ಮದುವೆಗೆ ಹುಡುಗಿ ಸಿಗದ ಹಿನ್ನೆಲೆ 34 ವರ್ಷದ ಪ್ರವೀಣ್ ಎಂಬ ಯುವಕ ಮನನೊಂದು ನೇಣಿಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕಿನ ಕಪ್ಪಸೋಗೆ ಗ್ರಾಮದಲ್ಲಿ ನಡೆದಿದೆ. ಆರೇಳು ವರ್ಷಗಳಿಂದ ಹುಡುಗಿ ಹುಡುಕುತ್ತಿದ್ದರೂ ಮದುವೆಗೆ ಹೆಣ್ಣು ಸಿಗದ ಹಿನ್ನೆಲೆ ಮಾನಸಿಕ ಖಿನ್ನತೆಗೆ ಒಳಗಾಗಿ ಮನೆಯಲ್ಲಿ ಪ್ರವೀಣ್ ನೇಣಿಗೆ ಶರಣಾಗಿದ್ದಾನೆ. ಸಂಬಂಧಿಕರಿರುವ ಎಲ್ಲಾ ಕಡೆ ಹೆಣ್ಣಿಗಾಗಿ ಹುಡುಕಾಟ ನಡೆಸಲಾಗಿತ್ತು. ಪ್ರವೀಣ್ ಕೃಷಿಕನಾದ ಕಾರಣ ಹೆಣ್ಣು ನೀಡಲು ನಿರಾಕರಿಸಲಾಗುತ್ತಿತ್ತು ಎಂದು ಮೃತನ ಸಹೋದರ ಪರಮೇಶ್ ನೋವನ್ನು ವ್ಯಕ್ತಪಡಿಸಿದ್ದಾನೆ.ಇನ್ನೂ ಮುಂದೆ ಯಾರೂ ಕೂಡ ಹುಡುಗ ಕೃಷಿಕ ಎಂದು ಕಡೆಗಣಿಸಬೇಡಿ ಎಂದು ಹೆಣ್ಣು ಹೆತ್ತವರಿಗೆ ಪ್ರವೀಣ್ ಸಹೋದರ ಪರಮೇಶ್ ಮನವಿ ಮಾಡಿದ್ದಾರೆ.ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ನಂಜನಗೂಡು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ- ಹುಲ್ಲಹಳ್ಳಿ ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು
Read MoreCategory: ಹುಬ್ಬಳ್ಳಿ-ಧಾರವಾಡ
ಪಿಡಿಓಗಳನ್ನು ಕಂಟ್ರೋಲ್ ಇಡಿ, ಬಡವರಿಗೆ ಮೊದಲ ಆದ್ಯತೆ- ವಿ.ಸೋಮಣ್ಣ..!
ಹುಬ್ಬಳ್ಳಿ: ಜಗದೀಶ್ ನಗರ ಆಶ್ರಯ ಬಡಾವಣೆಯಲ್ಲಿ ಬಾಕಿ ಉಳಿದ 188 ಆಶ್ರಯ ಮನೆಗಳನ್ನು ಮೂಲ ಫಲಾನುಭವಿಗಳಿಗೆ ಹಸ್ತಾಂತರ ಮಾಡಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಜಗದೀಶ್ ನಗರ ಆಶ್ರಯ ನಿವಾಸಿಗಳ ಹಿತರಕ್ಷಣಾ ಸಮತಿ ವತಿಯಿಂದ ಮನವಿ ಸಲ್ಲಿಸಿದರು. ನಂತರ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ ಬಡವರ ಶೋಷಣೆ ನಿಂತಿಲ್ಲ, ನಾಳೆ ಬರ್ತೀನಿ, ಆಯುಕ್ತರ ಕರಿಸ್ತೀನಿ, ನನ್ನ ಜೊತೆ ಎಂಟು ದಿನ ಬಾ, ನೀನೇ ಮಂತ್ರಿಗಿರಿ ಮಾಡು, ಮೂರುವರೆ ಲಕ್ಷದಲ್ಲಿಯೂ ದುಡ್ಡು ಹೊಡಿಯುತಿದ್ದಾರೆ, ಎಂದು ಹೋರಾಟಗಾರನಿಗೆ ಹೇಳಿದರು. ಇನ್ನೂ ಆತ್ಮವಂಚನೆ ಮಾಡಿಕೊಳ್ಳಬೇಡಿ ಬಡವರ ಪರ ಇರಿ ಶಾಸಕ ಅರವಿಂದ ಬೆಲ್ಲದ್ ಒಳ್ಳೆವರು ಇದ್ದಾರೆ ಸ್ವಲ್ಪ ಹೈಫೈ ಇದ್ದಾರೆ. ಈಗ ಮೊದಲ ಕಾನೂನು ಹೋಯ್ತು, ಮೋಸ ವಂಚನೆ ಈಗ ನಡೆಯಲ್ಲ. 2021 ರಲ್ಲಿ ಅಲೌಟ್ ಆದ ಮನೆಗಳಿಗೆ, ಹಸ್ತಾಂತರ ಮಾಡಿಲ್ಲ ಇನ್ನೂ ಹತ್ತು ಹದಿನೈದು ದಿನಗಳಲ್ಲಿ ಇಷ್ಟು ವರ್ಷದ…
Read Moreಬೆಳಗಾವಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶಕ್ಕೆ ಚಾಲನೆ-ಡಿಕೆ ಶಿವಕುಮಾರ್..!
ಹುಬ್ಬಳ್ಳಿ: ಈಗಾಗಲೇ ಬೆಂಗಳೂರು, ಮೈಸೂರು ವಿಭಾಗದ ಸಮಾವೇಶ ಯಶಸ್ವಿಯಾಗಿ ನಡೆದಿದೆ. ಬೆಳಗಾವಿ ವಿಭಾಗದ ಸಮಾವೇಶ ಹುಬ್ಬಳ್ಳಿಯ ನಡೆಯುತ್ತಿದೆ. ನಾವು ಸಂಕಲ್ಪ ಮಾಡಲು ಇಲ್ಲಿಸೇರಿದ್ದೇವೆ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ ಹೇಳಿದರು. ನಗರದಲ್ಲಿಂದು ಬೆಳಗಾವಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು 2021 ಹೋರಾಟದ ವರ್ಷ. ಸಂಘರ್ಷದ ವರ್ಷ ಎಂದು ಘೋಷಣೆ ಮಾಡಿದ್ದೇವೆ. ರಾಷ್ಟ್ರ, ರಾಜ್ಯದಲ್ಲಿ ಏನು ನಡೆಯುತ್ತಿದೆ ಅನ್ನೋದು ನಿಮಗೆಲ್ಲ ಗೊತ್ತಿದೆ. ಕಾಂಗ್ರೆಸ್ ಮಾಸ್ ಗ್ರೇಡ್ ಪಕ್ಷವಾಗಿದೆ. ಇದೀಗ ಕೆಡರ್ ಗ್ರೇಡ್ ಪಕ್ಷ ಮಾಡಬೇಕಾಗಿದೆ. ಕಾರ್ಯಕರ್ತರು ಜವಾಬ್ದಾರಿಗಳನ್ನು ಹೇಗೆ ನೀಡಬೇಕು, ಅವರು ಹೇಗೆ ಕೆಲಸ ಮಾಡಬೇಕು ಅನ್ನೋದರ ಬಗ್ಗೆ ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಹೋರಾಟ ಮಾಡಿಕೊಂಡು ಬಂದಿರುವ ಪಕ್ಷ. ಪಕ್ಷದ ಇತಿಹಾಸವನ್ನು ಯಾರು ಬದಲಾಯಿಸಲು ಸಾಧ್ಯವಿಲ್ಲ ಎಂದರು. ಕಾಂಗ್ರೆಸ್ ಪಕ್ಷದ ಗುರಿಯನ್ನು ಮರೆತರೆ ಸೋಲು ಕಟ್ಟಿಟ್ಟ ಬುತ್ತಿ ಅಂತಾ ನೆಹರು…
Read Moreರಾಷ್ಟ್ರೀಯ ಆಹಾರ ಭದ್ರತಾ ಕಾರ್ಯಕ್ರಮ ರೈತರಿಗೆ ಸಲಹೆ..!
ಹುಬ್ಬಳ್ಳಿ: ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿಯಲ್ಲಿ ಗುಡೇನಕಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ರೈತರನ್ನು ಉದ್ದೇಶಿಸಿ ಕೃಷಿ ಅಧಿಕಾರಿ ಅಂಬಿಕಾ ಮಹೇಂದ್ರಕರ ಮಾತನಾಡಿದರು. ಈ ವೇಳೆ ರೈತರು ಈಗಾಗಲೇ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಬಿತ್ತನೆಯ ಗೋಧಿ, ಕಡಲೆ, ಕುಸುಬೆ, ಜೋಳದ ಬೀಜ ಪಡೆದು ಭೂಮಿಯಲ್ಲಿ ಬಿತ್ತನೆ ಮಾಡಿದ್ದಿರಾ, ಭೂಮಿಯೂ ಅತಿವೃಷ್ಟಿ ಪರಿಣಾಮ ಈ ಬಾರಿ ಅತಿ ಹೆಚ್ಚು ನೀರಿನಾಂಶ ಹೊಂದಿದ್ದು ಹಿಂಗಾರು ಬೆಳೆಗಳಿಗೆ ಪೂರಕವಾಗಲಿದೆ.ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ನಾವು ಆ ಬೆಳೆ ಪರಿಶೀಲನೆಗೆ ಬಂದಿದ್ದೇವೆ ಎಂದರು. ಇನ್ನೂ ಈ ಸಂದರ್ಭದಲ್ಲಿ ಗುಡೇನಕಟ್ಟಿ ಗ್ರಾಮ ರೈತ ಮುಖಂಡ ಬಸವರಾಜ ಯೋಗಪ್ಪನವರ, ಹನುಮಂತ ಸಿದ್ದೂನವರ, ಶಿವಾನಂದ ಕಳಸಣ್ಣನವರ, ಯಲ್ಲಪ್ಪ ಸತ್ಯಣ್ಣನವರ ಉಪಸ್ಥಿತರಿದ್ದರು. ವರದಿ- ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ
Read Moreಜನವರಿ 25-27 ಕ್ಕೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಸಾಂಸ್ಕ್ರತಿಕ ಉತ್ಸವ- ಬಸವರಾಜ ದೇವರು..!
ಹುಬ್ಬಳ್ಳಿ: ಧಾರವಾಡದ ಮನಸೂರ ಕನಕ ಕಲಾ ಸಾಂಸ್ಕೃತಿಕ ಕೇಂದ್ರ(ರಿ) ಸುಕ್ಷೇತ್ರ ಜಗದ್ಗುರು ಶ್ರೀ ರೇವಣಸಿದ್ದ ಮಹಾಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಇದೇ 25 ರಿಂದ 27 ಭಾನುವಾರದವರೆಗೆ ರಾಷ್ಟ್ರವೀರ ಸಂಗೊಳ್ಳಿ ರಾಯಣ್ಣ ಸಾಂಸ್ಕೃತಿಕ ಉತ್ಸವವನ್ನು ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಸವರಾಜ ದೇವರು ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಮಹಾದ್ವಾರಕ್ಕೆ ರಾಷ್ಟ್ರವೀರ ಸಂಗೊಳ್ಳಿ ರಾಯಣ್ಣ ಹೆಸರಿಸಲಾಗುವುದು.ಪ್ರಧಾನ ವೇದಿಕೆಗೆ ವೀರಪಾಂಡೆ ಕಟ್ಟಿ ಬೊಮ್ಮಣ್ಣ ಹೆಸರಿಡಲಾಗುವುದು. 25ರಂದು ನಡೆಯುವ ಕಾರ್ಯಕ್ರಮದಲ್ಲಿ ರಾಯಣ್ಣ ಜ್ಯೋತಿ ಪ್ರಜ್ವಲನೆ ಜ್ಯೋತಿ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದ್ದು,ಜನವರಿ 26ರಂದು ರಾಜ್ಯಮಟ್ಟದ ಸಂಗೊಳ್ಳಿ ರಾಯಣ್ಣ ಬದುಕು ಹೋರಾಟ ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿದೆ ಎಂದರು. ಇನ್ನೂ ಕಾರ್ಯಕ್ರಮದ ಸಾನಿಧ್ಯವನ್ನು ಬಸವರಾಜ ದೇವರು ವಹಿಸಲಿದ್ದು, ಕಾರ್ಯಕ್ರಮ ಉದ್ಘಾಟನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದ ಡಾ.ಎಂ.ಎನ್.ನಂದೀಶ್ ಹಂಜೆ ನೆರವೇರಿಸಲಿದ್ದಾರೆ.ಕಾರ್ಯಕ್ರಮ ಅಧ್ಯಕ್ಷತೆಯನ್ನು ಡಾ.ಎಫ್.ಡಿ.ಹಳ್ಳಿಕೇರಿ ವಹಿಸಲಿದ್ದು,ರಾಜ್ಯದ ವಿವಿಧ ಮೂಲೆಗಳಿಂದ…
Read Moreಬಾರಾ ಕೊಟ್ರಿಯಲ್ಲಿ ತುಂಬುತ್ತಿದೆ ಕಸದ ರಾಶಿ- ಕ್ಯಾರೇ ಅನ್ನದ ಬಿಬಿಎಂಪಿ ಅಧಿಕಾರಿಗಳು..!
ಹುಬ್ಬಳ್ಳಿ: ಒಂದು ಕಡೆ ಸ್ವಚ್ಛ ನಗರ ಹಾಗೂ ಸ್ಮಾರ್ಟ್ ಸಿಟಿ ಕನಸು ಕಾಣುತ್ತಿರುವ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳು ಪಾಲಿಕೆ ಕಸ ವಿಲೇವಾರಿ ಮಾಡುವುದನ್ನು ಮರೆತಂತೆಯ ಕಾಣುತ್ತಿದೆ. ಪರಿಣಾಮ ನಗರದಲ್ಲಿ ತ್ಯಾಜ್ಯ ವಿಲೇವಾರಿಯಾಗದೇ ರಸ್ತೆ ಉದ್ದಕ್ಕೂ ಕಸದ ರಾಶಿ ರಾರಾಜಿಸುತ್ತಿದೆ. ಮೊದಲೇ ದೇಶದಲ್ಲೇ ಕೊರೊನಾ ಹಾವಳಿ ತಪ್ಪಿಸಲು ಸರಕಾರ ಹರಸಾಹಸ ಪಡುತ್ತಿದೆ, ಅದರೊಂದಿಗೆ ಪ್ರತಿಯೊಂದು ನಗರದಲ್ಲಿ ಸ್ವಚ್ಚತೆ ಬಗ್ಗೆ ಗಮನ ಹರಿಸುವಂತೆ, ಸರಕಾರ ಮಹಾನಗರ ಪಾಲಿಕೆ ಆದೇಶ ನೀಡಿದೆ, ಇದರ ನಡುವೆಯೂ ಕೇಶ್ವಾಪೂರದ ಬಾರಾಕೊಟ್ರಿ ಬಳಿ ಅಧಿಕಾರಿಗಳ ಕರ್ತವ್ಯ ಲೋಪದಿಂದ ದಿನೇ ದಿನೇ ಕಸದ ಸಮಸ್ಯೆ ದ್ವಿಗುಣಗೊಳ್ಳುತ್ತಿದೆ. ಪರಿಣಾಮ ಸ್ಮಾರ್ಟ್ ಸಿಟಿಯ ಕನಸು ಇನ್ನೂ ಕಗ್ಗಂಟಾಗುತ್ತಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು.ಮತ್ತು ಬಹುತೇಕ ರಸ್ತೆಯ ತುಂಬಾ ಕಸದ ರಾಶಿ ತುಂಬಿದೆ, ಅದರಿಂದ ಕೆಟ್ಟ ವಾಸನೆ ಬರುತ್ತಿದ್ದು, ಮನೆಯಲ್ಲಿ ವಾಸಿಸಲು ಸಹ ಆಗುತ್ತಿಲ್ಲ,ಎಂಬಾ…
Read Moreಮಠದ ಆಸ್ತಿ ವಿವಾದದ ಬಗ್ಗೆ ಸಾರ್ವಜನಿಕರಿಗೆ, ಭಕ್ತರಿಗೆ ಮಾಹಿತಿ ನೀಡುವುದು ಅವಶ್ಯಕ- ಬಸವರಾಜ ಹೊರಟ್ಟಿ..!
ಹುಬ್ಬಳ್ಳಿ: ಕೆಎಲ್ಇ ಸಂಸ್ಥೆಗೆ ಮೂರುಸಾವಿರ ಮಠದ ಆಸ್ತಿ ದಾನದ ಹಿಂದೆ ಹಣದ ವ್ಯವಹಾರ ನಡೆದಿದೆ ಎಂಬ ದಿಂಗಾಲೇಶ್ವರ ಶ್ರೀಗಳ ಆರೋಪದ ಬಗ್ಗೆ ನಮಗೆ ಮಾಹಿತಿ ಇಲ್ಲ, ಮಾಹಿತಿ ಇದ್ದವರು ದಾಖಲೆ ಬಿಡುಗಡೆ ಮಾಡಬೇಕು ಎಂದು ಬಸವರಾಜ್ ಹೊರಟ್ಟಿ ದಿಂಗಾಲೇಶ್ವರ ಶ್ರೀಗಳಿಗೆ ಸವಾಲು ಹಾಕಿದರು. ಮಠದ ಆಸ್ತಿ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಮೂರುಸಾವಿರ ಮಠದ ಆಸ್ತಿ ಬಗ್ಗೆ ಸ್ವಾಮೀಜಿಗಳ ಜೊತೆ ಮಾತನಾಡಿದ್ದೇನೆ. ಮಠದಲ್ಲಿ ಏನೇನಾಗಿದೆ ಅದರ ಮಾಹಿತಿ ತೆಗೆದುಕೊಳ್ಳಲು ಹೇಳಿದ್ದೇನೆ ಅಲ್ಲದೇ ಜಗದೀಶ್ ಶೆಟ್ಟರ್ ಅವರ ಜೊತೆಯೂ ಮಾತನಾಡಿದ್ದೇನೆ. ಮಠದ ಎಲ್ಲ ಮಾಹಿತಿ ತೆಗೆದುಕೊಂಡು ಸಭೆ ಕರೆಯಿರಿ ಎಂದಿದ್ದೇನೆ. ಉನ್ನತ ಸಮಿತಿ ಸಭೆ ನಡೆಸಿ ಅದರ ಚರ್ಚೆ ಮಾಡಬೇಕಿದೆ. ಮಠದ ವಿವಾವದ ಬಗ್ಗೆ ಸಾರ್ವಜನಿಕರಿಗೆ, ಭಕ್ತರಿಗೆ ಮಾಹಿತಿ ನೀಡುವುದು ಅವಶ್ಯಕವಿದೆ ಎಂದರು.ಮಠದ ಆಸ್ತಿ ಪರಭಾರೆ ಹಿಂದಿನ ಸ್ವಾಮೀಜಿಗಳಂತೆ ಆಗಿದೆ. ಕೆಎಲ್ಇಗೆ ಆಸ್ತಿ ನೀಡಿದ್ದು ಸ್ವಾಮೀಜಿಗಳ ವೈಯಕ್ತಿಕ ವಿಚಾರ…
Read Moreಹೊಸ ವರ್ಷಕ್ಕೆ ಪೋಲಿಸರಿಗೆ ಭರ್ಜರಿ ಗಿಫ್ಟ್ -ಪೋಲಿಸ್ ಕಮೀಷನರ್ ಲಾಬೂರಾಮ್…!
ಹುಬ್ಬಳ್ಳಿ: ಸದಾ ಕರ್ತವ್ಯದಲ್ಲಿ ಬ್ಯುಸಿ ಆಗಿ ಮನೆಯವರೊಂದಿಗೆ ಕಾಲ ಕಳೆಯಲು ಆಗದಂತ ಪರಿಸ್ಥಿತಿಯಲ್ಲಿ ಇದ್ದ ಅವಳಿ ನಗರದ ಪೊಲೀಸರಿಗೆ ಪೋಲಿಸ್ ಕಮೀಷನರ್ ಲಾಬುರಾಮ್ ಅವರು ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಸದಾ ಕರ್ತವ್ಯದಲ್ಲೇ ನಿರತರಾಗಿದ್ದಂತಹ ಅವಳಿ ನಗರದ ಪೋಲಿಸರಿಗೆ ಇದೀಗ ಐಪಿಎಸ್ ಲಾಬುರಾಮ್ ಕಡ್ಡಾಯವಾಗಿ ವಾರದ ರಜೆಯನ್ನು ಘೋಷಿಸಿದ್ದು, ಅವಳಿ ನಗರ ಪೊಲೀಸರಲ್ಲಿ ಮಂದಹಾಸವನ್ನು ಮೂಡಿಸಿದೆ. ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ
Read Moreಬೀದಿಬದಿ ವ್ಯಾಪಾರಿಗಳ ತೆರವು ಖಂಡಿಸಿ ಪ್ರತಿಭಟನೆ..!
ಹುಬ್ಬಳ್ಳಿ: ಬೀದಿಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಿದ್ದನ್ನು ಖಂಡಿಸಿ ಹಾಗೂ ಶಾಶ್ವತ ವ್ಯಾಪಾರ ನೆಲೆ ಕಲ್ಪಿಸುವಂತೆ ಆಗ್ರಹಿಸಿ ನೂರಾರು ಬೀದಿಬದಿ ವ್ಯಾಪಾರಸ್ಥರು ಹಾಗೂ ಸಂಘಟನೆಗಳು ಹುಬ್ಬಳ್ಳಿ ನಗರದ ಪಾಲಿಕೆಗೆ ಇಂದು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬಡ ಬೀದಿಬದಿಯ ವ್ಯಾಪಾರಸ್ಥರು ತಮ್ಮ ಹೊಟ್ಟೆ ಪಾಡಿಗಾಗಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅವರನ್ನು ಸ್ಮಾಟ್ಸಿಟಿ ಯೋಜನೆಯಡಿ ಬಲವಂತವಾಗಿ ತೆರವು ಮಾಡಿಸಿದ್ದು ಖಂಡನೀಯವಾಗಿದೆ. ನಗರದ ಪ್ರಮುಖ ಸ್ಥಳಗಳಾದ ದುರ್ಗದಬೈಲ್, ಶಾಬಜಾರ ರಸ್ತೆ, ಬೆಳಗಾವಿ ಗಲ್ಲಿ, ಕೆಸಿಡಿ ರಸ್ತೆ, ಇತರ ಸ್ಥಳಗಳಲ್ಲಿ ಮಾರಾಟ ಮಾಡುವ ವ್ಯಾಪಾರಸ್ಥರನ್ನು ತೆರವುಗೊಳಿಸಲಾಗಿದೆ. ಅಲ್ಲದೆ ಅವರೆಲ್ಲರ ಸಾಮಗ್ರಿಗಳನ್ನು ಜಪ್ತಿ ಮಾಡಿ ದಂಡವನ್ನು ಸಹ ಕಟ್ಟಿಸಿಕೊಳ್ಳಲಾಗುತ್ತಿದೆ ಎಂದು ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಆರೋಪಿಸಿದರು. ಡಿಸೆಂಬರ್ 2 ಶನಿವಾರದಂದು ಸಮತಾ ಸೇನಾ ಹಾಗೂ ವಿವಿಧ ದಲಿತ ಪರ ಸಂಘ, ಸಂಸ್ಥೆಗಳ ವತಿಯಿಂದ ನಡೆದ ಸುದ್ದಿಗೋಷ್ಠಿ ಆಯೋಜಿಸಿ ಜಿಲ್ಲಾಧಿಕಾರಿ ಹಾಗೂ ಪಾಲಿಕೆ…
Read Moreಲಿಡಕರ ಚರ್ಮ ಕುಟೀರಗಳನ್ನು ತೆರವುಗೊಳಿಸಲು ಬಿಡೋದಿಲ್ಲ- ತಹಶೀಲ್ದಾರ್ ಗೆ ಮನವಿ..!
ಹುಬ್ಬಳ್ಳಿ: ಜಿಲ್ಲಾಡಳಿತದ ಆದೇಶದಂತೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಲಿಡಕರ ಚರ್ಮ ಕುಟೀರಗಳನ್ನು ತೆರವು ಮಾಡಲು ಮುಂದಾಗಿರುವುದು ಸಮಂಜಸವಲ್ಲ. ಇದರಿಂದಾಗಿ ದಲಿತ ದೌರ್ಜನ್ಯ ನಡೆಯುತ್ತಿದ್ದು ತಕ್ಷಣ ಅದನ್ನ ತಡೆಯಬೇಕೆಂದು ಆಗ್ರಹಿಸಿ, ಶ್ರೀ ಹರಳಯ್ಯ ಸಮಗಾರ ಸಮಾಜ ಅಭಿವೃದ್ಧಿ ಮಹಾಮಂಡಳ ಮತ್ತು ಶ್ರೀ ಸಮಗಾರ ಹರಳಯ್ಯ ಯುವ ಮಂಚ್ ವತಿಯಿಂದ ನಗರದ ತಹಶೀಲ್ದಾರ ಕಚೇರಿ ಎದುರಿಗೆ ಪ್ರತಿಭಟನೆ ಮಾಡಿ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ವರದಿ-ರಾಜು ಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ
Read More