
ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಮೇಲಿದ್ದ ಅಮಾನತ್ತಿನ ಶಿಕ್ಷೆಯನ್ನು ಇದೀಗ ಬಿಸಿಸಿಐ ಹಿಂಪಡೆದಿದೆ. ಬಾಲಿವುಡ್ ನಿರ್ದೇಶಕ, ನಟ ಮತ್ತು ನಿರೂಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಮೂಲಕ ಬಿಸಿಸಿಐ ಕೆಂಗಣ್ಣಿಗೆ ಇಬ್ಬರೂ ಆಟಗಾರರು ಗುರಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಸಂದರ್ಶನದಲ್ಲಿ ಇಬ್ಬರೂ ಆಟಗಾರರು ಆಡಿದ ಮಾತುಗಳಿಗೆ
ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದೀಗ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಓಪನರ್ ಕೆ.ಎಲ್. ರಾಹುಲ್ ಅವರಿಗೆ ಬಿಸಿಸಿಐ ಕೊಂಚ ರಿಲೀಫ್ ನೀಡಿದೆ. ಬಿಸಿಸಿಐನ ನಿರ್ವಾಹಕ ಸಮಿತಿ ಇಬ್ಬರು ಆಟಗಾರರ ಮೇಲಿದ್ದ ಮಧ್ಯಂತರ ಅಮಾನತ್ತು ಆದೇಶವನ್ನು ತಕ್ಷಣಕ್ಕೆ ಆಚರಣೆಗೆ ಬರುವಂತೆ ಹಿಂಪಡೆದಿದೆ.