ಕಾಡಿನಿಂದ ನಾಡಿಗೆ ಬಂದ ಆನೆಗಳು..!

ಪಿರಿಯಾಪಟ್ಟಣ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸಿಗೆಕೋರೆ ಗ್ರಾಮದಿಂದ ಕಾವೇರಿ ನದಿ ದಾಟಿ ಪಿರಿಯಾಪಟ್ಟಣ ತಾಲೂಕಿನ ಚಿಕ್ಕ ಕಮರವಳ್ಳಿ ಗ್ರಾಮಕ್ಕೆ 4 ಆನೆಗಳು ಬಂದಿದ್ದು ಗ್ರಾಮಸ್ಥರು ಜೀವಭಯದಲ್ಲಿ ರಾತ್ರಿ ಸಮಯದಲ್ಲಿ ಕಾಲ ಕಳೆಯ ಬೇಕಾದ ಪರಿಸ್ಥೀತಿ ನಿರ್ಮಾಣವಾಗಿದೆ. ಇನ್ನೂ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಿರಿಯಾಪಟ್ಟಣದ ತಾಲ್ಲೂಕಿನ ವಲಯ ಅರಣ್ಯಾಧಿಕಾರಿ ರತನ್ ಹಾಗೂ ಅರಣ್ಯ ಸಿಬ್ಬಂದಿಗಳು ಮತ್ತು ಸೋಮವಾರಪೇಟೆ ತಾಲ್ಲೂಕಿನ ಅರಣ್ಯ ಇಲಾಖೆ ಸಿಬ್ಬಂದಿಗಳು, ಬೆಟ್ಟದಪುರ ಠಾಣೆಯ ಪೊಲೀಸರು ಸೇರಿ ಆನೆಗಳನ್ನು ಊರಿನಿಂದ ಓಡಿಸುವ ಪ್ರಯತ್ನ ನಡೆಸುತ್ತಿದ್ದರು. ನಂತರ ವಲಯ ಅರಣ್ಯಾಧಿಕಾರಿ ರತನ್ ಮಾತನಾಡಿ ಜನರು ದೂರ ಇದ್ದು ಆನೆಗಳನ್ನು ಓಡಿಸಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸ್ಥಳದಲ್ಲಿ ಬೆಟ್ಟದಪುರ ಪೊಲೀಸ್ ಠಾಣೆಯ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಎಎಸ್ ಐ ವಿಜಯ್, ಸೋಮಶೇಖರ್ ಉಪ ವಲಯ ಅರಣ್ಯಾಧಿಕಾರಿ ಮಧುಸೂದನ್,ಮಹೇಶ್, ಪೆಮ್ಮೆಯ ಅರಣ್ಯ ರಕ್ಷಕ ಮಹೇಶ್ ,ಸಂದೀಪ್, ಹರಿಶ್, ಯಲಗೂರೇಶ, ಸೇರಿದಂತೆ ಸಾಕಷ್ಟು ಜನ್ರು ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯದಲ್ಲಿ ತೊಡಗಿದ್ದರು.

ವರದಿ- ರಾಮೇಗೌಡ ಎಕ್ಸ್ ಪ್ರೆಸ್ ಟಿವಿ ಪಿರಿಯಾಪಟ್ಟಣ

Please follow and like us:

Related posts

Leave a Comment