ಸಿಡಿಲು ಬಡಿದು ನಾಲ್ವರ ಸಾವು

ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿದ್ದಾರೆ.ಮೊದಲ ಘಟನೆಯಲ್ಲಿ ಮೃತರನ್ನು ಚೆನ್ನಾಪುರಿ ಮತ್ತು ವೀರಣ್ಣ ಎಂದು ಗುರುತಿಸಲಾಗಿದ್ದು, ಹೊಲಗಳಲ್ಲಿ ದನ ಮೇಯಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಮತ್ತೊಂದು ಘಟನೆಯಲ್ಲಿ, ಹರವಡಹಳ್ಳಿಯ ಜರ್ಮಹಳ್ಳಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಾಜಶೇಖರ್ ತಮ್ಮ ಕೃಷಿ ಜಮೀನಿನಿಂದ ಹಿಂದಿರುಗುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದು, ಆತನ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಮೂರನೇ ಘಟನೆಯಲ್ಲಿ, ಅಯ್ಯನಹಳ್ಳಿ ಗ್ರಾಮದ ಪತ್ರೆಪ್ಪ ತನ್ನ ಕಿರಾಣಿ ಅಂಗಡಿ ಬಾಗಿಲು ಮುಚ್ಚುತ್ತಿದ್ದಾಗ ಸಿಡಲು ಬಡಿದು ಸಾವನ್ನಪ್ಪಿದ್ದಾರೆ. ತಹಶೀಲ್ದಾರ್ ಮಹಾಬಲೇಶ್ವರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Read More

“ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ಇಲ್ಲೇ ಬಳಕೆಯಾಗ್ಬೇಕು”

ಆಕ್ಸಿಜನ್ ಸರಬರಾಜು ಬಗ್ಗೆ ಸಭೆ ನಡೆಸಿದ್ದೇವೆ. ಟಾಸ್ಕ್ ಫೋರ್ಸ್ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ರು. ಹಲವು ಸೂಚನೆ ನೀಡಲಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ನಮ್ಮಲ್ಲೇ ಬಳಕೆ ಆಗುವಂತೆ ಆಗಬೇಕು. ಈ ಬಗ್ಗೆ ಕೇಂದ್ರ ಸಚಿವ ಪಿಯೂಶ್ ಘೋಯಲ್ ಜೊತೆ ಮಾತುಕತೆ ಮಾಡಿದ್ದೇನೆ ಎಂದಿದ್ದಾರೆ.

Read More

ತೇಜಸ್ವಿ ಸೂರ್ಯ ಒಳ್ಳೆ ಕೆಲಸ ಮಾಡಿದ್ದಾರೆ

ತೇಜಸ್ವಿ ಸೂರ್ಯ ಒಳ್ಳೆ ಕೆಲಸ ಮಾಡಿದ್ದಾರೆ ಆಮ್ಲಜನಕ ಕೊರತೆಯಿಂದ ಇನ್ನು ಮುಂದೆ ಯಾವುದೇ ಸಾವು‌ ರಾಜ್ಯದಲ್ಲಿ ಸಂಭವಿಸದಂತೆ ನೋಡಿಕೊಳ್ಳಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಒತ್ತಾಯಿಸಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇವತ್ತು ಆಕ್ಸಿಜನ್ ಕೊರತೆಯಿಂದ ಬಹಳಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಈಗಾಗಲೇ 28 ಜನ ಚಾಮರಾಜನಗರದಲ್ಲಿ ಸತ್ತಿದ್ದಾರೆ. 3 ಜನ ಸತ್ತಿದ್ದಾರೆ ಎಂಬ ಸುಧಾಕರ್ ಹೇಳಿಕೆ ಶುದ್ಧ ಸುಳ್ಳು. ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ಬಗ್ಗೆ ಹೇಳಿದ್ದಾರೆ. ಇಟ್ಸ್ ಗುಡ್.‌ ಒಳ್ಳೇದೇ ಮಾಡಿದ್ದಾರೆ. ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದರು.

Read More

ಕೊರೊನಾ ಸೋಂಕಿತರ ವಿಡಿಯೋ ಫುಲ್ ವೈರಲ್ ..

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಆಕಾಶ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಇಷ್ಟು ದಿನ ಭಯದಿಂದಲೇ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರು, ಕೊರೊನಾ ವೈರಸ್ ಭೀತಿಯಿಂದ ಹೊರಬರಲು ಯೋಚಿಸಿ ಇಂದು ಆಸ್ಪತ್ರೆಯಲ್ಲಿ ದೊಡ್ಮನೆ ಹುಡುಗ ಚಿತ್ರದ ಯಾಕಾ ಹುಡುಗಿ ಮೈಯಾಗ ಹೆಂಗ್ ಹೈತಿ ಹಾಡಿಗೆ ಫುಲ್ ಎಂಜಾಯ್ ಮೂಡ್ ನಲ್ಲಿ ನೃತ್ಯ ಮಾಡಿ ಕುಣಿದು ಕುಪ್ಪಳಿಸಿದರು.

Read More

ಬೆಂಗಳೂರು ದಕ್ಷಿಣ ಮತ್ತು ಬೊಮ್ಮನಹಳ್ಳಿ ವಲಯಕ್ಕೆ ಅಂಬ್ಯುಲೆನ್ಸ್ ಹಸ್ತಾಂತರ

ಬೆಂಗಳೂರು ದಕ್ಷಿಣ ಮತ್ತು ಬೊಮ್ಮನಹಳ್ಳಿ ವಲಯಕ್ಕೆ 20 ಅಂಬ್ಯುಲೆನ್ಸ್ ಗಳನ್ನು ಶಿಕ್ಷಣ ಸಚಿವ ಮತ್ತು ಬೊಮ್ಮನಹಳ್ಳಿ ವಲಯ ಉಸ್ತುವಾರಿ ಸುರೇಶ್ ಕುಮಾರ್ ರವರು ಗೊಟ್ಟಿಗೆರೆ ಬಿಬಿಎಂಪಿ ಕಚೇರಿ ಬಳಿ 16 ವಾರ್ಡ್ ಗಳಿಗೆ ಹಸ್ತಾಂತರಿಸಿದರು. ಬಳಿಕ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳು ಮತ್ತು ಸ್ಥಳೀಯ ಕಾರ್ಪೋರೆಟರ್ ಗಳ ಜೊತೆ ಸಭೆ ನಡೆಸಿ ಕೊರೊನಾ ಹಾವಳಿ ತಡೆಗಟ್ಟುವ ಬಗ್ಗೆ ಚರ್ಚೆಯನ್ನು ನಡೆಸಿದರು.ಕೊರೊನಾ ತಡೆಗಟ್ಟುವಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು, ಕೊರೊನಾ ಸೋಂಕಿತರ ಚಿಕಿತ್ಸೆ, ಕ್ವಾರಂಟೈನ್, ಸೀಲ್ ಡೌನ್ ಮತ್ತು ಮೃತರ ಅಂತ್ಯ ಸಂಸ್ಕಾರ ವೇಳೆ ಯಾವುದೇ ಲೋಪದೋಷಗಳೂ ಉಂಟಾಗಬಾರದು. ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಾಗಲೀ, ಸರ್ಕಾರಿ ಆಸ್ಪತ್ರೆಗಳಲ್ಲಾಗಲೀ ಸೋಂಕಿತರಿಗೆ ಚಿಕಿತ್ಸೆಗೆ ತೊಂದರೆಯಾಗಬಾರದು,ಅಧಿಕಾರಿಗಳು ಇವೆಲ್ಲವನ್ನೂ ಗಮನಿಸುತ್ತಿರಬೇಕು ಎಂದು ಸಭೆಯಲ್ಲಿ ತಿಳಿಸಿದರು.

Read More

ಖಾಸಗಿ ಬಸ್ ರಸ್ತೆಗಿಳಿಯೋದು ಇನ್ನೂ ಅನುಮಾನ..

ತುಮಕೂರು:ಕೊರೊನಾ ವೈರಸ್‌ನಿಂದ ಲಾಕ್‌ಡೌನ್ ಆಗಿರುವ ಹಿನ್ನಲೆಯಲ್ಲಿ ಖಾಸಗಿ ಬಸ್ ಮಾಲೀಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲಿವೆ ಎಂದು ೧೪ ಜಿಲ್ಲೆಗಳ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರುಗಳು ತಿಳಿಸಿದ್ದಾರೆ. ನಗರಕ್ಕೆ ಸಮೀಪದ ಹಿರೇಹಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಾಸಗಿ ಬಸ ಮಾಲೀಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಬಿ.ಎಸ್. ಬಲಶಾಮಸಿಂಗ್,ನಮ್ಮ ಜಿಲ್ಲೆಯೂ ಸೇರಿದಂತೆ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಚಾಮರಾಜನಗರ ಸೇರಿದಂತೆ ೧೪ ಜಿಲ್ಲೆಗಳ ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರು ಸೇರಿ ಇಂದು ಸಭೆ ನಡೆಸಲಾಗಿದೆ.ಸಭೆಯಲ್ಲಿ ಒಮ್ಮತ ತೀರ್ಮಾನಕ್ಕೆ ಬಂದು ನಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಒಕ್ಕೊರಲ ಮನವಿ ಸಲ್ಲಿಸಲಾಗುವುದು ಎಂದರು. ಕೋವಿಡ್-೧೯ ನಿಂದ ಮಾ.೨೪ರಿಂದಲೇ ಸಾರಿಗೆ ಪ್ರಾಧಿಕಾರದ ಆದೇಶದಂತೆ ಖಾಸಗಿ ಬಸ್‌ಗಳನ್ನು ನಿಲ್ಲಿಸಲಾಗಿದೆ.…

Read More

ಗ್ರಾಮಸ್ಥರಿಗೆ ಕಿರುಕುಳ.. ಅರಣ್ಯ ಅಧಿಕಾರಿಗಳಿಗೆ ಡಿಕೆ ಸುರೇಶ್ ತರಾಟೆ..

ಆನೇಕಲ್(ಬೆಂ.ನಗರ): ತಮ್ಮನು ಕಾಪಾಡಬೇಕಾದ ಅಧಿಕಾರಿಗಳೆ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಈ ಕಾಡಂಚಿನ ಜನ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆಯೇ ಆರೋಪ ಮಾಡಿದ್ದಾರೆ. ಹೌದು,ನಾವು ಹೇಳೋಕೆ ಹೊರಟಿರೋದು ಬೆಂಗಳೂರಿನ ಹೊರವಲಯದ ಬನ್ನೇರುಘಟ್ಟದ ಬ್ಯಾಲಮರದದೊಡ್ಡಿ ಗ್ರಾಮಸ್ಥರ ಕುರಿತಾಗಿ.. ಈ ಗ್ರಾಮ ಬಹಳ ವರ್ಷಗಳ ಇತಿಹಾಸ ಹೊಂದಿದ್ದು,ಇತ್ತೀಚಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಗ್ರಾಮ ತಮ್ಮ ಇಲಾಖೆಗೆ ಸೇರಿಸಬೇಕು ಎಂದು ೨೦೦೬ರಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.ಈ ಕುರಿತು ಈಗಾಗಲೇ ವರುಷಗಳಿಂದ ಪ್ರಕರಣದ ವಾದ ವಿವಾದಗಳು ನಡೆಯುತ್ತಿದ್ದು ಇತ್ತೀಚೆಗೆ ಅರಣ್ಯ ಇಲಾಖೆಯವರು ಬಹಳ ಕಿರುಕುಳ ನೀಡುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಇನ್ನು ಹೊಲ ಹೂಳಲು ಹೋದ್ರೆ ಟ್ರಾಕ್ಟರ್ ಸೀಜ್ ಮಾಡುವುದು,ಸುಳ್ಳು ಪ್ರಕರಣಗಳು ದಾಖಲು ಮಾಡೋದು ಮಾಡ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು,ಎರಡು ದಿನಗಳ ಹಿಂದೆಯೂ ಸಹ ಅರಣ್ಯ ಅಧಿಕಾರಿಗಳಿಗೆ ಹಾಗು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಅದು ಪೋಲೀಸ್ ಠಾಣೆ ಮಟ್ಟಿಲೇರಿತ್ತು.…

Read More

ಆನೇಕಲ್‌ನಲ್ಲಿ ಮಹಿಳೆಗೆ ಕೊರೊನಾ ಶಂಕೆ?

ಆನೇಕಲ್(ಬೆ0.ನಗರ):ಬೆ0ಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದ ಮಹಿಳೆಯೊಬ್ಬರಿಗೆ ಕೊರೊನಾ ಇರುವ ಶಂಕೆ ವ್ಯಕ್ತವಾಗಿದೆ. ಅಂದ ಹಾಗೇ ಆನೇಕಲ್ ಪಟ್ಟಣದ ಚರ್ಚ್ ರಸ್ತೆ ಬಳಿ ಈ ಮಹಿಳೆ ವಾಸವಿದ್ದು, ನಿನ್ನೆ ಇದ್ದಕ್ಕಿದ್ದಂತೆ ವಾಂತಿ, ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೆಬ್ಬಾಳದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಇನ್ನು ಈ ಮಹಿಳೆ ಲಾಕ್ ಡೌನ್ ಆದ ಬಳಿಕ ಎಲ್ಲಿಯೂ ಓಡಾಡಿಲ್ಲ..ಆದ್ರು ಸಹ ಕೊರೊನಾ ಶಂಕೆ ಏಕೆ?ಎಂಬ ಪ್ರಶ್ನೆ ಅಧಿಕಾರಿಗಳನ್ನ ಕಾಡುತ್ತಿದೆ.ಜೊತೆಗೆ ಈಗ ಮಹಿಳೆಯ ಟ್ರಾವೆಲ್ ಹಿಸ್ಟರಿ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು, ಆನೇಕಲ್ ಪಟ್ಟಣದ ಜನತೆ ಕೊರೊನಾ ಆತಂಕದಲ್ಲಿದ್ದಾರೆ. ಸಿ.ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Read More

ಏನೋಲೇ…ಹಲ್ಲು ಬಂದಿದ್ದಾವಾ..ಅಮ್ಮ..ಅಕ್ಕಾ..ಅ0ತೆಲ್ಲಾ ಬೈತಿಯಂತೆ..ಬಾಲ ಕಟ್ ಮಾಡಬೇಕಾ..?

ಆನೇಕಲ್(ಬೆಂ.ನಗರ): ಏನೋಲೇ… ಹಲ್ಲು ಬಂದಿದ್ದಾವಾ..ಅಮ್ಮ..ಅಕ್ಕಾ..ಅ0ತೆಲ್ಲಾ ಬೈತಿಯಂತೆ..ಯಾಕೋ ಕೊಬ್ಬು ಹೆಚ್ಚಾಗಿದೆಯಾ..? ಕಡಿತೀನೀ..ಕೊಚ್ಚೀತ್ತೀನಿ ಅಂತೀಯ0ತೆ..ಜನಗಳೇನೂ ತರಕಾರಿನಾ..?ಯಾಕೋ..ಬಾಲ ಕಟ್ ಮಾಡಬೇಕಾ..? ಹೀಗೆ ಕರ್ನಾಟಕದ ಸಿಂಗ0 ಎಂದೇ ಖ್ಯಾತಿ ಪಡೆದಿರೋ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ರವಿ ಡಿ ಚೆನ್ನಣ್ಣನವರ್ ರೌಡಿಯೊಬ್ಬನಿಗೆ ಬೆವರಿಳಿಸಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಅಂದ ಹಾಗೇ ಇಂದು ಆನೇಕಲ್ ಪೊಲೀಸ್ ಠಾಣೆಯಲ್ಲಿ ರೌಡಿ ಪೆರೇಡ್ ನಡೆಸಲಾಯಿತು.ಈ ವೇಳೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ರವಿ ಡಿ ಚೆನ್ನಣ್ಣನವರ್ ಬಾಲ ಬಿಚ್ಚಿದ್ದ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ಠಾಣೆಗೆ ಕರೆಸಿದ್ದ ಪುಡಿ ರೌಡಿಗಳಿಗೆ ತಮ್ಮದೇ ಶೈಲಿಯಲ್ಲಿ ಬೆಂಡಿತ್ತಿದ ರವಿ ಡಿ ಚೆನ್ನಣ್ಣನವರ್, ಬಾಲ ಬಿಚ್ಚಿದರೆ ಬಾಲ ಕತ್ತರಿಸುತ್ತೇವೆ ಎಂದರಲ್ಲದೆ, ಜನಪ್ರತಿನಿಧಿಗಳಾಗಿ ಬೆದರಿಕೆ ಹಾಕಿದರೆ ಸುಮ್ಮನಿರಲ್ಲ. ನೆಲಮಂಗಲವೇ ಸೈಲೆಂಟ್ ಆಗಿರಬೇಕಾದರೆ ಆನೇಕಲ್‌ನಲ್ಲಿ ನೆಮ್ಮದಿ ಹಾಳು ಮಾಡುತ್ತಿದ್ದೀರಾ ಎಂದೆಲ್ಲಾ ತರಾಟೆಗೆ ತೆಗೆದುಕೊಂಡರು. ಜೊತೆಗೆ ಸೈಲೆಂಟ್ ಆಗದೇ ಹೋದರೆ ನಾವು ವೈಲೆಂಟ್ ಆಗಬೇಕಾಗುತ್ತದೆ.. ಇನ್ನು…

Read More

ಪ್ರಿಯತಮನಿಂದ ಮಚ್ಚಿನೇಟು ತಿಂದ ಪ್ರಿಯತಮೆ ಕೊನೆಗೂ ಬದುಕಿದಳು..

ಬೆಂಗಳೂರು: ತನ್ನ ಪ್ರೇಮಿಯಿಂದ ಮಚ್ಚಿನೇಟು ತಿಂದು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಪ್ರೇಯಸಿ ಕೊನೆಗು ಬದುಕುಳಿದಿದ್ದಾಳೆ.ಸದ್ಯ ಆಕೆ ಆರೋಗ್ಯ ಸ್ಥಿರವಾಗಿದ್ದು,ಸಾವಿನಿಂದ ಬಚಾವ್ ಆಗಿದ್ದಾಳೆ. ಸದ್ಯ ನಿತ್ಯಶ್ರೀ ಎಂಬಾಕೆಯೇ ಬದುಕುಳಿದ ಪ್ರೇಯಸಿ.ಆದರೆ ಈಕೆಗೆ ಮಚ್ಚಿನೇಟು ಕೊಟ್ಟ ಪ್ರೇಮಿ ಗಿರೀಶ್ ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ್ದಾನೆ. ಅಂದ ಹಾಗೇ ರಾಜ್ಯ ಮಟ್ಟದ ಕಬಡ್ಡಿ ಆಟಗಾರನಾಗಿದ್ದ ಗಿರೀಶ್, ಯುವತಿ ನಿತ್ಯಶ್ರೀಯನ್ನು ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ. ಇಬ್ಬರು ಕೂಡ ಮಂಡ್ಯದ ನಿವಾಸಿಗಳಾಗಿದ್ದು, ಐದಾರು ತಿಂಗಳ ಹಿಂದೆ ಇಬ್ಬರು ಮನೆಯವರ ಭಯಕ್ಕೆ ಹೆದರಿ ಓಡಿ ಹೋಗಿದ್ದರು. ಬಳಿಕ ನಿತ್ಯಶ್ರೀಗೆ ಗಿರೀಶ್‌ನೊಂದಿಗೆ ಮದುವೆ ಮಾಡಿಸುವುದಾಗಿ ನಂಬಿಸಿ, ಸಂಬAಧಿಕರೊಬ್ಬರು ವಾಪಸ್ ಕರೆಸಿದ್ದರು.ಆಗ ನಿತ್ಯಶ್ರೀಯನ್ನು ಮಂಡ್ಯದ ಬದಲು ಬೆಂಗಳೂರಿನ ಸಂಬAಧಿಕರ ಮನೆಯಲ್ಲಿರಿಸಿದ್ದರು.ಬಳಿಕ ಆಕೆಯ ಕುಟುಂಬಸ್ಥರು ಇಬ್ಬರನ್ನು ಬೇರೆ ಮಾಡಿದ್ದರು. ಬಳಿಕ ಪ್ರೇಯಸಿ ನಿತ್ಯಶ್ರೀಯ ಸಂಪರ್ಕವಿಲ್ಲದೇ ಹುಚ್ಚನಂತಾಗಿ ಕುಗ್ಗಿ ಹೋಗಿದ್ದ ಗಿರೀಶ್, ಒಂದು ತಿಂಗಳ ಹಿಂದೆಯೇ ಆತ್ಮಹತ್ಯೆ…

Read More