ಕೊರೊನಾ ಟೈಂನಲ್ಲಿ ಉಡುಪಿ ಡಿಸಿ ಮೇಲೆ ಯಾರಾ ಒತ್ತಡ?

ಉಡುಪಿ: ಕೇಂದ್ರ ಸರಕಾರ ಆದೇಶದ ಅನ್ವಯ ಜಿಲ್ಲೆಗೆ ಯಾರನ್ನು ಕೂಡ ಕರೆಸಿಕೊಳ್ಳಲು ಸಾಧ್ಯವಿಲ್ಲ ಎಂದಿರುವ ಉಡುಪಿ ಡಿಸಿ ಜಗದೀಶ್ ತಿಳಿಸಿದ್ದು,ಸದ್ಯಕ್ಕೆ ನೀವೆಲ್ಲ ಎಲ್ಲಿದ್ದೀರೋ ಅಲ್ಲೇ ಇರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಸದ್ಯ ಬೆಂಗಳೂರು, ಪುಣೆ ಮುಂಬೈನಲ್ಲಿರುವ ಉಡುಪಿಜಿಲ್ಲೆಯ ನಾಗರೀಕರಲ್ಲಿ ಮನವಿ ಮಾಡಿದ ಅವರು,ಈಗಾಗಲೇ ಜಿಲ್ಲೆಯಲ್ಲಿ ೩ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಗುಣ ಮುಖರಾಗಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರುಗಳು,ಸಂಸದರು ನನ್ನ ಮೇಲೆ ನಿಮ್ಮನ್ನು ಕರೆಸಿಕೊಳ್ಳುವಂತೆ ಒತ್ತಡವಿದೆ.ಆದರು ನಿಮ್ಮನ್ನು ಕೊರೋನಾ ಲಾಕ್ ಡೌನ್ ಮುಗಿಯುವವರೆಗೂ ಇಲ್ಲಿಗೆ ಕರೆಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಜೊತೆಗೆ ಲಾಕ್ ಡೌನ್ ಮುಗಿದ ಬಳಿಕ ನೀವು ಬರಬಹುದು, ಬಂಧುಗಳನ್ನು ಸೇರಬಹುದು. ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಗೆ ಬರುವುದರಿಂದ ತಮಗೂ ಹಾಗೂ ಇಲ್ಲಿ ಇರುವವರೆಗೂ ತೊಂದರೆಯಾಗುತ್ತದೆ. ನಿಮಗೆ ತೊಂದರೆ ಕೊಡುವ ಉದ್ದೇಶ ನನ್ನಲ್ಲಿ ಇಲ್ಲ, ಸರಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ. ದಯವಿಟ್ಟು ತಾವು ಎಲ್ಲಿ ಇದ್ದಿರೋ ಅಲ್ಲಿಯೇ ಇರಿ, ನನ್ನ ಕರ್ತವ್ಯಕ್ಕೆ ಸಹಕರಿಸಿ ಎಂದು ಅವರು ಹೇಳಿದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಉಡುಪಿ

Please follow and like us:

Related posts

Leave a Comment