ತಿಪಟೂರು: ತಿಪಟೂರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರೈತ ವಿರೋಧಿ ಧೋರಣೆ ನಡೆಸುತ್ತಿದ್ದಾರೆ ಎಂದು ತಿಪಟೂರು ತಾಲ್ಲೂಕು, ಕಸಬಾ ಹೋಬಳಿ, ಮಾದಿಹಳ್ಳಿ ಗ್ರಾಮಸ್ಥರು ರಸ್ತೆಯಲ್ಲಿ ಧರಣಿ ನಡೆಸುತ್ತಿದ್ದಾರೆ.ಮಾದಿಹಳ್ಳಿ ಸರ್ವೆ ನಂಬರ್ 8,9,10,11,12,13 ಮತ್ತು 304ರ ಸರ್ಕಾರಿ ಖರಾಬು ಜಮೀನುಗಳಲ್ಲಿ,ಸರಿ ಸುಮಾರು 10 ರಿಂದ 20 ಅಡಿ ಎತ್ತರದ ರಾಷ್ಟ್ರೀಯ ಹೆದ್ದಾರಿ ರಸ್ತೆ ಹಾದುಹೋಗಿದ್ದು, ಈ ರಸ್ತೆಗೆ ಲಗತ್ತಾಗಿರುವ ಅಕ್ಕಪಕ್ಕದ ಗ್ರಾಮದ ರೈತರು, ಮಾದಿಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ಪ್ರತಿದಿನ ಸುಮಾರು 50 ರಿಂದ 100ರೈತರು ಹಾಲನ್ನು ಹಾಕುತ್ತಿದ್ದಾರೆ, ಹಾಗೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಮಾದಿ ಹಳ್ಳಿಯಿಂದ ಕೊಬ್ಬರಿ ದೊಡ್ಡಯ್ಯನ ಪಾಳ್ಯ ಮತ್ತು ವಾಸುದೇವರಹಳ್ಳಿಗೆ ಪ್ರತಿದಿನ ರೈತರು, ಕೃಷಿ ಕಾರ್ಮಿಕರು, ದನ ಕರುಗಳು, ಟ್ರ್ಯಾಕ್ಟರ್ ಜೆಸಿಬಿ ಇನ್ನೀತರ ಯಂತ್ರಗಳು ಹಾಗೂ ಇದೆ ಮಾದಿಹಳ್ಳಿ ಸರ್ಕಾರಿ ಜಮೀನಿನಲ್ಲಿ ಶ್ರೀ ಸಿದ್ಧಪ್ಪ ದೇವಸ್ಥಾನ ಮತ್ತು ಶ್ರೀ ಗಂಗಮ್ಮ ನವರ ಕ್ಷೇತ್ರಕ್ಕೆ ಪ್ರತಿದಿನ ಭಕ್ತಾದಿಗಳು…
Read MoreDay: January 9, 2021
ಹಕ್ಕಿ ಜ್ವರದ ಯಾವುದೇ ಪ್ರಕರಣ ರಾಜ್ಯದಲ್ಲಿ ಕಂಡು ಬಂದಿಲ್ಲ- ಡಾ.ಕೆ.ಸುಧಾಕರ್….!
ಚಿಕ್ಕಬಳ್ಳಾಪುರ: ಹಕ್ಕಿ ಜ್ವರದ ಯಾವುದೇ ಪ್ರಕರಣ ರಾಜ್ಯದಲ್ಲಿ ಕಂಡು ಬಂದಿಲ್ಲ ಎಂದು ಆರೋಗ್ಯ ಮತ್ತು ವೈಧ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಕೊರೊನಾ ಲಸಿಕೆಯ ಎರಡನೇ ತಾಲಿಮು ವೀಕ್ಷಿಸಿದ ನಂತ್ರ ಚಿಕ್ಕಬಳ್ಳಾಪುರದ ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಹಕ್ಕಿಗಳು ಮೃತ ಪಟ್ಟ ವಿಚಾರವಾಗಿ ಮಾತನಾಡುತ್ತಾ ಹಕ್ಕಿ ಜ್ವರದ ಯಾವುದೇ ಪ್ರಕರಣ ಕಂಡು ಬಂದಿಲ್ಲ ಮತ್ತು ಗಡಿ ಜಿಲ್ಲೆಗಳಲ್ಲಿ ಕೇರಳ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಕಟ್ಟೆಚ್ಚರ ವಹಿಸಲಾಗ್ತಿದೆ.ಆರೋಗ್ಯ, ಅರಣ್ಯ ಇಲಾಖೆಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಲಾಗಿದೆ. ಸತ್ತ ಪಕ್ಷಿಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಕೋಳಿ ಫಾರ್ಮ್ ಗಳನ್ನು ಸ್ಯಾನಿಟೈಸರ್ ಮಾಡಿಸಲಾಗ್ತಿದೆ,ಸಾರ್ವಜನಿಕರು ಕೋಳಿ ಮಾಂಸ ತಿನ್ನುವವರು 70-80 ಡಿಗ್ರಿಯಲ್ಲಿ ಬೆಯ್ಯಿಸಿ ತಿನ್ನುವುದು ಅವಶ್ಯಕವಾಗಿದೆ. ಹೀಗೆ ಬೇಯಿಸಿ ತಿನ್ನುವುದರಿಂದ ಹಕ್ಕಿ ಜ್ವರದ ವೈರಸ್ ನಾಶವಾಗುತ್ತದೆ. ಹಕ್ಕಿ ಜ್ವರಕ್ಕಾಗಿ ಇದಕ್ಕಾಗಿ ಮಾರ್ಗಸೂಚಿ ತಯಾರಾಗಿದೆ, ಇನ್ನೆರಡು ದಿನಗಳಲ್ಲಿ ಬಿಡುಗಡೆ…
Read Moreಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತ ವ್ಯಕ್ತಿ ಆತ್ಮಹತ್ಯೆ- ಸೆಲ್ಪಿ ವಿಡೀಯೊ ವೈರಲ್ ..!
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ಸುಲ್ತಾನ ಪೇಟೆಯ ನಿವಾಸಿ ರಾಘವೇಂದ್ರ ಕೆ.ವಿ.ಎಂಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ಮಾಡಿಕೊಳ್ಳುವ ಮುನ್ನ ಮಾಡಿರುವ ಸೆಲ್ಪಿ ವೀಡಿಯೋ ಇದೀಗ ಎಲ್ಲೇಡೆ ವೈರಲ್ ಆಗಿದೆ. ಆ ವೀಡಿಯೋದಲ್ಲಿ ತನ್ನ ಹೆಸರು ಕೆ.ವಿ ರಾಘವೇಂದ್ರ ನಾನು ನಂದಿ ಗ್ರಾಮದ ಮಾರಮ್ಮ ಮತ್ತು ಸುಲ್ತಾನಪೇಟೆಯ ಸಫಲಮ್ಮ ದೇವಿಯ ದೇವಾಲಯದ ಪೂಜಾರಿಯಾಗಿದ್ದು, 2015-16 ರಲ್ಲಿ ಅಕ್ಷತಾ ಕೋ ಆಪರೇಟಿವ್ ಲಿಮಿಟೆಡ್ ಎಂಬ ಖಾಸಗಿ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದೆ. ಸಾರ್ವಜನಿಕರಿಂದ ಫೈನಾನ್ಸ್ ಕಂಪನಿಗೆ ಹಣ ಕಟ್ಟಿಸಿದ್ದೆ, ಆದ್ರೇ ಫೈನಾನ್ಸ್ ಕಂಪನಿ ಮುಚ್ಚಿದಾಗ ಹಣ ಕಟ್ಟಿದವರಿಗೆ ಹಣ ವಾಪಸ್ಸು ನೀಡಲು ಹಲವರ ಬಳಿ 8ಲಕ್ಷ ಸಾಲ ಮಾಡಿದ್ದೆ. ಸಾಲ ನೀಡಿದ್ದ ಸಾಲಗಾರರು ಬಡ್ಡಿಗೆ ಬಡ್ಡಿ ಸೇರಿಸಿ ಮೀಟರ್ ಬಡ್ಡಿ ಲೆಕ್ಕದಲ್ಲಿ 1 ರಿಂದ 2 ಕೋಟಿ ನೀಡಬೇಕೆಂದು ಕಿರುಕುಳ ನೀಡಿದ್ದರಿಂದ ತಾನು ಆತ್ಮಹತ್ಯೆ ಮಾಡಿ ಕೊಳ್ಳುವುದಾಗಿ ತಿಳಿಸಿದ್ದು ಆತ್ಮಹತ್ಯೆಗೆ…
Read Moreಕೃಷಿ ಎಂಜಿನಿಯರಿಂಗ್ ಪದವಿಯಲ್ಲಿ ಗರಿಷ್ಠ ಅಂಕ ಪಡೆದು ಚಿನ್ನದ ಪದಕ ಪಡೆದ ರೇಖಾ ಗುಂಡಪ್ಪ..!
ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 2018-19 ನೇ ಸಾಲಿನ ಘಟಿಕೋತ್ಸವ ಸಮಾರಂಭವನ್ನು ಭಾರತೀಯ ಕೃಷಿ ಸಂಶೋಧನಾ ಸಮಿತಿಯ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ.ಆರ್.ಸಿ.ಅಗರವಾಲ್ ಉದ್ಘಾಟಿಸಿದರು. ಕೋವಿಡ್ ಸೋಂಕು ತಡೆ ಕಾರಣ ಚಿನ್ನದ ಪದಕ ಹಾಗೂ ಗರಿಷ್ಠ ಅಂಕಗಳನ್ನು ಪಡೆದು ಸಾಧನೆ ಮಾಡಿರುವ ವಿವಿಧ ವಿಭಾಗಗಳ 49 ವಿದ್ಯಾರ್ಥಿಗಳು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಕುಲಪತಿ ಡಾಕೆಎನ್ ಕಟ್ಟಿಮನಿ ಸಮ್ಮುಖದಲ್ಲಿ ಡಾ.ಆರ್. ಸಿ. ಅಗರವಾಲ್ ಅವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಿದರು.ಬಿಎಸ್ಸಿ ಕೃಷಿ ಪದವಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಸಹನಾ ರಾಮನಗೌಡ ಪೊಲೀಸ್ ಪಾಟೀಲ ಆರು ಚಿನ್ನದ ಪದಕಗಳು ಮತ್ತು ನಗದು ಬಹುಮಾನ ಪಡೆದರು. ಕೃಷಿ ಎಂಜಿನಿಯರಿಂಗ್ ಪದವಿಯಲ್ಲಿ ಗರಿಷ್ಠ ಅಂಕಗಳನ್ನು ಪಡೆದಿರುವ ರೇಖಾ ಗುಂಡಪ್ಪ ಅವರೂ ಆರು ಚಿನ್ನದ ಪದಕಗಳು ಮತ್ತು ನಗದು ಪುರಸ್ಕಾರ ಪಡೆದರು. ವರದಿ-ಬಾಬಾ ಎಕ್ಸ್ ಪ್ರೆಸ್ ಟಿವಿ ರಾಯಚೂರು
Read Moreತೋಟಗಾರಿಕೆ ಇಲಾಖೆಯಿಂದ ತರಭೇತಿ-ರೈತರೆಲ್ಲರೂ ಸರ್ಕಾರದಿಂದ ಸಿಗುವ ಸವಲತ್ತು ಪಡೆಯಬೇಕು- ಸಹಾಯಕ ನಿರ್ದೇಶಕಿ ಭಾರತಿ…!
ಪಿರಿಯಾಪಟ್ಟಣ: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರಿಗೆ ಪಿರಿಯಾಪಟ್ಟಣದ ತೋಟಗಾರಿಕೆ ಇಲಾಖೆಯ ವತಿಯಿಂದ ಕಚೇರಿ ಆವರಣದಲ್ಲಿ ದಿನಾಂಕ 11-01-21 ರಂದು ಸೋಮವಾರ ತರಬೇತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕಾಭಿವದ್ಧಿ ಹೊಂದುವಂತೆ ಪಿರಿಯಾಪಟ್ಟಣ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಭಾರತಿರವರು ಮಾಧ್ಯಮದೊಂದಿಗೆ ತಿಳಿಸಿದರು. ಕೋವಿಡ್ – 19 ಸಮಸ್ಯೆಯಿಂದಾಗಿ 2020 – 21ನೇ ಸಾಲಿನಲ್ಲಿ ಇಲಾಖೆಯ ಅನೇಕ ಯೋಜನೆಗಳಿಗೆ ಸರ್ಕಾರದಿಂದ ಬಜೆಟ್ ತುಂಬಾ ಕಡಿಮೆ ಇರುವುದರಿಂದ ಈ ವರ್ಷ ಪ್ರಮುಖವಾಗಿ ಎರಡು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಅದರಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾ ಯೋಜನೆ ಅಂದರೆ ಹನಿ ನೀರಾವರಿ ಯೋಜನೆ. ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಕೃಷಿಗೆ ಮಿತವಾಗಿ ನೀರನ್ನು ಬಳಸಿ ತೋಟಗಾರಿಕಾ ಬೆಳೆಗಳನ್ನು ಬೆಳೆಸುವುದು. ಈ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು…
Read Moreಸಿ ಆರ್ ಎಸ್ ಸೋಲಿನ ಅನುಭವವನ್ನು ನೆನಪಿಸಿಕೊಳ್ಳಲಿ-ಮಾಜಿ ಸಂಸದ ಶಿವರಾಮೇಗೌಡ..!
ನಾಗಮಂಗಲ: ಚಿಕ್ಕಬಳ್ಳಾಪುರ ತಾಲೂಕಿನ ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶದ ಲೆಕ್ಕಚಾರ ಸಮರ್ಥಿಸಿಕೊಳ್ಳುವಾಗ ನಮ್ಮ ಬಗ್ಗೆ ಹಗುರವಾಗಿ ಮಾತನಾಡುವ ಮೊದಲು ಅವರ ಸೋಲಿನ ನಂತರ ಅವರು ಹೇಗೆಲ್ಲಾ ನಡೆದುಕೊಂಡಿದ್ದರು ಎಂಬ ಬಗ್ಗೆ ಅವಲೋಕಿಸಿಕೊಳ್ಳಲಿ ಎಂದು ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ ವಿರುದ್ದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಪಟ್ಡಣದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಗಮಂಗಲ ವಿಧಾನಸಭಾ ಕ್ಷೇತ್ರದ 35 ಗ್ರಾ.ಪಂ.ಗಳ ಪೈಕಿ ಅತಿ ಹೆಚ್ಚು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಶೀಲರಾಗಿರುವುದು ಸತ್ಯ. ಆದರೆ ಕಾಂಗ್ರೆಸ್ ಬೆಂಬಲಿತರೇ ಅತಿ ಹೆಚ್ಚು ಜಯಗಳಿಸಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಜೆಡಿಎಸ್ ಪಕ್ಷವನ್ನು ಅಣಕಿಸುವ ವಿರೋಧಿ, ತಾವು ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ತಾಲೂಕಿನ ಸಾರ್ವಜನಿಕ ವಲಯದಲ್ಲಿ ಹೇಗೆಲ್ಲಾ ನಡೆದುಕೊಂಡರು, ಎಷ್ಟೆಲ್ಲಾ ದಿನಗಳ ಕಾಲ ಕ್ಷೇತ್ರದ ಕಡೆ ತಲೆಹಾಕಲಿಲ್ಲ ಎಂಬುದನ್ನ ಅವಲೋಕಿಸಿಕೊಂಡು ನಂತರ ನಮ್ಮ…
Read Moreಪಾಳು ಬಿದ್ದ ಎಕ್ಸ್ ರೇ ಯಂತ್ರ- ಹಳ್ಳಿಗರ ಪರದಾಟ..!
ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಕ್ಯಾನಿಂಗ್ ಸೇರಿದಂತೆ ಇನ್ನಿತರ ಯಂತ್ರಗಳ ಸೌಲಭ್ಯದ ಕೊರತೆಯಿಂದ ಚಿಕಿತ್ಸೆಗಾಗಿ ಜನರು ಖಾಸಗಿ ಆಸ್ಪತ್ರೆ ಇಲ್ಲವೇ ಲಿಂಗಸುಗೂರು ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುದಗಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಕ್ಷಾಂತರ ರೂಪಾಯಿ ಬೆಲೆಯ ಎಕ್ಸ್ರೇ ಯಂತ್ರವಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಯೋಜನಕ್ಕೆ ಬರುತ್ತಿಲ್ಲ. ಎಕ್ಸ್ರೇ ಯಂತ್ರದ ನಿರ್ವಾಹಕರ ಸೇವೆಯನ್ನು ಸ್ಥಗಿತಗೊಳಿಸಿ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಗೆ ನಿಯೋಜನೆಗೊಂಡಿರುವ ಕಾರಣ ಇಲ್ಲಿನ ಯಂತ್ರವು ಬಳಕೆಗೆ ಬಾರದೇ ಪಾಳು ಬಿದ್ದಿದೆ. ಇದರಿಂದಾಗಿ ಬಡರೋಗಿಗಳಿಗೆ ತುಂಬಾ ತೊಂದರೆಯಾಗಿದೆ. ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಎಕ್ಸ್ ರೇ ಪ್ರಾರಂಭ ಮಾಡಿಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ವರದಿ-ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು.
Read Moreತುಮಕೂರಿನ ಮಧುಗಿರಿಯಲ್ಲಿ ಚಿರತೆ ದಾಳಿ-ಭಯದಲ್ಲೇ ದಿನದೂಡುತ್ತಿರುವ ಸಿಬ್ಬಂದಿ..!
ತುಮಕೂರಿನ ಮಧುಗಿರಿಯ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳ ಸಮೀಪ ಹಾಡುಹಗಲೇ ಚಿರತೆ ದಾಳಿ ನಡೆಸಿದ್ದು, ಕಳೆದ 3 ದಿನಗಳಿಂದ ಇಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದೆ. ಇನ್ನೂ ಚಿರತೆ ಹಂದಿ, ನಾಯಿ, ಮೇಕೆಗಳನ್ನು ಹೊತ್ತೊಯ್ದಿದೆ. ಇನ್ನು ಚಿರತೆ ಭಯದಿಂದ ಬೈಯೋಮೇಟ್ರಿಕ್ ಸಹಿ ಮಾಡಲು ಇಲ್ಲಿನ ಸಿಬ್ಬಂದಿ ಭಯ ಪಡುತ್ತಿದ್ದು, ಇಲ್ಲಿನ ಸಿಬ್ಬಂದಿಗಳು ಪ್ರತಿ ದಿನ ಭಯದ ವಾತಾವರಣದಲ್ಲಿಯೇ ವಿದ್ಯಾರ್ಥಿ ನಿಲಯಕ್ಕೆ ಹಾಜರಾಗುತ್ತಿದ್ದಾರೆ. ಇನ್ನೂ ಈ ಸಂಬಂಧ ಅರಣ್ಯ ಇಲಾಖೆಗೆ ಮನವಿ ಪತ್ರ ಸಲ್ಲಿಸಿದರು ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರದಿ- ದೇವರಾಜ್ ಕೆ.ಎನ್. ಎಕ್ಸ್ ಪ್ರೆಸ್ ಟಿವಿ ಕೊರಟಗೆರೆ
Read Moreಕಾಡಿನಲ್ಲಿ ಐದು ಸಾವಿರಕ್ಕೂ ಅಧಿಕ ಕೋಳಿ ಮರಿಗಳು ಪತ್ತೆ..!
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ಹೊರ ವಲಯದಲ್ಲಿ ಇರುವ ಕಣಿತಹಳ್ಳಿ ಬಳಿಯಿರುವ ಮೀಸಲು ಅರಣ್ಯದಲ್ಲಿ ಸರಿ ಸುಮಾರು ಐದು ಸಾವಿರ ನವಜಾತ ಫಾರಂ ಕೋಳಿ ಮರಿಗಳನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಕಾಡಿನಲ್ಲಿ ತಂದು ಬಿಟ್ಟಿದ್ದಾರೆ.ಇಂದು ಮುಂಜಾನೆ ಕಣಿತಹಳ್ಳಿ ಸುತ್ತ ಮುತ್ತಲಿನ ಗ್ರಾಮಸ್ಥರು ಕೋಳಿ ಮರಿಗಳನ್ನು ಕಂಡು ದಿಭ್ರಮೆಗೆ ಒಳಗಾಗಿದ್ದಾರೆ. ಹಕ್ಕಿ ಜ್ವರದ ಭೀತಿಯ ಹಿನ್ನಲೆ ಆಂಧ್ರಪ್ರದೇಶದ ಅಥವಾ ತಮಿಳುನಾಡು ಭಾಗದಿಂದ ಯಾರೋ ಈ ಕೋಳಿ ಮರಿಗಳನ್ನು ರಾತ್ರೋರಾತ್ರಿ ತಂದು ಕಾಡಿನಲ್ಲಿ ಬಿಟ್ಟಿರುವ ಶಂಕೆ ಇರುವುದರಿಂದ ಇಲ್ಲಿಯ ಕಣಿತಹಳ್ಳಿಯ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ವರದಿ-ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ
Read Moreಕುರುಬ ಸಮುದಾಯ ಮೀಸಲಾತಿ ಹೋರಾಟ ಪೂರ್ವಭಾವಿ ಸಭೆ..!
ಕೋಲಾರ: ಎಸ್.ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಕರ್ನಾಟಕ ರಾಜ್ಯದಲ್ಲಿರುವ ಕುರುಬ ಸಮುದಾಯವನ್ನು ಎಸ್.ಟಿ ಮೀಸಲಾತಿಗೆ ಸೇರಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಫೆಬ್ರವರಿ 7 ರಂದು ಬೃಹತ್ ಹೋರಾಟ ಸಭೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕುರುಬರ ಎಸ್.ಟಿ ಮೀಸಲಾತಿ ಹೋರಾಟ ಸಮಿತಿ ಮುಖಂಡ ದೇವರಾಜ್ ಹೇಳಿದ್ದಾರೆ. ಕೋಲಾರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಸ್.ಟಿ ಹೋರಾಟ ಸಮಿತಿ ಮುಖಂಡರು ಬೆಂಗಳೂರಿನ ಬೃಹತ್ ಹೋರಾಟ ಸಭೆ ಅಂಗವಾಗಿ ಕೋಲಾರದಲ್ಲಿ ಜ.12 ರಂದು ಕೆ.ಇ.ಬಿ ಸಮುದಾಯ ಭವನದಲ್ಲಿ ಪೂರ್ವ ಭಾವಿ ಸಭೆಯನ್ನು ಹಮ್ಮಿಕೊಂಡಿದ್ದು, ಈ ಸಭೆಗೆ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪೀಠಾಧಿಪತಿಗಳು, ಸ್ವಾಮೀಜಿಗಳು,ಸಚಿವರಾದ ಕೆ.ಎಸ್ ಈಶ್ವರಪ್ಪ,ವಿಧಾನಪರಿಷತ್ ಸದಸ್ಯರಾದ ಎಂಟಿ ನಾಗರಾಜ್ ಸೇರಿದಂತೆ ರಾಜ್ಯ ಮಟ್ಟದ ಸಮುದಾಯದ ಮುಖಂಡರು ಭಾಗಿಯಾಗಿ ಎಸ್.ಟಿ ಮೀಸಲಾತಿ ಹೋರಾಟದ ಬಗ್ಗೆ ಮಾರ್ಗದರ್ಶನ ನೀಡಲ್ಲಿದ್ದಾರೆ. ಎಸ್.ಟಿ ಮೀಸಲಾತಿಯಿಂದ ಶೈಕ್ಷಣಿಕವಾಗಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ…
Read More