ಅಂತೂ ಇಂತೂ ಎಂಎಲ್‌ಎ ಹಿಂದೆ ಸುತ್ತಾಡಿದ್ದಕ್ಕೆ ಸಿಕ್ತು ಬೆಲೆ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ನಿರ್ದೇಶಕರಾಗಿ ಎಸ್.ಎನ್. ರಾಜಣ್ಣ ಆಯ್ಕೆ

ಬೆಂಗಳೂರು: ಡಿ.೨೭: ಶಾಸಕರು ನಿಷ್ಟಾವಂತ ಕಾರ್ಯಕರ್ತರಿಗೆ ಏನು ಮಾಡಿಕೊಟ್ಟಿಲ್ಲ ಎಂಬ ದೂರುಗಳು ಸಾಕಷ್ಟು ದಿನದಿಂದ ಕೇಳಿ ಬರುತ್ತಿದ್ದವು, ನಿನ್ನೆ ಮೊನ್ನೆ ಪಕ್ಷಕ್ಕೆ ಬಂದ ಕಡತನಮಲೆ ಸತೀಶ್ ಅವರಿಗೆ ಸ್ಥಾನಮಾನ ಕೊಟ್ಟರು, ವರ್ಷಾನುಗಟ್ಟಲೇ ಜೊತೆಗೆ ಇರುವ ರಾಜಣ್ಣ ಅವರನ್ನು ನಿರ್ಲಕ್ಷ್ಯ ಮಾಡಿದ್ದರೂ ಎಂಬ ವದಂತಿಗಳು ಕೂಡ ಹಬ್ಬಿಕೊಂಡಿದ್ದವು, ಇದೀಗ ರಾಜಣ್ಣ ಅವರಿಗೂ ಕೂಡ ಒಂದು ಸಿಹಿ ಸುದ್ದಿಯನ್ನು ಶಾಸಕ ಎಸ್.ಆರ್.ವಿಶ್ವನಾಥ್ ಕೊಟ್ಟಿದ್ದಾರೆ. ರಾಷ್ಟ್ರೀಯ ತೋಟಗಾರಿಕಾ ನಿರ್ದೇಶಕರನ್ನಾಗಿ ಮಾಡುವ ಮೂಲಕ ಇಷ್ಟು ವರ್ಷ ಬಿಜೆಪಿಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಸಣ್ಣ ಪ್ರಮಾಣದ ಕೊಡುಗೆ ನೀಡಿದ್ದಾರೆ. ಇದರಿಂದ ಕೊಂಚ ಮಟ್ಟಿಗೆ ಹಳೆಯ ಕಾರ್ಯಕರ್ತರುಗಳು ಯಲಹಂಕ ಕ್ಷೇತ್ರದಲ್ಲಿ ಸಂತೋಷದ ನಗೆ ಬೀರುತ್ತಿದ್ದಾರೆ. ಒಟ್ಟಿನಲ್ಲಿ ಹಳೆಯ ಕಾರ್ಯಕರ್ತರನ್ನು ಮೂಲೆಗುಂಪು ಮಾಡುವ ವಿಷಯದಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದು ಮಾತ್ರ ಸತ್ಯ.

Please follow and like us:

Related posts

Leave a Comment