ಕೊರೊನಾ ಸೋಕಿಂತೆ ಸಾವು, ದಕ್ಷಿಣ ಕನ್ನಡದಲ್ಲಿ ಅಂತ್ಯಸ0ಸ್ಕಾರದ ಹೈಡ್ರಾಮಾ..

ಪಚ್ಚನಾಡಿ (ದಕ್ಷಿಣ ಕನ್ನಡ) ಕೊರೊನಾ ಸೋಂಕಿನಿ0ದ ನಿನ್ನೆ ಮೃತಪಟ್ಟ ಮಹಿಳೆಯ ಅಂತ್ಯಸ0ಸ್ಕಾರ ನಡೆಸಲು ಎಲ್ಲಡೆ ಜನರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೊನೆಗೆ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಆಕೆಯ ಹುಟ್ಟೂರಲ್ಲಿ ಅಂತಿಮ ವಿಧಿವಿಧಾನ ಪೂರೈಸಿದೆ. ಕೊರೊನಾದಿಂದ ನಿನ್ನೆ ಮೃತಪಟ್ಟ ಮಹಿಳೆಯ ಅಂತ್ಯಸ0ಸ್ಕಾರವನ್ನು ಮೊದಲು ಪಚ್ಚನಾಡಿಯಲ್ಲಿರುವ ರುದ್ರಭೂಮಿಯಲ್ಲಿ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆತ್ತು. ಇದಕ್ಕೆ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಾಮಂಜೂರಿನ ಚಿತಾಗಾರದಲ್ಲಿ ಅಂತ್ಯಸ0ಸ್ಕಾರ ನಡೆಸಲು ಮುಂದಾದಾಗ ಅಲ್ಲಿಯೂ ನೂರಾರು ಸಂಖ್ಯೆ ಜನರು ಜಮಾಯಿಸಿ ಗಲಾಟೆ ನಡೆಸಿದರು.
ಇದಕ್ಕೆ ಅಲ್ಲಿನ ಶಾಸಕ ಡಾ.ವೈ. ಭರತ್ ಶೆಟ್ಟಿ, ಜನರ ಒಪ್ಪಿಗೆಯಿಲ್ಲದೆ ಅಂತ್ಯಸ0ಸ್ಕಾರ ನಡೆಸಲು ತಾವೂ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ.
ಸ್ಥಳೀಯರು, ಶಾಸಕರ ವಿರೋಧಕ್ಕೆ ಮಣಿದ ಜಿಲ್ಲಾಡಳಿತ, ಮೂಡುಶೆಡ್ಡೆ ಪ್ರದೇಶದಲ್ಲಿ ಅಂತ್ಯಸ0ಸ್ಕಾರ ನಡೆಸಲು ನಿರ್ಧರಿಸಿತ್ತು.
ಆದರೆ ಅಲ್ಲಿಯೂ ಅಂತ್ಯ ಸಂಸ್ಕಾರ ನಡೆಸದಂತೆ ಜನ ಜಮಾಯಿಸಿದ ಪರಿಣಾಮ ಜಿಲ್ಲಾಡಳಿತ ಇಕ್ಕಟಿಗೆ ಸಿಲುಕಿತ್ತು. ಇದೆಲ್ಲರಿಂದ ಬೇಸತ್ತ ಜಿಲ್ಲಾಡಳಿತ ಮಹಿಳೆಯ ಊರಾದ ಬಂಟ್ವಾಳದಲ್ಲಿಯೇ ಅಂತ್ಯಸAಸ್ಕಾರ ನಡೆಸುವುದೆಂದು ತೀರ್ಮಾನಿಸಿತ್ತು.
ಮೊದಲು ಮೃತ ಮಹಿಳೆಯ ಬಂಟ್ವಾಳ ಪೇಟೆಯ ಊರಾದ ಬಡ್ಡಕಟ್ಟೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸ0ಸ್ಕಾರ ನಡೆಸಲು ತೀರ್ಮಾನಿಸಿ ಅಲ್ಲಿಗೆ ತೆಗೆದುಕೊಂಡು ಹೋದ ವೇಳೆ, ಇದೇ ಪರಿಸ್ಥಿತಿಯನ್ನು ಜಿಲ್ಲಾಡಳಿತ ಎದುರಿಸಿತು.
ಇದೆಲ್ಲರಿಂದ ಬೇಸತ್ತ ಅಧಿಕಾರಿಗಳು, ಕೊನೆಗೆ ಪೊಲೀಸ್ ಬಿಗಿಬಂದೋ ಬಸ್ತಿನೊಂದಿಗೆ ರಾತ್ರಿ ೨ ಗಂಟೆ ಸುಮಾರಿಗೆ ಬಿ.ಸಿ.ರೋಡ್ ರೈಲು ನಿಲ್ದಾಣ ಸಮೀಪದ ಕೈಕುಂಜೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸ0ಸ್ಕಾರ ನಡೆಸಿತು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ದಕ್ಷಿಣ ಕನ್ನಡ

Please follow and like us:

Related posts

Leave a Comment