ಮುಂಬೈ: ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು, ಅಲ್ಲದೇ ದಂಪತಿಗೆ ಯಾವ ಮಗುವಾಗುತ್ತೆ ಅನ್ನೋ ಬಗ್ಗೆ ಅಭಿಮಾನಿಗಳಲ್ಲೂ ಸಾಕಷ್ಟು ಕುತೂಹಲವಿತ್ತು. ಇದೀಗ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ಸೆಲೆಬ್ರೆಟಿ ದಂಪತಿ ಹೆಣ್ಣು ಮಗುವಿನ ಹೆತ್ತವರಾಗಿದ್ದಾರೆ,ಇನ್ನು ಈ ಬಗ್ಗೆ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಖುಷಿಯ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ, ಅಲ್ಲದೇ ಎಲ್ಲರೂ ದಂಪತಿ ಹಾಗೂ ಮಗುವಿಗೆ ಶುಭ ಹಾರೈಸಿದ್ದಾರೆ. ಇನ್ನು ಮೊನ್ನೆಯಷ್ಟೇ ಅನುಷ್ಕಾ ಶರ್ಮಾ ಜಿಮ್ ನಲ್ಲಿ ವರ್ಕೌಟ್ ಮಾಡುವ ವಿಡಿಯೋ ವೈರಲ್ ಆಗಿತ್ತು. ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
Read MoreCategory: ಸಿನಿಮಾ
ಈಜು ಕೊಳದ ಮಧ್ಯದಲ್ಲಿ ಮಂಟಪ ನಿರ್ಮಾಣ – ಡಿಫರೆಂಟ್ ಆಗಿ ಮದುವೆ ಆಗಲು ರೆಡಿಯಾದ ಲವ್ ಮಾಕ್ಟೈಲ್ ಜೋಡಿ..!
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಕಳೆದ ಐದಾರು ತಿಂಗಳಿನಿಂದ ಒಂದಾದ ಮೇಲೆ ಒಂದರಂತೆ ಭರ್ಜರಿಯಾಗಿ ಮದುವೆ ಸಮಾರಂಭ ನಡೆಯುತ್ತಿದ್ದು, ಕೆಲ ಸ್ಟಾರ್ ನಟ-ನಟಿಯರು ಸೇರಿದಂತೆ ಕಿರುತೆರೆ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದರಂತಯೇ ಸ್ಯಾಂಡಲ್ ವುಡ್ ನಲ್ಲಿ 2021 ರ ವರ್ಷದ ಮೊದಲ ಮದುವೆ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅವರದ್ದು, ಈ ಜೋಡಿ 2021 ಫೆಬ್ರವರಿ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ಈಗಾಗಲೇ ಮದುವೆ ತಯಾರಿ ಕೂಡ ಭರ್ಜರಿಯಾಗಿ ನಡೆಯುತ್ತಿದೆ.ವಿಶೇಷ ರೀತಿಯಲ್ಲಿ ಮದುವೆಯಾಗಲು ಈ ಜೊಡಿ ನಿರ್ಧರಿಸಿದ್ದು, ಫೆಬ್ರವರಿ 14ರ ಬೆಳ್ಳಂಬೆಳಗ್ಗೆಯೇ ಮುಹೂರ್ತವಿರುತ್ತದೆ. ಸಂಜೆ ಆರತಕ್ಷತೆ ಕಾರ್ಯಕ್ರಮವಿರುತ್ತದೆ. ಮಿಲನಾ ಈಜುಗಾರ್ತಿ, ಹೀಗಾಗಿ ಈಜುಕೊಳದ ಮಧ್ಯೆ ಮಂಟಪವಿರಲಿದೆಯಂತೆ. ಇನ್ನೂ ಮಿಲನ ನಾಗರಾಜ್ ಅವರಿಗೆ ಮದುವೆ ಪ್ರತಿಯೊಂದು ರೀತಿಯಲ್ಲೂ ತುಂಬ ವಿಶೇಷವಾಗಿರಬೇಕಂತೆ ಹಾಗಾಗಿ ಬಹಳ ವಿಶೇಷವಾಗಿ ಮದುವೆ ಆಗಲು ರೆಡಿಯಾಗುತ್ತಿದ್ದೇವೆ ಎಂದು ಡಾರ್ಲಿಂಗ್ ಕೃಷ್ಣ ತಮ್ಮ ಮದುವೆ…
Read Moreನಟ ಅನಿರುದ್ಧ್ ಮನೆಗೆ ಭೇಟಿ ನೀಡಿದ ಜಯನಗರದ ಶಾಸಕಿ ಸೌಮ್ಯ ರೆಡ್ಡಿ..!
ಬೆಂಗಳೂರು: ಜೊತೆ ಜೊತೆಯಲಿ’ಧಾರಾವಾಹಿ ಖ್ಯಾತಿಯ ನಟ ಅನಿರುದ್ಧ್ ಅವರು ಪ್ರಸ್ತುತ ನಟನೆಯ ಜೊತೆಗೆ ಸಾಮಾಜಿಕ ಕೆಲಸಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆ ಮೂಲಕ ಅವರು ಅನೇಕ ಸಮಸ್ಯೆಗಳು, ಅವುಗಳಿಗೆ ಪರಿಹಾರವನ್ನು ಸೂಚಿಸಿ ಸರ್ಕಾರದ ಜೊತೆಗೆ ಜನರ ಗಮನ ಸೆಳೆಯುತ್ತಿದ್ದಾರೆ. ಅವರ ಮನೆಗೆ ಜಯನಗರದ ಶಾಸಕಿ ಸೌಮ್ಯ ರೆಡ್ಡಿ ಭೇಟಿ ನೀಡಿದ್ದು, ಆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಕಳಕಳಿಯ ಮನವಿ. ನಮ್ಮ ರಾಜ್ಯದಲ್ಲಿ ತೆರೆದ ಕಾಲುವೆಗಳನ್ನು ಮುಚ್ಚಿ ಗುಜರಾತ್ ಮಾದರಿಯ ವಿದ್ಯುತ್ಪಕ್ತಿ ಉತ್ಪಾದನೆಗೆ ಸೌರಫಲಕಗಳನ್ನು ಬಳಸಬಹುದು. ಎರಡೂ ಬದಿಯಲ್ಲಿ ಗೋಡೆಗಳನ್ನು ಕಟ್ಟಿ ಅವುಗಳ ಮೇಲೆ ವರ್ಟಿಕಲ್ ಗಾರ್ಡನಿಂಗ್ ಮಾಡಬಹುದು’ಎಂದು ಅನಿರುದ್ಧ ಅವರು ಹೊಸದಾಗಿ ಅಧಿಕೃತವಾದ ಟ್ವಿಟ್ಟರ್ ಖಾತೆ ತೆರದು ಟ್ವೀಟ್ ಮಾಡಿದ್ದಾರೆ. ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
Read Moreಸೋನುಸೂದ್ ಮೇಲೆ ಕೇಸ್ ಹಾಕಿದ ಮುಂಬೈ ಪಾಲಿಕೆ.!
ಮುಂಬೈ: ಲಾಕ್ಡೌನ್ ಸಮಯದಲ್ಲಿ ಬಡವರಿಗೆ ಸಹಾಯ ಮಾಡಿ ರಿಯಲ್ ಹೀರೋ ಎನಿಸಿಕೊಂಡವರು ಬಾಲಿವುಡ್ ನಟ ಸೋನುಸೂದ್. ಆದರೆ ಅವರು ಕಾನೂನು ಪ್ರಕಾರ ನಡೆದು ಕೊಂಡಿಲ್ಲ ಎಂದು ಆರೋಪಿಸಿ ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಕೇಸ್ ಹಾಕಿದ್ದಾರೆ. ಅದಕ್ಕೀಗ ಸೋನು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಸೋನು ಮುಂಬೈನಲ್ಲಿ ಕೆಲವು ಹೋಟೆಲ್ಗಳನ್ನು ಹೊಂದಿದ್ದಾರೆ. ಜುಹೂ ಪ್ರದೇಶದಲ್ಲಿ ಇರುವ ಜನವಸತಿ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡು ಹೋಟೆಲ್ ಆರಂಭಿಸಿದ್ದಾರೆ ಎಂದು ಸೋನು ಮೇಲೆ ಆರೋಪ ಎದುರಾಗಿದೆ. ಈ ಕಟ್ಟಡವು ಆರು ಮಹಡಿ ಹೊಂದಿದೆ. ಆದರೆ ಈ ಆರೋಪವನ್ನು ಸೋನು ಸೂದ್ ತಳ್ಳಿ ಹಾಕಿದ್ದು, ಈ ಹೋಟೆಲ್ ಆರಂಭಿಸಲು ತಾವು ಅಗತ್ಯವಿರುವ ಎಲ್ಲ ಇಲಾಖೆಗಳ ಅನುಮತಿಯನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಆರೋಪವನ್ನು ಸೋನು ಸೂದ್ ತಳ್ಳಿ ಹಾಕಿದ್ದಾರೆ. ಈ ಹೋಟೆಲ್ ಆರಂಭಿಸಲು ತಾವು ಅಗತ್ಯವಿರುವ ಎಲ್ಲ ಇಲಾಖೆಗಳ…
Read Moreಐಷಾರಾಮಿ ಕಾರು ಖರೀದಿಸಿದ ಕಿರಿಕ್ ಬೆಡಗಿ..!
ಬೆಂಗಳೂರು: ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಕಳೆದ ಕೆಲ ದಿನಗಳಿಂದ ಒಂದಲ್ಲ ಒಂದು ವಿಚಾರಕ್ಕೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡುತ್ತಲೇ ಇದ್ದಾರೆ. ಗೂಗಲ್ನಿಂದ ‘ನ್ಯಾಷನಲ್ ಕ್ರಶ್’ ಎನಿಸಿಕೊಂಡ ಮೇಲೆ ಹಿಂದಿ ಚಿತ್ರರಂಗಕ್ಕೂ ರಶ್ಮಿಕಾ ಕಾಲಿಟ್ಟಿದ್ದರು. ಆ ಮೂಲಕ ದೊಡ್ಡ ಸದ್ದು ಮಾಡಿದ್ದರು.ಇದೀಗ ಹೊಸದೊಂದು ಐಷಾರಾಮಿ ಕಾರು ಕೊಳ್ಳುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ ಈ ಕೊಡಗಿನ ಸುಂದರಿ.ತಮ್ಮ ಹೊಸ ರೇಂಜ್ ರೋವರ್ ಕಾರಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಇಕೊಂಡು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
Read Moreಬಿಗ್ ಬಾಸ್ ಮನೆಯಲ್ಲಿ ಬಾಲ್ಯದ ಕಹಿ ಘಟನೆ ನೆನಪಿಸಿಕೊಂಡ ರಾಖಿಸಾವಂತ್..!
ಬಿಗ್ ಬಾಸ್ ಹಿಂದಿ ಸೀಸನ್ 14ರಲ್ಲಿ ಭಾಗವಹಿಸಿರುವ ನಟಿ ರಾಖಿ ಸಾವಂತ್ ಕೆಲವು ಕಹಿ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಬಾಲ್ಯದಲ್ಲಿನ ಹಲವು ಕೆಟ್ಟ ಸಂಗತಿಗಳ ಬಗ್ಗೆ ಅವರು ಬಿಗ್ ಬಾಸ್ ಮನೆಯಲ್ಲಿ ಬಾಯಿ ಬಿಟ್ಟಿದ್ದಾರೆ. ತುಂಬ ಬೋಲ್ಡ್ ಆದಂತಹ ಹೇಳಿಕೆಗಳನ್ನು ನೀಡುವ ಮೂಲಕ ಬಾಲಿವುಡ್ನಲ್ಲಿ ಗುರುತಿಸಿಕೊಂಡವರು ನಟಿ ರಾಖಿಸಾವಂತ್. ಆದರೆ ಅವರು ಬಾಲ್ಯದಲ್ಲಿ ತೀರಾ ಕಟ್ಟುನಿಟ್ಟಿನ ವಾತಾವರಣದಲ್ಲಿ ಬೆಳೆದಿದ್ದರಂತೆ. ಇತ್ತೀಚೆಗೆ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಈ ನಟಿ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. ರಾಖಿ ಸಾವಂತ್ ಚಿಕ್ಕ ಹುಡುಗಿ ಆಗಿದ್ದಾಗ ಅವರ ಮಾವ ತೀವ್ರವಾಗಿ ಥಳಿಸಿದ್ದರಂತೆ ಅದರಿಂದ ಹೊಲಿಗೆ ಹಾಕಿಸಿಕೊಳ್ಳುವಷ್ಟು ದೊಡ್ಡದಾಗಿ ಗಾಯ ಆಗಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ, ತಮ್ಮ ಬಾಲ್ಯದಲ್ಲಿ ಮನೆಯ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ‘ನಾನು ಬಾಲ್ಕನಿಯಲ್ಲಿ ನಿಲ್ಲುವಂತಿರಲಿಲ್ಲ. ಐಬ್ರೋ, ವ್ಯಾಕ್ಸಿಂಗ್ ಕೂಡ ಮಾಡಿಕೊಳ್ಳಲು ಬಿಡುತ್ತಿರಲಿಲ್ಲ. ಅವರು ಎಂಥ…
Read Moreಮೈಸೂರಿನ ವೈಧ್ಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಬಿಗ್ ಬಾಸ್ ಖ್ಯಾತಿಯ ಪ್ರಥಮ್..!
ಯಾವಾಗಲೂ ನಗುತ್ತಾ, ನಗಿಸುತ್ತಾ ಮಾತನಾಡುವ ನಟ ಪ್ರಥಮ್ ಈಗ ತೀವ್ರ ಕೋಪ ಹೊರಹಾಕಿದ್ದಾರೆ. ಮೈಸೂರಿನ ಕೆಲವು ವೈದ್ಯರ ಮೇಲೆ ಅವರು ಕಿಡಿಕಾರುತ್ತಿದ್ದಾರೆ. ‘ಕೋವಿಡ್ ಸಮಯದಲ್ಲಿ 2000ಕ್ಕೂ ಹೆಚ್ಚು ಕುಟುಂಬ, ವೈದ್ಯರಿಗೆ ಪ್ರಾಮಾಣಿಕವಾಗಿ ಕಿಟ್ ತಲುಪಿಸಿದ ನನ್ನ ಕುಟುಂಬದ ಸ್ವಂತ ಅಜ್ಜಿಗೆ ಇವತ್ತು ಬೆಡ್ ಕೊಡದೇ ರಾತ್ರಿ ಇಡೀ ರಸ್ತೆಯಲ್ಲಿ ನರಳಿಸಿ ಮೈಸೂರಿನ ರಾಕ್ಷಸ ವೈದ್ಯ ಸಿಬ್ಬಂದಿಗಳು ಸಾಯಿಸಿದ್ರು.40 ಸಾವಿರ ಕಿತ್ಕೊಂಡು ಮಧ್ಯರಾತ್ರಿ ಆಸ್ಪತ್ರೆಯಿಂದ ನಮ್ಮಜ್ಜಿನ ಓಡಿಸಿ, ಸಾಯಿಸಿದ ವೈದ್ಯಕೀಯ ಲೋಕಕ್ಕೆ ನಾಚಿಕೆ ಆಗ್ಬೇಕು’ ಎಂದು ಗುಡುಗಿದ್ದಾರೆ. ಇನ್ನೂ ಮೈಸೂರು ವೈದ್ಯರಿಂದ ತಮಗೆ ಆದ ಅನ್ಯಾಯವನ್ನು ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗ ಪಡಿಸಿದ್ದಾರೆ. ಒಬ್ಬ ಸೆಲೆಬ್ರಿಟಿಗೆ ಈ ರೀತಿಯಾದರೆ ಸಾಮಾನ್ಯ ಜನರ ಗತಿ ಏನು ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಇದೇ ವಿಚಾರವನ್ನು ಫೇಸ್ಬುಕ್ನಲ್ಲಿಯೂ ಬರೆದುಕೊಂಡಿರುವ ಪ್ರಥಮ್, ಕೊಂಚ ಖಾರವಾಗಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದೇ ವಾರದಲ್ಲಿ ನಮ್ಮ ಮನೆಯಲ್ಲಿ…
Read Moreಡಾ.ವಿಷ್ಣುವರ್ಧನ್ ರವರ 11ನೇ ವರ್ಷದ ಪುಣ್ಯಸ್ಮರಣೆ..!
ಸಾಹಸ ಸಿಂಹ’ ಡಾ.ವಿಷ್ಣುವರ್ಧನ್ ಅವರು ಅಪಾರ ಸಂಖ್ಯೆ ಅಭಿಮಾನಿಗಳನ್ನು ಅಗಲಿ ಇಂದಿಗೆ 11 ವರ್ಷ ಪೂರೈಸಿದೆ.ಎಷ್ಟೇ ವರ್ಷಗಳು ಉರುಳಿದರೂ ಜನರಿಗೆ ಅವರ ಮೇಲಿದ್ದ ಅಭಿಮಾನ ಕಿಂಚಿತ್ತೂ ಕಡಿಮೆ ಆಗಿಲ್ಲ. ಇಂದಿಗೂ ಕರುನಾಡಿನ ಕೋಟ್ಯಂತರ ಜನರಿಗೆ ವಿಷ್ಣುದಾದಾ ಅವರೇ ಫೇವರಿಟ್ ಹೀರೋ. ನೆಚ್ಚಿನ ನಟನ ಪುಣ್ಯತಿಥಿ ಆಚರಿಸುತ್ತಿರುವ ಅಭಿಮಾನಿಗಳು ಬೆಂಗಳೂರಿನ ‘ಅಭಿನವ್ ಸ್ಟುಡೀಯೊ’ ಆವರಣದಲ್ಲಿ ಇರುವ ಸಮಾಧಿ ಸ್ಥಳಕ್ಕೆ ತೆರಳಿ ನಮನ ಸಲ್ಲಿಸುತ್ತಿದ್ದಾರೆ.ಇನ್ನೂ ಭಾರತಿ ವಿಷ್ಣುವರ್ಧನ್ ಮತ್ತು ಅವರ ಕುಟುಂಬದವರು ಮೈಸೂರಿನಲ್ಲಿರುವ ಸ್ಮಾರಕಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
Read Moreಮಿಲನ’ ಪಾರ್ವತಿ ನಟನೆಯ ಸಿನಿಮಾ ಮೇಲೆ ದೇಶದ್ರೋಹ ಆರೋಪ..!
ಪುನೀತ್ ರಾಜ್ಕುಮಾರ್ ಜೊತೆ ‘ಮಿಲನ’ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಸಿನಿಪ್ರೇಕ್ಷಕರಿಗೆ ಪರಿಚಿತರಾದ ನಟಿ ಪಾರ್ವತಿ ಮೆನನ್ ಅಭಿನಯಿಸಿರುವ ಹೊಸದೊಂದು ಸಿನಿಮಾ ತೊಂದರೆಗೆ ಸಿಲುಕಿದೆ.’ವರ್ತಮಾನಂ’ ಶೀರ್ಷಿಕೆಯ ಮಲಯಾಳಂ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಕಡೆಯಿಂದ ಆಕ್ಷೇಪ ವ್ಯಕ್ತವಾಗಿದೆ. ಅಲ್ಲದೆ, ರಾಷ್ಟ್ರವಿರೋಧಿ ಸಿನಿಮಾ ಎಂಬ ಆರೋಪ ಕೂಡ ಎದುರಾಗಿದೆ. ಸಿದ್ಧಾರ್ಥ್ ಶಿವ ನಿರ್ದೇಶನದ ‘ವರ್ತಮಾನಂ’ ಸಿನಿಮಾದಲ್ಲಿ ಪಾರ್ವತಿ ಮೆನನ್ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಜೆಎನ್ ಯು ಕ್ಯಾಂಪಸ್ನಲ್ಲಿ ನಡೆದ ಪ್ರತಿಭಟನೆಯ ಕುರಿತ ದೃಶ್ಯಗಳು ಈ ಚಿತ್ರದಲ್ಲಿ ಇದೆ ಎನ್ನಲಾಗಿದೆ. ಸಂಶೋಧಕಿಯ ಪಾತ್ರದಲ್ಲಿ ಪಾರ್ವತಿ ಕಾಣಿಸಿಕೊಂಡಿದ್ದು, ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಬಗ್ಗೆ ತಿಳಿದುಕೊಳ್ಳಲು ಜೆಎನ್ಯು ಕ್ಯಾಂಪಸ್ಗೆ ಅವರು ತೆರಳುವ ದೃಶ್ಯಗಳು ಇವೆ ಎಂದು ಹೇಳಲಾಗಿದೆ. ಈ ಸಿನಿಮಾ ಪ್ರದರ್ಶನ ಮಾಡಲು ಕೇರಳದ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ಅನುಮತಿ ಸಿಕ್ಕಿಲ್ಲ. ಯಾವುದೇ ಕಾರಣಗಳನ್ನೂ ನೀಡದೇ ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಕಳಿಸಲಾಗಿದೆ. ‘ರಾಜಕೀಯದ ನಿಲುವುಗಳು ಏನೇ ಇದ್ದರೂ…
Read Moreಗಿರ್ ನ್ಯಾಶನಲ್ ಪಾರ್ಕ್ ನಲ್ಲಿ ಎರಡನೇ ಪತ್ನಿ ಜೊತೆ ಆ್ಯನಿವರ್ಸೆರಿ ಆಚರಿಸಿಕೊಂಡ ಅಮೀರ್ ಖಾನ್..!
ಬಾಲಿವುಡ್ ನಟ ಅಮೀರ್ ಖಾನ್ ಅವರು ಗಿರ್ ನ್ಯಾಶನಲ್ ಪಾರ್ಕ್ನಲ್ಲಿ ಕುಟುಂಬದ ಜೊತೆ ಸಮಯ ಕಳೆದಿದ್ದು, ಕುಟುಂಬದ ಜೊತೆಗೆ ಸಫಾರಿ ಹೋಗಿದ್ದಾರೆ. ಸಿನಿಮಾ ಕೆಲಸಗಳ ಮಧ್ಯೆ ಆಮೀರ್ ಬಿಡುವು ಮಾಡಿಕೊಂಡು ಹೀಗೆ ಸಫಾರಿ ಹೋಗಿದ್ದಕ್ಕೆ ವಿಶೇಷ ಕಾರಣವೂ ಇದೆ. ಅದೇನೆಂದರೆ ಅಮೀರ್ ಖಾನ್ ತನ್ನ ಎರಡನೇ ಪತ್ನಿ ಕಿರಣ್ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು 15 ವರ್ಷಗಳಾಗಿದೆ. ವಿವಾಹ ವಾರ್ಷಿಕೊತ್ಸವದ ಸಂಭ್ರಮದಲ್ಲಿದ್ದ ಈ ಜೋಡಿ ಕೆಲಸದ ಮಧ್ಯೆ ಕೊಂಚ ಬಿಡುವು ಮಾಡಿಕೊಂಡು ಪತ್ನಿ ಕಿರಣ್ ರಾವ್, ಇರಾಖಾನ್, ಆಜಾದ್ ಖಾನ್, ಇಮ್ರಾನ್ ಖಾನ್, ಇಮಾರಾ ಖಾನ್ ಜೊತೆ ಆಮೀರ್ ಖಾನ್ ಗಿರ್ ಪಾರ್ಕ್ ಪ್ರವೇಶ ಮಾಡಿದ್ದಾರೆ. ಇನ್ನೂ ಭಾನುವಾರ ಆಮೀರ್ ಖಾನ್ ಅವರು ಪಾರ್ಕ್ಗೆ ಬರುತ್ತಿದ್ದಂತೆ ಮೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಆಗ ಜಿಪ್ಸಿಯಲ್ಲಿ ಕೂತು ಅಭಿಮಾನಿಗಳತ್ತ ಆಮೀರ್ ಕೈಬೀಸಿದ್ದಾರೆ.ಇನ್ನೂ ಅಮೀರ್ ಖಾನ್ ಗೆ ಕಿರಣ್…
Read More