50 ವರ್ಷದಿಂದ ಮೂಲ ಸೌಕರ್ಯವೇ ಕಾಣದ ಜನ… ಎಲ್ಲಿ ಗೊತ್ತಾ?

ಚಿತ್ರದುರ್ಗ :ಭಾರತಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳ ಕಾಲ ಕಳೆದಿದೆ. ಸ್ವಾತಂತ್ರ್ಯ ನಂತರ ಹಲವು ಅಭಿವೃದ್ಧಿ ಕೂಡ ಕಂಡಿದೆ. ಆದರೆ ಇಲ್ಲೊಂದು ಪ್ರದೇಶದಲ್ಲಿ 50 ವರ್ಷಗಳಿಂದ ಮೂಲಭೂತ ಸೌಕರ್ಯಗಳೇ ಇಲ್ಲದೇ ಜನ ವಾಸಿಸುತ್ತಿದ್ದಾರೆ. ಆರೋಗ್ಯ ಸಚಿವ ಶ್ರೀರಾಮುಲು ತವರು ಕ್ಷೇತ್ರವಾದ ಮೊಳಕಾಲ್ಮೂರು ತಾಲೂಕಿನ ಬಿಜಿ ಹಳ್ಳಿ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳೇ ಇಲ್ಲದೆ ವಾಸಿಸುತ್ತಿದ್ದಾರೆ. ಜಮೀನು ನಿರ್ವಹಣೆಗಾಗಿ ಇಲ್ಲಿನ ಕುಟುಂಬಗಳು ಪ್ರಕೃತಿ ಕೆರೆಯಾಚಿನ ಜಿಲ್ಲಾಗೊಂದಿ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇನ್ನು ಈ ಕುಟುಂಬಗಳು ಸುಮಾರು 50 ವರ್ಷದಿಂದ ಅರಣ್ಯದಲ್ಲೇ ವಾಸಿಸುತ್ತಿದ್ದರು, ಜನ ಪ್ರತಿನಿಧಿಗಳು ಮಾತ್ರ ಇತ್ತಕಡೆ ಗಮನ ಹರಿಸಿಲ್ಲ. ರಸ್ತೆ ಇಲ್ಲದೇ ತೆಪ್ಪದಲ್ಲೇ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ವಿದ್ಯುತ್ ಇಲ್ಲ, ಮತ್ತೊಂದು ಕಡೆ ಶಾಲಾ ಮಕ್ಕಳು ಕೂಡಾ ನಿತ್ಯವೂ ತೆಪ್ಪದಲ್ಲಿ ಓಡಾಡುವ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.ಕುಡಿಯುವ ನೀರಿಲ್ಲದೆ, ಕೆರೆಯ ನೀರನ್ನೇ ಕುಡಿದು ಜೀವನ ನಡೆಸುತ್ತಿದ್ದಾರೆ ಇಲ್ಲಿನ ಅರಣ್ಯವಾಸಿಗಳು. ಇನ್ನು ಗರ್ಭಿಣಿಯರು ಅಥವಾ ಅನಾರೋಗ್ಯದಿಂದ ಬಳಲುವ ರೋಗಿಗಳು ಕೂಡ ಜೀವ ಬಿಗಿಹಿಡಿದು ತೆಪ್ಪದಲ್ಲೇ ಸಾಗಬೇಕಿದೆ. ಇನ್ನಾದರು ಶಾಸಕ ಶ್ರೀರಾಮುಲು ಅಥವಾ ಸಂಬಂಧ ಪಟ್ಟ ಅಧಿಕಾರಿಗಳು ಈ ಕುಟುಂಬಸ್ಥರಿಗೆ ಶಾಶ್ವತ ಪರಿಹಾರ ನೀಡಬೇಕಿದೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment