ಮಳವಳ್ಳಿ: ಮಳವಳ್ಳಿ ಪಟ್ಟಣದ ಹೊರವಲಯದ ರಾಗಿಬೊಮ್ಮನಹಳ್ಳಿ ಬಳಿರುವ ತಾ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ, ವಿಶ್ವಾಸ್ ಮನೆಯ ಆವರಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸದಸ್ಯರನ್ನು ಅಭಿನಂದಿಸಿ ಮಾತನಾಡಿದ ಮಾಜಿ ಸಚಿವ ನರೇಂದ್ರಸ್ವಾಮಿ ನನ್ನ ಚುನಾವಣೆಯಲ್ಲಿ ಹಾಗೂ ಈ ಚುನಾವಣೆಯಲ್ಲಿ ಬೆನ್ನಿಗೆ ಚೂರಿ ಹಾಕಿರುವವರ ಬಣ್ಣ ಮಳವಳ್ಳಿ ಜನರ ಮುಂದೆ ಬಯಲಾಗಿದೆ. ಎಂದು ಮಾರ್ಮಿಕವಾಗಿ ನುಡಿದರು. ಎ.ಪಿಎಂಎಸ್ ಚುನಾವಣೆ ಹಾಗೂ ತಾ.ಪಂ ಚುನಾವಣೆಯಲ್ಲಿ ಜೆಡಿಎಸ್ ನಲ್ಲಿದ್ದ ಹನುಮಂತ, ಹಾಗೂ ತಾ.ಪಂ ಸದಸ್ಯೆ ಶಿಲ್ಪಮಹೇಶ್ ರವರು ನಮ್ಮ ಕಾಂಗ್ರೇಸ್ ಪರ ನಿಂತಿರುವುದಕ್ಕೆ ಅಭಿನಂದಿಸುತ್ತೇನೆ.ಇನ್ನೂ ಕಳೆದ ಎರಡು ಚುನಾವಣೆಯಲ್ಲಿ ಕಾಣದ ಕೈ ಸಹಾಯದಿಂದ ನಮ್ಮ ಪರ ನಿಂತಿದೆ. ಜೆಡಿಎಸ್ ಪಕ್ಷದ ನಾಯಕರ ಹೆಸರು ಹೇಳದೆ ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದರು.ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಅಭಿವೃದ್ಧಿ ಪರ ಇದ್ದೇವೆ ಎಂದು ಜನರಿಗೆ ಗೊತ್ತಾಗುವಂತೆ ಮಾಡುವಂತೆ ಕಾರ್ಯಕರ್ತರಿಗೆ ಮಾಜಿ…
Read MoreCategory: ಮದ್ದೂರು
ಮಹಾತ್ಮ ಗಾಂಧೀಜಿ ಸತ್ಯ,ಅಹಿಂಸೆ ತತ್ವ ಅಳವಡಿಸಿಕೊಂಡಿರುವ ಮಹಾನ್ ವ್ಯಕ್ತಿ- ಚಂದ್ರಮೌಳಿ..!
ಮಳವಳ್ಳಿ: ತಾಲ್ಲೂಕು ಆಡಳಿತ ವತಿಯಿಂದ 151 ನೇ ಗಾಂಧಿಜಯಂತಿ ಕಾರ್ಯಕ್ರಮ ಮಳವಳ್ಳಿ ಪಟ್ಟಣದ ಮಿನಿ ವಿಧಾನಸೌಧದ ಸಂಕೀರ್ಣ ಕಟ್ಟಡದಲ್ಲಿ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚಂದ್ರಮೌಳಿರವರು ಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ವಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಬಳಿಕ ತಹಸೀಲ್ದಾರ್ ಚಂದ್ರಮೌಳಿ ಮಾತನಾಡಿ. ಸತ್ಯ, ಅಹಿಂಸೆ, ಎಂಬ ತತ್ವವನ್ನು ಆಳವಡಿಸಿಕೊಂಡ ಮಹಾನ್ ವ್ಯಕ್ತಿ ಮಹಾತ್ಮ ಗಾಂಧಿರವರು, ಇವರು, ಸ್ವಚ್ಚತೆ ಬಗ್ಗೆ ಸಾಕಷ್ಟು ಕನಸು ಕಂಡು, ಗ್ರಾಮ ಸ್ವರಾಜ್ಯದ ಕನಸು ಕಂಡವರು ಗಾಂಧಿಜೀ ಅವರ ತತ್ವವನ್ನು ನಾವೆಲ್ಲರೂ ಆಳವಡಿಸಿಕೊಳ್ಳಬೇಕು ಎಂದರು.ಇನ್ನೂ ಇದೇ ವೇಳೆ ತಾಲ್ಲೂಕು ಕಚೇರಿಯ ಆವರಣವನ್ನು ಸ್ವಚ್ಚಗೊಳಿಸುವ ಕಾರ್ಯಕ್ರಮವನ್ನು ತಹಸೀಲ್ದಾರ್ ಚಂದ್ರಮೌಳಿ ಸೇರಿದಂತೆ ತಾಲ್ಲೂಕು ಕಚೇರಿಯ ಸಿಬ್ಬಂದಿಗಳು ಹಮ್ಮಿಕೊಂಡಿದ್ದರು.ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ್ ಚನ್ನವೀರಭದ್ರಯ್ಯ, ಜಯಶೇಖರ,ದಿವಾಕರ, ಪ್ರಕಾಶ, ರಾಮಣ್ಣ ಸೇರಿದಂತೆ ಮತ್ತಿತ್ತರರು ಇದ್ದರು. ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ
Read Moreಗಾಂಧಿ ಜಯಂತಿ ಅಂಗವಾಗಿ ಪೌರಕಾರ್ಮಿಕರಿಗೆ ಜಯಕರ್ನಾಟಕ ಸಂಘಟನೆವತಿಯಿಂದ ಸನ್ಮಾನ..!
ಮಳವಳ್ಳಿ: ಜಯಕರ್ನಾಟಕ ಸಂಘಟನೆವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಸಂಘಟನೆ ಸೇರ್ಪಡೆ ಕಾರ್ಯಕ್ರಮವನ್ನು ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು. ಮಳವಳ್ಳಿ ಪಟ್ಟಣದ ಅನಂತಾರಾಮ್ ವೃತ್ತದಲ್ಲಿ ಜಯಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಉಪತಹಸೀಲ್ದಾರ್ ವಿ .ನಟರಾಜು, ಹರ್ಷಿತ್, ಲಿಖಿತ್ ,ಅಪ್ಪು,ಮುನ್ನರವರು ರಾಜ್ಯಾಧ್ಯಕ್ಷ ಬಿ.ಎನ್ ಜಗದೀಶ್. ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರಯ್ಯ ಸಮ್ಮುಖದಲ್ಲಿ ಜಯಕರ್ನಾಟಕ ಸಂಘಟನೆ ಸೇರ್ಪಡೆಯಾದರು. ಬಳಿಕ ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಬಿ.ಎನ್ ಜಗದೀಶ್ ಮಾತನಾಡಿ, ಗಾಂಧಿಜೀರವರನ್ನು ಒಂದು ದಿನ ನೆನಪು ಮಾಡಿಕೊಂಡರೆ ಸಾಲದು ಪ್ರತಿನಿತ್ಯ ನೆನಪು ಮಾಡಿಕೊಳ್ಳುವ ಜೊತೆಗೆ ಅವರ ತತ್ವವನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಭೂ ಸುಧಾರಣೆ ಕಾಯ್ದೆ ಸೇರಿದಂತೆ ಇನ್ನಿತರ ಕಾಯ್ದೆ ಜಾರಿಗೆ ತಂದಿದ್ದ ಬಗ್ಗೆ ನಮ್ಮ ಸಂಘಟನೆಯೂ ಹೋರಾಟಕ್ಕೆ ಇಳಿದಿದೆ ಎಂದರು. ಕಾರ್ಯಕ್ರಮದಲ್ಲಿ ಜಯಕರ್ನಾಟಕ ಜಿಲ್ಲಾ ಉಪಾಧ್ಯಕ್ಷ ನಾಗೇಶ್,…
Read Moreಬಿಜೆಪಿ ಪಕ್ಷ ದಲಿತರ ವಿರೋಧಿ ಎಂಬುವುದು ಶುದ್ಧ ಸುಳ್ಳು- ಎಂ.ಎನ್ ಕೃಷ್ಣ..!
ಮಳವಳ್ಳಿ: ಬಿಜೆಪಿ ಪಕ್ಷ ದಲಿತರ ವಿರೋಧಿ ಎಂಬ ಅಪಪ್ರಚಾರ ಮಾಡುತ್ತಿದ್ದು. ದಲಿತರಿಗೆ ಪ್ರಾಮುಖ್ಯತೆ ನೀಡದಷ್ಟು ಬೇರೆ ಯಾವ ಪಕ್ಷದಲ್ಲೂ ನೀಡಿಲ್ಲ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಎನ್ ಕೃಷ್ಣ ತಿಳಿಸಿದರು. ಮಳವಳ್ಳಿ ಪಟ್ಟಣದ ಭಾರತೀ ಜನತಾಪಾರ್ಟಿ ಕಚೇರಿಯಲ್ಲಿ ಬಿಜೆಪಿ ತಾಲ್ಲೂಕು ಎಸ್ ಸಿ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ದಲಿತರ ಸಮುದಾಯದವರು ಬಿಜೆಪಿ ಪಕ್ಷಕ್ಕೆ ಒಲವು ತೋರಿಸಿದರೆ ಈ ಬಾರಿ ಬಿಜೆಪಿ ಪಕ್ಷದ ಶಾಸಕರನ್ನು ಆಯ್ಕೆ ಮಾಡಲು ಸಾಧ್ಯ , ದಲಿತರಿಗೆ ಬಿಜೆಪಿ ಪಕ್ಷದ ಬಗ್ಗೆ ಕಾಂಗ್ರೆಸ್ ಪಕ್ಷ ಹಾಗೂ ಇತರೆ ಪಕ್ಷದವರು ಅಪಪ್ರಚಾರ ಮಾಡುವುದನ್ನು ಕಿವಿಗೊಡದೆ ಸಂಘಟನೆಗೆ ಒತ್ತು ನೀಡಿ ಎಂದು ತಿಳಿಸಿದರು. ಇನ್ನೂ ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ನಿತ್ಯಾನಂದ ಮಾತನಾಡಿ, ಪ್ರತಿಯೊಬ್ಬರು ಲೀಡರ್ ಯಾಗಬೇಕು . ಬಿಜೆಪಿಯಲ್ಲಿ ಅದಕ್ಕೆ ಅವಕಾಶವಿದೆ. ವೈಮನಸ್ಸನ್ನು ಬಿಟ್ಟು ಎಲ್ಲರೂ ಸಂಘಟನೆ ಮಾಡಬೇಕು , ಬೇರೆ ಪಕ್ಷದವರನ್ನು ನಮ್ಮ…
Read Moreಮೊಗನಕಟ್ಟೆ ಹಾಗೂ ಗಣೇಶನ ಕಟ್ಟೆಗೆ ನಾಲೆಯಿಂದ ನೀರು ತುಂಬಿಸಲು ಸಂಪರ್ಕ ಕಲ್ಪಿಸುವಂತೆ ಪಿಡಿಓಗೆ ಮನವಿ..!
ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದ ಮೊಗನಕಟ್ಟೆ ಹಾಗೂ ಗಣೇಶನ ಕಟ್ಟೆಗೆ ನೀರು ತುಂಬಿಸಲು ನಾಲೆಯಿಂದ ಸಂಪರ್ಕ ಕಲ್ಪಿಸಲು ಗ್ರಾಮ ಪಂಚಾಯಿತಿ ಪಿಡಿಓ ಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಪ್ರಭಾರ ಪಿಡಿಓ ಮಂಗಳ ರವರು ಸ್ಥಳ ಪರಿಶೀಲನೆ ನೀಡಿದರು. ಮಳವಳ್ಳಿ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಗೆ ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಭೇಟಿ ನೀಡಿ ರೈತರ ಜಾನುವಾರುಗಳಿಗೆ ಕಟ್ಟೆಗಳಿಗೆ ನೀರು ತುಂಬಿಸಲು ನಾಲೆ ಮದ್ಯೆ ರಸ್ತೆವಿದ್ದು ರಸ್ತೆಗೆ 20 ಅಡಿ ಪೈಪ್ ಆಳವಡಿಸಲು ಮನವಿ ಸಲ್ಲಿಸಿದರು. ಇದರಿಂದ ಶಾಶ್ವತವಾಗಿ ಮಳೆಗಾಲ ನೀರು ತುಂಬಿಸಲು ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದ ಬಳಿಕ ಪ್ರಬಾರ ಪಿಡಿಓ ಮಂಗಳ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಪೈಪ್ ಆಳವಡಿಸಬೇಕಾದರೆ ಗ್ರಾಮಸ್ಥರೇ ಸೇರಿ ಹಾಕಿಸಿಕೊಳ್ಳಿ ಅದರ ಮೊತ್ತವನ್ನು ಪಂಚಾಯಿತಿಯಿಂದ ನೀಡುವುದಾಗಿ ತಿಳಿಸಿದರು. ಇನ್ನೂ ಪೈಪ್ ಆಳವಡಿಕೆಯಿಂದ ನಮ್ಮ ಗ್ರಾಮದ ಎರಡು ಕಟ್ಟೆಗಳು ತುಂಬಿದರೆ…
Read More