ಮಹಿಳೆ ಮೇಲೆ ಹಲ್ಲೆ ; ಆರೋಪಿಗಳ ಬಂಧನಕ್ಕೆ ರೈತ ಸಂಘ ಆಗ್ರಹ

ರಾಯಚೂರು(ಲಿಂಗಸೂಗೂರು): ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಬಯ್ಯಾಪೂರ ಗ್ರಾಮದ ಆಶಾ ಕಾರ್ಯಕರ್ತೆ ಅಂಬುಜಾ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕೆAದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷೆ ರೂಪಾ ಶ್ರೀನಿವಾಸ ನಾಯಕ ಒತ್ತಾಯಿಸಿದ್ದಾರೆ. ಅಂದ ಹಾಗೇ ಬಯ್ಯಾಪೂರ ಗ್ರಾಮಕ್ಕೆ ಮತ್ತು ಮುದಗಲ್ ಠಾಣೆಗೆ ಭೇಟಿ ವೇಳೆ ಮಾತನಾಡಿದ ರೂಪಾ ಶ್ರೀನಿವಾಸ ನಾಯಕ, ಬಯ್ಯಾಪೂರ ಗ್ರಾಮದಲ್ಲಿ ಮಹಿಳೆ ಅಂಬುಜಾಗೆ ಯಾರು ಇಲ್ಲ.ಸದ್ಯ ಈ ಮಹಿಳೆ ಮೇಲೆ ಅದೇ ಗ್ರಾಮದ ಹನುಮನಗೌಡ ಹಾಗೂ ಆತನ ಕುಟುoಬಸ್ಥರು ಮಹಿಳೆ ಮೇಲೆ  ಹಲ್ಲೆ ಮಾಡಿದ್ದಾರೆ.ಈ ಸಂಬAಧ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೀಗಾಗಿ ಮಹಿಳೆಯ ಸುರಕ್ಷತೆಗಾಗಿ ಕೂಡಲೇ ಪೊಲೀಸ್ ಇಲಾಖೆ ಅಧಿಕಾರಿಗಳು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಬೇಕು ಅಂತ ಆಗ್ರಹಿಸಿದ್ರು..   ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ (ಲಿಂಗಸೂಗೂರು) ರಾಯಚೂರು

Read More

ಕೃಷಿ ಎಂಜಿನಿಯರಿಂಗ್ ಪದವಿಯಲ್ಲಿ ಗರಿಷ್ಠ ಅಂಕ ಪಡೆದು ಚಿನ್ನದ ಪದಕ ಪಡೆದ ರೇಖಾ ಗುಂಡಪ್ಪ..!

ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 2018-19 ನೇ ಸಾಲಿನ ಘಟಿಕೋತ್ಸವ ಸಮಾರಂಭವನ್ನು ಭಾರತೀಯ ಕೃಷಿ ಸಂಶೋಧನಾ ಸಮಿತಿಯ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ.ಆರ್.ಸಿ.ಅಗರವಾಲ್ ಉದ್ಘಾಟಿಸಿದರು. ಕೋವಿಡ್ ಸೋಂಕು ತಡೆ ಕಾರಣ ಚಿನ್ನದ ಪದಕ ಹಾಗೂ ಗರಿಷ್ಠ ಅಂಕಗಳನ್ನು ಪಡೆದು ಸಾಧನೆ ಮಾಡಿರುವ ವಿವಿಧ ವಿಭಾಗಗಳ 49 ವಿದ್ಯಾರ್ಥಿಗಳು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಕುಲಪತಿ ಡಾಕೆಎನ್ ಕಟ್ಟಿಮನಿ ಸಮ್ಮುಖದಲ್ಲಿ ಡಾ.ಆರ್. ಸಿ. ಅಗರವಾಲ್ ಅವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಿದರು.ಬಿಎಸ್ಸಿ ಕೃಷಿ ಪದವಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಸಹನಾ ರಾಮನಗೌಡ ಪೊಲೀಸ್ ಪಾಟೀಲ ಆರು ಚಿನ್ನದ ಪದಕಗಳು ಮತ್ತು ನಗದು ಬಹುಮಾನ ಪಡೆದರು. ಕೃಷಿ ಎಂಜಿನಿಯರಿಂಗ್ ಪದವಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದಿರುವ ರೇಖಾ ಗುಂಡಪ್ಪ ಅವರೂ ಆರು ಚಿನ್ನದ ಪದಕಗಳು ಮತ್ತು ನಗದು ಪುರಸ್ಕಾರ ಪಡೆದರು. ವರದಿ-ಬಾಬಾ ಎಕ್ಸ್ ಪ್ರೆಸ್ ಟಿವಿ ರಾಯಚೂರು

Read More

71 ಕೇಂದ್ರದಲ್ಲಿ ಕೊರೊನಾ ಲಸಿಕೆ ಡ್ರೈರನ್ ಪರಿಶೀಲನೆ- ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್..!

ರಾಯಚೂರು: ಕೊರೊನಾ ಲಸಿಕೆ ಡ್ರೈರನ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 71 ಕೇಂದ್ರಗಳಲ್ಲಿ ಲಸಿಕೆ ಡ್ರೈರನ್ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಆರ್ ವೆಂಕಟೇಶ್ ಕುಮಾರ ತಿಳಿಸಿದ್ದಾರೆ. ಇಂದು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಡ್ರೈರನ್ ಪೂರ್ವ ಸಿದ್ಧತೆಯನ್ನು ಪರಿಶೀಲನೆ ಮಾಡಿ ನಂತರ ಮಾತನಾಡಿದ ಅವರು ಇಂದು ಜಿಲ್ಲೆಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಡ್ರೈರನ್ ಮಾಡಲು ಸಿದ್ಧತೆಯನ್ನು ಮಾಡಲಾಗಿದೆ.ಒಂದು ಕೇಂದ್ರದಲ್ಲಿ ಕನಿಷ್ಠ 25 ಜನಕ್ಕೆ ಲಸಿಕೆ ಡ್ರೈರನ್ ಮಾಡಬೇಕಾಗುತ್ತದೆ. ಇದನ್ನು ಮಾಡಿದರೆ ವ್ಯಾಕ್ಸಿನ್ ಬಂದಾಗ ನಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ, ಜಿಲ್ಲೆಯಲ್ಲಿ ನಾಲ್ಕು ಖಾಸಗಿ ಆಸ್ಪತ್ರೆಗಳನ್ನು ತೆಗೆದುಕೊಳ್ಳಗಿದೆ. ಒಂದು ಕೇಂದ್ರದಲ್ಲಿ 5 ಜನ ಅಧಿಕಾರಿಗಳು ಇರುತ್ತಾರೆ, ಡ್ರೈರನ್ ಗೆ ಬರುವ ಪ್ರತಿಯೊಬ್ಬರು ಆಧಾರ್ ಕಾರ್ಡ್ ಮತ್ತು ಇನ್ನಿತರ ದಾಖಲಾತಿಯನ್ನು ಕಡ್ಡಾಯವಾಗಿ ತರಬೇಕು. ಇದು 14500 ಜನರಿಗೆ ಅನುಕೂಲವಾಗಲಿದೆ. ನಮ್ಮಲ್ಲಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ವೈದ್ಯರು ಸೇರಿದಂತೆ ಗ್ರೂಪ್ ಡಿ ಸಿಬ್ಬಂದಿಗಳು…

Read More

ದೆಹಲಿಯಲ್ಲಿನ ರೈತರ ಹೋರಾಟಕ್ಕೆ ಬೆಂಬಲಿಸಿ ಸಿಐಟಿಯು ಪ್ರತಿಭಟನೆ..!

ರಾಯಾಚೂರು: ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಪ್ರವಾಸಿ ಮಂದಿರದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ಸಿಂಧನೂರು ಸಿಐಟಿಯು ತಾಲೂಕು ಸಮಿತಿ ವತಿಯಿಂದ ರೈತರ ಮರಣ ಶಾಸನವಾದ ಮೂರು ಕಾಯ್ದೆಗಳನ್ನು ಕೈಬಿಡುವಂತೆ ಒತ್ತಾಯಿಸಿ ಸಿಂಧನೂರು ತಹಶೀಲ್ದಾರ್ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಸಿಐಟಿಯು ತಾಲೂಕು ಕಾರ್ಯದರ್ಶಿ ಶೇಕ್ಷಾ ಖಾದ್ರಿ ಅವರು ಕೇಂದ್ರ ಸರ್ಕಾರ ರೈತರ ಬಗ್ಗೆ ನಿಷ್ಕಾಳಜಿಯನ್ನು ತೋರುತ್ತಿದೆ. ರೈತು 28 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಈಗಾಗಲೇ 60 ಜನ ರೈತರು ಮೃತಪಟ್ಟಿದ್ದಾರೆ. ಆದರೂ ಯಾವುದೇ ರೀತಿಯಾಗಿ ಮೋದಿ ಸರ್ಕಾರ ರೈತರ ಬಗ್ಗೆ ಕಿಂಚಿತ್ತು ಕಾಳಜಿ ತೋರುತ್ತಿಲ್ಲ, ನಿಜಕ್ಕೂ ಇದು ದುರಾಡಳಿತವೇ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವರದಿ- ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Read More

ಶಾಲೆ ಆರಂಭದ ಬೆನ್ನಲ್ಲೆ ನಾಲ್ಕು ಶಿಕ್ಷಕರಿಗೆ ಕೊರೊನಾ ಪಾಸಿಟಿವ್..!

ರಾಯಾಚೂರು: ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರಂಭದಲ್ಲಿ ಸರ್ಕಾರ ಜಿದ್ದಿಗೆ ಬಿದ್ದು, ಶಾಲೆ ಆರಂಭಿಸಿದೆ. ಪೋಷಕರ ವಿರೋಧದ ನಡುವೆಯು ವಿದ್ಯಾಗಮನ ತರಗತಿಗೆ ಅನುಮತಿ ನೀಡಲಾಗಿದ್ದು, ಜಿಲ್ಲಾ ಶಿಕ್ಷಣ ಇಲಾಖೆಯ ಎಡವಟ್ಟಿನಿಂದ ಜಿಲ್ಲೆಯಲ್ಲಿ 4 ಶಿಕ್ಷಕರಿಗೆ ಸೋಂಕು ದೃಡಪಟ್ಟಿದೆ.ಚಾಗಬಾವಿ ಸೇರಿದಂತೆ ಜಿಲ್ಲೆಯಲ್ಲಿ 5 ಸೋಂಕಿನ ಪ್ರಕರಣ ಎಂದು ದಾಖಲಾತಿಯಲ್ಲಿ ನಮೂದಿಸಲಾಗಿದೆ. ಆದರೆ 4 ಶಿಕ್ಷಕರಿಗೆ ಮಾತ್ರ ಕೊರೋನಾ ಸೋಂಕು ದೃಡಪಟ್ಟಿದೆ.ದಾಖಲಾತಿಯಲ್ಲಿ ಐದು ಸೋಂಕು ಎಂದು ತೋರಿಸಿದ್ದಾರೆ. ಮಾಹಿತಿ ಇಲ್ಲದೇ ತಪ್ಪಾಗಿ ದಾಖಲಾತಿ ನಮೂದಿಸಿದ ಅಧಿಕಾರಿ ಯಾರು ಎಂಬುವುದು ಇಲ್ಲಿಯವರೆಗೂ ತಿಳಿದು ಬಂದಿಲ್ಲ.ಬೇಜಾವಬ್ದಾರಿತನದಿಂದ ವರ್ತಿಸಿರುವ ಅಧಿಕಾರಿಗಳ ಮೇಲೆ ಸೂಕ್ತ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು,ಇನ್ನಾದರೂ ಗಂಭೀರತೆ ಅರ್ಥೈಸಿಕೊಂಡು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಮೂಲಕ ಕೋವಿಡ್ ನ್ನು ನಿಯಂತ್ರಣಕ್ಕೆ ತರುವ ಪ್ರಮಾಣಿಕ ಪ್ರಯತ್ನ ಮಾಡಬೇಕೆಂದು ಪೋಷಕರು ಒತ್ತಾಯಿಸುತ್ತಿದ್ದಾರೆ. ವರದಿ-ಬಾಬಾ ಎಕ್ಸ್ ಪ್ರೆಸ್ ಟಿವಿ ಪ್ರೆಸ್ ಟಿವಿ ರಾಯಚೂರು

Read More

ಕಾಲುವೆಗೆ ಕಾಲು ಜಾರಿ ಬಿದ್ದ ಮಗು-ಅಗ್ನಿಶಾಮಕ ಸಿಬ್ಬಂದಿಯಿಂದ ಬಾಲಕನಿಗಾಗಿ ಶೋಧಕಾರ್ಯ..!

ರಾಯಾಚೂರು: ಕಾಲುವೆಯಲ್ಲಿ ಬಟ್ಟೆ ತೊಳೆಯಲು ತಾಯಿ ಜೊತೆ ತೆರಳಿದ್ದ ಮಗು ಕಾಲು ಜಾರಿ ನೀರಿನಲ್ಲಿ ಬಿದ್ದಿರುವ ಘಟನೆ ರಾಯಾಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಾಳಾಪೂರ ಗ್ರಾಮ ಹೊರವಲಯದಲ್ಲಿನ ನಾರಾಯಣಪುರ ಬಲದಂಡೆ ಕಾಲುವೆಯ ಮುಖ್ಯ ಕಾಲುವೆಯಲ್ಲಿ ನಡೆದಿದೆ. ಕಾಳಾಪೂರ ಮೂಲದ ಹುಸೇನಪ್ಪ ಎನ್ನುವ ಬಾಲಕ ಕಾಲುವೆಯಲ್ಲಿ ಬಿದ್ದು ನಾಪತ್ತೆಯಾಗಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿ ಬಾಲಕನಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ. ವರದಿ-ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು.

Read More

ಪೆಟ್ರೋಲ್ ನಲ್ಲಿ ನೀರು ಮಿಕ್ಸ್- ಪ್ರಶ್ನಿಸಿದ್ದ ಸಾರ್ವಜನಿಕರ ನಡುವೆ ವಾಗ್ವಾದಕ್ಕೆ ಇಳಿದ ಬಂಕ್ ಸಿಬ್ಬಂದಿ..!

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಪ್ರಕಾಶ್ ಧಾರಿವಾಳ ಒಡೆತನದ ಇಂಡಿಯನ್ ಪೆಟ್ರೋಲಿಯಂ ಬಂಕ್ ಹಲವಾರು ದಿನಗಳಿಂದ ಗ್ರಾಹಕರಿಗೆ ಮೋಸ ಮಾಡುವುದು ನಡೆಯುತ್ತಲೇ ಇದೆ. ಇಂದು ಕೂಡ ಇದು ಸಾಭೀತಾಗಿದೆ. ಗ್ರಾಹಕರು ತಮ್ಮ ಟ್ರ್ಯಾಕ್ಟರ್ ಗೆ 2000 ರೂಗಳ ಡೀಸಲ್ ಹಾಕಿಸಿ ವಾಹನ ಅರ್ಧ ಕಿಲೋ ಮೀಟರ್ ಕೂಡ ಹೋಗದೆ ಬಂದ್ ಆಗಿದೆ, ಎಲ್ಲಾ ರೀತಿಯಿಂದ ತಪಾಸಣೆ ಮಾಡಿದಾಗ ಯಾವುದೇ ಎಂಜಿನ್ ದೋಷ ಕಂಡು ಬಂದಿಲ್ಲ, ಆಗ ಸಾರ್ವಜನಿಕರು ಡೀಸಲ್ ದೋಷ ಇರಬಹುದು ನೋಡಿ ಎಂದಾಗ ಹಾಕಿರುವ ಡೀಸಲ್ ತೆಗೆದು ಬಾಟಲಿನಲ್ಲಿ ಸಂಗ್ರಹಿಸಿದ ನೋಡಿದಾಗ ಅದರಲ್ಲೂ ನೀರು, ಗಾಬರಿಗೊಂಡು ಇಂಡಿಯನ್ ಪೆಟ್ರೋಲಿಯಂ ಬಂಕ್ ಗೆ ಬಂದು ವಿಚಾರಿಸಿದಾಗ ಮಾತಿನ ಚಕಮಕಿ ನಡೆದಿದೆ, ನಮ್ಮ ಮಾಲೀಕರು ಬರುವವರೆಗೂ ಕಾಯಿರಿ ಎಂದು ಹೇಳಿದಾಗ ಗದ್ದಲ ಕೋಲಾಹಲಕ್ಕೆ ಕಾರಣವಾಗಿದೆ. ಕೂಡಲೇ ಆಗಮಿಸಿದ ಪೊಲೀಸರು ವಾತಾವರಣವನ್ನು ತಿಳಿಗೊಳಿಸಿ ,ಸೂಕ್ತ ತನಿಖೆ ಮಾಡುತ್ತೇವೆ ತಪ್ಪಿತಸ್ಥರ ವಿರುದ್ಧ…

Read More

ಬಣ್ಣ ಎರಚಿಕೊಂಡು ಸಂಭ್ರಮಿಸಿದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು..!

ರಾಯಚೂರು ಜಿಲ್ಲೆಯ 7 ತಾಲ್ಲೂಕುಗಳ ಸುಮಾರು 172 ಗ್ರಾಮ ಪಂಚಾಯಿತಿ ಮತ ಎಣಿಕೆ ಆಯಾ ತಾಲ್ಲೂಕಿನ ಮತ ಎಣಿಕೆ ಕೇಂದ್ರಗಳಲ್ಲಿ ಬೆಳಗ್ಗೆಯಿಂದಲೇ ಪ್ರಾರಂಭಗೊಂಡಿದೆ. ಇನ್ನೂ 1181 ಕ್ಷೇತ್ರಗಳ ಮತ ಎಣಿಕೆ ಕಾರ್ಯವು ಬೆಳಿಗ್ಗೆಯಿಂದ ಪ್ರಾರಂಭಗೊಂಡು ಪ್ರಗತಿಯಲ್ಲಿದ್ದು ಒಟ್ಟು 352 ಅಭ್ಯರ್ಥಿಗಳ ಪೈಕಿ 140 ಫಲಿತಾಂಶಗಳು ಹೊರಬಿದ್ದಿವೆ. ಇನ್ನೂ ಎಸ್ ಆರ್ ಪಿ ಯು ಕಾಲೇಜಿನಲ್ಲಿ ಮತ ಎಣಿಕೆ ಪ್ರಕ್ರಿಯೆಯನ್ನು ನಡೆಸಲಾಗಿತ್ತು. ಕೇಂದ್ರಗಳ ಸುತ್ತ ನಿಷೇಧಾಜ್ಞೆ ಇದ್ದರು ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ನೂರಾರು ಜನ ಸೇರಿದ್ದರಿಂದ ಪೊಲೀಸರು ಜನರನ್ನು ಚದುರಿಸಿದ್ದಾರೆ. ಮತ ಏಣಿಕೆ ನಂತರ ಗೆಲುವು ಸಾಧಿಸಿದ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಬಣ್ಣ ಎರಚಿಕೊಂಡು ಸಂಭ್ರಮಿಸಿದರು.

Read More

ಜಿಲ್ಲಾಮಟ್ಟದ ಕಛೇರಿಯ ಪಕ್ಕಾದಲ್ಲೇ ಕೊಳೆತು ನಾರುತ್ತಿರುವ ಕಸದ ರಾಶಿ..!

ರಾಯಚೂರು: ರಾಯಚೂರು ಜಿಲ್ಲಾಧಿಕಾರಿ ಕಚೇರಿಯ ಕಾಂಪೌಂಡಿನ ಪಕ್ಕಾ ವೀರಶೈವ ಕಾಲೇಜ್ ರಸ್ತೆಯಲ್ಲಿ ಕಸದ ರಾಶಿ ಬಿದ್ದಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥೀತಿ ನಿರ್ಮಾಣವಾಗಿದೆ. ಕಸ ತಿನ್ನಲು ಹಂದಿಗಳು ಓಡಾಡುತ್ತಿದ್ದು, ಕಸದ ವಾಸನೆ ಜೊತೆ ಹಂದಿಗಳ ದುರ್ವಾಸನೆಯನ್ನು ಸಾರ್ವಜನಿಕರು ಅನುಭವಿಸುತ್ತಿದ್ದು ಜನರು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ. ಇನ್ನೂ ಸಂಬಂಧ ಪಟ್ಟಂತಹ ಅಧಿಕಾರಿಗಳಿಗೆ ದೂರು ನೀಡಿದರು ಯಾವೊಬ್ಬ ಅಧಿಕಾರಿಯು ಇತ್ತ ಗಮನ ಹರಿಸದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ವರದಿ: ಬಾಬಾ ಎಕ್ಸ್ ಪ್ರೆಸ್ ಟಿವಿ ರಾಯಚೂರು

Read More

ರಾಯಚೂರಲ್ಲಿ ಸಾರಿಗೆ ಸೇವೆ ಬಂದ್: ಖಾಸಗಿ ವಾಹನಗಳಿಂದ ಡಬಲ್ ಹಣ ವಸೂಲಿ

ರಾಯಚೂರು: ಸಾರಿಗೆ ನೌಕರರ ಪ್ರತಿಭಟನೆಯಿಂದ ಜಿಲ್ಲೆಯಾದ್ಯಂತ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರಯಾಣಿಕರು ತಮ್ಮ ಗ್ರಾಮಗಳಿಗೆ ತೆರಳಲು ಪರದಾಡುತ್ತಿದ್ದಾರೆ. ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದ ಬಿಸಿ ಎಲ್ಲಾ ಕಡೆಯಲ್ಲೂ ತಟ್ಟಿದೆ. ಇದರಿಂದ ಪ್ರಯಾಣಿಕರು ಖಾಸಗಿ ವಾಹನಗಳ ಮೂಲಕ ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಇದನ್ನೇ ಲಾಭವನ್ನಾಗಿಸಿಕೊಂಡಿರುವ ಖಾಸಗಿ ವಾಹನಗಳ ಮಾಲೀಕರು ಪ್ರಯಾಣಿಕರಿಂದ ಮಾಮೂಲಿ ದರಕ್ಕಿಂತ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ರಾಯಚೂರಿನಿಂದ ದೇವದುರ್ಗಕ್ಕೆ ಸುಮಾರು 60 ರೂ.ಪ್ರಯಾಣದರವಿದ್ದರೆ, ಈಗ ಖಾಸಗಿ ವಾಹನಗಳು 120 ರಿಂದ 150 ರೂ. ಪ್ರಯಾಣ ದರ ವಸೂಲಿ ಮಾಡುತ್ತಿದ್ದಾರೆ.ರಾಯಚೂರಿನಿಂದ ಲಿಂಗಸೂಗೂರಿಗೆ ಸುಮಾರು 110 ರೂ.ಗಳಿದ್ದು, 200 ರೂ.ವರೆಗೆ ಹಣ ಪಡೆಯುತ್ತಿದ್ದಾರೆ ಎಂದು ಪ್ರಯಾಣಿಕರು ದೂರಿದ್ದಾರೆ. ಪ್ರಯಾಣಿಕರು ಸಹ ತಮ್ಮ ಊರುಗಳಿಗೆ ತೆರಳು ಅನಿವಾರ್ಯವಾಗಿ ಖಾಸಗಿ ವಾಹನಗಳು ಮಾಲೀಕರು ಹೇಳುವಷ್ಟು ಹಣ ನೀಡಿ ತೆರಳುತ್ತಿದ್ದು, ಬಡ ಜನರು ತೊಂದರೆ ಅನುಭವಿಸುವಂತಾಗಿದೆ. ಇನ್ನೂ ಸಿಟಿ ಬಸ್ಗಳ…

Read More