ಹಾಸನ (ಅರಸೀಕೆರೆ):ಅರಸೀಕೆರೆ ತಾಲೂಕಿನಾದ್ಯಂತ ಒಂದು ವರ್ಷಗಳಿಂದ ಪರಿಸರ ಪ್ರೇಮಿ ವಿಜಯ್ ಕುಮಾರ್ ಗಿಡ ನೆಟ್ಟು ಪೋಷಣೆ ಮಾಡುತ್ತಾ ಬಂದಿದ್ದಾರೆ. ಸದ್ಯ ಇಂದು ಪರಿಸರ ದಿನಾಚರಣೆ ಅಂಗವಾಗಿ ಮತ್ತೊಂದು ಸಸಿ ನೆಟ್ಟು ಸುಮಾರು ಇಲ್ಲಿಯವರೆಗೂ ೨ ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಈ ಗಿಡ ನೆಡುವ ಕಾರ್ಯಕ್ರಮದಲ್ಲಿ ಹಾಜರಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ವಿ.ಟಿ.ಬಸವರಾಜ್ ಮಾತನಾಡಿ, ಗಿಡಮರಗಳಿಂದ ನಮ್ಮ ಪರಿಸರ ತಂಪಾಗಿರುತ್ತದೆ.ಮರಗಳು ಬಿಡುವ ಆಮ್ಲಜನಕದಿಂದ ಜನಸಾಮಾನ್ಯರಿಗೆ ಒಳ್ಳೆಯ ಗಾಳಿ ಸಿಗುತ್ತದೆ.ಈಗಾಗಲೇ ಆಕ್ಸಿಜನ್ ಗೋಸ್ಕರ ಜನರು ಪರದಾಡುವ ಪರಿಸ್ಥಿತಿ ಬಂದಿದೆ.ಗಿಡಮರಗಳು ಬೆಳೆದರೆ ನಮಗೆ ನಮ್ಮ ಪರಿಸರಕ್ಕೆ ಒಳ್ಳೆಯದು ಎಂದರಲ್ಲದೆ, ಇಂದು ಪರಿಸರ ದಿನಾಚರಣೆ ಅಂಗವಾಗಿ ಮನೆಗೊಂದು ಮರ, ಊರಿಗೊಂದು ವನ ಎಂಬAತೆ ಎಲ್ಲರೂ ಗಿಡ ನೆಟ್ಟು ಪೋಷಣೆ ಮಾಡಿ ಎಂದು ಕರೆ ನೀಡಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಅವಿನಾಶ್ ನಾಯ್ಡು,…
Read MoreCategory: ಹಾಸನ
ಉದ್ಯಮಿ ಸಚಿನ್ ನಾರಾಯಣ್ ಮನೆ ಮೇಲೆ ಸಿಬಿಐ ದಾಳಿ..?
ಹಾಸನ : ಡಿ.ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆಸಿದ ಬೆನ್ನಲ್ಲೇ,ಆಪ್ತ ಉದ್ಯಮಿ ಸಚಿನ್ ನಾರಾಯಣ್ ಮನೆ ಮೇಲೂ ಕೂಡ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.ಹಾಸನದ ಬಿ.ಎಂ ರಸ್ತೆಯಲ್ಲಿರುವ ಸಚಿನ್ ನಾರಾಯಣ್ ಮನೆ ಮೇಲೆ ಸಿಬಿಐ ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು,ಶೋಧ ಕಾರ್ಯ ನಡೆಸುತ್ತಿದ್ದಾರೆ. ಖಾಸಗಿ ಕಾರಿನಲ್ಲಿ ಬಂದಿರುವ ಸಿಬಿಐ ಅಧಿಕಾರಿಗಳು ಬೆಳಗ್ಗೆಯಿಂದಲೇ ಎಲ್ಲಾ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಡಿಕೆ ಶಿವಕುಮಾರ್ ಮನೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಸಹ ಸಚಿನ್ ನಾರಾಯಣ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.ಇದೀಗ ಮೂರನೇ ಬಾರಿ ಮತ್ತೆ ಸಚಿನ್ ನಾರಾಯಣ್ ಮನೆ ಮೇಲೆ ದಾಳಿ ನಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ. ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
Read Moreತಾಯಿಯಿಂದ ದೂರ ಉಳಿದ ಮರಿಯಾನೆ ನರಳಾಟ..!
ಹಾಸನ: ತಾಯಿಯಿಂದ ದೂರ ಉಳಿದ ನರಳಾಡುತ್ತಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದ ಕಾಫಿ ತೋಟದ ನಡುವೆ ಅಮ್ಮನ ಸೇರಲು ಮರಿಯಾನೆ ಹಂಬಲಿಸುತ್ತಿದ್ದು, ಏಕಾಂಗಿಯಾಗಿ ನರಳಾಡುತ್ತಿದೆ. ಎಡಗಾಲಿಗೆ ನೋವಾಗಿರುವ ಕಾರಣ ನಡೆಯಲಾರದೇ ಕೂತಲ್ಲೇ ಕೂತಿರುವ ಮರಿಯಾನೆ ನರಳಾಡುತ್ತಿದ್ದು, ಜನ ಮರುಗುತ್ತಿದ್ದಾರೆ.ಶತಾಯಗತಾಯ ಮರಿಯಾನೆಯನ್ನ ಅಮ್ಮನ ಬಳಿ ಸೇರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನ ನಡೆಸುತ್ತಿದ್ದಾರೆ. ಅಕಸ್ಮಾತ ತಾಯಿ ಆನೆ ಕರೆದೊಯ್ಯದಿದ್ದರೆ,ಆನೆ ಕ್ಯಾಂಪ್‌ಗೆ ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ತಯಾರಿ ನಡೆಸುತ್ತಿದೆ. ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
Read Moreಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಟ್ಕರ್ ರವರ ಮಹಾನಾಯಕ ಧಾರಾವಾಹಿ ಬ್ಯಾನರ್ ಗೆ ಪುಷ್ಪಾರ್ಚನೆ..!
ಹಾಸನ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಜೀವನಾಧರಿತ ಮಹಾನಾಯಕ ಧಾರವಾಹಿಗೆ ಎಲ್ಲೇಡೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಲಿದೆ. ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದಲ್ಲಿ ಊರಿನ ಮುಖಂಡರೆಲ್ಲಾರೂ ಒಗ್ಗೂಡಿ ಮಹಾನಾಯಕ ಧಾರಾವಾಹಿಯ ಬ್ಯಾನರ್ ಗೆ ಪುಷ್ಪಾರ್ಚನೆ ಮಾಡಿ ದೀಪ ಹಚ್ಚಿ ಗೌರವವನ್ನು ಸಲ್ಲಿಸಿದ್ದರು. ಇನ್ನು ಅಧ್ಯಕ್ಷರಾದ ಯೋಗೇಶ್ ಮಾತನಾಡಿ ಜೀ ಕನ್ನಡಲ್ಲಿ ಮೂಡಿಬರುತ್ತಿರುವ ಮಹಾನಾಯಕ ಧಾರಾವಾಹಿ ಅಂಬೇಡ್ಕರ್ ರವರ ಜೀವನಾಧಾರಿತದ್ದಾಗಿದೆ. ಎಲ್ಲಾರೂ ಕೂಡ ರಾಘವೇಂದ್ರ ಹುಣಸೂರ್ ರವರಿಗೆ ಪ್ರೋತ್ಸಾಹಿಸಬೇಕೆ ಹೊರತು ಜೀವ ಬೇದರಿಕೆ ಹಾಕುವುದಲ್ಲಾ. ಮೇಳು-ಕೀಳು ಎಂಬಾ ಭೇದ ಭಾವ ಮಾಡದೇ ಎಲ್ಲಾರೂ ಒಂದೇ ಎಂಬಾ ಮನೋಭಾವನೆಯನ್ನು ಜನರು ಬೆಳಸಿಕೊಳ್ಳಬೇಕು. ರಾಘವೇಂದ್ರ ಹುಣಸೂರ್ ರವರಿಗೆ ಈ ಧಾರಾವಾಹಿಯನ್ನು ನಿಲ್ಲಿಸುವಂತೆ ಸಾಕಷ್ಟು ಬೇದರಿಕೆಗಳು ಬಂದಿದೆ. ಆದರೂ ಯಾವುದಕ್ಕೂ ಅಂಜದೇ ಧಾರಾವಾಹಿಯನ್ನು ನಿಲ್ಲಿಸದೇ ಮುಂದುವರೆಸುತ್ತಿದ್ದು ಅವರ ಈ ಧೈರ್ಯಕ್ಕೆ ನಮ್ಮ ದಲಿತ ವರ್ಗದವರಿಂದ ಪ್ರೋತ್ಸಾಹ ಯಾವಾಗಲೂ ಇರುತ್ತದೆ ಎಂದರೂ. ಇನ್ನೂ ಈ…
Read Moreಫೋಟೊ ತೆಗೆಸಿಕೊಳ್ಳಲು ಹೋದ ಯುವಕ ನೀರು ಪಾಲು..!
ಹಾಸನ : ಫೋಟೋ ತೆಗೆಸಿಕೊಳ್ಳಲು ಹೋಗಿ ಜಲಪಾತಕ್ಕೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.ಸಕಲೇಶಪುರ ತಾಲೂಕಿನ ಕಾಡುಮನೆ ಸಮೀಪ ಇರುವ ಅಬ್ಬಿಗುಂಡಿಯಲ್ಲಿ ಘಟನೆ ನಡೆದಿದ್ದು, ರತನ್ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮಹಾಲಯ ಅಮಾವಾಸ್ಯೆ ಹಿನ್ನೆಲೆ ಸಕಲೇಶಪುರ ಗ್ರಾಮಕ್ಕೆ ಬಂದಿದ್ದ ಯುವಕ ರತನ್, ತನ್ನ ಸಂಬಂಧಿಕರ ಜೊತೆ ಗುಡಾಣಗೆರೆ ಸಮೀಪ ಇರುವ ಅಬ್ಬಿಗುಂಡಿ ಜಲಪಾತಕ್ಕೆ ತೆರಳಿದ್ದಾರೆ. ಈ ವೇಳೆ ಕಾಲು ಜಾರಿ ನೀರಿನಲ್ಲಿ ಮುಳುಗಿ ರತನ್ ಸಾವನ್ನಪ್ಪಿದ್ದಾನೆ.ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
Read Moreಕ್ಷುಲ್ಲಕ ಕಾರಣಕ್ಕೆ ಪಿಡಿಒ ಮೇಲೆ ಹಲ್ಲೆ..!
ಹಾಸನ : ಕರ್ತವ್ಯ ನಿರತ ಪಿಡಿಒ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಮಡಬಲು ಗ್ರಾಮದ ಪಿಡಿಒ ಮೊಹಮ್ಮದ್ ಮೆಣಸು ಬಳ್ಳಿ ಕೊಡಸಲಿಲ್ಲ ಎಂಬ ಕಾರಣಕ್ಕೆ ಅದೇ ಗ್ರಾಮದ ಪುಟ್ಟರಾಜು ಗಲಾಟೆ ಮಾಡಿದ್ದ.ಇದರಿಂದ ಆಕ್ರೋಶಗೊಂಡ ಪಿಡಿಒ ಮೊಹಮ್ಮದ್, ಆಲೂರು ಪೊಲೀಸ್ ಠಾಣೆಯಲ್ಲಿ ಪುಟ್ಟರಾಜು ವಿರುದ್ಧ ದೂರು ದಾಖಲಿಸಿದ್ದರು.ಇದರಿಂದ ರೊಚ್ಚಿಗೆದ್ದ ಪುಟ್ಟರಾಜು, ಪಿಡಿಒ ಮೊಹಮ್ಮದ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಪಿಡಿಒ ಮೊಹಮ್ಮದ್ರನ್ನ ಆಲೂರು ಆಸ್ಪತ್ರೆಗೆ ದಾಖಲಿಸಲಾಗಿದೆ.ಸದ್ಯ ಪ್ರಕರಣ ಸಂಬಂಧ ಆಲೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿ ಪುಟ್ಟರಾಜುರನ್ನ ಪೊಲೀಸರು ಬಂಧಿಸಿದ್ದಾರೆ. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
Read Moreಅನೈತಿಕ ಸಂಬಂಧದ ಹಿನ್ನೆಲೆ ಪತ್ನಿಯಿಂದಲೇ ಪತಿ ಹತ್ಯೆ..!
ಹಾಸನ:ಅನೈತಿಕ ಸಂಬಂಧದ ಆರೋಪದ ಹಿನ್ನೆಲೆ ಪತಿಯನ್ನು ಪತ್ನಿಯೇ ಹತ್ಯೆ ಮಾಡಿರುವ ಘಟನೆ ಬೇಲೂರು ತಾಲ್ಲೂಕಿನ ವಾಗಿನಕೆರೆ ಗ್ರಾಮದ ಕಲ್ಲಹಳ್ಳಿಯಲ್ಲಿ ನಡೆದಿದೆ.52 ವರ್ಷದ ಪತಿ-ಚಂದ್ರೇಗೌಡ ಪ್ರತಿದಿನ ಮನೆಗೆ ಬಾರದೆ ಇರುವುದರಿಂದ ಅನುಮಾನಗೊಂಡ ಪತ್ನಿ-ಇಂದ್ರಮ್ಮ ಕಳೆದ ರಾತ್ರಿ ಪತಿಯನ್ನು ಪ್ರಶ್ನಿಸಿದ್ರು, ಅನೈತಿಕ ವಿಚಾರ ಇದೆ ಎನ್ನುವ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಾಮಕಿ ನಡೆದಿದ್ದು, ಕೋಪತೀವ್ರ ವಿಕೋಪಕ್ಕೆ ತಿರುಗಿದ ಕಾರಣ ಪತ್ನಿ ಮನೆಯಲ್ಲಿ ಇದ್ದಂತಹ ಮಚ್ಚಿನಿಂದ ಪತಿ ಮೇಲೆ ಮಾರಾಣಾಂತಿಕ ಹಲ್ಲೇ ನಡೆಸಿದ್ದಾರೆ. ಮಚ್ಚಿನೇಟಿನಿಂದ ತೀವ್ರವಾಗಿ ಗಾಯಗೊಂಡ ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು,ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೇಲೂರು ಪೋಲಿಸರು ಭೇಟಿ ನೀಡಿದ್ದು ಪತ್ನಿ ಇಂದ್ರಮ್ಮನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..
Read Moreಮಲಗಿದ್ದ ನಿರ್ಗತಿಕ ಮಹಿಳೆ ಮೇಲೆ ರೇಪ್ ಅಂಡ್ ಮರ್ಡರ್…!
ಹಾಸನ :ಅಂಗಡಿ ಎದುರು ಮಲಗಿದ್ದ ನಿರ್ಗತಿಕ ಮಹಿಳೆ ಮೇಲೆ ವ್ಯಕ್ತಿಯೋರ್ವ ಕೊಲೆ ಮಾಡಿ ಅತ್ಯಾಚಾರ ವೆಸಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಬಿ.ಎಂ ರಸ್ತೆಯಲ್ಲಿರುವ ಅಂಗಡಿ ಮುಂದೆ ಮಲಗಿದ್ದ ಮಹಿಳೆಯನ್ನ ಕರೆದೊಯ್ಯಲು ವ್ಯಕ್ತಿ ಉತ್ನಿಸಿದ್ದಾನೆ. ಆದರೆ ಇದಕ್ಕೆ ಒಪ್ಪದ ಮಹಿಳೆ ಮೇಲೆ ಸಿಮೆಂಟ್ ಕಲ್ಲು ಎತ್ತುಹಾಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಕಾಮುಕನ ರಾಕ್ಷಸೀ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಸಿಸಿಟವಿ ವಿಡಿಯೋ ಆಧರಿಸಿ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..
Read Moreಸಕಲೇಶಪುರದ ಸುತ್ತಮುತ್ತ ಭಾರಿ ಮಳೆ…ನದಿಯಲ್ಲಿ ಮುಳುಗಿದ ದೇವಸ್ಥಾನ
ಹಾಸನ : ಮಲೆನಾಡು ಸಕಲೇಶಪುರದಲ್ಲಿ ಭಾರಿ ಮಳೆಯಾಗುತ್ತಿದ್ದು, ಹೇಮಾವತಿ ನದಿ ಉಕ್ಕಿ ಹರಿಯುತ್ತಿದೆ. ಸಕಲೇಶಪುರದ ಹೊಳೆಮಲ್ಲೇಶ್ವರ ದೇವಾಲಯದ ಸುತ್ತಮುತ್ತ ಜಲಾವೃತಗೊಂಡಿದ್ದು, ಸಕಲೇಶಪುರ ಪಟ್ಟಣದ ಆಜ಼ಾದ್ ನಗರದಲ್ಲಿರುವ ಮನೆ ಹಾಗು ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ.ಹೇಮಾವತಿ ಜಲಾಶಯದ ಇಂದಿನ ಮಟ್ಟ ಜಲಾಶಯದ ಗರಿಷ್ಠ ಮಟ್ಟ 2,922 ಅಡಿ,ಇಂದಿನ ನೀರಿನ ಮಟ್ಟ 2911.64 ಅಡಿ ಇಂದಿನ ಒಳಹರಿವು 47,320 ಕ್ಯೂಸೆಕ್,ಇಂದಿನ ಹೊರಹರಿವು 1400 ಕ್ಯೂಸೆಕ್ ಒಟ್ಟಿನಲ್ಲಿ ಇಷ್ಟುದಿನ ಕೊರೊನಾ ಜೊತೆ ಜೀವ ಉಳಿಸಿಕೊಳ್ಳಲು ಹೊಡೆದಾಡುತ್ತಿದ್ದ ಜನ ಈಗ ಮಳೆಯಿಂದ ತಮ್ಮ ಪ್ರಾಣವನ್ನು ರಕ್ಷಣೆ ಮಾಡಿಕೊಳ್ಳಲು ಮುಂದಾಗಬೇಕಿದೆ ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು
Read Moreರಾಜ್ಯದಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ…!
ಹಾಸನ : ರಾಜ್ಯದಲ್ಲಿ ಕಿಲ್ಲರ್ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಹಾಸನದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಾಯಿದೆ. ಇಂದು ಹಾಸನದಲ್ಲಿ ಕೊರೊನಾ ವಾರಿಯರ್ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ಹೆಸರಾಂತ ಹಿರಿಯ ವೈದ್ಯ ರತ್ನಾಕರ್ ಶೆಟ್ಟಿ, ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಹಲವು ದಿನಗಳಿಂದ ಸೋಂಕಿನಿಂದ ಬಳಲುತ್ತಿದ್ದ ಅವರಿಗೆ ನಿಗಧಿತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಳೆದ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸೋಂಕಿನಿಂದ ಮೃತಪಟ್ಟ ಹಿನ್ನಲೆ ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿಕೊಂಡಿದೆ. ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು.
Read More