ತಮಿಳುನಾಡಿಗೆ ಕಾಲು ನಡಿಗೆಯಲ್ಲಿಯೇ ಹೊರಟ ಕಾರ್ಮಿಕರು

ಚಿಕ್ಕಮಗಳೂರು: ಅವರೆಲ್ಲಾ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕೆಲಸ ಮೂಡುತ್ತಿದ್ದ ತಮಿಳುನಾಡು ಮೂಲದ ಕಾರ್ಮಿಕರು. ಇಲ್ಲಿನ ಕಟ್ಟಡ ನಿರ್ಮಾಣಕ್ಕೆ ಈ ಕಾರ್ಮಿಕರು ತಮಿಳುನಾಡಿನಿಂದ ಆಗಮಿಸಿದ್ದರು.ಆದರೀಗ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ತಮ್ಮೂರಿಗೆ ತೆರಳಲು ಆ ಕಾರ್ಮಿಕರೆಲ್ಲಾ ಮುಂದಾಗಿದ್ದಾರೆ.
ಆದರೆ ಅವರಿಗೆ ತೆರಳಲು ಯಾವುದೇ ಬಸ್,ರೈಲ್ ಇತರೆ ವಾಹಗಳು ಇಲ್ಲದಿರುವ ಪರಿಣಾಮ ಕಾಲು ನಡಿಗೆಯಲ್ಲಿಯೇ ತಮಿಳುನಾಡಿಗೆ ಹೊರಟಿದ್ದಾರೆ.
ಅಂದ ಹಾಗೇ ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಕಾಲು ನಡಿಗೆಯಲ್ಲಿಯೇ ಈ ಕಾರ್ಮಿಕರು ಇದೀಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ತಲುಪಿದ್ದಾರೆ.
ಇನ್ನು ಸಾಗರದಿಂದ ತಮಿಳುನಾಡಿನ ವೆಲ್ಲೂರಿಗೆ ತೆರಳಬೇಕಾದರೇ ಸುಮಾರು ೬೦೦ ಕಿ.ಮೀ ದೂರ ಕ್ರಮಿಸಬೇಕು,ಹೀಗಾಗಿ ನಡೆದುಕೊಂಡೇ ಹೊರಟಿರುವ ಇವರು ಊಟವಿಲ್ಲದೇ ಪರದಾಡುವ ಸ್ಥಿತಿ ಎದುರಾಗಿದೆ.
ಸದ್ಯ ಸರಿಯಾಗಿ ಊಟವಿಲ್ಲದೇ ಸುಸ್ತಾಗಿ ರಸ್ತೆ ಬದಿ ಮಲಗಿದ್ದ ಈ ಕಾರ್ಮಿಕರಿಗೆ ಊಟ ನೀಡಿ ತರೀಕೆರೆ ಪೋಲಿಸರು ಮಾನವೀಯತೆ ಮೆರೆದಿದ್ದಾರೆ.ಕಾರ್ಮಿಕರಿಗೆ ಎರಡು ದಿನಕ್ಕಾಗುವಷ್ಟು ಬಿಸ್ಕೆಟ್, ಬ್ರೆಡ್ ನೀಡಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಚಿಕ್ಕಮಗಳೂರು

Please follow and like us:

Related posts

Leave a Comment