ಮಕರ ರಾಶಿಯವರಿಗೆ ಈಗೊಂದು ನೀತಿ ಪಾಠ ಹೇಳಿ, ಆ ನಂತರ ಲೇಖನ ಆರಂಭಿಸುತ್ತೇನೆ.
ಇರುವೆಗಳು ಬೇಸಿಗೆಕಾಲದಲ್ಲಿ ಉಳಿದ ಕಾಲ, ಅಂದರೆ ಚಳಿ ಹಾಗೂ ಮಳೆಗಾಲಕ್ಕಿಂತ ಹೆಚ್ಚು
ಶ್ರಮಪಟ್ಟು ಆಹಾರ ಸಂಗ್ರಹ ಮಾಡುತ್ತವೆ. ಏಕೆಂದರೆ, ಮುಂದಿನ ಕಾಲ ಅದೆಂಥ ಸನ್ನಿವೇಶ
ಎದುರಾಗಬಹುದೋ ಗೊತ್ತಿಲ್ಲ. ದುಡಿಯುವ ಶಕ್ತಿ ಇದ್ದಾಗ, ಆಹಾರ ಕಣ್ಣಿಗೆ ಕಾಣುವಾಗ
ಆಪತ್ಕಾಲಕ್ಕೆ ಸಂಗ್ರಹಿಸಿಟ್ಟುಕೊಳ್ಳುವುದು ಒಳಿತು.
ಕಳೆದ ಅಕ್ಟೋಬರ್ ಹನ್ನೊಂದನೇ ತಾರೀಕು ನಿಮ್ಮ ಜನ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ
ಗುರು ಗ್ರಹದ ಸಂಚಾರ ಆಗುತ್ತಿದೆ. ಹನ್ನೆರಡನೇ ಮನೆಯಲ್ಲಿ ನಿಮ್ಮದೇ ರಾಶ್ಯಾಧಿಪತಿ ಶನಿಯು
ಸ್ಥಿತನಾಗಿದ್ದಾನೆ. ಈ ಎರಡು ಗ್ರಹದ ಫಲ ನಿಮ್ಮ ಪಾಲಿಗೆ ಹೇಗೆ ಸಿಗಬಹುದು. ಮುಂದಿನ
ವರ್ಷದ ನವೆಂಬರ್ ಐದನೇ ತಾರೀಕಿನ ತನಕ ಗುರು ಅದೇ ಹನ್ನೊಂದನೇ ಮನೆಯಲ್ಲಿ ಇರುತ್ತದೆ.
ಮಕರ ರಾಶಿಯವರಿಗೆ ಗುರು-ಶನಿ ನೀಡುತ್ತಿರುವ ಕೊನೆ ಅವಕಾಶ ಏನು ಗೊತ್ತೆ?

Please follow and like us: