10 ನೇ ತರಗತಿ ಪಾಸಾದವರಿಗೆ ‘ಬಂಪರ್’ ಉದ್ಯೋಗಾವಕಾಶ

ನವದೆಹಲಿ: ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬೇಕೆಂದಿದ್ದರೆ ನಿಮಗೊಂದು ಸುವರ್ಣ ಅವಕಾಶ ಇಲ್ಲಿದೆ. ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ( ರೈಲ್ವೆ ರಕ್ಷಣಾ ದಳ – ಆರ್.ಪಿ.ಎಫ್.) 798 ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಜ. 1ರಿಂದ ಆನ್ ಲೈನ್ ನೋಂದಣಿ ಕಾರ್ಯ ಪ್ರಾರಂಭವಾಗಲಿದೆ.

ಆರ್.ಪಿ.ಎಫ್. ನ ವಿವಿಧ ವಲಯಗಳಲ್ಲಿ ಕಾನ್ಸ್ ಟೇಬಲ್ ಹುದ್ದೆಗಳು ಖಾಲಿ ಇದ್ದು, ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿ ಅಂತಿಮ ಫಲಿತಾಂಶಕ್ಕೆ ಕಾಯುತ್ತಿರುವವರಿಗೆ ಅವಕಾಶವಿರುವುದಿಲ್ಲ.

ಅರ್ಜಿ ಸಲ್ಲಿಸುವವರಿಗೆ ವಯೋಮಿತಿ ನಿಗದಿಪಡಿಸಲಾಗಿದ್ದು, 18-25 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅವಕಾಶ ಲಭ್ಯವಿದೆ. ಹತ್ತನೇ ತರಗತಿ ಉತ್ತೀರ್ಣರಾಗಿರಬೇಕಿದ್ದು, ಮಹಿಳಾ ಅಭ್ಯರ್ಥಿಗಳಿಗೆ ಶೇ. 10 ಮೀಸಲಾತಿ ಇದೆ.

ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆಗಳ ಸಹಿತ ಕೆಲವು ಪರೀಕ್ಷೆಗಳಿದ್ದು, ದಾಖಲೆಗಳ ಪರಿಶೀಲನೆಯೂ ನಡೆಯಲಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಹದಿನೈದು ಪ್ರಾದೇಶಿಕ ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆ ಲಭ್ಯವಿದ್ದು, ಆಸಕ್ತ ಭಾಷೆಯಲ್ಲಿ ಬರೆಯಬಹುದಾಗಿದೆ. ಈ ಪರೀಕ್ಷೆ ಫೆಬ್ರವರಿ ಇಲ್ಲವೆ ಮಾರ್ಚ್ ನಲ್ಲಿ ನಡೆಯುವ ಸಾಧ್ಯತೆಯಿದೆ.

Please follow and like us:

Related posts

Leave a Comment