ರಸ್ತೆ ಕಾಮಗಾರಿ ಮಾಡದ ಶಾಸಕರಿಗೆ ಕರವೇಯಿಂದ ಧಿಕ್ಕಾರ..!

ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ರಸ್ತೆ ಕಾಮಗಾರಿಗೆ ಟೆಂಡರ್ ಕರೆಯದೆ ಸುಳ್ಳು ಭರವಸೆ ನೀಡುತ್ತಿರುವ ಲಿಂಗಸುಗೂರು ಶಾಸಕ ಡಿ.ಎಸ್ ಹೂಲಗೇರಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಯಚೂರು ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚಾರ ಮಾಡಲು ಹರಸಾಹಸ ಪಡುವಂತಾಗಿದೆ. ರಸ್ತೆಯ ಎಡಕ್ಕೆ ಬಲಕ್ಕೆ 50-50 ಅಡಿಯಲ್ಲಿ ಬರುವ ಕಟ್ಟಡಗಳನ್ನು ನೆಲಸಮಗೊಳಿಸಿ 10 ವರ್ಷ ಕಳೆದಿವೆ. ಇದರಿಂದ ಪ್ರತಿದಿನ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಆದಷ್ಟು ಬೇಗ ಈ ರಸ್ತೆ ಕಾಮಗಾರಿಗೆ ಟೆಂಡರ್ ಕೆರೆದು ಕೆಲಸ ಪ್ರಾರಂಭ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್ ಎ ನಯೀಮ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಮುದಗಲ್ ಉಪತಹಶೀಲ್ದಾರರ ಮೂಲಕ ರಾಯಚೂರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ…

Read More

ಪಾಳು ಬಿದ್ದ ಎಕ್ಸ್ ರೇ ಯಂತ್ರ- ಹಳ್ಳಿಗರ ಪರದಾಟ..!

ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಕ್ಯಾನಿಂಗ್ ಸೇರಿದಂತೆ ಇನ್ನಿತರ ಯಂತ್ರಗಳ ಸೌಲಭ್ಯದ ಕೊರತೆಯಿಂದ ಚಿಕಿತ್ಸೆಗಾಗಿ ಜನರು ಖಾಸಗಿ ಆಸ್ಪತ್ರೆ ಇಲ್ಲವೇ ಲಿಂಗಸುಗೂರು ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುದಗಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಕ್ಷಾಂತರ ರೂಪಾಯಿ ಬೆಲೆಯ ಎಕ್ಸ್ರೇ ಯಂತ್ರವಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಯೋಜನಕ್ಕೆ ಬರುತ್ತಿಲ್ಲ. ಎಕ್ಸ್ರೇ ಯಂತ್ರದ ನಿರ್ವಾಹಕರ ಸೇವೆಯನ್ನು ಸ್ಥಗಿತಗೊಳಿಸಿ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಗೆ ನಿಯೋಜನೆಗೊಂಡಿರುವ ಕಾರಣ ಇಲ್ಲಿನ ಯಂತ್ರವು ಬಳಕೆಗೆ ಬಾರದೇ ಪಾಳು ಬಿದ್ದಿದೆ. ಇದರಿಂದಾಗಿ ಬಡರೋಗಿಗಳಿಗೆ ತುಂಬಾ ತೊಂದರೆಯಾಗಿದೆ. ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಎಕ್ಸ್ ರೇ ಪ್ರಾರಂಭ ಮಾಡಿಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ವರದಿ-ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು.

Read More

ಕಾಲುವೆಯಲ್ಲಿ ಈಜಲು ಹೋದ ನೇಪಾಳ ಯುವಕ ನೀರುಪಾಲು.!

ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹೊನ್ನಳ್ಳಿ ಗ್ರಾಮದ ಹತ್ತಿರ ಕಾಲುವೆಯಲ್ಲಿ ಈಜಾಡಲು ಹೋದ ಯುವಕ ನೀರಿನಲ್ಲಿ ಕಾಣೆಯಾಗಿದ್ದಾನೆ. ಕಾಣೆಯಾದ ಯುವಕನನ್ನು ಪತ್ತೆಮಾಡಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಹೊನ್ನಳ್ಳಿ ಗ್ರಾಮದ ಜನರು ಬೆಳಗ್ಗೆಯಿಂದ ಹುಡುಕಾಟ ಮಾಡುತ್ತಿದ್ದರೂ ಯುವಕ ಪತ್ತೆಯಾಗಿಲ್ಲ. ನೇಪಾಳ ಮೂಲದ 28 ವರ್ಷದ ಶಿವ ಎಂಬಾ ಯುವಕ ಹೊನ್ನಳ್ಳಿ ಗ್ರಾಮದಲ್ಲಿ ಇರುವ ತನ್ನ ಗೆಳೆಯನ ಮದುವೆಗೆ ಬೆಂಗಳೂರುನಿಂದ ಬಂದಿದ್ದ. ಗೆಳೆಯರ ಜೊತೆ ಈಜಾಡಲು ಕಾಲುವೆಗೆ ತೆರಳಿದ್ದು, ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ. ಈ ಹಿಂದೆ ಕಳೆದ 8 ದಿನಗಳ ಹಿಂದೆ ತಾಲೂಕಿನ ಕಾಳಾಪೂರ ಗ್ರಾಮದ ಬಾಲಕ ಬಸವರಾಜ ತಾಯಿ ಜೊತೆ ಬಟ್ಟೆ ತೊಳೆಯಲು ಇದೇ ಕಾಲುವೆಗೆ ಹೋಗಿದ್ದ. ಆಯಾ ತಪ್ಪಿ ನಾರಾಯಣಪುರ ಬಲದಂಡೆ ಕಾಲುವೆಗೆ ಬಿದ್ದು, ಪೂಲಭಾವಿ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಆದ್ರೆ ಇದೀಗ ಒಂದೇ ವಾರದಲ್ಲಿ ಮತ್ತೊಬ್ಬ ಕಾಲುವೆಗೆ ಬಿದ್ದು ಕಾಣಿಯಾಗಿರುವ…

Read More

14 ನೇ ಹಣಕಾಸು ಯೋಜನೆ ಅನುದಾನ ದುರುಪಯೋಗ-ಪಿಡಿಒ ವಿರುದ್ಧ ಆಯೋಗಕ್ಕೆ ದೂರು..!

ರಾಯಚೂರು: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮ ಪಂಚಾಯತಿಯ ಪಿಡಿಒ 14ನೇ ಹಣಕಾಸು ಯೋಜನೆಯಡಿ ಬರುವ ಹಣವನ್ನು ಕಾಮಗಾರಿಗೆ ಬಳಕೆ ಮಾಡದೇ,ನುಂಗಿ ನೀರು ಕುಡಿದಿದ್ದಾರೆಂದು ಆರೋಪಿಸಿ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ವಿರುದ್ಧ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಿಗೆ ದೂರ ಸಲ್ಲಿಸಿದ್ದಾರೆ. ಮಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಕಾಮಗಾರಿಗಳು ಕೆಲಸ ಆಗದೆ ಬಿಲ್ ಮಾಡಿಕೊಂಡಿದ್ದಾರೆ.ಇದರ ಬಗ್ಗೆ ಮಾಹಿತಿ ಹಕ್ಕಿನಲ್ಲಿ ವರದಿ ಕೇಳಿದರೆ ಇದುವರೆಗೂ ಪಿಡಿಒ ಉತ್ತರ ಕೊಡದೇ ನುಣಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶೌಚಾಲಯ, ಎಸ್ಸಿ-ಎಸ್ಟಿ, ಮಕ್ಕಳಿಗೆ ಪ್ರತಿ ವರ್ಷ ಬುಕ್ಕುಗಳ ವಿತರಣೆ, ಶೌಚಾಲಯಗಳು ಆಯ ಸ್ಥಳಗಳಲ್ಲಿ ಇಲ್ಲದೇ ಹೋದರೂ ಬಿಲ್ ಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ದನದ ಶೆಡ್ ಸೇರಿದಂತೆ ವಿವಿಧ ಕಾಮಗಾರಿಗಳು ಆಗದೇ ಬಿಲ್ ಮಾಡಿಕೊಂಡು ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ.ಇಂತಹ ಅಧಿಕಾರಿಗಳ ವಿರುದ್ಧ…

Read More

14 ನೇ ಹಣಕಾಸು ಯೋಜನೆ ಅನುದಾನ ದುರುಪಯೋಗ-ಪಿಡಿಒ ವಿರುದ್ಧ ಆಯೋಗಕ್ಕೆ ದೂರು..!

ರಾಯಚೂರು: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮಟ್ಟೂರು ಗ್ರಾಮ ಪಂಚಾಯತಿಯ ಪಿಡಿಒ 14ನೇ ಹಣಕಾಸು ಯೋಜನೆಯಡಿ ಬರುವ ಹಣವನ್ನು ಕಾಮಗಾರಿಗೆ ಬಳಕೆ ಮಾಡದೇ,ನುಂಗಿ ನೀರು ಕುಡಿದಿದ್ದಾರೆಂದು ಆರೋಪಿಸಿ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ವಿರುದ್ಧ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಿಗೆ ದೂರ ಸಲ್ಲಿಸಿದ್ದಾರೆ. ಮಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಕಾಮಗಾರಿಗಳು ಕೆಲಸ ಆಗದೆ ಬಿಲ್ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಮಾಹಿತಿ ಹಕ್ಕಿನಲ್ಲಿ ವರದಿ ಕೇಳಿದರೆ ಇದುವರೆಗೂ ಪಿಡಿಒ ಉತ್ತರ ಕೊಡದೇ ನುಣಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶೌಚಾಲಯ,ಎಸ್ಸಿ-ಎಸ್ಟಿ, ಮಕ್ಕಳಿಗೆ ಪ್ರತಿ ವರ್ಷ ಬುಕ್ಕುಗಳ ವಿತರಣೆ, ಶೌಚಾಲಯಗಳು ಆಯ ಸ್ಥಳಗಳಲ್ಲಿ ಇಲ್ಲದೇ ಹೋದರೂ ಬಿಲ್ ಗಳನ್ನು ಮಾಡಿದ್ದಾರೆ.ಅಷ್ಟೇ ಅಲ್ಲದೇ ದನದ ಶೆಡ್ ಸೇರಿದಂತೆ ವಿವಿಧ ಕಾಮಗಾರಿಗಳು ಆಗದೇ ಬಿಲ್ ಮಾಡಿಕೊಂಡು ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ…

Read More

ಮೂರು ಮೇವಿನ ಬಣವೆಗಳು ಬೆಂಕಿಗೆ ಆಹುತಿ-ಕಂಗಲಾದ ರೈತ..!

ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ಖಾಜಾಸಾಬ, ಹಸನ್ ಸಾಬ ಮೂಲಿಮನಿ, ಎಂಬುವರ ಜಮೀನಿನಲ್ಲಿ ಜಾನುವಾರುಗಳಿಗೆ ಶೇಖರಿಸಿಟ್ಟಿದ್ದ ಮೇವಿನ ಬಣವಿಗಳಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಮೇವು ಬಂಕಿಗೆ ಆಹುತಿಯಾಗಿದೆ.ಮೇವಿನ ಬಣವಿಗೆ ಹತ್ತಿದ ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ಸಿಬ್ಬಂದಿಗಳು ಹರಸಾಹಸ ಪಟ್ಟರು ಯಾವುದೇ ಪ್ರಯೋಜನವಾಗಿಲ್ಲ.ದನ- ಕರುಗಳಿಗೆ ಒಂದು ವರ್ಷಕ್ಕೆ ಆಗುವಷ್ಟು ಮೂರು ಮೇವಿನ ಬಣವಿಗಳು ಸುಟ್ಟು ಕರಕಲಾಗಿವೆ. ಘಟನೆಯಿಂದ ರೈತ ಕಂಗಾಲಾಗಿದ್ದು, ಸರ್ಕಾರದಿಂದ ಪರಿಹಾರಕ್ಕಾಗಿ ಅಂಗಲಾಚುತ್ತಿದ್ದಾರೆ. ವರದಿ-ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು.

Read More

ಬೆಳಗ್ಗೆ 5 ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭ..!

ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ಬೆಳ್ಳಂ ಬೆಳಗ್ಗೆ 5 ಗಂಟೆಯಿಂದಲೇ ಮತ ಎಣಿಕೆ ಕೇಂದ್ರದ ಒಳಗೆ ಹೋಗಲು ಅಭ್ಯರ್ಥಿಗಳು ಮತ್ತು ಏಜೆಂಟರುಗಳ ನೂಕು ನುಗ್ಗಲು ಉಂಟಾಗಿತ್ತು.ಬೆಳಿಗ್ಗೆ 7 ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಮತ ಎಣಿಕೆ ಪ್ರಕ್ರಿಯೆಗೆ ಆಗಮಿಸುವವರು ಕಡ್ಡಾಯವಾಗಿ ಮಾಸ್ಕ ಮತ್ತು ಸ್ಯಾನಿಟೈಸರ್ ಬಳಸಬೇಕು ಎಂದು ತಿಳಿಸಲಾಗಿತ್ತು. ಮತ ಎಣಿಕೆ ಪ್ರಾರಂಭ ಮಾಡಿದ್ದು ಕೇಂದ್ರದ ಒಳಗೆ ಸಾಮಾಜಿಕ ಅಂತರ ಕಾಪಾಡಬೇಕು. ಕೇಂದ್ರದ ಒಳಗೆ ಹೋಗುವ ಪ್ರತಿಯೊಬ್ಬರನ್ನು ಕೂಡ ತಪಾಸಣೆಯೊಂದಿಗೆ ಒಳಗೆ ಬಿಡಲಾಗಿತ್ತು. ವರದಿ- ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು.

Read More

ಕ್ಷುಲ್ಲಕ ಕಾರಣಕ್ಕೆ ಜಗಳ ಕೊಲೆಯಲ್ಲಿ ಅಂತ್ಯ..!

ಲಿಂಗಸಗೂರು: ಕುಡಿಯುವ ನೀರಿಗೆ ಸಂಬಂಧಿಸಿದಂತೆ ಎರಡು ಕುಟುಂಬಸ್ಥರ ಮಧ್ಯೆ ನಡೆದ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ವೆಂಕಟರಾಯ ಪೇಟೆಯಲ್ಲಿ ನಡೆದಿದೆ. 36 ವರ್ಷದ ನೇತ್ರಾವತಿ ಎಂಬುವರು ಹತ್ಯಗೀಡಾದ ಮಹಿಳೆ. ಮನೆ ಬಳಿಯಿದ್ದ ನೆಲ್ಲಿಯಲ್ಲಿ ಕುಡಿಯುವ ನೀರಿನ ಕ್ಷುಲ್ಲಕ ವಿಷಯಕ್ಕೆ ಎರಡು ಕುಟುಂಬಸ್ಥರ ಮಧ್ಯೆ ವಾಗ್ವಾದ ನಡೆದಿದೆ.ಜಗಳ ತಾರಕಕ್ಕೇರಿ ಚಾಕೂವಿನಿಂದ ಇರಿದು ಮಹಿಳೆಯನ್ನು ಕೊಲೆ ಮಾಡಲಾಗಿದೆ. ಇನ್ನೂ ಮೃತ ಮಹಿಳೆಯ ಪತಿಯ ಸೋದರನ ಮಗ ಶಿವರಾಜ (25) ಎಂಬಾತ ಕೊಲೆ ಮಾಡಿದ ಆರೋಪಿ. ಮುದಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ವರದಿ- ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು.

Read More

ಮಾನಪ್ಪ ವಜ್ಜಲ್ ಗೆ ಸನ್ಮಾನ ಮಾಡಿದ ಮುದುಕಪ್ಪ ವಕೀಲರ- ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಪಕ್ಷ ಸೇರ್ತಾರ ಮುದುಕಪ್ಪ..!

ಲಿಂಗಸೂಗೂರು: ಹಾಲುಮತ ಸಮಾಜದ ಪ್ರಭಾವಿ ಮುಖಂಡ ಮುದುಕಪ್ಪ ವಕೀಲರು ಇಂದು ಹಟ್ಟಿ ಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಗೆ ಸನ್ಮಾನಿಸಿ ಶುಭಕೋರಿದರು. ಕಳೆದ ಎರಡು ಅವಧಿಗೆ ಶಾಸಕರಾಗಿದ್ದ ಮಾನಪ್ಪ ವಜ್ಜಲ್ ಅವರು ಕ್ಷೇತ್ರದಲ್ಲಿ ಹತ್ತಾರು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ. ವಜ್ಜಲ್ ಅವರ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಸರಳ ಸಜ್ಜನಿಕೆಯ ರಾಜಕಾರಣಿಯಾಗಿರುವ ವಜ್ಜಲ್ ಅವರು, ಜಾತಿ ರಾಜಕಾರಣ ಮಾಡದೇ ಎಲ್ಲಾ ವರ್ಗದವರಿಗೆ ಸರಿಸಮಾನವಾಗಿ ನಡೆದುಕೊಳ್ಳುವ ಜಾತ್ಯಾತೀತ ಮನೋಭಾವನೆ ಉಳ್ಳವರಾಗಿದ್ದಾರೆ. ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾಗುವ ಮೂಲಕ ಮತ್ತೊಮ್ಮೆ ಕ್ಷೇತ್ರದ ಅಭಿವೃದ್ಧಿಗೆ ಮಾನಪ್ಪನವರು ಮುಂದಾಗಬೇಕು. ಇನ್ನೂ ದಶಕಗಳಿಂದ ಮಾನಪ್ಪ ವಜ್ಜಲ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮುದುಕಪ್ಪ ವಕೀಲರು ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿದ್ದು, ಇದೀಗ ಬಿಜೆಪಿಗೆ ಬರುವ ಮುನ್ಸೂಚನೆ ನೀಡುತ್ತಿದ್ದಾರೆಯೇ ಎನ್ನುವಂತಹ ವಾತಾವರಣ ಈ ಭೇಟಿಯಿಂದ ಸೃಷ್ಟಿಯಾಗಿದೆ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ…

Read More

2ನೇ ಹಂತದ ಗ್ರಾ.ಪಂ.ಚುನಾವಣೆ- ಮತದಾರರಿಗೆ ಅಕ್ರಮ ಮದ್ಯ-ಮಾಂಸ ವಿತರಣೆ..!

ಲಿಂಗಸುಗೂರು:ಎರಡನೇ ಹಂತದ ಗ್ರಾ.ಪಂ.ಚುನಾವಣೆಯ ಮತದಾನದ ದಿನ ಸಮೀಪಿಸುತ್ತಿದ್ದಂತೆಯೇ ಆಕಾಂಕ್ಷಿಗಳು ಮತದಾರರಿಗೆ ಆಮಿಷಗಳನ್ನು ನೀಡುವುದು ಹೆಚ್ಚಾಗುತ್ತಿದೆ. ಪ್ರತಿ ಮನೆಗೂ ಚಿಕನ್, ಮಟನ್, ಮಧ್ಯ ಸರಬರಾಜು ಮಾಡಲಾಗುತ್ತಿದೆ.ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿ ರಾಜಾರೋಷವಾಗಿ ಹಾಡು ಹಗಲೇ ಮಾಂಸದ ಪೊಟ್ಟಣಗಳನ್ನು ಕೊಂಡೊಯ್ಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನದೇ ಕಣ್ಮುಚ್ಚಿ ಕುಳಿತಿರುವುದು ಮಾತ್ರ ಸಾರ್ವಜನಿಕರ ಅಸಮಧಾನಕ್ಕೆ ಕಾರಣವಾಗಿದೆ. ತಾಲೂಕಿನ ಗೋನಾವಾಟ್ಲಾ, ಗುಂತಗೋಳ, ಕಾಳಾಪೂರು, ಗೊರೆಬಾಳ, ಮಾವಿನಭಾವಿ, ಆನೆಹೊಸೂರು, ಈಚನಾಳ, ರೋಡಲಬಂಡಾ (ಯುಕೆಪಿ) ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಸ್ಪರ್ಧಿಗಳು ಮತದಾರರನ್ನು ಸೆಳೆಯಲು ಹಲವು ತಂತ್ರಗಳನ್ನು ಬಳುಸುತ್ತಿದ್ದಾರೆ. ಒಂದು ಕುಟುಂಬದಲ್ಲಿ 2 ಮತಗಳಿದ್ದರೆ, ಒಂದು ಕೆಜಿ ಚಿಕ್ಕನ್ ಒಂದು ಕ್ವಾಟರ್ ಮಧ್ಯ ಹಾಗೂ 3 ಮತದಾರರು ಇದ್ದರೆ 2 ಕೆಜಿ ಚಿಕ್ಕನ್ 2 ಕ್ವಾಟರ್ ಎಣ್ಣೆ ಹಂಚುತ್ತಿದ್ದಾರೆ ಎಂದು ಮೂಲಗಕಲಿಂದ ತಿಳಿದು ಬಂದಿದೆ. ಪ್ರತಿಯೊಂದು ಗ್ರಾಮಗಳಲ್ಲಿನ ಹೋಟೆಲ್, ಪಾನ್ಶಾಪ್, ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮಧ್ಯ…

Read More