ಬಾಗಲಕೋಟೆ/ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ಮುಂದುವರೆದಿದ್ದು,ಬಾಗಲಕೋಟೆಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ೭೫ ವರ್ಷದ ವೃದ್ಧ(ಕೇಸ್ ನಂಬರ್ ೧೨೫) ಮಹಾಮಾರಿ ಕೊರೋನಾಗೆ ಬಲಿಯಾಗಿದ್ದಾರೆ.
ಸದ್ಯ ಬಾಗಲಕೋಟೆಯಲ್ಲಿ ಸಂಭವಿಸಿದ ಮೊದಲ ಕೊರೋನಾ ಸಾವು ಇದಾಗಿದ್ದು,ಗುರುವಾರವಷ್ಟೇ ಇವರಿಗೆ ಪಾಸಿಟಿವ್ ರಿಪೋರ್ಟ್ ಬಂದಿತ್ತು.
ಇನ್ನು ಮೃತ ವ್ಯಕ್ತಿ ಯಾವುದೇ ಪ್ರವಾಸವನ್ನು ಮಾಡಿಲ್ಲ. ವಿದೇಶ, ರಾಜ್ಯ, ಪರ ರಾಜ್ಯಕ್ಕೆ ಇವರು ಪ್ರಯಾಣಿಸಿಲ್ಲ. ಹಾಗಿದ್ದರೂ ಇವರಿಗೆ ರೋಗ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.
ಅಲ್ಲದೆ,೧೦ ದಿನಗಳ ಹಿಂದೆ ಇವರ ಮಗ ಹಾಗೂ ಮಗಳು ಬೆಂಗಳೂರಿನಿAದ ಆಗಮಿಸಿದ್ದರು. ಆದರೆ ಅವರಿಬ್ಬರಿಗೆ ಕೊರೋನಾ ನೆಗಿಟಿವ್ ಬಂದಿದೆ.
ಮಾರ್ಚ್ ೩೧ ರಂದು ಕೊರೋನಾ ಗುಣ ಲಕ್ಷಣಗಳೊಂದಿಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.
ಕೊರೊನಾಗೆ ಮತ್ತೊಂದು ಬಲಿ, ಬಾಗಲಕೋಟೆಯಲ್ಲಿ ವೃದ್ಧ ಸಾವು

Please follow and like us: