ಮೈಸೂರಿನಲ್ಲಿ ಕೇಕ್ ಮಿಕ್ಸಿಂಗ್ ಮಾಡಿ ಗಮನ ಸೆಳೆದ ಡಿ ಬಾಸ್..!

ಮೈಸೂರು: ಕ್ರಿಸ್ಮ ಸ್ ಹಿನ್ನೆಲೆ ಕೇಕ್ ತಯಾರಿಕೆ ಜೋರಾಗಿ ನಡೆತಿದೆ. ಇದೀಗ ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಲ್ಲಿ ನಟ ದರ್ಶನ್ ಕೇಕ್ ಮಿಕ್ಸಿಂಗ್ ಮಾಡಿ ಗಮನ ಸೆಳೆದಿದ್ದಾರೆ. ದಾಸ ಶೆಫ್ ಆಗಿ ಕೇಕ್ ಮಿಕ್ಸ್ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ದರ್ಶನ್ಗೆದ ನಿರ್ಮಾಪಕ ಸಂದೇಶ್ ಸಾಥ್ ನೀಡಿದ್ದು, ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ನಿರ್ಮಾಪಕ ಸಂದೇಶ್ ನಾಗರಾಜು ಭಾಗಿಯಾಗಿ ಕ್ರಿಸ್ಮನಸ್ ಅಂಗವಾಗಿ ತಯಾರಾಗುತ್ತಿರುವ ಕೇಕ್ ತಯಾರಿಕೆಗೆ ಕೈ ಜೋಡಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತರರೊಂದಿಗೆ ಕ್ರಿಸ್ಮಿಸ್ ಸಂಭ್ರಮದಲ್ಲಿ ತೊಡಗಿ, ಕೇಕ್ ಮಿಕ್ಸಿಂಗ್ ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸ್ನೇಹಿತರ ಜೊತೆ ಕ್ರಿಸ್ ಮಸ್ ಹಬ್ಬದ ಕೇಕ್ ಮಿಕ್ಸಿಂಗ್ ಮಾಡಿ ಸಂಭ್ರಮಿಸಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment