ರಾಜ್ಯ ಸರ್ಕಾರದ ವಿರುದ್ದ “ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಮಿತಿ”ಯಿಂದ ಆಕ್ಷೇಪ..!

ಬಳ್ಳಾರಿ: ಕರ್ನಾಟಕ ರಾಜ್ಯ ಸರ್ಕಾರ ಮರಾಠ ಸಮುದಾಯಕ್ಕೆ 50 ಕೋಟಿ ರೂಪಾಯಿಗಳು ಮೀಸಲಿಟ್ಟಿರುವುದು ಖಂಡನೀಯ ಹಾಗೂ ಜನಾ ಸಮಾನ್ಯರಿಗೆ ವಿರುದ್ದದ್ದಾಗಿದೆ, ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದಾಗಿ ಎಷ್ಟೋ ಜನ ಮನೆ ಮಠಗಳಿಲ್ಲದೇ ಬೀದಿಗೆ ಬಿದ್ದರೂ ಸರ್ಕಾರ ಆ ಕಡೆ ತಿರುಗಿಯೂ ನೋಡಲಿಲ್ಲ, ರೈತರು ಬೆಳೆದ ಬೇಳೆ ಕೈಗೆ ಸಿಗದೇ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಯಿತು. ರೈತರು ಬೆಳೆ ಪರಿಹಾರಕ್ಕಾಗಿ ಮತ್ತು ನೆರೆ ಹಾವಳಿಯಿಂದ ಮನೆ ಕಳೆದುಕೊಂಡವರು ಪುನರ್ವಸತಿಗಾಗಿ ಬೇಡಿಕೆ ಇಟ್ಟರೂ ಸರಕಾರ ಕರೋನ ನೆಪ ಹೇಳಿಕೊಂಡು ಬಜೆಟ್ ಇಲ್ಲ ಎಂದು ಸಬೂಬು ನೀಡಿತ್ತು. ಈಗ ಇದ್ದಕ್ಕಿದ್ದಂತೆ ಮರಾಠ ಸಮುದಾಯಕ್ಕೆ 50 ಕೋಟಿ ರುಪಾಯಿ ಎಲ್ಲಿಂದ ಬಂತು ಎಂದು ಸಂಸ್ಥಾಪಕ ಅಧ್ಯಕ್ಷರಾದ ಪಿ.ಎಂ ಈಶ್ವರಪ್ಪ ಹಾಗೂ ಯುವ ಘಟಕದ ಅಧ್ಯಕ್ಷರಾದ ವೆಂಕಟೇಶ ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೇ ಆ ಹಣವನ್ನು ಉತ್ತರ ಕರ್ನಾಟಕದ ನೆರೆ ಹಾವಳಿಗೆ ತುತ್ತಾದ ರೈತರಿಗೆ ಹಾಗೂ ನಿರ್ಗತಿಕರಿಗೆ ಕೊಡಲು ಈ ಕೂಡಲೇ ಆದೇಶ ಹೊರಟಿಸಬೇಕೆಂದು ಸಮಿತಿ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಹೇಳಿದರು. ಮನವಿ ಪತ್ರ ಸ್ವೀಕರಿಸಿದ ತಹಶಿಲ್ದಾರ ರಾದ ಗುರುರಾಜ ಅವರು ಈ ಕೂಡಲೇ ಸರಕಾರದ ಗಮನಕ್ಕೆ ತರುತ್ತೇವೆಂದು ತಿಳಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಸಂಸ್ಥಾಪಕ ರಾದ ಪಿ.ಎಂ ಈಶ್ವರಪ್ಪ, ಅಧ್ಯಕ್ಷರಾದ ಈಶ್ವರ್, ಉಪಾಧ್ಯಕ್ಷ ರಾದ ಭಾಸ್ಕರ್, ಖಜಾಂಚಿ ತಿಮ್ಮಪ್ಪ, ನರೇಶ್ ಬಾಬು, ನಾಗೇಂದ್ರ, ಯುವ ಘಟಕದ ಅಧ್ಯಕ್ಷ ವೆಂಕಟೇಶ್, ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ- . ಯು.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ಬಳ್ಳಾರಿ

Please follow and like us:

Related posts

Leave a Comment