ವಿವಿದ ಕಾಮಗಾರಿಗಳಿಗೆ ವಿಧಾನಸಭಾ ಉಪ ಸಭಾಧ್ಯಕ್ಷ ಕ್ರಿಷ್ಣಾರೆಡ್ಡಿ ಚಾಲನೆ

:ಚಿಂತಾಮಣಿ::ಡಿ::28:: ತಾಲ್ಲೂಕಿನ ಸಂತೆಕಲ್ಲಹಳ್ಳಿನಲ್ಲಿ ಆರ್ ಐ ಡಿ ಎಫ್ (R I D F)-22- ಯೋಜನೆಯಡಿ ನೂತನವಾಗಿ ನಿರ್ಮಿಸಿರುವ 10 ಲಕ್ಷ ರೂ ಗಳ ಪಶು ಆಸ್ಪತ್ರೆ ಮತ್ತು 2017–18–ನೇ ಸಾಲಿನ ರಾಜ್ಯ ವಲಯ ಯೋಜನೆಯಡಿ 10-30–ಲಕ್ಷ ರೂ ಗಳ ವೆಚ್ಚದಲ್ಲಿ ಪ್ರೌಢಶಾಲೆ ಉದ್ಘಾಟನೆ ಮಾಡಿದ ವಿಧಾನಸಭಾ ಉಪ ಸಭಾಪತಿ ಕ್ರಿಷ್ಣಾರೆಡ್ಡಿ ಮಾತನಾಡಿದರು.. ಹುಟ್ಟು, ಸಾವು ಖಚಿತ ಅದರ ಮದ್ಯೆ ನಾವು ಮಾಡಿರುವ ಕೆಲಸಗಳನ್ನು ಜನರು ತಿಳಿದುಕೊಳ್ಳಬೇಕು ಎಂದು ಹೇಳಿದರು. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳು ಎಂಬ ಪೈಪೋಟಿ ಇರುವುದು ನಿಜ ಆದರೆ ವಿದ್ಯಾರ್ಥಿಗಳು ಸರ್ಕಾರಿ,ಖಾಸಗಿ ಎನ್ನುವ ಬೇಧ ಭಾವ ಮರೆತು ಓದಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು
ಸಮಾರಂಭದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ H ನಾರಾಯಣಸ್ವಾಮಿ ಮಾತನಾಡುತ್ತಾ ದಿವಂಗತ ಸಿ.ಬೈರೇಗೌಡ ಮಾಡಿರುವ ಕೆಲಸಗಳನ್ನು ನೆನಪಿಸಿಕೊಂಡು ಅವರು ಮಾಡಿರುವ ಎಷ್ಟೋ ಕೆಲಸಗಳು ಇಂದಿಗೂ ಜೀವಂತವಾಗಿವೆ ಎಂಬುದನ್ನು ನೆನಪಿಸಿಕೊಂಡರು.
ಸಮಾರಂಭದಲ್ಲಿ ತಾಲೂಕು ಜೆ ಡಿ ಎಸ್ (JDS) ಅಧ್ಯಕ್ಷ ತಳಗವಾರ ರಾಜಗೋಪಾಲ್,TPS H-ನಾರಾಯಣಸ್ವಾಮಿ,ಹಾಗು ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು

Please follow and like us:

Related posts

Leave a Comment