ದೇವರ ಹುಂಡಿ ದುಡ್ಡು ಕದ್ದ ಅರ್ಚಕನನ್ನು ಅಟ್ಟಾಡಿಸಿದ ಬಸವ..!

ನಾಗಮಂಗಲ: ಕಳೆದ ಎರಡು ಮೂರು ತಿಂಗಳ ಹಿಂದೆ ನಾಗಮಂಗಲ ತಾಲ್ಲೂಕಿನ ಹೊಣಕೆರೆ ಹೋಬಳಿಯ ಜುಟ್ಟನಹಳ್ಳಿ ಗ್ರಾಮದ ಮಾರಮ್ಮ ದೇವಾಲಯದ ದೇವಸ್ಥಾನದ ಹುಂಡಿ ಕಳ್ಳತನವಾಗಿತ್ತು. ಗ್ರಾಮದ ಭಕ್ತರೊಬ್ಬರ ಮನೆಗೆ ಕರೆಸಲಾಗಿದ್ದ ಬಸವನಿಗೆ ಗ್ರಾಮಸ್ಥರು ನೀನು ಸತ್ಯದ ಬಸವನಾದ್ರೆ ಕಳ್ಳನನ್ನು ಹಿಡಿದು ಸತ್ಯ ನಿರೂಪಿಸುವಂತೆ ಮನವಿ ಮಾಡಿದರು. ಮನವಿ ಸ್ವೀಕರಿಸಿ ದೇವಾಲಯದ ಅರ್ಚಕ ರಾಜು ಎಂಬುವರ ಮನೆ ಬಾಗಿಲಿಗೆ ಹೋಗಿ ನಿಂತ ಬಸವನನ್ನು ಕಂಡು , ಹುಂಡಿ ಕದಿದ್ದ ಅರ್ಚಕ ಕಂಗಾಲಾಗಿದ್ದರು. ಮನೆಯಿಂದ ದೇವಾಲಯದವರೆಗೂ ಅರ್ಚಕನನ್ನು ಕೊಂಬಿನಲ್ಲಿ ತಿವಿಯುತ್ತಾ ಕರೆತಂದ ಬಸವನ ಆಕ್ರೋಶ ಕಂಡು ಕಡೆಗೆ ಹುಂಡಿ ಕದ್ದಿದ್ದ ತಪ್ಪು ಒಪ್ಪಿಕೊಂಡು ಅರ್ಚಕ ಕ್ಷಮೆಯಾಚಿಸಿದರು.ಬಸವನ ಕಾಲಿಗೆ ಬಿದ್ದು ಕದ್ದ ಹುಂಡಿ ಹಣವನ್ನು ವಾಪಸ್ಸು ಕೊಡುವುದಾಗಿ ಹೇಳಿದ ಬಳಿಕ ಬಸವ ಶಾಂತವಾಗಿದ್ದು, ಬಸವನ ಪವಾಡ ಕಂಡ ಗ್ರಾಮಸ್ಥರು ಮಂತ್ರಮುಗ್ದರಾದರು.

ವರದಿ- ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Please follow and like us:

Related posts

Leave a Comment