Connect with us

ಸಿನಿಮಾ

ಈಜು ಕೊಳದ ಮಧ್ಯದಲ್ಲಿ ಮಂಟಪ ನಿರ್ಮಾಣ – ಡಿಫರೆಂಟ್ ಆಗಿ ಮದುವೆ ಆಗಲು ರೆಡಿಯಾದ ಲವ್ ಮಾಕ್ಟೈಲ್ ಜೋಡಿ..!

Published

on

ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಕಳೆದ ಐದಾರು ತಿಂಗಳಿನಿಂದ ಒಂದಾದ ಮೇಲೆ ಒಂದರಂತೆ ಭರ್ಜರಿಯಾಗಿ ಮದುವೆ ಸಮಾರಂಭ ನಡೆಯುತ್ತಿದ್ದು, ಕೆಲ ಸ್ಟಾರ್ ನಟ-ನಟಿಯರು ಸೇರಿದಂತೆ ಕಿರುತೆರೆ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದರಂತಯೇ ಸ್ಯಾಂಡಲ್ ವುಡ್ ನಲ್ಲಿ 2021 ರ ವರ್ಷದ ಮೊದಲ ಮದುವೆ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅವರದ್ದು, ಈ ಜೋಡಿ 2021 ಫೆಬ್ರವರಿ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ಈಗಾಗಲೇ ಮದುವೆ ತಯಾರಿ ಕೂಡ ಭರ್ಜರಿಯಾಗಿ ನಡೆಯುತ್ತಿದೆ.ವಿಶೇಷ ರೀತಿಯಲ್ಲಿ ಮದುವೆಯಾಗಲು ಈ ಜೊಡಿ ನಿರ್ಧರಿಸಿದ್ದು, ಫೆಬ್ರವರಿ 14ರ ಬೆಳ್ಳಂಬೆಳಗ್ಗೆಯೇ ಮುಹೂರ್ತವಿರುತ್ತದೆ. ಸಂಜೆ ಆರತಕ್ಷತೆ ಕಾರ್ಯಕ್ರಮವಿರುತ್ತದೆ. ಮಿಲನಾ ಈಜುಗಾರ್ತಿ, ಹೀಗಾಗಿ ಈಜುಕೊಳದ ಮಧ್ಯೆ ಮಂಟಪವಿರಲಿದೆಯಂತೆ. ಇನ್ನೂ ಮಿಲನ ನಾಗರಾಜ್ ಅವರಿಗೆ ಮದುವೆ ಪ್ರತಿಯೊಂದು ರೀತಿಯಲ್ಲೂ ತುಂಬ ವಿಶೇಷವಾಗಿರಬೇಕಂತೆ ಹಾಗಾಗಿ ಬಹಳ ವಿಶೇಷವಾಗಿ ಮದುವೆ ಆಗಲು ರೆಡಿಯಾಗುತ್ತಿದ್ದೇವೆ ಎಂದು ಡಾರ್ಲಿಂಗ್ ಕೃಷ್ಣ ತಮ್ಮ ಮದುವೆ ಬಗೆಗಿನ ಮಾಹಿತಿ ಹಂಚಿಕೊಂಡಿದ್ದು, ಮೂಲಗಳಿಂದ ತಿಳಿದು ಬಂದಿದೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

ಹೆಣ್ಣು ಮಗುವಿನ ತಾಯಿಯಾದ ಅನುಷ್ಕಾ ಶರ್ಮಾ..!

Published

on

By

ಮುಂಬೈ: ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು, ಅಲ್ಲದೇ ದಂಪತಿಗೆ ಯಾವ ಮಗುವಾಗುತ್ತೆ ಅನ್ನೋ ಬಗ್ಗೆ ಅಭಿಮಾನಿಗಳಲ್ಲೂ ಸಾಕಷ್ಟು ಕುತೂಹಲವಿತ್ತು. ಇದೀಗ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ಸೆಲೆಬ್ರೆಟಿ ದಂಪತಿ ಹೆಣ್ಣು ಮಗುವಿನ ಹೆತ್ತವರಾಗಿದ್ದಾರೆ,ಇನ್ನು ಈ ಬಗ್ಗೆ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಖುಷಿಯ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ, ಅಲ್ಲದೇ ಎಲ್ಲರೂ ದಂಪತಿ ಹಾಗೂ ಮಗುವಿಗೆ ಶುಭ ಹಾರೈಸಿದ್ದಾರೆ. ಇನ್ನು ಮೊನ್ನೆಯಷ್ಟೇ ಅನುಷ್ಕಾ ಶರ್ಮಾ ಜಿಮ್ ನಲ್ಲಿ ವರ್ಕೌಟ್ ಮಾಡುವ ವಿಡಿಯೋ ವೈರಲ್ ಆಗಿತ್ತು.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Continue Reading

ಸಿನಿಮಾ

ನಟ ಅನಿರುದ್ಧ್ ಮನೆಗೆ ಭೇಟಿ ನೀಡಿದ ಜಯನಗರದ ಶಾಸಕಿ ಸೌಮ್ಯ ರೆಡ್ಡಿ..!

Published

on

By

ಬೆಂಗಳೂರು: ಜೊತೆ ಜೊತೆಯಲಿ’ಧಾರಾವಾಹಿ ಖ್ಯಾತಿಯ ನಟ ಅನಿರುದ್ಧ್ ಅವರು ಪ್ರಸ್ತುತ ನಟನೆಯ ಜೊತೆಗೆ ಸಾಮಾಜಿಕ ಕೆಲಸಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಖಾತೆ ಮೂಲಕ ಅವರು ಅನೇಕ ಸಮಸ್ಯೆಗಳು, ಅವುಗಳಿಗೆ ಪರಿಹಾರವನ್ನು ಸೂಚಿಸಿ ಸರ್ಕಾರದ ಜೊತೆಗೆ ಜನರ ಗಮನ ಸೆಳೆಯುತ್ತಿದ್ದಾರೆ. ಅವರ ಮನೆಗೆ ಜಯನಗರದ ಶಾಸಕಿ ಸೌಮ್ಯ ರೆಡ್ಡಿ ಭೇಟಿ ನೀಡಿದ್ದು, ಆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಕಳಕಳಿಯ ಮನವಿ. ನಮ್ಮ ರಾಜ್ಯದಲ್ಲಿ ತೆರೆದ ಕಾಲುವೆಗಳನ್ನು ಮುಚ್ಚಿ ಗುಜರಾತ್ ಮಾದರಿಯ ವಿದ್ಯುತ್ಪಕ್ತಿ ಉತ್ಪಾದನೆಗೆ ಸೌರಫಲಕಗಳನ್ನು ಬಳಸಬಹುದು. ಎರಡೂ ಬದಿಯಲ್ಲಿ ಗೋಡೆಗಳನ್ನು ಕಟ್ಟಿ ಅವುಗಳ ಮೇಲೆ ವರ್ಟಿಕಲ್ ಗಾರ್ಡನಿಂಗ್ ಮಾಡಬಹುದು’ಎಂದು ಅನಿರುದ್ಧ ಅವರು ಹೊಸದಾಗಿ ಅಧಿಕೃತವಾದ ಟ್ವಿಟ್ಟರ್ ಖಾತೆ ತೆರದು ಟ್ವೀಟ್ ಮಾಡಿದ್ದಾರೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Continue Reading

ಸಿನಿಮಾ

ಸೋನುಸೂದ್ ಮೇಲೆ ಕೇಸ್ ಹಾಕಿದ ಮುಂಬೈ ಪಾಲಿಕೆ.!

Published

on

By

ಮುಂಬೈ: ಲಾಕ್ಡೌನ್ ಸಮಯದಲ್ಲಿ ಬಡವರಿಗೆ ಸಹಾಯ ಮಾಡಿ ರಿಯಲ್ ಹೀರೋ ಎನಿಸಿಕೊಂಡವರು ಬಾಲಿವುಡ್ ನಟ ಸೋನುಸೂದ್. ಆದರೆ ಅವರು ಕಾನೂನು ಪ್ರಕಾರ ನಡೆದು ಕೊಂಡಿಲ್ಲ ಎಂದು ಆರೋಪಿಸಿ ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಕೇಸ್ ಹಾಕಿದ್ದಾರೆ. ಅದಕ್ಕೀಗ ಸೋನು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಸೋನು ಮುಂಬೈನಲ್ಲಿ ಕೆಲವು ಹೋಟೆಲ್ಗಳನ್ನು ಹೊಂದಿದ್ದಾರೆ. ಜುಹೂ ಪ್ರದೇಶದಲ್ಲಿ ಇರುವ ಜನವಸತಿ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡು ಹೋಟೆಲ್ ಆರಂಭಿಸಿದ್ದಾರೆ ಎಂದು ಸೋನು ಮೇಲೆ ಆರೋಪ ಎದುರಾಗಿದೆ. ಈ ಕಟ್ಟಡವು ಆರು ಮಹಡಿ ಹೊಂದಿದೆ. ಆದರೆ ಈ ಆರೋಪವನ್ನು ಸೋನು ಸೂದ್ ತಳ್ಳಿ ಹಾಕಿದ್ದು, ಈ ಹೋಟೆಲ್ ಆರಂಭಿಸಲು ತಾವು ಅಗತ್ಯವಿರುವ ಎಲ್ಲ ಇಲಾಖೆಗಳ ಅನುಮತಿಯನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಆರೋಪವನ್ನು ಸೋನು ಸೂದ್ ತಳ್ಳಿ ಹಾಕಿದ್ದಾರೆ. ಈ ಹೋಟೆಲ್ ಆರಂಭಿಸಲು ತಾವು ಅಗತ್ಯವಿರುವ ಎಲ್ಲ ಇಲಾಖೆಗಳ ಅನುಮತಿಯನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು .

Continue Reading

Trending

Copyright © 2023 EXPRESS TV KANNADA

kuşadası escort kayseri escort kocaeli escort canlı maç izle selcuksports güvenilir bahis siteleri deneme bonusu deneme bonusu veren siteler bahis siteleri https://resimlihaber.org/ canlı bahis siteleri güvenilir bahis siteleri http://seu.frvm.utn.edu.ar/guvenilir-bahis-siteleri.html casino sitelerimaç izle