ತೆರಿಗೆಗಳಿಲ್ಲವೆಂದ್ರೆ ಭಾರತದಲ್ಲಿ ಪೆಟ್ರೋಲ್ ಬೆಲೆ ಎಷ್ಟು ಗೊತ್ತಾ?

ಪೆಟ್ರೋಲ್ ಬೆಲೆ ಗಗನಕ್ಕೆ ಏರಿ ಇದೀಗ ಕಡಿಮೆಯಾಗುತ್ತಿದ್ದು, ತೆರಿಗೆ ಹಾಗೂ ಡೀಲರ್‌ಶಿಪ್ ಕಮಿಷನ್ ಕಡಿತಗೊಳಿಸಿದರೆ ಕೇವಲ 34 ರೂ.ಗಳಿಗೆ ಸಿಗಲಿದೆ ಎಂದು ಕೇಂದ್ರ ಹೇಳಿದೆ.

ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಹಣಕಾಸು ರಾಜ್ಯ ಖಾತೆ ಸಚಿವ ಶಿವ್ ಪ್ರತಾಪ್ ಶುಕ್ಲ ಡಿಸೆಂಬರ್ 19 ರಂದು ಉತ್ತರಿಸಿದ್ದು, ದೇಶದಲ್ಲಿ ಒಂದು ವೇಳೆ ತೆರಿಗೆ ರಹಿತ ಹಾಗೂ ಡೀಲರ್ ಕಮಿಷನ್ ಇಲ್ಲದೇ ಪೆಟ್ರೋಲ್, ಡಿಸೇಲ್ ನ್ನು 34.04 ಹಾಗೂ 38.67 ರೂ. ಗಳಿಗೆ ಮಾರಾಟ ಮಾಡಬಹುದಾಗಿದೆ ಎಂದು ಉತ್ತರಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (ಡಿಸೆಂಬರ್ 19 ಕ್ಕೆ) ಪೆಟ್ರೋಲ್‌ ಬೆಲೆ 70.63 ರೂ. ಇದ್ದು, ಇದರಲ್ಲಿ‌ 17.98 ರೂ. ಕೇಂದ್ರ ತೆರಿಗೆ, 15.02 ರೂ. ರಾಜ್ಯ ವ್ಯಾಟ್ ಹಾಗೂ 3.59 ರೂ. ಡೀಲರ್ ಕಮಿಷನ್‌ಯಿದೆ ಎಂದು ಹೇಳಿದ್ದಾರೆ. ಇನ್ನು ‌64.54 ರೂ. ಬೆಲೆಯ ಡಿಸೇಲ್ ಮೇಲೆ 13.83 ರೂ. ಕೇಂದ್ರ ತೆರಿಗೆ, 9.51 ರೂ. ರಾಜ್ಯ ವ್ಯಾಟ್ ಹಾಗೂ 2.53 ರೂ. ಡೀಲರ್ ಕಮಿಷನ್‌ ಇದೆ‌.

Please follow and like us:

Related posts

Leave a Comment