ಕಡಲೆಗೂ ಕಾಡುತ್ತಿರುವ ಕೊರೊನಾ ಭೀತಿ

ಕೊಪ್ಪಳ : ರಾಜ್ಯದಲ್ಲಿ ಕಡಲೆಗೂ ಕೊರೊನಾ ಭೀತಿ ಕಾಡುತ್ತಿದ್ದು,ಇದೀಗ ಸಣ್ಣ ರೈತರಿಗೆ ಕಡಲೆ ಸಂರಕ್ಷಿಸೋದೇ ದೊಡ್ಡ ಚಿಂತೆಯಾಗಿದೆ.
ಅ0ದ ಹಾಗೇ ರಾಜ್ಯ ಸರಕಾರ ಏಪ್ರಿಲ್ ೧೦ರ ನಂತರ ಖರೀದಿ ಕೇಂದ್ರ ತೆರೆಯುವ ಸೂಚನೆ ನೀಡಿತ್ತು.ಆದರೆ ಈಗ ಜಗತ್ತನ್ನೇ ಕಾಡುತ್ತಿರುವ ಕೋರೋನಾ ವೈರಸ್‌ನಿಂದ ಖರೀದಿ ಕೇಂದ್ರ ಆರಂಭಿಸೋದು ಅನುಮಾನವಾಗಿದೆ.
ಸದ್ಯ ಕೊಪ್ಪಳ ಜಿಲ್ಲೆಯಲ್ಲಿ ಸುಮಾರು ೮೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿದ್ದು, ಮನೆಯ ಹೊರಗೆ ರೈತರು ಕಡಲೆ ಚೀಲಗಳನ್ನು ಇಡುವಂತಾಗಿದೆ.
ಇನ್ನು ಮಳೆ ಬಂದರೆ ಬೆಳೆ ಹಾಳಾಗುವ, ಹುಳು ಕಾಣಿಸಿಕೊಳ್ಳುವ ಆತಂಕ ರೈತರಿಗೆ ಎದುರಾಗಿರುವುದರಿಂದ ಸರಕಾರ ಈ ಬಗ್ಗೆ ಆಲೋಚಿಸಿ ತುರ್ತಾಗಿ ಕಡಲೆ ಖರೀದಿ ಕೇಂದ್ರ ಆರಂಭಿಸಲು ಒತ್ತಾಯ ರೈತರಿಂದ ಕೇಳಿ ಬಂದಿದೆ.

Please follow and like us:

Related posts

Leave a Comment