ತಾಯಿಯಿಂದ ದೂರ ಉಳಿದ ಮರಿಯಾನೆ ನರಳಾಟ..!

ಹಾಸನ: ತಾಯಿಯಿಂದ ದೂರ ಉಳಿದ ನರಳಾಡುತ್ತಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದ ಕಾಫಿ ತೋಟದ ನಡುವೆ ಅಮ್ಮನ ಸೇರಲು ಮರಿಯಾನೆ ಹಂಬಲಿಸುತ್ತಿದ್ದು, ಏಕಾಂಗಿಯಾಗಿ ನರಳಾಡುತ್ತಿದೆ. ಎಡಗಾಲಿಗೆ ನೋವಾಗಿರುವ ಕಾರಣ ನಡೆಯಲಾರದೇ ಕೂತಲ್ಲೇ ಕೂತಿರುವ ಮರಿಯಾನೆ ನರಳಾಡುತ್ತಿದ್ದು, ಜನ ಮರುಗುತ್ತಿದ್ದಾರೆ.ಶತಾಯಗತಾಯ ಮರಿಯಾನೆಯನ್ನ ಅಮ್ಮನ ಬಳಿ ಸೇರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಪ್ರಯತ್ನ ನಡೆಸುತ್ತಿದ್ದಾರೆ. ಅಕಸ್ಮಾತ ತಾಯಿ ಆನೆ ಕರೆದೊಯ್ಯದಿದ್ದರೆ,ಆನೆ ಕ್ಯಾಂಪ್‌ಗೆ ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ತಯಾರಿ ನಡೆಸುತ್ತಿದೆ.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment