
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಮುಗಿಸುವ
ಉದ್ದೇಶದಿಂದಲೇ ಪಕ್ಷಕ್ಕೆ ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ
ಜನಾರ್ದನ ಪೂಜಾರಿ ಕಿಡಿಕಾರಿದ್ದಾರೆ.
ಆಪರೇಷನ್ ಕಮಲದ ವಿಚಾರ ಪದೇ ಪದೆ ಸುಳಿದಾಡುತ್ತಿದ್ದರೂ, ಮೈತ್ರಿ
ಸರ್ಕಾರಕ್ಕೆ ಯಾವುದೇ ಕುತ್ತು ಬಂದಿಲ್ಲ. ಇದಕ್ಕಾಗಿ ಸಿದ್ದರಾಮಯ್ಯ
ಭಾರೀ ಕಸರತ್ತು ನಡೆಸಿದ್ದರು. ಆದರೆ, ಸಿದ್ದರಾಮಯ್ಯ ಅವರಿಂದ
ಸರ್ಕಾರ ಉಳಿದುಕೊಂಡಿಲ್ಲ ಎಂದು ಜನಾರ್ದನ ಪೂಜಾರಿ ನೇರ
ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮೈತ್ರಿ ಸರ್ಕಾರ
ಉಳಿದುಕೊಂಡಿದೆ ಎಂಬುದು ಸುಳ್ಳು. ಸರ್ಕಾರ ಸುಗಮವಾಗಿ
ಸಾಗುತ್ತಿದೆ ಎಂದರೆ ಅದಕ್ಕೆ ಕಾರಣ, ಜೆಡಿಎಸ್ನ ಹಿರಿಯ ನಾಯಕ
ದೇವೇಗೌಡರು. ಅವರ ಪಾತ್ರ ಇಲ್ಲಿ ದೊಡ್ಡದು ಎಂದು ಹೇಳಿದ್ದಾರೆ.