ಮರ ಏರುವಾಗ ಕೆಳಗೆ ಬಿದ್ದು ಮರಿ ಕರಡಿ ಸಾವು

ಕಡೂರು(ಚಿಕ್ಕಮಗಳೂರು): ಸೊಂಟದ ಮೂಳೆ ಮುರಿದ ಪರಿಣಾಮ ಕರಡಿ ಮರಿಯೊಂದು ಸಾವು ಕಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕೆ. ಬಿದರೆ ಗ್ರಾಮದಲ್ಲಿ ನಡೆದಿದೆ.
ಅಂದ ಹಾಗೇ ಇದೇ ಗ್ರಾಮದಲ್ಲಿ ಸುಮಾರು ೬ ತಿಂಗಳಿನಿAದ ತಾಯಿ ಕರಡಿಯೊಂದಿಗೆ ಅಡ್ಡಾಡಿಕೊಂಡಿದ್ದ ಈ ಮರಿ ಕರಡಿ ಮರ ಏರುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಇನ್ನು ತನ್ನ ಜೊತೆ ಮರಿ ಕರಡಿ ಮರವೇರುವಾಗ ಅದನ್ನು ತಾಯಿ ಕರಡಿ ಮುಂದೆ ಎಳೆದುಕೊಂಡು ಹೋಗಲು ಬಹಳ ಪ್ರಯತ್ನ ಪಟ್ಟರೂ ಸಾಧ್ಯವಾಗದೇ ಕರಡಿ ಮರಿ ಮರದಿಂದ ಕೆಳಗೆ ಬಿದ್ದು ಸಾವು ಕಂಡಿದೆ.
ಇದೇ ವೇಳೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಧಿಕಾರಿಗಳು ಪಶುವೈದ್ಯರ ಸಮ್ಮುಖದಲ್ಲಿ ತಪಾಸಣೆ ನಡೆಸಿ ಮರಿ ಹೇಗೆ ಸತ್ತಿದೆ ಎಂಬುದರ ಮಾಹಿತಿ ನೀಡಿದ್ದಾರೆ.
ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಚಿಕ್ಕಮಗಳೂರು

Please follow and like us:

Related posts

Leave a Comment