ಟೀಂ ಇಂಡಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 300 ರನ್ ಗಳಿಗೆ ಅಲೌಟ್ ಆಗಿರುವ ಆಸೀಸ್ ತಂಡ ಫಾಲೋಆನ್‍ಗೆ ಒಳಗಾಗಿದ್ದು, 31 ವರ್ಷಗಳ ಬಳಿಕ ತವರು ನೆಲದಲ್ಲಿ ಆಸೀಸ್ ಫಾಲೋಆನ್ ಎದುರಿಸಿದೆ.
ಟೆಸ್ಟ್ ಪಂದ್ಯದ 4ನೇ ದಿನದಾಟದ ವೇಳೆ ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 300 ರನ್ ಗಳಿಗೆ ಅಲೌಟ್ ಆಯ್ತು, ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿ 4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 6 ರನ್ ಗಳಿಸಿದೆ. ಟೀಂ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 322 ರನ್ ಗಳ ಮುನ್ನಡೆಯನ್ನು ಪಡೆದಿತ್ತು. ಈ ಮೊತ್ತ ಆಸೀಸ್ ನೆಲದಲ್ಲಿ ಇದುವರೆಗೂ ಪಡೆದ ತಂಡ ಪಡೆದಿರುವ ಬಹೃತ್ ಮುನ್ನಡೆಯಾಗಿದೆ. ಸದ್ಯ ಅಂತಿಮ ದಿನದಾಟದಲ್ಲಿ ಆಸೀಸ್ ಇನ್ನಿಂಗ್ಸ್ ಮುನ್ನಡೆಗೆ 10 ವಿಕೆಟ್ ಗಳಲ್ಲಿ 316 ರನ್ ಗಳ ಅಗತ್ಯವಿದೆ.