ಡಿಕೆಶಿ ಮಾತಿಗೆ ಟಾಂಗ್ ಕೊಟ್ಟ ಸಿ.ಪಿ ಯೋಗೇಶ್ವರ್..!

ರಾಮನಗರ: ರಾಜಕೀಯ ನಾಯಕರ ಟೆಲಿಫೋನ್ ಕದ್ದಾಲಿಕೆ ವಿಚಾರ ಮತ್ತೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಕೆಲ ದಿನಗಳ ಹಿಂದೆ ತಮ್ಮ ದೂರವಾಣಿ ಕದ್ದಾಲಿಗೆ ಆಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಫೋನ್ ಕದ್ದಾಲಿಕೆ ಆರೋಪಕ್ಕೆ ಮಾಜಿ ಸಚಿವ, ಎಂಎಲ್ಸಿ ಸಿ.ಪಿ ಯೋಗೇಶ್ವರ್ ಪ್ರತಿಕ್ರಿಯಿಸಿದ್ದು, ಚನ್ನಪಟ್ಟಣದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್, ಡಿ.ಕೆ ಶಿವಕುಮಾರ್ ಒಬ್ಬ ಕಳ್ಳ, ಕಳ್ಳ ಮನಸ್ಸು ಉಳ್ಳುಗೆ ಎಂದು ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.ಡಿ.ಕೆ ಶಿವಕುಮಾರ್ ಅವರೇ ಒಬ್ಬ ಕಳ್ಳ, ಇನ್ನೊಬ್ಬರ ಮೇಲೆ ಆರೋಪ ಮಾಡೋದು ಏನಿದೆ. ಅವರ ಫೋನ್ ಕದ್ದಾಲಿಕೆ ಮಾಡಿ ಯಾವ ರಾಜ್ಯ ಗೆಲ್ಲಬೇಕು. ಈ ಹಿಂದೆ ಅವರೇ ಟ್ಯಾಪಿಂಗ್ ಮಾಡಿಸಿ ನನ್ನ ಮೇಲೆಯೇ ಫೋನ್ ಕದ್ದಾಲಿಕೆ ಆರೋಪ ಮಾಡಿದ್ದರು. ಜನರ ಗಮನ ಬೇರೆಕಡೆ ಸೆಳೆಯುವ ಪ್ರಯತ್ನ ಡಿ.ಕೆ.ಶಿ ಮಾಡುತ್ತಿದ್ದಾರೆ.ಯಾವ ಉದ್ದೇಶಕ್ಕಾಗಿ ಅವರ ಫೋನ್ ಟ್ಯಾಪ್ ಮಾಡಬೇಕು. ಅದೊಂದು ಸುಳ್ಳು ಆರೋಪವೆಂದು ಸಿ.ಪಿ ಯೋಗೇಶ್ವರ್ ಡಿಕೆಶಿ ವಿರುದ್ದ ಗುಡುಗಿದ್ದಾರೆ..

ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ರಾಮನಗರ..

Please follow and like us:

Related posts

Leave a Comment