಗಳನ್ನು ಸಂಪೂರ್ಣ ಅಭಿವೃದ್ಧಿ ಪಡಿಸಲು ನಾನು ಬದ್ಧನಾಗಿದ್ದೆನೆ ಎಂದರು.ಇನ್ನೂ ಈ…
Read Moreಚಾಲುಕ್ಯ ನಾಡಲ್ಲಿ ಕೋವಿಡ್ ಲಸಿಕೆ ಡ್ರೈರನ್…!
ಬಾಗಲಕೋಟೆ: ರಾಜ್ಯದಲ್ಲಿ ಕೋವಿಡ್ ಲಸಿಕೆ ಡ್ರೈ ರನ್ ಪ್ರಾರಂಭ ಮಾಡಿದ್ದು,ಅದರಂತೆ ಬಾದಾಮಿಯಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಡ್ರೈ ರನ್ ಪ್ರಾರಂಭ ಮಾಡಲಾಗಿದೆ. ದೇಶದಲ್ಲಿ ಕಳೆದ ಸುಮಾರು ಹತ್ತು ತಿಂಗಳವರಗೆ ಕೋವಿಡ್ ನಿಂದ ಜನರು ತತ್ತರಿಸಿ ಹೋಗಿದ್ದರು. ಅಂತು ಕೇಂದ್ರ ಸರಕಾರ ಕೋವಿಡ್ ಲಸಿಕೆ ಕಂಡು ಹಿಡದಿದ್ದು.ಇದನ್ನು ಇದೇ ತಿಂಗಳು ನೀಡಲು ಸಕಲ ಸಿದ್ಧತೆ ಕಾರ್ಯ ನಡೆದಿದೆ. ಅದರಂತೆ ರಾಜ್ಯದಲ್ಲಿ ಕೋವಿಡ್ ಲಸಿಕೆ ಡ್ರೈ ರನ್ ನಡೆಸುತ್ತಿದ್ದು, ಪ್ರಸ್ತುತ ಚಾಲುಕ್ಯರ ನಾಡದ ಬಾದಾಮಿ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಸಲುವಾಗಿ 3 ಪ್ರತ್ಯೇಕ ಕೋಣೆ ಮೀಸಲು ಇಡಲಾಗಿದೆ.ಒಂದು ವೇಟಿಂಗ್ ರೂಮ್, ಕೋವಿಡ್ ವ್ಯಾಕ್ಷಿನ್ ರೂಮ್,ಮತ್ತೊಂದು ಅಬಸರ್ವೇಷನ್ ರೂಮ್ ತೆರೆಯಲಾಗಿದೆ.ನಿನ್ನೇ ತಾಲೂಕು ವೈದ್ಯಧಿಕಾರಿಗಳಾದ ಡಾ.ಪಾಟೀಲ್ ಇವರು ಸಹ ಸಿಬ್ಬಂದಿಗಳಿಗೆ ಯಾವ ರೀತಿಯಾಗಿ ಕೋವಿಡ್ ಲಸಿಕೆ ನೀಡಬೇಕು ಹಾಗೂ ಯಾವ ಮುಂಜಾಗ್ರತೆ ಕ್ರಮ ಕೈಕೊಳ್ಳಬೇಕು ಎಂಬ ಹಲವಾರು ವಿಚಾರ ಬಗ್ಗೆ ಸಿಬ್ಬಂದಿಗಳಿಗೆ ಮಾಹಿತಿ…
Read Moreಬಾದಾಮಿಗೆ ವಿದ್ಯುತ್ ಉಪ ವಿಭಾಗ ಕಚೇರಿ ಮಂಜೂರು..!
ಬಾಗಲಕೋಟೆ: ಬಾದಾಮಿ ನಗರ ಜನತೆಯ ಬಹು ವರ್ಷಗಳ ಬೇಡಿಕೆಯಾದ ವಿದ್ಯುತ್ ಸರಬರಾಜು ಕಂಪನಿಯ ಉಪ ವಿಭಾಗ ಕಚೇರಿ ಬೇಡಿಕೆಯನ್ನು ಕ್ಷೇತ್ರ ಶಾಸಕ ಸಿದ್ದರಾಮಯ್ಯ ಇದೀಗ ಈಡೇರಿಸಿದ್ದಾರೆ. ಬಾದಾಮಿ ನಗರದಲ್ಲಿ ವಿದ್ಯುತ್ ಉಪ ವಿಭಾಗ ಕಚೇರಿ ಮಂಜೂರು ಮಾಡುವಂತೆ ಸರ್ಕಾರದ ಮೇಲೆ ಸಿದ್ದರಾಮಯ್ಯ ಒತ್ತಡ ಹೇರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದರು,ಅಲ್ಲದೆ ಇಂಧನ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರ ಜೊತೆ ಮಾತುಕತೆ ನಡೆಸಿದ್ದರು. ಹೀಗಾಗಿ ಸಿದ್ಧರಾಮಯ್ಯ ರವರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಬಾದಾಮಿ ನಗರದಲ್ಲಿ ವಿದ್ಯುತ್ ಸರಬರಾಜು ಉಪ ವಿಭಾಗ ಕಚೇರಿಗೆ ಸ್ಥಾಪಿಸುವಂತೆ ಅಧಿಕೃತ ಆದೇಶ ಹೊರಡಿಸಿದೆ. ವರದಿ-ಶ್ರೀಧರ ಚಂದರಗಿ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ
Read Moreಪುರಸಭೆ ಸದಸ್ಯೆಯ ತಳ್ಳಾಟ ನೂಕಾಟ ಪ್ರಕರಣ- ಶಾಸಕ ಸಿದ್ದು ಸವದಿ ವಿರುದ್ದ ಕೇಸ್ ದಾಖಲು..!
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪುರಸಭೆ ಸದಸ್ಯೆಯರ ತಳ್ಳಾಟ-ನೂಕಾಟ ಪ್ರಕರಣ ತೇರದಾಳ ಶಾಸಕ ಸಿದ್ದು ಸವದಿಗೆ ಕಂಟಕವಾಗುವಂತೆ ಕಾಣುತ್ತಿದೆ. ಯಾಕೆಂದರೆ ಈ ಪ್ರಕರಣ ಸಂಬಂಧ ತೇರದಾಳ ಶಾಸಕ ಸಿದ್ದು ಸವದಿ ಸೇರಿ 31 ಜನರ ವಿರುದ್ಧ ಕೇಸ್ ದಾಖಲಾಗಿದೆ. ಬಾಗಲಕೋಟೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ತೇರದಾಳ ಶಾಸಕ ಸಿದ್ಧು ಸವದಿಗೆ ಈ ಪ್ರಕರಣ ಕಂಟಕವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಳೆದ ವರ್ಷ ಅಂದರೆ 2020ರ ನವೆಂಬರ್ 09ರಂದು ಈ ತಳ್ಳಾಟ-ನೂಕಾಟ ಘಟನೆ ನಡೆದಿತ್ತು. ಅಂದು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ವೋಟ್ ಮಾಡಲು ಬಂದ ಪುರಸಭೆ ಸದಸ್ಯೆ ಚಾಂದಿನಿ ನಾಯಕ್, ಸವಿತಾ ಹುರಕಡ್ಲಿ, ಗೋದಾವರಿ ಬಾಟ್ ಅವರನ್ನು ತಳ್ಳಾಡಿ ನೂಕಾಡಲಾಗಿತ್ತು. ಪುರಸಭೆಯ ಒಳಗೆ ಬಾರದಂತೆ ಹೊರಗಡೆ ಕಳಿಸಲು ಗಲಾಟೆ ನಡೆದಿತ್ತು.ಘಟನೆ…
Read Moreಮದುವೆ ಸಮಾರಂಭದ ಸೇವಕ ಈಗ ಗ್ರಾ.ಪಂ ಸದಸ್ಯ..!
ಬಾಗಲಕೋಟೆ: ಗ್ರಾಮದಲ್ಲಿ ಯಾರದೊ ಮದುವೆ ಹಾಗೂ ಇನ್ನಿತರ ಸಭೆ ಸಮಾರಂಭ ಇದ್ದರೆ ಮೂರು ದಿನ ಮುಂಚಿತವಾಗಿ ಅಲ್ಲಿ ತೆರಳಿ ಕಸ ಗುಡಿಸುವದರಿಂದ ಹಿಂಡಿದ್ದು ಊಟದ ಪ್ಲೇಟ್ ತೊಳೆಯುವವರೆಗೆ ಎಲ್ಲ ಕೆಲಸ ಮಾಡಿ ಸಮಾರಂಭ ಯಶಸ್ವಿಗೊಳಿಸುವ ಸಮಾರಂಭ ಸೇವಕ ವ್ಯಕ್ತಿಯ ಸಮಾಜಸೇವೆ ಮನಗಂಡ ಗ್ರಾಮದ ಯುವಕರು ಚುನಾವಣೆಯಲ್ಲಿ ಸ್ಪರ್ಧಿಸಿ ಅವನನ್ನು ಗೆಲ್ಲಿಸಿ ಇತರರಿಗೆ ಮಾದರಿಯಾಗಿದ್ದಾರೆ.ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹುಲ್ಲಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಮನಿನಾಗರ ಗ್ರಾಮದ ರಾಮಣ್ಣಗೌಡ ಮುಲಿಮನಿ ಗ್ರಾಮದಲ್ಲಿ ಯಾರದ್ದೊ ಮದುವೆ ಹಾಗೂ ಇನ್ನಿತರ ಸಭೆ ಸಮಾರಂಭ ಇರಲ್ಲಿ ಸಂಕೋಚ ಪಡದೆ ಅಲ್ಲಿ ಮುಂದೆ ನಿಂತು ಎಲ್ಲಾ ಕಾರ್ಯ ಮಾಡಿ ಮುಗಿಸಿ ನಂತರ ತಮ್ಮ ಮನೆಗೆ ವಾಪಾಸ್ಸಾಗುತ್ತಿದ್ದ. ಗ್ರಾಮಸ್ಥರು ರಾಮಣ್ಣ ಗೌಡ ಮುಲಿಮನಿಯ ಸಮಾಜ ಸೇವೆ ಮನಗಂಡು ಗ್ರಾಮದ ಯುವಕರು ಅವನನ್ನು ಗ್ರಾಮ ಪಂಚಾಯತ್ ಚುಣಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡಿ ತಮ್ಮ ಸ್ವಂತ ಹಣ ಖರ್ಚು…
Read Moreಪೊಲೀಸರ ಮೇಲೆ ಮಾಜಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ದರ್ಪ- ವಿಡಿಯೋ ವೈರಲ್..!
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಹುನಗುಂದ ಮಾಜಿ ಕಾಂಗ್ರೆಸ ಶಾಸಕ ವಿಜಯಾನಂದ ಕಾಶಪ್ಪನವರ್ ಪೊಲೀಸ್ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ದರ್ಪ ತೋರಿದ ವಿಡಿಯೋ ಈಗ ವೈರಲ್ ಆಗಿದ್ದು ಮಾಜಿ ಶಾಸಕನ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕೊಲೆ ಆರೋಪದಲ್ಲಿ ವಿಜಯಾನಂದ ಕಾಶಪ್ಪನವರ್ ಬೆಂಬಲಿಗರನ್ನು ಪೋಲಿಸ್ ಠಾಣೆಗೆ ಕರೆಸಿ ವಿಚಾರಿಸುತ್ತಿರುವಾಗ ತಮ್ಮ ಬೆಂಬಲಿಗರ ಬೆಂಬಲಕ್ಕೆ ಬಂದ ವಿಜಯಾನಂದ ಕಾಶಪ್ಪನವರ್ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪೊಲೀಸರ ಮೇಲೆ ದರ್ಪ ತೋರುವುದು ವಿಡಿಯೋದಲ್ಲಿ ಬಹಿರಂಗವಾಗಿದೆ. ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು, ಪೊಲೀಸ್ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಸಿರುವ ಕಾರಣ ಇಳಕಲ್ ಪೊಲೀಸ್ ಠಾಣೆಯಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ದ ಎಫ್ ಐ ಆರ್ ದಾಖಲಾಗಿದೆ. ವರದಿ- ಶ್ರ್ರೀಧರ ಚಂದರಗಿ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ
Read Moreಕೆಎಸ್ ಆರ್ ಟಿಸಿ ನೌಕರರನ್ನು ಕರೆದು ಇತ್ಯರ್ಥ ಮಾಡಪ್ಪ’ ಎಂದ ಮಾಜಿ ಸಿಎಂ..!
ಬಾಗಲಕೋಟೆ: ಸಾರಿಗೆ ನೌಕರರ ಮುಷ್ಕರ ಸಂಬಂಧ ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ಕರೆ ಮಾಡಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಾಯ್ಯ ,ಕೆಎಸ್ ಆರ್ ಟಿಸಿ ನೌಕರರನ್ನು ಕರೆದು ಸಮಸ್ಯೆ ಇತ್ಯರ್ಥ ಪಡಿಸುವಂತೆ ಸೂಚನೆ ನೀಡಿದ್ದಾರೆ. ಬಾದಾಮಿಯ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಮಧ್ಯೆ ಲಕ್ಷ್ಮಣ ಸವದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕರೆ ಮಾಡಿ ಮಾತನಾಡಿದರು.“ಕೆಎಸ್ ಆರ್ ಟಿಸಿ ನೌಕರರನ್ನು ಕರೆದು ಇತ್ಯರ್ಥ ಮಾಡಪ್ಪ.ಜನಗಳಿಗೆ ತೊಂದ್ರೆಯಾಗುತ್ತೆ. ಕೊನೆಗೆ ನಿನ್ನನ್ನೇ ಬೈತಾರೆ,” ಎಂದು ಸಲಹೆ ನೀಡಿದ ಸಿದ್ದರಾಮಯ್ಯ, “ಸವದಿ ನಿನ್ನ ಕಷ್ಟ ನನಗೆ ಗೊತ್ತಿದೆ. ಕುಳಿತು ಮಾತನಾಡಿ, ಮುಷ್ಕರ ಕೈಬಿಡುವಂತೆ ಮಾಡಿ,” ಎಂದು ಸೂಚಿಸಿದರು. ಇಂದೇ ಫೋನ್ ಮಾಡಿ ಕರೆದು ಕೂತು ಮಾತನಾಡುವಂತೆ ಹೇಳುತ್ತೇನೆ. ನೀವು ಮುಷ್ಕರ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದೀರಿ. ಈ ಮುಷ್ಕರ ಬಹಳ ದಿನ ಸಾಗದಿರಲಿ.ಇದರಿಂದ ಜನರಿಗೆ ತೊಂದರೆಯಾಗುತ್ತದೆ…
Read Moreಅನೈತಿಕ ಸಂಬಂಧದ ಅನುಮಾನಕ್ಕೆ ನಡೆಯಿತು ಪತ್ನಿಯ ಕೊಲೆ..!
ಬಾಗಲಕೋಟೆ: ಅನೈತಿಕ ಸಂಭಂದದ ಕಾರಣಕ್ಕಾಗಿ ಗಂಡ ಹೆಂಡತಿ ಮದ್ಯ ಜಗಳವಾಗಿದ್ದು,ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸಂಗಾನಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ದುರ್ದೈವಿ ಸುಮಿತ್ರಾ ಎಂದು ತಿಳಿದು ಬಂದಿದ್ದು, ಹತ್ಯೆಗೈದ ವ್ಯಕ್ತಿ ಹೆಸರು ಮಲ್ಲಪ್ಪ ಉಳ್ಳಾಗಡ್ಡಿ ಎಂದು ತಿಳಿದು ಬಂದಿದೆ. ಮಲ್ಲಪ್ಪ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ತನ್ನ ಪತ್ನಿ ಸುಮಿತ್ರಾ ಅದೇ ಗ್ರಾಮದ ಶ್ರೀಶೈಲ ಎಂಬುವವನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆಂದು ಅನುಮಾನಿಸಿ ಶ್ರೀಶೈಲನನ್ನು ಕೊಲೆ ಮಾಡಲು ಯತ್ನಿಸಿದ್ದರು. ಇದರ ಬೆನ್ನಲ್ಲೇ ಮಲ್ಲಪ್ಪ ಪೋಲಿಸರ ಅತಿಥಿಯಾಗಿದ್ದು, ಕೆಲ ಕಾಲ ಜೈಲಿನಲ್ಲೂ ಮುದ್ದೆ ಮುರಿದು ಬಂದಿದ್ದ. ಜೈಲು ಪಾಲಾಗಲೂತನ್ನ ಹೆಂಡತಿಯೇ ಕಾರಣ, ಆಕೆ ಆತನ ವಿರುದ್ಧ ಕೋರ್ಟ್ ನಲ್ಲಿ ಸಾಕ್ಷೀ ಹೇಳಿದ ಕಾರಣ ಮಲ್ಲಪ್ಪ ಬೇಲ್ ತೆಗೆದುಕೊಂಡು ಬಂದು ಇಂದು ಬೆಳಗಿನ ಜಾವ ಮನೆಯ ಮುಂದಿರುವ ದನದ ಕೊಟ್ಟಿಗೆ ಹತ್ತಿರ…
Read Moreಸಿದ್ದರಾಮಾನಂದ ಪುರಿ ಸ್ವಾಮೀಜಿಗೆ ಈಶ್ವರಪ್ಪ ಫೈರ್.. ವೇದಿಕೆಯಲ್ಲೇ ಸ್ವಾಮೀಜಿಗೆ ತರಾಟೆ..!
ಬಾಗಲಕೋಟೆ: ಯಾರದೋ ತ್ಯಾಗದಿಂದ ಬಂದಿರುವ ಸರ್ಕಾರದ ಫಲವನ್ನು ತಮ್ಮ ಜಾತಿಗೆ ಮೀಸಲಿಡಲು ಮುಂದಾಗುತ್ತಿದ್ದಾರೆ ಎಂಬ ತಿಂಥಿಣಿ ಶಾಖಾಮಠದ ಸಿದ್ದರಾಮಾನಂದ ಪುರಿ ಸಿಎಂ ವಿರುದ್ದ ಆರೋಪಿಸಿದರು. ಸ್ವಾಮೀಜಿ ಈ ಮಾತಿಗೆ ಆಕ್ರೋಶಗೊಂಡ ಸಚಿವ ಈಶ್ವರಪ್ಪ ಸ್ವಾಮೀಜಿ ಅವರನ್ನು ತರಾಟೆ ತೆಗೆದುಕೊಂಡ ಘಟ್ಟನೆ ಬಾಗಲಕೋಟೆ ನಗರದಲ್ಲಿ ನಡೆದ ಕುರುಬರ ಎಸ್ಟಿ ಮೀಸಲಾತಿ ಹೋರಾಟ ಸಮಾವೇಶದಲ್ಲಿ ನೆಡೆಯಿತು.ಸಮಾವೇಶದಲ್ಲಿ ಮಾತನಾಡಿದ ಸ್ವಾಮೀಜಿ,ನಮ್ಮ ಕುರುಬ ಜಾತಿಯ ಶಾಸಕರ ತ್ಯಾಗದಿಂದ ಯಡಿಯೂರಪ್ಪ ಸರ್ಕಾರ ಬಂದಿದೆ. ಇದರ ಫಲ ಇನ್ನೊಂದು ಸಮಾಜ ತೆಗೆದುಕೊಳ್ಳುತ್ತಿದೆ ಎಂದು ಪರೋಕ್ಷವಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಿರುವ ಸಿಎಂ ನಡೆಗೆ ಸ್ವಾಮೀಜಿ ಆಕ್ರೋಶ ಹೂರಹಾಕಿದರು. ವೇದಿಕೆಯಲ್ಲೇ ಸ್ವಾಮೀಜಿಗೆ ತರಾಟೆ ಸರ್ಕಾರ ಒಂದು ಜಾತಿ ಒಂದು ವರ್ಗ ಎನ್ನುವ ರೀತಿಯಲ್ಲಿ ನಡೆಯುತ್ತಿದೆ. ಯಾರದೋ ತ್ಯಾಗದಿಂದ ಬಂದಿರುವ ಸರ್ಕಾರದ ಫಲವನ್ನು ತಮ್ಮ ಜಾತಿಗೆ ಮೀಸಲಿಡಲು ಹೊರಟಿದ್ದಾರೆ.ಇದನ್ನು ರಾಜ್ಯ ಜನತೆ ಗಮನಿಸಬೇಕು.…
Read More