ಈ ಟೈಂನಲ್ಲಿ ಎಣ್ಣೆ ಅಂಗಡಿ ಓಪನ್..ನೋ ಚಾನ್ಸ್..

ಚಾಮರಾಜನಗರ:ಮೇ.೩ರವರೆಗೆ ರಾಜ್ಯದ ಎಲ್ಲೂ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ. ರಾಜ್ಯಕ್ಕೆ ಇದರಿಂದ ನಷ್ಟವಾಗುತ್ತಿದ್ದರೂ ರಾಜ್ಯದ ಜನತೆ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಚಾಮರಾಜನಗರದ ಎಪಿಎಂಸಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ,ಸಾಮಾಜಿಕ ಅಂತರವನ್ನು ಎಲ್ಲ ಕಡೆಯೂ ಕಾಯ್ದುಕೊಳ್ಳಲು ಎಷ್ಟೇ ಮನವಿ ಮಾಡಿದರೂ ಕೆಲವು ಕಡೆ ವಿಫಲವಾಗುತ್ತಿದೆ. ಇಂಥ ಸಂದರ್ಭದಲ್ಲಿ ಬಾರ್‌ಗಳನ್ನು ತೆರೆದರೆ ಕಥೆ ಏನು? ಈ ನಿಟ್ಟಿನಲ್ಲಿ ಸದ್ಯಕ್ಕೆ ಈ ನಿರ್ಧಾರ ಮಾಡಲಾಗಿಲ್ಲ ಅಂತ ಸಚಿವರು ತಿಳಿಸಿದರು.
ಇನ್ನು ಕೇಂದ್ರ ಸರ್ಕಾರ ೧ ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು ಬೆಂಬಲ ಬೆಲೆ ಆಧಾರದಲ್ಲಿ ಖರೀದಿಸಲು ಅನುಮತಿ ನೀಡಿದೆ ಅಂತ ಸ್ಪಷ್ಟಪಡಿಸಿದ್ರು..
ಇದೇ ವೇಳೆ ಪಾದರಾಯನಪುರ ಪ್ರಕರಣಕ್ಕೆ ಸಂಬAಧಿಸಿದAತೆ ಮಾತನಾಡಿ, ಇಡೀ ಪ್ರಪಂಚವೇ ಕೊರೊನಾಗೆ ಸಿಲುಕಿದೆ. ಕೋವಿಡ್ ಬಂದAತಹ ವ್ಯಕ್ತಿಗಳನ್ನು ಪರೀಕ್ಷೆಗೊಳಪಡಿಸಲು ಅಧಿಕಾರವಿದೆ. ಎಂಎಲ್‌ಎಯನ್ನು ಕೇಳಿಕೊಂಡು ಬರಬೇಕು, ಅವರು ಅವಿದ್ಯಾವಂತರು ಎನ್ನುವುದು ಸರಿಯಲ್ಲ. ರೌಡಿಸಂ, ಮ್ಯಾನ್ ಹ್ಯಾಂಡಲಿAಗ್ ಮಾಡುವುದು ಸರಿಯಲ್ಲ. ಗಲಭೆಕೋರರನ್ನು ಎರಡು ವರ್ಷ ಜೈಲಿಗೆ ಕಳಿಸಲೇ ಬೇಕು ಇಲ್ಲದಿದ್ದರೆ ವೈದ್ಯರು, ಆಶಾ ಕಾರ್ಯಕರ್ತೆಯರು ಹೇಗೆ ತಾನೆ ಕೆಲಸ ಮಾಡಲು ಮುಂದೆ ಬರುತ್ತಾರೆ ಎಂದು ಕಿಡಿಕಾರಿದರು. ಸಹಕಾರ ಬ್ಯಾಂಕ್‌ಗಳಿAದ ಹೊಸದಾಗಿ ಸಾಲ ಕೊಡಲು ಸರ್ಕಾರ ತೀರ್ಮಾನಿಸಿದ್ದು, ಕಳೆದ ಬಾರಿ ೧೩ ಸಾವಿರ ಕೋಟಿ ರೂ. ಸಾಲ ನೀಡಲಾಗಿತ್ತು.ಈ ಬಾರಿಯೂ ಅಷ್ಟೇ ನೀಡಲಾಗುತ್ತದೆ. ಲೇವಾದೇವಿಗಾರರು, ಖಾಸಗಿ ಫೈನಾನ್ಸ್ ಕಂಪನಿಗಳು ಯಾರೂ ಕೂಡ ೩ ತಿಂಗಳವರೆಗೆ ಸಾಲ ಕಟ್ಟುವಂತೆ ಕಿರುಕುಳ ನೀಡಬಾರದೆಂದು ಈಗಾಗಲೇ ಸರ್ಕಾರ ಆದೇಶಿಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಚಾಮರಾಜನಗರ

Please follow and like us:

Related posts

Leave a Comment