ಕನ್ನಡ ಸಾಹಿತ್ಯ ಪರಿಷತ್ತಿಗೆ 2021 ರಲ್ಲಿ ನಡೆಯಲಿರುವ ಕಸಪಾ ಚುನಾವಣೆ ಪ್ರಚಾರ..!

ಮಳವಳ್ಳಿ: ಕನ್ನಡ ಸಾಹಿತ್ಯ ಪರಿಷತ್ತಿಗೆ 2021 ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ವರ್ಧಿಸಲಿರುವ ಚನ್ನೇಗೌಡರು ಮಳವಳ್ಳಿ ಪಟ್ಟಣದ ವಿಶ್ವ ಮಾನವ ವಿಚಾರ ವೇದಿಕೆ ಕಚೇರಿಗೆ ಇಂದು ಭೇಟಿ ನೀಡಿದರು. ಇದೇ ವೇಳೆ ಚನ್ನೇಗೌಡರವರು ಮಾತನಾಡಿ, ಕಸಪಾದಲ್ಲಿ ಮತ್ತಷ್ಟು ಸುಧಾರಣೆಯಾಗಬೇಕಾಗಿದೆ. ಕನ್ನಡ ಪರ ಸಂಘಟನೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಗೆ ಸೇರಿಸಿಕೊಂಡು ಕನ್ನಡ ಪರ ಹೋರಾಟ ಮಾಡಬೇಕಾಗಿದೆ. ಇದಲ್ಲದೆ ಕನ್ನಡವನ್ನು ಉಳಿಸಬೇಕಾಗಿದೆ ಎಂದರು. ಇನ್ನೂ ಯುವ ಬರಹಗಾರರಗಳನ್ನು ಹೊರತರುವ ಕೆಲಸವನ್ನು ಕಸಪಾ ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ನಿಲುವುಗಳನ್ನು ಮುಂದೆ ಇಟ್ಟುಕೊಂಡು ನಾನು ಚುನಾವಣೆಯಲ್ಲಿ ಸ್ವರ್ಧಿಸುತ್ತಿದ್ದೇನೆ ಎಂದರು. ಈ ಭಾರಿ ನನ್ನನ್ನು ಆಯ್ಕೆ ಮಾಡಲು ನಿಮ್ಮ ಸಹಕಾರ ಬೇಕು. ಇದಲ್ಲದೆ ನಾನು ಸಹ ಮಂಡ್ಯ ಜಿಲ್ಲೆಯವನು ಕಸಪಾ ಪ್ರಗತಿಗೆ ನಾವೆಲ್ಲರೂ ಒಟ್ಟಾಗಿ ಅಭಿವೃದ್ಧಿ ಪಡಿಸೋಣ ಎಂದರು.ಇನ್ನೂ ಈ ಕಾರ್ಯಕ್ರಮದಲ್ಲಿ ವಿಶ್ವಮಾನವ ವಿಚಾರ ವೇದಿಕೆ ಅಧ್ಯಕ್ಷ ಮ.ಸಿ ನಾರಾಯಣ, ಪ್ರಧಾನ…

Read More

ಬಿಜೆಪಿ ಅಧ್ಯಕ್ಷ ನಂಜುಂಡೇಗೌಡರ ವಿರುದ್ಧ ಗುಡುಗಿದ ರೈತ ಸಂಘದ ಅಧ್ಯಕ್ಷ ಎನ್ಎಲ್ ಭರತ್ ರಾಜ್..!

ಮಳವಳ್ಳಿ: ತನ್ನನ್ನು ತಾನು ಬಿಜೆಪಿಗೆ ಮಾರಿಕೊಂಡಿರುವ ನಂಜುಂಡೇಗೌಡರು ರೈತರ ಬಗ್ಗೆ ಮಾತನಾಡುವ ಯಾವ ನೈತಿಕತೆಯನ್ನೂ ಉಳಿಸಿಕೊಂಡಿಲ್ಲ ಹಾಗೂ ರೈತರ ಪ್ರತಿನಿಧಿಯಾಗಲು ಯೋಗ್ಯತೆ ಇಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ಎಲ್ ಭರತ್ ರಾಜ್ ಆರೋಪಿಸಿದ್ದಾರೆ. ಮಳವಳ್ಳಿಯ ಪ್ರಾಂತ ರೈತ ಸಂಘದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಚಾರಿತ್ರಿಕ ವಾದದ್ದು, ಸ್ವಾತಂತ್ರ್ಯ ಚಳುವಳಿಯ ನಂತರದ ಧೀರೋದ್ಧಾತ ಹಾಗೂ ಐತಿಹಾಸಿಕವಾದ ಚಳುವಳಿಯನ್ನು ದಲ್ಲಾಳಿಗಳ ಹೋರಾಟ ಎಂದು ನಂಜುಂಡೇಗೌಡರು ಕರೆದಿರುವುದು ಅವರು ಬಿಜೆಪಿ ಗುಲಾಮರಾಗಿರುವುದಕ್ಕೆ ಸಾಕ್ಷಿಯಾಗಿದೆ. ರೈತ ಸಂಘಟನೆಯ ಮೂಲಕ ಬೆಳೆದು ಬಂದು ತನ್ನ ಬೆಳೆಸಿದ ರೈತ ಕುಲಕ್ಕೆ ವಿಷ ಉಣಿಸುತ್ತಿದ್ದಾರೆ, ಅವರ ನೆಚ್ಚಿನ ನಾಯಕ ನರೇಂದ್ರ ಮೋದಿ ಅದಾನಿಯ, ಅಂಬಾನಿಯ ಗುಲಾಮನಾಗಿ ರೈತ ವಿರೋಧಿ ವಿದ್ಯುತ್ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯಿದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಯಾವ…

Read More

ಕುವೆಂಪು ದಿನಾಚರಣೆ ಹಾಗೂ ದಿನಶೀರ್ಷಿಕೆ ಬಿಡುಗಡೆ..!

ಮಳವಳ್ಳಿ: ವಿಶ್ವ ಮಾನವ ವಿಚಾರ ವೇದಿಕೆ ವತಿಯಿಂದ ಕುವೆಂಪುರವರ 116 ನೇ ವರ್ಷ ಜನ್ಮ ದಿನಾಚರಣೆ ಹಾಗೂ ದಿನ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮವನ್ನು ಮಳವಳ್ಳಿ ಪಟ್ಟಣದ ವಿಶ್ವ ಮಾನವ ವಿಚಾರ ವೇದಿಕೆ ಕಚೇರಿಯ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಪುರಸಭಾಧ್ಯಕ್ಷೆ ರಾಧ ನಾಗರಾಜುರವರು ಉದ್ಘಾಟಿಸಿದರು.ಇದೇ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿರವರು ಮಾತನಾಡಿ ವಿಚಾರವಂತರ ನಡುವೆ ನಾವೆಲ್ಲ ಇದ್ದೇವೆ ಎನ್ನುವುದೇ ಸಮಾದಾನದ ಸಂಗತಿ,ವಿಚಾರವಂತರಿಗೆ ತೊಂದರೆ ತಪ್ಪಿದ್ದಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ಇನ್ನೂ ಇದೇ ವೇಳೆ ಹಂದಿನಾಗಣ್ಣ, ಸಿಐಟಿಯು ರಾಜ್ಯ ಕಾರ್ಯದರ್ಶಿ ಜಿ.ರಾಮಕೃಷ್ಣ, ಹಿರಿಯ ರಂಗಕಲಾವಿದ ಪುಟ್ಟಸ್ವಾಮಾಚಾರ್ಯ,ಜಯರಾಜು ರವರನ್ನು ಸನ್ಮಾನಿಸಲಾಯಿತು. ಇನ್ನೂ ಕಾರ್ಯಕ್ರಮದಲ್ಲಿ ವಿಶ್ವ ಮಾನವ ವಿಚಾರ ವೇದಿಕೆ ಅಧ್ಯಕ್ಷ ಮ.ಸಿ ನಾರಾಯಣ, ಪ್ರಧಾನ ಕಾರ್ಯದರ್ಶಿ ನಾಗೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪುಟ್ಟಸ್ವಾಮಿ, ನಾಗರಾಜು, ವಿಶ್ವಗುರು ಸೊಸೈಟಿ ಅಧ್ಯಕ್ಷ ಕೃಷ್ಣಶೆಟ್ಟಿ, ಭರತ್ ರಾಜ್ ಸೇರಿದಂತೆ ಮತ್ತಿತ್ತರರು ಇದ್ದರು. ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್…

Read More

630 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ- ಶಾಸಕ ಡಾ.ಕೆ ಅನ್ನದಾನಿ ಅವರಿಂದ ಗುದ್ದಲಿ ಪೂಜೆ..!

ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಅಲದಹಳ್ಳಿ,ಕಂಸಾಗರ, ಚನ್ನೀಪುರ ಹುಲ್ಲೇಗಾಲ, ಹೂವಿನಕೊಪ್ಪಲು ಗ್ರಾಮಗಳಲ್ಲಿ ಶಾಸಕ ಡಾ.ಕೆ ಅನ್ನದಾನಿ ರವರು 630 ಲಕ್ಷ ರೂ ವೆಚ್ಚದ ರಸ್ತೆಯ ಗುದ್ದಲಿ ಪೂಜೆ ನೇರವೇರಿಸಿದರು.ಎನ್ ಹೆಚ್ 209 ನಿಂದಾಗಿ ಅಟುವನಹಳ್ಳಿ, ಕಂಸಾಗರ, ಲಿಂಗಣಾಪುರದ ಮಾರ್ಗವಾಗಿ ಚಂದಹಳ್ಳಿಗೆ ಸೇರುವ ರಸ್ತೆ, 278 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿ ಇದಲ್ಲದೆ ಚನ್ನೀಪುರ ಮಾರ್ಗವಾಗಿ ದಡಮಹಳ್ಳಿಗೆ ಸೇರುವ ರಸ್ತೆ, 332 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿ,ಇದಲ್ಲದೆ ಹೂವಿನಕೊಪ್ಪಲು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲೋನಿಗೆ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ನೇರಿಸಿದರು. ಇನ್ನೂ ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ರವಿ, ಚಂದಹಳ್ಳಿ ಶ್ರೀಧರ್ ಸೇರಿದಂತೆ ಮತ್ತಿತ್ತರರು ಇದ್ದರು ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Read More

ಭತ್ತ ವೈವಿದ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಕೆವಿ ವೆಂಕಟೇಶ್ ಭೇಟಿ..!

ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಭತ್ತ ವೈವಿದ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಕೆವಿ ವೆಂಕಟೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಿರುಗಾವಲು ಗ್ರಾಮದಲ್ಲಿರುವ ಸೈಯದ್ ಘನಿಖಾನ್ ರವರು 1350 ದೇಶಿ ಹಾಗೂ ವಿದೇಶಿ ಭತ್ತತಳಿ ಬೆಳೆದಿದ್ದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ವಿ ವೆಂಕಟೇಶ್ ರವರು ಭೇಟಿ ಸೈಯದ್ ಘನಿ ಖಾನ್ ರವರಿಂದ ಹಾಗೂ ಅವರ ಪುತ್ರ ಸೈಯದ್ ಮಹಮದ್ ಪುಟ್ಟ ಬಾಲಕನಿಂದ ಮಾಹಿತಿ ಪಡೆದುಕೊಂಡರು. ಇದಲ್ಲದೆ ಅವರು ಬೆಳೆದ ಜಮೀನಿಗಳಿಗೆ ಬೇಟಿ ನೀಡಿದರು. ಬಳಿಕ ವಾಹಿನಿಯೊಂದಿಗೆ ಜಿಲ್ಲಾಧಿಕಾರಿ ಡಾ.ಕೆ ವಿ ವೆಂಕಟೇಶ್ ಮಾತನಾಡಿ, ಘನಿ ಖಾನ್ ರವರು ಭತ್ತತಳಿ ಸಂರಕ್ಷಣೆ ಮಾಡುವಲ್ಲಿ ಗಣನೀಯ ಸಾಧನೆ ಮಾಡಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಇನ್ನೂ ಈ ಕುಟುಂಬವೇ ಭತ್ತದ ತಳಿ ಸಂರಕ್ಷಣೆ ಮಾಡಲು ಪಣ ತೊಟ್ಟಿದ್ದಾರೆ, ಇವರ ರೀತಿ ಪ್ರತಿಯೊಬ್ಬ ರೈತರು ಮಾಡುವಂತೆ ಕರೆ ನೀಡಿದರು. ಇನ್ನೂ ಈ ಸಂದರ್ಭದಲ್ಲಿ…

Read More

ಗ್ರಾಮ ಪಂಚಾಯಿತಿಯಲ್ಲಿ ಚುನಾಯಿತ 19 ಮಂದಿ ಸದಸ್ಯರು ಒಗ್ಗಟ್ಟಾಗಿ ಇರುತ್ತಾರೆ- ಸಿಪಿಐಎಂ ಮುಖಂಡ ಕೃಷ್ಣೇಗೌಡ..!

ಮಳವಳ್ಳಿ: ಭ್ರಷ್ಟಾಚಾರ ವಿರುದ್ದ ಹೋರಾಟಕ್ಕೆ ಗ್ರಾಮ ಪಂಚಾಯಿತಿಯ ಸಮಗ್ರ ಅಭಿವೃದ್ಧಿಯ ಬಗ್ಗೆ ನೀಡಿರುವ ಭರವಸೆಗೆ ತಳಗವಾದಿ ಗ್ರಾಮ ಪಂಚಾಯಿತಿಯಲ್ಲಿ ಚುನಾಯಿತ 19 ಮಂದಿ ಸದಸ್ಯರು ಒಗ್ಗಟ್ಟಾಗಿ ಇರುತ್ತಾರೆ ಎಂದು ಸಿಪಿಐಎಂ ಮುಖಂಡ ಕೃಷ್ಣೇಗೌಡ ತಿಳಿಸಿದರು.ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈಗ ಗೆದ್ದಿರುವ ಎಲ್ಲಾ 19 ಮಂದಿ ಗ್ರಾಮ ಪಂಚಾಯಿತಿ ಸದಸ್ಯರುಗಳು ವಿವಿದ ಪಕ್ಷದಲ್ಲಿದ್ದರೂ ಸಹ ಎಲ್ಲರೂ ಒಟ್ಟಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಪಡಿಸಲು ಚುನಾವಣೆ ಸಂಧರ್ಭದಲ್ಲಿ ಸಿಂಡಿಕೇಟ್ ಮಾಡಿಕೊಂಡು ಸ್ವರ್ಧಿಸಿದ್ದೆವು. ನಾವು ಗ್ರಾಮಪಂಚಾಯಿತಿ ವಿಷಯದಲ್ಲಿ ಮಾತ್ರ ಸಿಂಡಿಕೇಟ್ ಆಗಿಯೇ ಇದ್ದು ,ಪಕ್ಷಾತೀತವಾಗಿ ಭ್ರಷ್ಟಾಚಾರ ವಿರುದ್ದ ಹಾಗೂ ಗ್ರಾಮಪಂಚಾಯಿತಿ ಅಭಿವೃದ್ಧಿಗಾಗಿ ಒಟ್ಟಾಗಿ ಇರುತ್ತೇವೆ ಎಂದರು. ಯಾವುದೇ ಕಾರಣಕ್ಕೂ ನಾವು ಗ್ರಾಮ ಪಂಚಾಯಿತಿ ವಿಚಾರದಲ್ಲಿ ಪಕ್ಷ ಅಂತ ಗುರುತಿಸುವುದಿಲ್ಲ, ಎಂದು ಸ್ವಷ್ಟನೆ ನೀಡಿದರು.ಇನ್ನೂ ಸುದ್ದಿಗೋಷ್ಠಿಯಲ್ಲಿ ಕೃಷಿಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಮಾಧು, ಜೆಡಿಎಸ್ ಹಿರಿಯ ಮುಖಂಡ…

Read More

ಗ್ರಾಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯಾಗಿ ಮಾಡಬೇಕು- ಕೋರೇಗಾಲ ನಾಗೇಂದ್ರ..!

ಮಳವಳ್ಳಿ: ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರವನ್ನು ಜೆಡಿಎಸ್ ಬೆಂಬಲಿತರು ಹಿಡಿಯಲಿದ್ದು ಗ್ರಾಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯನ್ನಾಗಿ ಮಾಡುವುದಾಗಿ ನೂತನ ಗ್ರಾಮ ಪಂಚಾಯಿತಿ ಸದಸ್ಯ ಕೋರೇಗಾಲ ನಾಗೇಂದ್ರ ತಿಳಿಸಿದರು. ಇನ್ನೂ ಗ್ರಾಮ ಪಂಚಾಯಿತಿಯಲ್ಲಿ ಪ್ರಮಾಣ ಪತ್ರ ಸ್ವೀಕರಿಸಿದ ಬಳಿಕ ಮಾತನಾಡಿ ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 13 ಸ್ಥಾನವಿದ್ದು ಅದರಲ್ಲಿ 10 ಮಂದಿ ಜೆಡಿಎಸ್ ಬೆಂಬಲಿತರು ಜಯಗಳಿಸಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ನಿಂತು ಮಾದರಿ ಗ್ರಾಮ ಪಂಚಾಯಿತಿ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕೋರೇಗಾಲ ನಾಗೇಂದ್ರ, ಚೈತ ಅಶ್ವಿನಿ, ಮಾಗನೂರು ಹೇಮಾವತಿ ವಸಂತ ಕುಮಾರ್, ಅವಿರೋಧ, ಚನ್ನಬಸವಣ್ಣ, ಬಸವನಪುರ ನಾಗರಾಜು, ಶೆಟ್ಟಿಹಳ್ಳಿ ಮನು ಸೇರಿದಂತೆ ಬಸವನಪುರ ಕರಿಯಪ್ಪ ಮತ್ತಿತ್ತರರು ಭಾಗಿಯಾಗಿದ್ದರು. ವರದಿ- ಎ.ಎನ್ ಲೋಕೇಶ್ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Read More

ಗ್ರಾಮ ಪಂಚಾಯಿತಿ ವಿಜೇತರಿಗೆ ಅಭಿನಂದನೆ- ಡಾ.ಯಮದೂರು ಸಿದ್ದರಾಜು..!

ಮಳವಳ್ಳಿ : ಮಳವಳ್ಳಿ ಪಟ್ಟಣದ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಡಾ.ಯಮದೂರು ಸಿದ್ದರಾಜು ರವರ ನಿವಾಸದಲ್ಲಿ ಬಿಜೆಪಿ ಬೆಂಬಲಿತರಾದ ವೈಪಿ ಶಿವಸ್ವಾಮಿ ವಿಜಯ ಶಾಲಿಯಾಗಿದ್ದ ಹಿನ್ನಲೆಯಲ್ಲಿ ಡಾ.ಯಮದೂರು ಸಿದ್ದರಾಜು ರವರು ಅಭಿನಂದಿಸಿದರು. ಬಳಿಕ ಡಾ.ಯಮದೂರು ಸಿದ್ದರಾಜು ಮಾತನಾಡಿ, ದೇಶದಲ್ಲಿರುವ ಪ್ರದಾನಿ ಮೋದಿ ಹಾಗೂ ರಾಜ್ಯದ ಮುಖ್ಯ ಮಂತ್ರಿ ಯಡಿಯೂರಪ್ಪ ರವರು ಆಡಳಿತವನ್ನು ಮೆಚ್ಚಿ ಗ್ರಾಮ ಪಂಚಾಯಿತಿಯಲ್ಲೂ ಸಹ ಬಿಜೆಪಿ ಅಭ್ಯರ್ಥಿ ಗಳನ್ನು ಗೆಲ್ಲಿಸಲು ಜನರು ಉತ್ಸಾಹ ತೋರುತ್ತಿದ್ದಾರೆ ಎಂದರು. ಇನ್ನೂ ಗ್ರಾಮಪಂಚಾಯಿತಿ ಅಭಿವೃದ್ಧಿ ಯ ನಿಟ್ಟಿನಲ್ಲಿ ಶಿವಸ್ವಾಮಿ ಮಾಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಬಿಜೆಪಿ ಮುಖಂಡ ಅಪ್ಪಾಜಿಗೌಡರು, ಮಂಜುನಾಥ ಯಮದೂರು, ಚಿನ್ನಸ್ವಾಮಿ, ನಾಗರಾಜು , ವಕೀಲ ಮುತ್ತರಾಜು, ರುದ್ರ, ತಿಮ್ಮಯ್ಯ, ಸೇರಿದಂತೆ ಮತ್ತಿತ್ತರರು ಇದ್ದರು. ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Read More

ಪಿಎಫ್ ಐ ಸಂಘಟನೆಯನ್ನು ನಿಷೇಧ ಮಾಡಬೇಕು- ಬಿಜೆಪಿ ಘಟಕದ ಅಧ್ಯಕ್ಷ ಎಂ.ಎನ್ ಕೃಷ್ಣ..!

ಮಳವಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರವರ ಮಂಗಳೂರು ಕಚೇರಿ ಮೇಲೆ ಪಿ ಎಫ್ ಐ ಸಂಘಟನೆ ದಾಳಿಯನ್ನು ಖಂಡಿಸಿ ಮಳವಳ್ಳಿ ತಾಲ್ಲೂಕು ಬಿಜೆಪಿ ಘಟಕದಲ್ಲಿ ತಾಲ್ಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಜೊತೆಗೆ ಮಳವಳ್ಳಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಂ.ಎನ್ ಕೃಷ್ಣ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ತಹಸೀಲ್ದಾರ್ ಚಂದ್ರಮೌಳಿ ರವರಿಗೆ ಪಿಎಫ್ ಐ ಸಂಘಟನೆ ಯನ್ನು ನಿಷೇದ ಮಾಡಬೇಕು, ದೇಶ ದ್ರೋಹಿ ಚಟುವಟಿಕೆ, ಭಯೋತ್ಪಾದಕ ಚಟುವಟಿಕೆ ಗಳಲ್ಲಿ ಭಾಗವಹಿಸುತ್ತಿದೆ . ರಾಜ್ಯದಲ್ಲಿ ಇಂತಹ ಸಂಘಟನೆಯನ್ನು ನಿಷೇದ ಮಾಡಬೇಕೆಂದು ಒತ್ತಾಯಿಸಿದರು.ಇನ್ನೂ ಈ ಸಂದರ್ಭದಲ್ಲಿ ಜಿಲ್ಲಾ ವಕ್ತಾರ ಚಿಕ್ಕಣ್ಣ, ಜಿಲ್ಲಾ ಪ್ರದಾನಕಾರ್ಯದರ್ಶಿ ಹೆಬ್ಬಣಿ ಬಸವರಾಜು,ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ದೇವರಾಜು, ತಾಲ್ಲೂಕು ಪ್ರದಾನ ಕಾರ್ಯದರ್ಶಿ ಕೆ.ಸಿ ನಾಗೇಗೌಡ, ಅಶೋಕಕ್ಯಾತನಹಳ್ಳಿ, ಕಾಂತರಾಜು ಸೇರಿದಂತೆ ಅನೇಕರು ಇದ್ದರು. ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Read More

ಪ್ರತಿಭಾ ಪುರಸ್ಕಾರ ಪ್ರಶಸ್ತಿ ಹಾಗೂ ಕ್ಯಾಲೆಂಡರ್ ಬಿಡುಗಡೆ…!

ಮಳವಳ್ಳಿ: ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ವತಿಯಿಂದ ಸದಸ್ಯರ ಮಕ್ಕಳ ಪ್ರತಿಭಾ ಪುರಸ್ಕಾರ ಪ್ರಶಸ್ತಿ ಸಮಾರಂಭ ಹಾಗೂ ಕ್ಯಾಲೆಂಡರ್ ಬಿಡುಗಡೆ ಸಮಾರಂಭವನ್ನು ಮಳವಳ್ಳಿ ಪಟ್ಟಣದ ಕೋಟೆ ಬೀದಿಯಲ್ಲಿರುವ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಎಸ್ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ 15 ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಸಮಾರಂಭದ ದಿವ್ಯ ಸಾನಿದ್ಯವನ್ನು ಡಿ.ಹಲಸಹಳ್ಳಿ ಗವಿಮಠದ ಷಡಕ್ಷರಿ ಸ್ಬಾಮಿಜೀ ವಹಿಸಿ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಇನ್ನೂ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಜಶೇಖರ್ ವಹಿಸಿದ್ದು, ಇನ್ನೂ ಈ ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳಾದ ಮಾಜಿ ಉಪಾಧ್ಯಕ್ಷ ಕುಂದೂರು ಜಗದೀಶ್, ಆನಂದ್, ಸುಗುಣ ರಮೇಶ್, ಚನ್ನಪ್ಪ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎ.ಬಿ ನಾಗರಾಜು, ಸೇರಿದಂತೆ ಮತ್ತಿತ್ತರರು ಉಪಸ್ಥೀತರಿದ್ದರು. ವರದಿ-ಎ.ಎನ್…

Read More