ಮೊಗನಕಟ್ಟೆ ಹಾಗೂ ಗಣೇಶನ ಕಟ್ಟೆಗೆ ನಾಲೆಯಿಂದ ನೀರು ತುಂಬಿಸಲು ಸಂಪರ್ಕ ಕಲ್ಪಿಸುವಂತೆ ಪಿಡಿಓಗೆ ಮನವಿ..!

ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದ ಮೊಗನಕಟ್ಟೆ ಹಾಗೂ ಗಣೇಶನ ಕಟ್ಟೆಗೆ ನೀರು ತುಂಬಿಸಲು ನಾಲೆಯಿಂದ ಸಂಪರ್ಕ ಕಲ್ಪಿಸಲು ಗ್ರಾಮ ಪಂಚಾಯಿತಿ ಪಿಡಿಓ ಗೆ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಪ್ರಭಾರ ಪಿಡಿಓ ಮಂಗಳ ರವರು ಸ್ಥಳ ಪರಿಶೀಲನೆ ನೀಡಿದರು. ಮಳವಳ್ಳಿ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಗೆ ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಭೇಟಿ ನೀಡಿ ರೈತರ ಜಾನುವಾರುಗಳಿಗೆ ಕಟ್ಟೆಗಳಿಗೆ ನೀರು ತುಂಬಿಸಲು ನಾಲೆ ಮದ್ಯೆ ರಸ್ತೆವಿದ್ದು ರಸ್ತೆಗೆ 20 ಅಡಿ ಪೈಪ್ ಆಳವಡಿಸಲು ಮನವಿ ಸಲ್ಲಿಸಿದರು. ಇದರಿಂದ ಶಾಶ್ವತವಾಗಿ ಮಳೆಗಾಲ ನೀರು ತುಂಬಿಸಲು ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದ ಬಳಿಕ ಪ್ರಬಾರ ಪಿಡಿಓ ಮಂಗಳ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಪೈಪ್ ಆಳವಡಿಸಬೇಕಾದರೆ ಗ್ರಾಮಸ್ಥರೇ ಸೇರಿ ಹಾಕಿಸಿಕೊಳ್ಳಿ ಅದರ ಮೊತ್ತವನ್ನು ಪಂಚಾಯಿತಿಯಿಂದ ನೀಡುವುದಾಗಿ ತಿಳಿಸಿದರು. ಇನ್ನೂ ಪೈಪ್ ಆಳವಡಿಕೆಯಿಂದ ನಮ್ಮ ಗ್ರಾಮದ ಎರಡು ಕಟ್ಟೆಗಳು ತುಂಬಿದರೆ ಶೆಟ್ಟಿಹಳ್ಳಿ ಗ್ರಾಮದ ಜಾನುವಾರುಗಳಿಗೆ ಕುಡಿಯಲು ನೀರು ಅನುಕೂಲವಾಗುತ್ತದೆ ಕೂಡಲೇ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದರು. ಗ್ರಾಮಸ್ಥರು ಸಹ ಪಿಡಿಓ ಮಾತಿಗೆ ಮನ್ನಣೆ ನೀಡಿ ಗ್ರಾಮಸ್ಥರು ಎಲ್ಲರೂ ಸೇರಿ ಪೈಪ್ ಗೆ ಆಗುವಷ್ಟು ಹಣವನ್ನು ಹಾಕುತ್ತೇವೆ ನಿಮ್ಮ ಪಂಚಾಯಿತಿಯಲ್ಲಿ ಬಿಲ್ ಆದ ತಕ್ಷಣ ನೀಡುವಂತೆ ಭರವಸೆ ನೀಡಿದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment