ಲಾಕ್‌ಡೌನ್ ನಡುವೆಯೂ ಶಿವಮೊಗ್ಗದಲ್ಲಿ ರೌಡಿ ಅಟ್ಟಹಾಸ

ಶಿವಮೊಗ್ಗ:ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯನ್ನು, ರೌಡಿಶೀಟರ್‌ವೊಬ್ಬ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಬುದ್ಧನಗರದ ಆಂಜನೇಯ ದೇವಾಲಯದ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ಪ್ರಭು ಎಂಬ ರೌಡಿಶೀಟರ್ ಸುರೇಶ್ ಎಂಬಾತನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಪ್ರಭು ಹಾಗೂ ಸುರೇಶ್ ನಡುವೆ ನಿನ್ನೆ ರಾತ್ರಿ ಮಾತಿನ ಚಕಮಕಿ ನಡೆದಿತ್ತು. ನಿನ್ನೆ ರಾತ್ರಿಯ ಘಟನೆಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಪ್ರಭು ಇಂದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಶಿವಮೊಗ್ಗ

Read More

ತುಮಕೂರು ನಗರದ ಮೇಲೆ ನಿಗಾ, ರಸ್ತೆ ಮಾರ್ಗ ಬದಲಾವಣೆ

ತುಮಕೂರು:ಕೋವಿಡ್–೧೯ ಕೊರೊನಾ ವೃಸ್ ಹರಡದಂತೆ ತಡೆಗಟ್ಟುವ ಸಂಬAಧ ಮುನ್ನಚರಿಕೆ ಕ್ರಮವಾಗಿ ತುಮಕೂರು ನಗರಕ್ಕೆ ಹೊರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾ ಇಟ್ಟು ಪರಿಶೀಲನೆ ಮಾಡಲಾಗುತ್ತಿದೆ. ಸದ್ಯ ತುಮಕೂರು ನಗರಕ್ಕೆ ಬರುವ ಕೆಲವೊಂದು ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದು ಮತ್ತು ತುಮಕೂರು ನಗರದ ಒಳಗಡೆ ಬರುವ ವಾಹನಗಳಿಗಾಗಿ ಮಾರ್ಗಗಳನ್ನು ಬದಲಾಯಿಸಿದೆ ಎಂದು ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ವಂಶಿ ಕೃಷ್ಣ ತಿಳಿಸಿದ್ದಾರೆ. ತುಮಕೂರು ನಗರಕ್ಕೆ ಬರುವವರು ಹೀಗೆ ಬನ್ನಿ.. ೧.ಬೆಂಗಳೂರು ಕಡೆಯಿಂದ ತುಮಕೂರು ನಗರದ ಒಳಗಡೆ ಬರುವ ಎಲ್ಲಾ ವಾಹನ ಸವಾರರು ಕ್ಯಾತ್ಸಂದ್ಯ ಜಾಸ್ ಟೋಲ್ ಗೇಟ್ ನಿಂದ ಗುಬ್ಬಿ ರಿಂಗ್ ರಸ್ತೆ ಮೂಲಕವೇ ಪ್ರವೇಶಿಸಬೇಕು. ೨.ಕ್ಯಾತ್ಸಂದ್ರ ಸಿ.ಎಂ.ಬಡಾವಣೆ ಕಡೆಯಿಂದ ತುಮಕೂರು ನಗರಕ್ಕೆ ಬರುವ ವಾಹನಗಳು ಮಾಜಿ ಎಂ.ಎಲ್.ಎ ರಾಜಣ್ಣ ಮನೆಯ ಮುಂದಿನ ಸರ್ವಿಸ್ ರಸ್ತೆಯಿಂದ ಅಗ್ನಿಶಾಮಕ ಠಾಣೆ ಮೂಲಕ ಬಟವಾಡಿ ಪ್ರವೇಶಿಸಿ ತುಮಕೂರು ನಗರಕ್ಕೆ…

Read More

ನಿತ್ಯೋತ್ಸವ ಕವಿಯ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ

ಬೆಂಗಳೂರು:ನಿತ್ಯೋತ್ಸವ ಕವಿ ಕೆ ಎಸ್ ನಿಸಾರ್ ಅಹಮ್ಮದ್ ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದ ಹಿನ್ನೆಲೆ ಬೆಂಗಳೂರಿನ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಮರಣ ಹೊಂದಿದ್ದಾರೆ. ಬಹಳ ದಿನಗಳಿಂದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಇನ್ನು ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯುವುದಕ್ಕೆ ಸಾರ್ವಜನಿಕರಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮನೆಯ ಮುಂಭಾಗ ಪಾರ್ಥೀವ ಶರೀರ ಇಡಲು ಸರ್ಕಾರ ಅವಕಾಶ ನೀಡಿದೆ. ಹಾಗಾಗಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಬಂದು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಬಹುದು ಎಂದು ತಿಳಿಸಿದರು. ನಾಳೆ ಬೆಳಗ್ಗೆ ೧೧ ಗಂಟೆಗೆ ಮುನಿರೆಡ್ಡಿ ಪಾಳ್ಯದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಅವರ ಆಸೆಯಂತೆಯೇ ಅವರ ಮಡದಿಯ ಗೋರಿ ಪಕ್ಕದಲ್ಲೇ ಅಂತ್ಯ ಸಂಸ್ಕಾರ ನಡೆಸುವುದಾಗಿ ಹೇಳಿದರು. ಮಗಳು ಅಮೇರಿಕಾದಲ್ಲಿ ಇದ್ದಾರೆ. ಈಗ ಅವರು ಬರುವುದಕ್ಕೆ ಆಗುತ್ತಿಲ್ಲ. ಅವಳು ತಂದೆಯ ಪಾರ್ಥೀವ ಶರೀರ ನೋಡಬೇಕು ಎಂದು ತುಂಬಾ…

Read More

ತಮಿಳುನಾಡಿಗೆ ಕಾಲು ನಡಿಗೆಯಲ್ಲಿಯೇ ಹೊರಟ ಕಾರ್ಮಿಕರು

ಚಿಕ್ಕಮಗಳೂರು: ಅವರೆಲ್ಲಾ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕೆಲಸ ಮೂಡುತ್ತಿದ್ದ ತಮಿಳುನಾಡು ಮೂಲದ ಕಾರ್ಮಿಕರು. ಇಲ್ಲಿನ ಕಟ್ಟಡ ನಿರ್ಮಾಣಕ್ಕೆ ಈ ಕಾರ್ಮಿಕರು ತಮಿಳುನಾಡಿನಿಂದ ಆಗಮಿಸಿದ್ದರು.ಆದರೀಗ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ತಮ್ಮೂರಿಗೆ ತೆರಳಲು ಆ ಕಾರ್ಮಿಕರೆಲ್ಲಾ ಮುಂದಾಗಿದ್ದಾರೆ. ಆದರೆ ಅವರಿಗೆ ತೆರಳಲು ಯಾವುದೇ ಬಸ್,ರೈಲ್ ಇತರೆ ವಾಹಗಳು ಇಲ್ಲದಿರುವ ಪರಿಣಾಮ ಕಾಲು ನಡಿಗೆಯಲ್ಲಿಯೇ ತಮಿಳುನಾಡಿಗೆ ಹೊರಟಿದ್ದಾರೆ. ಅಂದ ಹಾಗೇ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಕಾಲು ನಡಿಗೆಯಲ್ಲಿಯೇ ಈ ಕಾರ್ಮಿಕರು ಇದೀಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ತಲುಪಿದ್ದಾರೆ. ಇನ್ನು ಸಾಗರದಿಂದ ತಮಿಳುನಾಡಿನ ವೆಲ್ಲೂರಿಗೆ ತೆರಳಬೇಕಾದರೇ ಸುಮಾರು ೬೦೦ ಕಿ.ಮೀ ದೂರ ಕ್ರಮಿಸಬೇಕು,ಹೀಗಾಗಿ ನಡೆದುಕೊಂಡೇ ಹೊರಟಿರುವ ಇವರು ಊಟವಿಲ್ಲದೇ ಪರದಾಡುವ ಸ್ಥಿತಿ ಎದುರಾಗಿದೆ. ಸದ್ಯ ಸರಿಯಾಗಿ ಊಟವಿಲ್ಲದೇ ಸುಸ್ತಾಗಿ ರಸ್ತೆ ಬದಿ ಮಲಗಿದ್ದ ಈ ಕಾರ್ಮಿಕರಿಗೆ ಊಟ ನೀಡಿ ತರೀಕೆರೆ ಪೋಲಿಸರು ಮಾನವೀಯತೆ ಮೆರೆದಿದ್ದಾರೆ.ಕಾರ್ಮಿಕರಿಗೆ ಎರಡು ದಿನಕ್ಕಾಗುವಷ್ಟು ಬಿಸ್ಕೆಟ್, ಬ್ರೆಡ್ ನೀಡಿದ್ದಾರೆ.…

Read More

ಶಿವಮೊಗ್ಗದಲ್ಲಿ ಸುಮ್ಮನೆ ಬೈಕ್‌ನಲ್ಲಿ ಸುತ್ತಿದವರಿಗೆ `ದಂಡ’..

ಶಿವಮೊಗ್ಗ: ದಾವಣಗೆರೆಯಂತೆ ಮಲೆನಾಡು ಶಿವಮೊಗ್ಗದ ಜನರು ಕೂಡ ಲಾಕ್‌ಡೌನ್ ಲೆಕ್ಕಿಸದೇ ಬೀದಿಗಿಳಿಯುತ್ತಿದ್ದಾರೆ. ವಿಪರ್ಯಾಸವೆಂದರೇ ಜನರು ಸುಮ್ಮನೆ ರಸ್ತೆಗೆ ಬರುವುದನ್ನು ನಿಲ್ಲಿಸಲು ಪೊಲೀಸ್ ಇಲಾಖೆ ಏನೆಲ್ಲಾ ಸರ್ಕಸ್ ಮಾಡಿದರೂ ಸಹ ಅದು ಸಾಧ್ಯವಾಗುತ್ತಿಲ್ಲ.ಅದರಲ್ಲೂ ಪ್ರಮುಖ ಸರ್ಕಲ್‌ಗಳಲ್ಲಿ ಜನರು ಬಿಂದಾಸ್ ಆಗಿ ಓಡಾಡುತ್ತಿದ್ದಾರೆ. ಇನ್ನು ಇದೆಲ್ಲಾ ಗಮನಿಸಿದ ಪೊಲೀಸರು ಇಂದು ಹಲವು ವಾಹನ ಸವಾರರಿಗೆ ತಕ್ಕ ಪಾಠ ಕಲಿಸಿದ್ದು, ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಭಾಗಗಳಲ್ಲಿಯೂ ಸಹ ಪೊಲೀಸರು ಅನವಶ್ಯಕವಾಗಿ ತಿರುಗಾಡುತ್ತಿದ್ದವರನ್ನು ಹಿಡಿದು ವಿಚಾರಿಸಿ ದಂಡ ಹಾಕುತ್ತಿದ್ದಾರೆ. ಅಲ್ಲದೆ, ದಂಡ ನೀಡದೆ ಇದ್ದಲ್ಲಿ ಬೈಕ್‌ಗಳನ್ನು ವಶಪಡಿಸಿಕೊಳ್ಳುತ್ತಿದ್ದು,ಇದರಿಂದ ಸುಮ್ಮನೆ ಸುತ್ತಿ ಲಾಕ್‌ಡೌನ್ ವಿಫಲಗೊಳಿಸುವವರಿಗೆ ತಕ್ಕ ಪಾಠ ಕಲಿಸುತ್ತಿದ್ದಾರೆ. ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಶಿವಮೊಗ್ಗ

Read More