ದಾವಣಗೆರೆಯಲ್ಲಿ ಕೊರೊನಾ ಸಭೆ: ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಬಿಜೆಪಿ ಸಂಸದ, ಶಾಸಕ

ದಾವಣಗೆರೆ: ಏಕವಚನದಲ್ಲಿ ಸಂಸದ ಸಿದ್ದೇಶ್ವರ ಹಾಗೂ ಶಾಸಕ ಮಾಡಾಳು ವಿರುಪಾಕ್ಷಪ್ಪ ಬೈದಾಡಿಕೊಂಡು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ದಾವಣಗೆರೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದಿದೆ.
ಕೊವಿಡ್ ಸೋಂಕಿನ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಹಾಗೂ ವೈದ್ಯಕೀಯ ಸಚಿವ ಡಾ.ಸುಧಾಕರ್ ಸಮ್ಮುಖದಲ್ಲಿ ಏ ಏನೋ ಮಾತಾಡ್ತೀಯಾ ನೀನು ಎಂದ ಸಂಸದ,ಏ ಕೂತುಕೊಳ್ಳೊ ನೀನು, ನಿಂದೇನೋ ಎಂದು ಶಾಸಕ ಮಾಡಾಳು ವಿರುಪಾಕ್ಷಪ್ಪ ಜಗಳ ಮಾಡಿಕೊಂಡಿದ್ದಾರೆ.
ಮಾಡಾಳು ವಿರುಪಾಕ್ಷಪ್ಪ ಕುಡಿಯುವ ನೀರಿನ ಬಗ್ಗೆ ಮಾತಾಡುತ್ತಿರುವ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರ್ ಆಕ್ಷೇಪಣೆ ಮಾಡುತ್ತಿದ್ದಂತೆ ಏಕವಚನದಲ್ಲಿ ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಮಾತಾಡಿದ್ದಾರೆ. ಮಾಡಾಳು ವಿರುಪಾಕ್ಷಪ್ಪ ಮಾತಿಗೆ ಕುರ್ಚಿಯಿಂದ ಎದ್ದು ಮಾಡಾಳು ಬಳಿ ಬಂದು ಏನೋ ನಿಂದು ಅಂತ ಹೇಳುತ್ತಲೆ ಕೈ ಕೈ ಮಿಲಾಯಿಸುವ ಹಂತಕ್ಕೆ ತೆರಳಿ ಗಲಾಟೆಗೆ ಮುಂದಾಗಿದ್ದಾರೆ.
ಈ ವೇಳೆ ಎಸ್ ಪಿ ಹನುಮಂತರಾಯ ಮಧ್ಯ ಪ್ರವೇಶಿಸಿ ಗಲಾಟೆಗೆ ಬ್ರೇಕ್ ಹಾಕಿದ್ದು,ಸಂಸದ ಹಾಗೂ ಶಾಸಕರ ವರ್ತನೆಯಿಂದ ಮುಖಪ್ರೇಕ್ಷರಾದ ಸಚಿವದ್ವಯರು ನೋಡುತ್ತ ಕೂತಿದ್ದರು. ಅಧಿಕಾರಿಗಳ ಸಭೆಯಲ್ಲಿ ರಾಜಕಾರಣಿಗಳ ಮಾತಿನ ಚಕಮಕಿಯಾಗಿದ್ದು ತಮ್ಮೊಳಗೆ ಒಗ್ಗಟ್ಟು ಇಲ್ಲ ಎಂದು ತೋರಿಸಿಕೊಂಡಿದ್ದಾರೆ.

ಮಹಾ0ತೇಶ್ ಎಕ್ಸ್ ಪ್ರೆಸ್ ಟಿವಿ ದಾವಣಗೆರೆ

Please follow and like us:

Related posts

Leave a Comment