ಬಿಜೆಪಿ ಪಕ್ಷ ದಲಿತರ ವಿರೋಧಿ ಎಂಬುವುದು ಶುದ್ಧ ಸುಳ್ಳು- ಎಂ.ಎನ್ ಕೃಷ್ಣ..!

ಮಳವಳ್ಳಿ: ಬಿಜೆಪಿ ಪಕ್ಷ ದಲಿತರ ವಿರೋಧಿ ಎಂಬ ಅಪಪ್ರಚಾರ ಮಾಡುತ್ತಿದ್ದು. ದಲಿತರಿಗೆ ಪ್ರಾಮುಖ್ಯತೆ ನೀಡದಷ್ಟು ಬೇರೆ ಯಾವ ಪಕ್ಷದಲ್ಲೂ ನೀಡಿಲ್ಲ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಎನ್ ಕೃಷ್ಣ ತಿಳಿಸಿದರು. ಮಳವಳ್ಳಿ ಪಟ್ಟಣದ ಭಾರತೀ ಜನತಾಪಾರ್ಟಿ ಕಚೇರಿಯಲ್ಲಿ ಬಿಜೆಪಿ ತಾಲ್ಲೂಕು ಎಸ್ ಸಿ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ದಲಿತರ ಸಮುದಾಯದವರು ಬಿಜೆಪಿ ಪಕ್ಷಕ್ಕೆ ಒಲವು ತೋರಿಸಿದರೆ ಈ ಬಾರಿ ಬಿಜೆಪಿ ಪಕ್ಷದ ಶಾಸಕರನ್ನು ಆಯ್ಕೆ ಮಾಡಲು ಸಾಧ್ಯ , ದಲಿತರಿಗೆ ಬಿಜೆಪಿ ಪಕ್ಷದ ಬಗ್ಗೆ ಕಾಂಗ್ರೆಸ್ ಪಕ್ಷ ಹಾಗೂ ಇತರೆ ಪಕ್ಷದವರು ಅಪಪ್ರಚಾರ ಮಾಡುವುದನ್ನು ಕಿವಿಗೊಡದೆ ಸಂಘಟನೆಗೆ ಒತ್ತು ನೀಡಿ ಎಂದು ತಿಳಿಸಿದರು. ಇನ್ನೂ ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ನಿತ್ಯಾನಂದ ಮಾತನಾಡಿ, ಪ್ರತಿಯೊಬ್ಬರು ಲೀಡರ್ ಯಾಗಬೇಕು . ಬಿಜೆಪಿಯಲ್ಲಿ ಅದಕ್ಕೆ ಅವಕಾಶವಿದೆ. ವೈಮನಸ್ಸನ್ನು ಬಿಟ್ಟು ಎಲ್ಲರೂ ಸಂಘಟನೆ ಮಾಡಬೇಕು , ಬೇರೆ ಪಕ್ಷದವರನ್ನು ನಮ್ಮ ಪಕ್ಷಕ್ಕೆ ಕರೆತರುವುದಕ್ಕೆ ಪ್ರತಿಯೊಬ್ಬ ಕಾರ್ಯಕರ್ತರು ಮಾಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಎಸ್ ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಪರಮಾನಂದ, ತಾಲ್ಲೂಕು ಎಸ್ ಸಿ ಮೋರ್ಚಾ ಅಧ್ಯಕ್ಷ ಪ್ರದೀಪ್, ಜಿಲ್ಲಾ ಸಹ ವಕ್ತಾರ ಚಿಕ್ಕಣ್ಣ, ತಾಲ್ಲೂಕು ಪ್ರಧಾನಕಾರ್ಯದರ್ಶಿ ಕೆ.ಸಿ ನಾಗೇಗೌಡ, ಅಶೋಕಕ್ಯಾತನಹಳ್ಳಿ. ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment