ಪಿಡಿಓಗಳನ್ನು ಕಂಟ್ರೋಲ್ ಇಡಿ, ಬಡವರಿಗೆ ಮೊದಲ ಆದ್ಯತೆ- ವಿ.ಸೋಮಣ್ಣ..!

ಹುಬ್ಬಳ್ಳಿ: ಜಗದೀಶ್ ನಗರ ಆಶ್ರಯ ಬಡಾವಣೆಯಲ್ಲಿ ಬಾಕಿ ಉಳಿದ 188 ಆಶ್ರಯ ಮನೆಗಳನ್ನು ಮೂಲ ಫಲಾನುಭವಿಗಳಿಗೆ ಹಸ್ತಾಂತರ ಮಾಡಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಜಗದೀಶ್ ನಗರ ಆಶ್ರಯ ನಿವಾಸಿಗಳ ಹಿತರಕ್ಷಣಾ ಸಮತಿ ವತಿಯಿಂದ ಮನವಿ ಸಲ್ಲಿಸಿದರು. ನಂತರ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ ಬಡವರ ಶೋಷಣೆ ನಿಂತಿಲ್ಲ, ನಾಳೆ ಬರ್ತೀನಿ, ಆಯುಕ್ತರ ಕರಿಸ್ತೀನಿ, ನನ್ನ ಜೊತೆ ಎಂಟು ದಿನ ಬಾ, ನೀನೇ ಮಂತ್ರಿಗಿರಿ ಮಾಡು, ಮೂರುವರೆ ಲಕ್ಷದಲ್ಲಿಯೂ ದುಡ್ಡು ಹೊಡಿಯುತಿದ್ದಾರೆ, ಎಂದು ಹೋರಾಟಗಾರನಿಗೆ ಹೇಳಿದರು. ಇನ್ನೂ ಆತ್ಮವಂಚನೆ ಮಾಡಿಕೊಳ್ಳಬೇಡಿ ಬಡವರ ಪರ ಇರಿ ಶಾಸಕ ಅರವಿಂದ ಬೆಲ್ಲದ್ ಒಳ್ಳೆವರು ಇದ್ದಾರೆ ಸ್ವಲ್ಪ ಹೈಫೈ ಇದ್ದಾರೆ. ಈಗ ಮೊದಲ ಕಾನೂನು ಹೋಯ್ತು, ಮೋಸ ವಂಚನೆ ಈಗ ನಡೆಯಲ್ಲ. 2021 ರಲ್ಲಿ ಅಲೌಟ್ ಆದ ಮನೆಗಳಿಗೆ, ಹಸ್ತಾಂತರ ಮಾಡಿಲ್ಲ ಇನ್ನೂ ಹತ್ತು ಹದಿನೈದು ದಿನಗಳಲ್ಲಿ ಇಷ್ಟು ವರ್ಷದ ಸಮಸ್ಯೆ ಪರಿಹರಿಸುತ್ತೇನೆ. ಒಬ್ಬೊಬ್ಬರು ಒಂದೊಂದೇ ಮನೆ ಪಡೆಯಿರಿ. ಎಂತಹದ್ದೇ ಸಮಸ್ಯೆ ಇದ್ದರೂ ನಾನು ಪರಿಹರಿಸ್ತೀನಿ. ಪಿಡಿಓಗಳನ್ನು ಕಂಟ್ರೋಲ್ ಇಡಿ ದೇಶದಲ್ಲಿ ಪಿಡಿಒ ಪಂಚಾಯತಿ ನಡೆಸುವಲ್ಲಿ ಸುಮಾರು ಒಂದು ಕೋಟಿ ಪಂಚಾಯ್ತಿ ಬರುತ್ತದೆ. ಸತ್ಯ ಇಲ್ಲದೆ ನಾ ಏನು ಮಾತನಾಡುವುದಿಲ್ಲ. ಬಡವರಿಗೆ ಮೊದಲ ಆದ್ಯತೆ ನೀಡಿ, ಇದು ಸಮಸ್ಯೆ ಅಲ್ಲ, ಇದು ಅವಶ್ಯಕತೆ ಎಂದರು.

ವರದಿ-ಶಂಕರ್ ನಾಗ್ ಎಕ್ಸ್ ಪ್ರೆಸ್ ಟಿವಿಹುಬ್ಬಳ್ಳಿ

Please follow and like us:

Related posts

Leave a Comment